Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
2026ರಲ್ಲಿ ಶನಿ ಸಾಡೇಸಾತಿ: ಮೂರು ರಾಶಿಯವರ ಜೀವನದಲ್ಲಿ ಅಲ್ಲೋಲ ಕಲ್ಲೋಲ! ಪರಿಹಾರವೇನು?
ಜ್ಯೋತಿಷ್ಯದಲ್ಲಿ ಶನಿ ದೇವನನ್ನು ನ್ಯಾಯದ ದೇವರು ಎಂದು ಪರಿಗಣಿಸಲಾಗುತ್ತದೆ. ಶನಿ ಯಾವ ರಾಶಿಯ ಉತ್ತಮ ಮನೆಯಲ್ಲಿ ಚಲಿಸುತ್ತಾನೋ ಅದರಿಂದ ಲಾಭದಾಯಕವಾಗುತ್ತದೆ. ಆದ್ರೆ ಶನಿಯ ಮನೆಯು ಯಾರ ಜಾತಕದಲ್ಲಿ ಸವಾಲಿನ ಮನೆಯಲ್ಲಿರಲಿದ್ಯೋ ಅವರಿಗೆ ಶನಿಯ ದೋಷಗಳು ಹೆಚ್ಚಾಗಿ ಕಾಡುವುದು ನೋಡಬಹುದು. ಶನಿಯಿಂದ ವ್ಯಕ್ತಿಯೊಬ್ಬರ ಜೀವನದಲ್ಲಿ ಏರಿಳಿತ ಸಹ ನೋಡಬಹುದು.
ಶನಿಯಿಂದ ವೃತ್ತಿ, ವ್ಯವಹಾರ, ಜೀವನದ ಮೇಲೆ ಆಳವಾದ ಪರಿಣಾಮ ಉಂಟು ಮಾಡುವುದು ನೋಡಬಹುದು. ಶನಿ ದೇವರನ್ನು ನ್ಯಾಯದ ದೇವರು ಎಂದು ಹಾಗೆ ಕರ್ಮಗಳಿಗೆ ಅನುಗುಣವಾಗಿ ಆತ ಫಲ ನೀಡುವನು ಎಂದು ಪರಿಗಣಿಸಲಾಗುತ್ತದೆ. ಜಾತಕದಲ್ಲಿ ಶನಿಯ ಸ್ಥಾನವು ವೈಯಕ್ತಿಕ ಜೀವನ, ವೃತ್ತಿ ಮತ್ತು ವ್ಯವಹಾರದ ಮೇಲೆ ಆಳವಾದ ಪರಿಣಾಮ ಬೀರುತ್ತದೆ.

ಶನಿ ನಿಧಾನವಾಗಿ ಚಲಿಸುತ್ತದೆ ಮತ್ತು ಸರಿಸುಮಾರು ಎರಡೂವರೆ ವರ್ಷಗಳಿಗೊಮ್ಮೆ ರಾಶಿಯನ್ನು ಬದಲಾಯಿಸುವುದರಿಂದ, ಅದರ ಪ್ರಭಾವವು ದೀರ್ಘಕಾಲದವರೆಗೆ ಇರುತ್ತದೆ. ಕರ್ಮ ನೀಡುವ ಶನಿಯು ರಾಶಿಗಳನ್ನು ಬದಲಾಯಿಸಿದಾಗಲೆಲ್ಲಾ, ಶನಿಯ ಸಾಡೇ ಸಾತಿ ಮತ್ತು ಧೈಯದ ಪರಿಣಾಮಗಳು ಕೆಲವೊಮ್ಮೆ ರಾಶಿಗಳ ಪರಿಣಾಮ ಬೀರುವುದು ಅಥವಾ ಅದರ ಪ್ರಭಾವ ಕೊನೆಯಾಗುವುದು ನೋಡಬಹುದು.
ಹಾಗೆ 2026ರಲ್ಲಿ ಶನಿಯಿಂದ ಹಲವು ರಾಶಿಗಳು ಪ್ರಭಾವಕ್ಕೊಳಗಾಗುವುದು ಹಾಗೆ ಆತನ ಸಾಡೇ ಸಾತಿಗೆ ಒಳಗಾಗುವುದು ನೋಡಬಹುದು. ಮಾರ್ಚ್ 2025 ರಲ್ಲಿ ಶನಿಯು ಮೀನ ರಾಶಿಗೆ ಸಾಗಿದ್ದಾನೆ. ಈ ಸಮಯದಿಂದ ಮೇಷ ರಾಶಿಯವರು ಶನಿ ಮೊದಲ ಹಂತದ ಸಾಡೇ ಸಾತಿ ಅನುಭಿಸುತ್ತಿದ್ದಾರೆ. ಮೀನ ರಾಶಿಯವರು ಎರಡನೇ ಹಂತವನ್ನು ಮತ್ತು ಕುಂಭ ರಾಶಿಯವರು ಮೂರನೇ ಹಂತವನ್ನು ಅನುಭವಿಸುತ್ತಾರೆ.
ಈ ಮೂರು ರಾಶಿ ಮೇಲೆ ಶನಿಯ ಪ್ರಭಾವವು 2027ರ ವರೆಗೆ ಮುಂದುವರಿಯುತ್ತದೆ. ಪರಿಣಾಮವಾಗಿ 2026ನೇ ಹೊಸ ವರ್ಷದಲ್ಲಿ ಈ ರಾಶಿ ಜನರಿಗೆ ಸಾಡೇ ಸಾತಿ ಮುಂದುವರೆಯಲಿದೆ. ಹಾಗೆ ಧನು ಮತ್ತು ಸಿಂಹ ರಾಶಿಯವರ ಮೇಲೆಯೂ ಶನಿಯ ಪ್ರಭಾವ ನೋಡಬಹುದು. ಶನಿ ಸಾಡೇಸಾತಿಯಿಂದ ಈ ಮೂರು ರಾಶಿಗಳ ಮೇಲೆ ಯಾವೆಲ್ಲಾ ರೀತಿ ಪರಿಣಾಮ ಬೀರಲಿದೆ ನೋಡಿ.
ಮೇಷ ರಾಶಿ
ಮೇಷ ರಾಶಿಯವರಿಗೆ ಈ ಶನಿ ಸಾಡೇಸಾತಿಯಿಂದಾಗಿ ಹಲವು ರೀತಿ ಅಡ್ಡಿಗಳಿವೆ. ನಿಮ್ಮ ಆರೋಗ್ಯ ಸಮಸ್ಯೆಯಿಂದ ಹಿಡಿದು ವ್ಯವಹಾರದಲ್ಲಿ ನಷ್ಟ, ದಾಂಪತ್ಯ ತೊಡಕು. ವ್ಯಾಪಾರದಲ್ಲಿನ ಸಮಸ್ಯೆಗಳು ಹೆಚ್ಚಾಗುವಿರಿ. ವಿವಾಹ ವಿಳಂಬ, ನಿರುದ್ಯೋಗ ಕಾಡುವುದು, ವಾಹನ ಸಂಬಂಧಿತ ಅಡೆತಡೆಗಳು, ಪ್ರಯಾಣದಲ್ಲಿನ ತೊಡಕುಗಳು ಎದುರಾಗುವುದು ನೋಡಬಹುದು.
ಕುಂಭ ರಾಶಿ
ಕುಂಭ ರಾಶಿಯವರಿಗೆ ಶನಿಯಿಂದ ಸಮಸ್ಯೆಗಳಿವೆ. ನಿಮ್ಮ ಪೂರ್ವ ನಿಯೋಜಿತ ಕೆಲಸ ಕಾರ್ಯಗಳಲ್ಲಿ ಅಡ್ಡಿ ಉಂಟಾಗುವುದು ನೋಡಬಹುದು. ನೀವು ಮನೆ ನಿರ್ಮಾಣ, ಹೊಸ ಆದಾಯ ಮೂಲಕ ಕಟ್ಟಿಕೊಳ್ಳುವ ಪ್ರಯತ್ನದಲ್ಲಿ ಸವಾಲುಗಳ ಎದುರಿಸಬೇಕಾಗುತ್ತದೆ. ನಿಮ್ಮ ದಾಂಪತ್ಯ ಹಾಗೂ ಮಕ್ಕಳ ವಿಚಾರವಾಗಿ ತಾಳ್ಮೆ ಕಳೆದುಕೊಳ್ಳುವುದು ಇದರಿಂದ ಮಾನಸಿಕ ನೆಮ್ಮದಿ ಹಾಳಾಗುವುದು ನೋಡಬಹುದು. ಆಹಾರ ಸಂಬಂಧಿತ ವ್ಯವಹಾರದಲ್ಲಿ ತೊಡಗಿರುವ ಮಂದಿಗೆ ಶನಿಯಿಂದ ಅಡ್ಡಿಗಳಿವೆ.
ಮೀನ ರಾಶಿ
ಮೀನ ರಾಶಿಯವರಿಗೆ 2ನೇ ಹಂತದ ಸಾಡೇಸಾತಿಯಿಂದ ನಿಮ್ಮ ಬಹುಕಾಲದ ಬಯಕೆಗಳ ಈಡೇರಿಸಿಕೊಳ್ಳುವುದು ವಿಳಂಬವಾಗುತ್ತಾ ಸಾಗುತ್ತದೆ. ಹಲವು ಸಮಯದಿಂದ ನೀವು ಬಯಸಿದಂತಹ ವಸ್ತು, ವಿಚಾರದಲ್ಲಿ ವೈಪಲ್ಯ ಎದುರಿಸಬಹುದು. ಆರೋಗ್ಯ ಸಂಬಂಧವಾಗಿ ನೀವು ಬಹಳಷ್ಟು ಖರ್ಚು ಮಾಡಬೇಕಾಗಬಹುದು.
ಶನಿ ದೋಷ ಕಡಿಮೆ ಮಾಡಲು ಏನು ಮಾಡಬೇಕು?
ಈ ಮೂರು ರಾಶಿಯವರು ಸೇರಿದಂತೆ ಶನಿಯಿಂದ ಅಡ್ಡಿ ಆತಂಕ ಎದುರಿಸುತ್ತಿರುವ ಮಂದಿ ಅಂತಹ ಶನಿಯ ಕೋಪವನ್ನು ತಣಿಸಲು ಕೆಲವು ಮಾರ್ಗಗಳನ್ನು ಅನುಸರಿಬೇಕು.
- ಶನಿವಾರ ಸಂಜೆ ಅರಳಿ ಮರದ ಕೆಳಗೆ ಎಣ್ಣೆ ದೀಪವನ್ನು ಹಚ್ಚುವುದು.
- ಶನಿ ಚಾಲೀಸಾವನ್ನು ಪಠಿಸುವುದು
- ಕಪ್ಪು ವಸ್ತುಗಳನ್ನು ದಾನ ಮಾಡುವುದು
- ಶನಿ ದೇವಾಲಯ ಭೇಟಿ ಮಾಡುವುದು
- ಶನಿಗೆ ಸಾಸಿವೆ ದೀಪ ಹಚ್ಚುವುದು
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications











