ಏಳೂವರೆ ವರ್ಷದ ಬಳಿಕ ಈ ರಾಶಿಯಲ್ಲಿ ಶನಿ ಸಾಡೇಸಾತಿ ಮುಕ್ತಾಯವಾಗಲಿದೆ!

ಶನಿ ಸಾಡೇಸಾತಿ ಎಂದರೆ ಭಯ ಪಡದವರೇ ಇಲ್ಲ, ಏಕೆಂದರೆ ಶನಿ ಸಾಡೇಸಾತಿ ಪ್ರಭಾವ ಆ ರೀತಿ ಇರುತ್ತದೆ, ಶನಿ ಸಾಡೇಸಾತಿ ಎಂದರೆ ಏಳೂವರೆ ವರ್ಷ ಶನಿಯು ಪಡಬಾರದ ಕಷ್ಟ ಅನುಭವಿಸುತ್ತಾರೆ. ಶನಿಯು ಹೆಸರಿಗೆ ಕಳಂಕ ತರುತ್ತಾನೆ, ವೃತ್ತಿ ಜೀವನದಲ್ಲಿ ಅನೇಕ ತೊಂದರೆಗಳು ಎದುರಾಗುವುದು, ಕುಟುಂಬ ಬದುಕಿನಲ್ಲಿ ಅನೇಕ ಸಮಸ್ಯೆಗಳನ್ನು ಉಂಟು ಮಾಡುವುದು, ಆರ್ಥಿಕವಾಗಿಯೂ ಅನೇಕ ಸಂಕಷ್ಟ ಎದುರಿಸಬೇಕು ಹೀಗೆ ಏಳೂವರೆ ವರ್ಷ ಶನಿ ಸಾಡೇಸಾತಿಯಿಂದಾಗಿ ಮನುಷ್ಯ ಪಡಬಾರದ ಕಷ್ಟ ಪಡುತ್ತಾನೆ.

Shani Sade Sati

ಶನಿ ಸಾಡೇಸಾತಿ ಬಂದರೆ ಎಷ್ಟೇ ದೊಡ್ಡ ವ್ಯಕ್ತಿಯಾದರೂ ಕಷ್ಟಗಳನ್ನು ಅನುಭವಿಸುತ್ತಾನೆ. ಶನಿಯ ಕಾಟದಿಂದ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ, ಕೆಲವೊಂದು ಪರಿಹಾರ ಮಾಡಿ ಶನಿ ಕಾಟವನ್ನು ತಗ್ಗಿಸಬಹುದು ಅಷ್ಟೇ, ಆದರೆ ಏಳೂವರೆ ವರ್ಷ ಶನಿ ಸಾಡೇಸಾತಿಯಿಂದ ಎದುರಾಗುವ ಸಮಸ್ಯೆಯನ್ನು ಎದುರಿಸಲೇಬೇಕಾಗುತ್ತದೆ.

ಶನಿ ಸಾಡೇಸಾತಿ ಮುಗಿದ ಮೇಲೆ ಆ ವ್ಯಕ್ತಿಯ ಬದುಕಿನಲ್ಲಿ ಎಲ್ಲವೂ ಒಳಿತಾಗುವುವುದು. ಹೊಸ ವರ್ಷದಲ್ಲಿ ಶನಿಯು ಮಾರ್ಚ್‌ ತಿಂಗಳಿನಲ್ಲಿ ರಾಶಿ ಬದಲಾವಣೆ ಮಾಡಲಿದೆ, ಶನಿಯು ಕುಂಭ ರಾಶಿಯನ್ನು ಬಿಟ್ಟು ಮೀನ ರಾಶಿಗೆ ಸಂಚರಿಸಲಿದೆ. ಶನಿಯು ಮೀನ ರಾಶಿಗೆ ಸಂಚರಿಸಿದಾಗ ಒಂದು ರಾಶಿಯು ಶನಿ ಸಾಡೇಸಾತಿಯಿಂದ ಮುಕ್ತಿ ಪಡೆಯಲಿದೆ. ಏಳೂವರೆ ವರ್ಷ ಅನುಭವಿಸಿದ ಕಷ್ಟಗಳು ದೂರಾಗ ಅವರ ಬದುಕಿನಲ್ಲಿ ಸುವರ್ಣಯುಗ ಪ್ರಾರಂಭವಾಗುವುದು.

ಶನಿ ಸಾಡೇಸಾತಿಯಿಂದ ಮುಕ್ತಿ ಪಡೆಯುವ ರಾಶಿ
ಶನಿ ಸಾಡೇಸಾತಿ ಈಗ ಮಕರ ರಾಶಿ, ಕುಂಭ ರಾಶಿ, ಮೀನ ರಾಶಿಯಲ್ಲಿ ನಡೆಯುತ್ತಿದೆ. 2025 ಮಾರ್ಚ್‌ನಲ್ಲಿ ಶನಿಯು ಮೀನ ರಾಶಿಗೆ ಸಂಚರಿಸಿದಾಗ ಮಕರ ರಾಶಿಯಲ್ಲಿ ಶನಿಸಾಡೇಸಾತಿ ಮುಗಿಯಲಿದೆ. ಈ ಏಳೂವರೆ ವರ್ಷ ಶನಿಯ ಕಾರಣದಿಂದ ಹಲವಾರು ಸಮಸ್ಯೆ ಎದುರಿಸಬೇಕಾಗಿರುತ್ತದೆ, ಆದರೆ 2025ರಿಂದ ಮಕರ ರಾಶಿಯವರು ತುಂಬಾನೇ ನಿರಾಳವಾಗಬಹುದು. ವೃತ್ತಿ ಬದುಕಿನಲ್ಲಿ ಹೊಸ ಎತ್ತರಕ್ಕೆ ಬೆಳೆಯಲು ಸಾಧ್ಯವಾಗಲಿದೆ. ಆರ್ಥಿಕ ಸಮಸ್ಯೆ ದೂರಾಗಿ ಆರ್ಥಿಕವಾಗಿ ಬೆಳೆಯಲು ಸಾಧ್ಯವಾಗಲಿದೆ.

ವೈವಾಹಿಕ ಬದುಕು ತುಂಬಾ ಚೆನ್ನಾಗಿರಲಿದೆ, ಸ್ಮರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಬಹುದು, ಕೆಲಸಕ್ಕಾಗಿ ಹುಡುಕುತ್ತಿದ್ದರೆ ಕೆಲಸ ಸಿಗಲಿದೆ. ನೀವು ವಿದೇಶಕ್ಕೆ ಹೋಗಲು ಪ್ರಯತ್ನಿಸುತ್ತಿದ್ದರೆ ಅದು ಕೂಡ ನಡೆಯಲಿದೆ. ಶನಿ ಸಾಡೇಸಾತಿ ಇರುವ ಅವಾಹಿತರಿಗೆ ಮದುವೆಗೆ ಅಡೆತಡೆ ಉಂಟಾಗಿದ್ದರೆ ಅದು ದೂರಾಗಿ ವಿವಾಹ ಯೋಗ ಕೂಡ ಕೂಡಿ ಬರಲಿದೆ. ಶನಿ ಸಾಡೇಸಾತಿ ಮುಗಿದ ಬಳಿಕ ನಂತರದ ವರ್ಷಗಳು ಮಕರ ರಾಶಿಯವರಿಗೆ ಅನುಕೂಲಕರವಾಗಿದೆ.

ಶನಿ ಸಾಡೇಸಾತಿ ಇರುವವರು ಶನಿಯ ಕೆಟ್ಟಪ್ರಭಾವ ಕಡಿಮೆ ಮಾಡಲು ಕೆಲವೊಂದು ಪರಿಹಾರ ಮಾಡಬಹುದು
ಶನಿ ಸಾಡೇಸಾತಿ ಇರುವವರು ಪ್ರತಿ ಶನಿವಾರ ಶನಿದೇವನ ಮಂತ್ರ ಪಠಣೆ ಮಾಡಬೇಕು, ಶನಿ ದೇವಾಲಯಕ್ಕೆ ಹೋಗಿ ಎಳ್ಳೆಣ್ಣೆ ದಾನ ಮಾಡಬೇಕು
ಶನಿವಾರ ಬಡವರಿಗೆ ದಾನ ಮಾಡಿ.
ಶನಿವಾರ ಬಡವರಿಗೆ ಕಪ್ಪು ವಸ್ತ್ರ ದಾನ ಮಾಡಿ
ಕಪ್ಪು ನಾಯಿಗೆ ಆಹಾರ ಹಾಕುವುದು ಇವೆಲ್ಲಾ ಮಾಡುವುದರಿಂದ ಶನಿಯ ಕೆಟ್ಟ ಪ್ರಭಾವ ಕಡಿಮೆಯಾಗುವುದು.
ಹನುಮಂತನ ಆರಾಧನೆ ಮಾಡುವುದರಿಂದ ಹಾಗೂ ಪ್ರತಿದಿನ ಹನುಮಾನ್‌ ಚಾಲೀಸ ಪಠಿಸುವುದರಿಂದ ಶನಿ ಕಾಟ ಕಡಿಮೆಯಾಗಲಿದೆ.

ಮಕರ ರಾಶಿಯಲ್ಲಿ ಶನಿಯು ಮುಕ್ತಾಯವಾದ ಮೇಲೆ ಕುಂಭ ರಾಶಿ, ಮೀನ ರಾಶಿ , ಮೇಷ ರಾಶಿಯಲ್ಲಿ ಶನಿ ಸಾಡೇಸಾತಿ ಪ್ರಭಾವ ಇರಲಿದೆ.

ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Shani Sade Sati Ends In This Zodiac Signs In 2025 March In Kannada

As per astrology in this rashi shani sade sathi ends in 2025, read on..
Story first published: Sunday, December 29, 2024, 18:47 [IST]
X
Desktop Bottom Promotion