ಶನಿ ಸಾಡೇಸಾತಿ: ಯಾವ ರಾಶಿಯವರಿಗೆ ಯಾವಾಗ ಶನಿ ಸಾಡೇಸಾತಿ ಪ್ರಭಾವ ಇರಲಿದೆ?

ನವಗ್ರಹಗಳಲ್ಲಿ ಶನಿಗ್ರಹದ ಪ್ರಭಾವ ಅದು ಒಳ್ಳೆಯದಾಗಿರಲಿ ಅಥವಾ ಕೆಟ್ಟದ್ದಾಗಿರಲಿ ಅದು ದೀರ್ಘವಾಗಿರುತ್ತದೆ, ಅದರಲ್ಲೂ ಶನಿ ಸಾಡೇಸಾತಿಯೆಂದರೆ ಜನರು ತುಂಬಾನೇ ಭಯ ಪಡುತ್ತಾರೆ, ಏಕೆಂದರೆ ಈ ಅವಧಿಯಲ್ಲಿ ವ್ಯಕ್ತಿಯ ಜೀವನದಲ್ಲಿ ತುಂಬಾನೇ ಕಷ್ಟಗಳನ್ನು ಅನುಭವಿಸುತ್ತಾರೆ.

ಒಂದಲ್ಲಾ ಎರಡಲ್ಲಾ ಸುಮಾರು ಏಳೂವರೆ ವರ್ಷ ಕಷ್ಟಗಳನ್ನು ಎದುರಿಸುತ್ತಾರೆ, ಹಾಗಾಗಿ ಶನಿ ಸಾಡೇಸಾತಿ ಎಂದರೆ ಎಲ್ಲರೂ ಭಯಪಡುತ್ತಾರೆ, ಶನಿ ಸಾಡೇಸಾತಿಯ ಅನುಭವ ಇರುವವರು ಆ ಸಮಯ ಎಷ್ಟು ಕಷ್ಟಕರವಾಗಿತ್ತು ಎಂಬುವುದಾಗಿ ಹೇಳುತ್ತಾರೆ, ಇದೀಗ ಶನಿ ಸಾಡೇಸಾತಿ ಮೂರು ರಾಶಿಗಳಲ್ಲಿ ನಡೆಯುತ್ತಿದೆ, ಎರಡು ರಾಶಿಗಳಿಗೆ ಶನಿ ಧೈಯ್ಯವಿದೆ.

Shani Sadesati

ಶನಿಯ ಸಾಡೇ ಸತಿ ಎಂದರೇನು?

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಶನಿಯು ಕ್ರೂರ ಮತ್ತು ಪಾಪ ಗ್ರಹವಾಗಿದೆ. ಶನಿದೇವನು ರಾಶಿಯನ್ನು ಬದಲಾಯಿಸಿದಾಗಲೆಲ್ಲಾ ಶನಿ ಸಾಡೇ ಸತಿ ಈಗಾಗಲೇ ನಡೆಯುತ್ತಿರುವ ರಾಶಿಗಳಲ್ಲಿ ಅದರ ಕೆಟ್ಟ ಪ್ರಭಾವ ಕಡಿಮೆಯಾಗಲಿದೆ. ಶನಿ ಸಾಡೇಸಾತಿ ಪ್ರಭಾವ ಏಳೂವರೆ ವರ್ಷ ಇರುತ್ತದೆ. ಇದನ್ನು ಶನಿಯ ಸಾಡೇಸಾತಿ ಎಂದು ಕರೆಯಲಾಗುತ್ತದೆ.

2024 ರಲ್ಲಿ ಶನಿಯ ಸಾಡೇ ಸತಿ

ಶನಿದೇವ ಈಗ ಕುಂಭ ರಾಶಿಯಲ್ಲಿದೆ. ಶನಿದೇವನು ಜನವರಿ 17 , 2023 ರಂದು ಕುಂಭ ರಾಶಿಗೆ ಪ್ರವೇಶಿಸಿದೆ, 2025ರಲ್ಲಿ ಇನ್ನು ರಾಶಿ ಬದಲಾವಣೆಯಾಗಲಿದೆ, ಈ ವರ್ಷ ಕುಂಭ ರಾಶಿಯಲ್ಲಿ ಇರಲಿದೆ. ಶನಿಯ ರಾಶಿಯು ಮಾರ್ಚ್ 29, 2025 ರಂದು ಮೀನ ರಾಶಿಗೆ ಪ್ರವೇಶಿಸುವುದು, ಶನಿಯು ಮೀನ ರಾಶಿಯಲ್ಲಿ 2028 ರವರೆಗೆ ಮೀನ ರಾಶಿಯಲ್ಲಿ ಇರಲಿದೆ.

ಈಗ ಯಾವೆಲ್ಲಾ ರಾಶಿಗಳಲ್ಲಿ ಶನಿ ಸಾಡೇಸಾತಿ ನಡೆಯುತ್ತಿದೆ?

2024ರಲ್ಲಿ ಶನಿಯು ಕುಂಭರಾಶಿಯಲ್ಲಿರುವುದರಿಂದ ಮಕರ, ಕುಂಭ, ಮೀನ ರಾಶಿಯವರಿಗೆ ಶನಿಯು ಸಾಡೇಸಾತಿ ನಡೆಯುತ್ತಿದೆ. ಮಕರ ರಾಶಿಯವರಿಗೆ ಶನಿಯ ಸಾಡೇಸಾತಿ ಕೊನೆಯ ಘಟ್ಟ ನಡೆಯುತ್ತಿದೆ. ಕುಂಭ ರಾಶಿಯವರಿಗೆ ಸಾಡೇ ಸತಿಯ ಎರಡನೇ ಹಂತ ನಡೆಯುತ್ತಿದೆ, ಮೀನ ರಾಶಿಯವರಿಗೆ ಸಾಡೇ ಸತಿಯ ಮೊದಲ ಹಂತ ನಡೆಯುತ್ತಿದೆ.
ಇನ್ನು ಕರ್ಕಾಟಕ ಮತ್ತು ವೃಶ್ಚಿಕ ರಾಶಿಗಳಲ್ಲಿ ಶನಿ ಧೈಯ್ಯ ನಡೆಯುತ್ತಿದೆ.


ಯಾವ ರಾಶಿಗೆ ಯಾವಾಗ ಶನಿ ಸಾಡೇಸಾತಿ ಪ್ರಭಾವ ಇರಲಿದೆ:

ಮೇಷ 29 ಮಾರ್ಚ್ 2025 ರಿಂದ 31 ಮೇ 2032
ವೃಷಭ ರಾಶಿ 3 ಜೂನ್ 2027 ರಿಂದ 13 ಜುಲೈ 2034
ಮಿಥುನ 8 ಆಗಸ್ಟ್ 2029 ರಿಂದ 27 ಆಗಸ್ಟ್ 2036
ಕರ್ಕ ರಾಶಿ 31 ಮೇ 2032 ರಿಂದ 22 ಅಕ್ಟೋಬರ್ 2038
ಸಿಂಹ 13 ಜುಲೈ 2034 ರಿಂದ 29 ಜನವರಿ 2041
ಕನ್ಯಾರಾಶಿ 27 ಆಗಸ್ಟ್ 2036 ರಿಂದ 12 ಡಿಸೆಂಬರ್ 2043
ತುಲಾ 22 ಅಕ್ಟೋಬರ್ 2038 ರಿಂದ 8 ಡಿಸೆಂಬರ್ 2046
ವೃಶ್ಚಿಕ ರಾಶಿ 28 ಜನವರಿ 2041 ರಿಂದ 3 ಡಿಸೆಂಬರ್ 2049
ಧನು ರಾಶಿ: ಸಾಡೆ ಸತಿ 17 ಜನವರಿ 2023 ರಂದು ಮತ್ತು ನಂತರ 12 ಡಿಸೆಂಬರ್ 2043 ರಿಂದ 3 ಡಿಸೆಂಬರ್ 2049 ರವರೆಗೆ ಕೊನೆಗೊಳ್ಳುತ್ತದೆ.
ಮಕರ ಸಂಕ್ರಾಂತಿ ಸಾಡೇ ಸತಿ ಮುಂದುವರಿಯುತ್ತದೆ ಮತ್ತು ಮಾರ್ಚ್ 29, 2025 ರಂದು ಕೊನೆಗೊಳ್ಳುತ್ತದೆ.
ಕುಂಭವು 24 ಜನವರಿ 2022 ರಿಂದ 3 ಜೂನ್ 2027 ರವರೆಗೆ ಮುಂದುವರಿಯುತ್ತದೆ.
ಮೀನ: ಶನಿ ಸಾಡೇಸಾತಿ 29 ಏಪ್ರಿಲ್ 2022 ರಿಂದ ಮುಂದುವರಿಯುತ್ತದೆ ಮತ್ತು 29 ಮಾರ್ಚ್ 2025 ರಂದು ಕೊನೆಗೊಳ್ಳುತ್ತದೆ.

ಶನಿಸಾಡೇಸಾತಿ ಕೆಟ್ಟ ಪ್ರಭಾವ ತಗ್ಗಲು ಪರಿಹಾರ

  • * ಪ್ರತಿ ಶನಿವಾರ ಶನಿ ದೇವಾಲಯಕ್ಕೆ ಭೇಟಿ ನೀಡಿ
  • ಬಡವರಿಗೆ ಶನಿವಾರ ಕಪ್ಪು ಹೊದಿಕೆ ನೀಡಿ
  • ಎಳ್ಳೆಣ್ಣೆ, ಕಪ್ಪು ಎಳ್ಖು ಶನಿಯ ದೇವಾಲಯಕ್ಕೆ ನೀಡಿ
  • ಶನಿವಾರ ಶಿವಲಿಂಗಕ್ಕೆ ಜಲಾಭಿಷೇಕ ಮಾಡಿಸಿ

ಶನಿ ಗಾಯತ್ರಿ ಮಂತ್ರ '
ಓಂ ಶನೈಶ್ಚರಾಯ ವಿದ್ಮಯೇ ಸೂರ್ಯಪುತ್ರಾಯ ದಹಿಮಹಿ ತನ್ನೊ ಮಂಡಾ ಪ್ರಚೋದಾಯತ್

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Shani Sadesati: Shani Sadesati Time For 12 Zodiac Signs In Kannada

Shani Sadesati: Shani Sadesati Time For 12 Zodiac Signs, read on....
Story first published: Friday, February 23, 2024, 22:17 [IST]
X
Desktop Bottom Promotion