Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಶನಿ ಸಾಡೇಸಾತಿ: ಹಣಕಾಸಿಗೆ ಅಡ್ಡಗಾಲು, ವ್ಯವಹಾರದಲ್ಲಿ ತೊಡಕು: ಯಾರಿಗೆ ಕಾಡಲಿದ್ದಾನೆ ಶನಿ
ಅಕ್ಟೋಬರ್‌ನಲ್ಲಿ ಹಲವು ಗ್ರಹಗಳಲ್ಲಿನ ಚಲನೆಯು ಬದಲಾವಣೆಯಾಗುವ ಪರಿಣಾಮ ಹಲವು ರಾಶಿಗಳ ಮೇಲೆ ಪರಿಣಾಮ ಬೀರುವುದು ನೋಡಬಹುದು. ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿನ ಗ್ರಹಗಳ ಸ್ಥಾನಪಲ್ಲಟವು ಹಲವು ರೀತಿಯ ಬದಲಾವಣೆಗಳಿಗೆ ಕಾರಣವಾಗುತ್ತಿದೆ. ಅದ್ರಲ್ಲೂ ನಾವಿಂದು ಶನಿ ಗ್ರಹದ ಸ್ಥಾನಪಲ್ಲದಿಂದಾಗುವಂತ ಪರಿಣಾಮ ಕುರಿತು ತಿಳಿದುಕೊಳ್ಳೋಣ.
ದೀಪಾವಳಿಯ ಬಳಿಕ ಶನಿಯ ಚಲನೆಯಲ್ಲಿ ಬದಲಾವಣೆಯಾಗುತ್ತಿದೆ. ಈ ವರ್ಷ ಅತೀ ದೊಡ್ಡ ಗ್ರಹದ ಸ್ಥಾನ ಪಲ್ಲಟ ಎನ್ನಬಹುದು. ಶನಿಯು ಹಿಮ್ಮುಖ ಚಲನೆಯಿಂದ ನೇರ ಚಲನೆಗೆ ಪರಿವರ್ತನೆಗೊಳ್ಳುತ್ತಾನೆ. ಅಂದರೆ ಅದು ಹಿಮ್ಮುಖ ಚಲನೆಯಿಂದ ಮುಂದೆ ಚಲಿಸಲು ಆರಂಭಿಸುವ ಸಮಯವಿದು. ಶನಿಯ ನೇರ ಚಲನೆಯು ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಬೀರಲಿದೆ.

ಶನಿಯನ್ನು ನ್ಯಾಯದ ದೇವರು ಎಂದು ಪರಿಗಣಿಸಲಾಗುತ್ತದೆ. ಶನಿಯು ಪ್ರತಿಯೊಬ್ಬ ವ್ಯಕ್ತಿಗೂ ಅವರವರ ಕ್ರಿಯೆಗಳಿಗೆ ಅನುಗುಣವಾಗಿ ಫಲಿತಾಂಶಗಳನ್ನು ನೀಡುತ್ತಾನೆ. ಪ್ರತಿಯೊಬ್ಬರೂ ಶನಿಯ ದುಷ್ಪರಿಣಾಮಗಳಿಗೆ ಹೆದರುತ್ತಾರೆ. ಶನಿಯಿಂದ ಶುಭ ಹಾಗೂ ಅಶುಭ ಯೋಗಗಳು ರೂಪುಗೊಳ್ಳುತ್ತವೆ. ಪ್ರಸ್ತುತ ಶನಿಯು ಮೀನ ರಾಶಿಯಲ್ಲಿ ಹಿಮ್ಮುಖವಾಗಿದ್ದಾನೆ. ಜುಲೈ 13 ರಂದು ಶನಿಯು ಹಿಮ್ಮುಖ ಚಲನೆ ಆರಂಭಿಸಿದ್ದಾನೆ.
ಹಾಗೆ 138 ದಿನಗಳ ನಂತರ ನವೆಂಬರ್ 28ರಿಂದ ನೇರ ಚಲನೆಯಲ್ಲಿ ಚಲಿಸಲಿದ್ದಾನೆ. ಶನಿಯ ನೇರ ಚಲನೆಯು ವಿಶೇಷವಾಗಿ ಶನಿಯ ಸಾಡೇಸಾತಿ ಮತ್ತು ಧೈಯ ರಾಶಿಯ ಮೇಲೆ ಪರಿಣಾಮ ಬೀರುತ್ತದೆ. ಪ್ರಸ್ತುತ ಮೇಷ, ಕುಂಭ ಮತ್ತು ಮೀನ ರಾಶಿಯವರು ಶನಿಯ ಸಾಡೇಸಾತಿಯಲ್ಲಿದ್ದರೆ, ಸಿಂಹ ಮತ್ತು ಧನು ರಾಶಿಯವರು ಶನಿಯ ಧೈಯದಲ್ಲಿರುತ್ತಾರೆ. ಶನಿಯ ಸಾಡೇಸಾತಿ ಮತ್ತು ಧೈಯ್ಯಾದಿಂದ ಬಾಧಿತರಾದವರು ಅನೇಕ ತೊಂದರೆಗಳನ್ನು ಎದುರಿಸುತ್ತಾರೆ. ಹಾಗಾದ್ರೆ ಶನಿಯ ಸಾಡೇಸಾತಿಯ ಪರಿಣಾಮವು ಯಾವೆಲ್ಲಾ ರಾಶಿಯ ಮೇಲೆ ಉಂಟು ಮಾಡಲಿದೆ ಯಾರಿಗೆ ಅಶುಭ ಎಂಬುದನ್ನು ತಿಳಿದುಕೊಳ್ಳೋಣ.
ಮೇಷ ರಾಶಿ
ಮೇಷ ರಾಶಿಯವರ ಪರಿಸ್ಥಿತಿಗಳು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಸುಧಾರಿಸಬಹುದು. ಆರೋಗ್ಯ ಉತ್ತಮವಾಗಿರುತ್ತದೆ. ಆದ್ರೆ ಆರ್ಥಿಕ ಸಮಸ್ಯೆಗಳು ಎದುರಾಗಬಹುದು. ನಿಮ್ಮಿಂದಾಗಿ ಸಾಲದ ಪ್ರಮಾಣ ಏರಿಕೆ ನೋಡುವಿರಿ. ಮನೆಯಲ್ಲಿದ್ದ ಸಮಸ್ಯೆಯೊಂದು ದೊಡ್ಡದಾಗಬಹುದು. ಅವಿವಾಹಿತರಿಗೆ ಹೊಸ ಸಂಬಂಧಗಳು ದೂರಾಗಬಹುದು. ಮದುವೆ ನಿಶ್ಚಯ ಸಂಬಂಧವಾಗಿಯೂ ಅಡ್ಡಿಗಳು ಎದುರಾಗಬಹುದು. ನಿಮ್ಮ ಉದ್ಯೋಗ ಸಂಬಂಧಿ ಸಮಸ್ಯೆಗಳು ಎದುರಾಗುವುದು ನೋಡಬಹುದು. ಹಾಗೆ ಸಂಬಂಧಗಳಲ್ಲಿ ಮನಸ್ತಾಪಗಳು ಮೂಡುವ ಸಮಯವಿದು.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ಶನಿಯ ಈ ಚಲನೆಯು ಕೆಲವು ಕ್ಷೇತ್ರಗಳಲ್ಲಿ ಅಡ್ಡ ಪರಿಹಾರವನ್ನು ಅನುಭವಿಸಬಹುದು. ನಿಮ್ಮ ವ್ಯಹವಾರ ಹಾಗೂ ವ್ಯಾಪಾರದಲ್ಲಿನ ಅಡ್ಡಿಗಳು ಎದುರಾಗಬಹುದು. ನಿಮ್ಮ ಉದ್ಯೋಗದಲ್ಲಿನ ಒತ್ತಡ ಹೆಚ್ಚಾಗುವ ಮೂಲಕ ಅದನ್ನು ಬದಲಾಯಿಸಬೇಕಾಗಬಹುದು. ಆಸ್ತಿ ಸಂಬಂಧಿತ ವಿಚಾರದಲ್ಲಿ ಕಂದಕ ದೊಡ್ಡದಾಗಬಹುದು. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಸವಾಲು ಎದುರಿಸಬಹುದು. ಹಾಗೆ ನಿಮ್ಮ ಆರೋಗ್ಯ ಸಂಬಂಧಿತ ಸಮಸ್ಯೆಗಳು ದೊಡ್ಡದಾಗಬಹುದು.
ಕನ್ಯಾ ರಾಶಿ
ಶನಿ ಚಲನೆಯು ಕನ್ಯಾ ರಾಶಿಯ ಜನರಲ್ಲಿ ದೊಡ್ಡ ಮಟ್ಟದ ಸವಾಲುಗಳಿಗೆ ಕಾರಣವಾಗಲಿದೆ. ಸಾಲ ಮರುಪಾವತಿಯ ಒತ್ತಡ ಹೆಚ್ಚಾಗಲಿದೆ. ನಿಮ್ಮ ಹಲವು ಕೆಲಸಗಳನ್ನು ಅರ್ಧದಲ್ಲೇ ಬಿಡಬೇಕಾಗಬಹುದು. ಹೊಸ ಆರಂಭಗಳಲ್ಲಿ ಅಡ್ಡಿಗಳಿವೆ. ನಿಮ್ಮ ವ್ಯವಹಾರ ವಿಸ್ತರಣೆಯಲ್ಲಿ ತೊಡಕುಗಳು ಉಂಟಾಗಬಹುದು. ಭೂಮಿ ವಿಚಾರವಾಗಿ ನಿಮ್ಮ ವ್ಯವಹಾರಗಳು ಕೈಗೂಡದೆ ಇರಬಹುದು. ಆರ್ಥಿಕ ಸ್ಥಿತಿಯಲ್ಲಿನ ಏರಿಳಿತಗಳು ನಿಮಗೆ ಮಾನಸಿಕ ನೆಮ್ಮದಿಯ ಹಾಳು ಮಾಡಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಜನರಿಗೆ ಈ ಶನಿಯ ಚಲನೆಯಿಂದಾಗಿ ದೊಡ್ಡ ಮಟ್ಟದ ಹೊಡೆತ ಬೀಳಬಹುದು. ನಿಮ್ಮ ಹಲವು ವಿಚಾರದಲ್ಲಿ ಅಶುಭಗಳ ನೋಡಬಹುದು. ಪ್ರಯಾಣಗಳಲ್ಲಿ ನೀವು ಬಯಸಿದ ಫಲಿತಾಂಶ ಸಿಗದೆ ಇರಬಹದು. ನ್ಯಾಯಾಲಯ, ಆಸ್ತಿ, ವಿಚಾರಗಳಲ್ಲಿ ಹಿನ್ನಡೆ ಅನುಭವಿಸುತ್ತೀರಿ. ಹೊಸದಾಗಿ ವ್ಯವಹಾರ, ವ್ಯಾಪಾರ, ಉದ್ಯೋಗದಲ್ಲಿ ಕಷ್ಟಗಳ ನೋಡಬಹುದು. ವಾಹನ ಸಂಬಂಧವಾಗಿ ಅಶುಭವಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications