Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಶನಿ ಸಾಡೇಸಾತಿ, ಶನಿ ಧೈಯ್ಯ: 2025ರಲ್ಲಿ ಈ 5 ರಾಶಿಗಳಲ್ಲಿ ಇರಲಿದೆ ಶನಿಯ ಕೆಟ್ಟ ಪ್ರಭಾವ
ಶನಿಯನ್ನು ನ್ಯಾಯದ ದೇವರು, ನಮ್ಮ ಕರ್ಮಕ್ಕೆ ತಕ್ಕ ಫಲ ನೀಡುವ ದೇವರು ಎಂದು ಹೇಳಲಾಗುವುದು. ಶನಿಯು ಎರಡೂವರೆ ವರ್ಷಕ್ಕೊಮ್ಮೆ ರಾಶಿ ಬದಲಾವಣೆ ಮಾಡುತ್ತದೆ. ಇದೀಗ ಕುಂಭ ರಾಶಿಯಲ್ಲಿರುವ ಶನಿಯು 2025ರಲ್ಲಿ ಮೀನ ರಾಶಿಗೆ ಸಂಚರಿಸಲಿದೆ, ಈ ಸಂಚಾರ ಜ್ಯೋತಿಷ್ಯ ದೃಷ್ಟಿಯಿಂದ ತುಂಬಾ ಮಹತ್ವದ್ದಾಗಿದೆ.
ಶನಿಯು ರಾಶಿ ಬದಲಾವಣೆ ಮಾಡಿದಾಗ ಕೆಲ ರಾಶಿಗಳಿಗೆ ಶನಿ ಸಾಡೇಸಾತಿ, ಶನಿ ಧೈಯ್ಯ ದೋಷವಿರುತ್ತದೆ, ಶನಿ ಸಾಡೇಸಾತಿ ಸಮಯದಲ್ಲಿ ಆ ವ್ಯಕ್ತಿ ಅನೇಕ ಕಷ್ಟಗಳನ್ನು, ಅವಮಾನವನ್ನು ಎದುರಿಸುತ್ತಾನೆ, ಹಾಗಾಗಿ ಈ ಅವಧಿ ಎಂದರೆ ಎಲ್ಲರೂ ಭಯ ಪಡುತ್ತಾರೆ. ಜೀವಿತಾವಧಿಯಲ್ಲಿ ಒಮ್ಮೆಯಾದರೂ ವ್ಯಕ್ತಿ ಈ ಶನಿ ಸಾಡೇಸಾತಿ ಹಿಡಿತಕ್ಕೆ ಒಳಪಟ್ಟು ತುಂಬಾ ಕಷ್ಟಪಡುತ್ತಾನೆ.
2025ರಿಂದ ಯಾವೆಲ್ಲಾ ರಾಶಿಗಳಲ್ಲಿ ಶನಿ ಸಾಡೇಸಾತಿ, ಶನಿ ಧೈಯ್ಯ ಇರಲಿದೆ, ಈ ರಾಶಿಗಳ ಮೇಲೆ ಬೀರುವ ಪ್ರಭಾವವೇನು ಎಂದು ನೋಡೋಣ:

ಮೇಷ ರಾಶಿಯಲ್ಲಿ ಶನಿ ಸಾಡೇಸಾತಿ ಶುರುವಾಗುವುದು
ಶನಿಯು ಕುಂಭ ರಾಶಿಯಿಂದ ಮೀನ ರಾಶಿಗೆ ಸಂಚರಿಸಿದಾಗ ಮಕರ ರಾಶಿಯಲ್ಲಿ ಶನಿ ಸಾಡೇಸಾತಿ ಮುಕ್ತಾಯವಾಗಿ ಮೇಷ ರಾಶಿಯಲ್ಲಿ ಶನಿ ಸಾಡೇಸಾತಿ ಮೊದಲನೇ ಹಂತ ಶುರುವಾಗುವುದು. ಶನಿಯು ಮೇಷ ರಾಶಿಯ 2ನೇ, 6ನೇ, ಒಂಭತ್ತನೇ ಮನೆಯ ಮೇಲೆ ಪ್ರಭಾವ ಬೀರುವುದರಿಂದ ಈ ಅವಧಿಯಲ್ಲಿ ದೂರ ಪ್ರಯಾಣ ಮಾಡುವಿರಿ. ವಿದೇಶದಲ್ಲಿ ಕೆಲಸಕ್ಕೆ ಪ್ರಯತ್ನ ಮಾಡುತ್ತಿದ್ದರೆ ಈ ಅವಧಿ ಅನುಕೂಲಕರವಾಗಿದೆ. ಆದರೆ ಶನಿಯ ಪ್ರಭಾವದಿಂದಾಗಿ ಹಣದ ಖರ್ಚು ತುಂಬಾ ಇರಲಿದೆ.
ಈ ಅವಧಿಯಲ್ಲಿ ಆರೋಗ್ಯ ಸಮಸ್ಯೆ ಎದುರಿಸಬಹುದು, ಆರೋಗ್ಯಕ್ಕಾಗಿ ಹೆಚ್ಚಿನ ಹಣ ಖರ್ಚಾಗುವುದು. ನೀವು ಆರೋಗ್ಯದ ಕಡೆಗೆ ಗಮನಹರಿಸಿ.
ಕುಂಭ ರಾಶಿ:ಕುಂಭ ರಾಶಿಯಲ್ಲಿ ಶನಿಯ ಮೂರನೇ ಹಂತ ಶುರುವಾಗುವುದು, ಎರಡನೇ ಹಂತದಲ್ಲಿ ಇರುವಾಗ ತುಂಬಾನೇ ಕಷ್ಟ, ಸವಾಲು, ಅವಮಾನಗಳನ್ನು ಅನುಭವಿಸಿರುತ್ತೀರಿ, ಆದರೆ ಈ ಅವಧಿಯಲ್ಲಿ ಕಷ್ಟಗಳು ನಿಧಾನಕ್ಕೆ ಕಡಿಮೆಯಾಗುವುದು, ನಿಮ್ಮ ಪ್ರಯತ್ನಕ್ಕೆ ಫಲ ಸಿಗಲಿದೆ. ಈ ಅವಧಿಯಲ್ಲಿ ನೀವು ವೃತ್ತಿ ಹಾಗೂ ವೈಯಕ್ತಿಕ ಬದುಕಿನಲ್ಲಿ ನಿಧಾನಕ್ಕೆ ಬದಲಾಗುವುದು. ಆದರೆ ಶನಿ ಸಾಡೇಸಾತಿ ಹಂತ ಮುಗಿಯುವವರೆಗೆ ತುಂಬಾನೇ ಜಾಗ್ರತೆವಹಿಸಬೇಕು.
ಮೀನ ರಾಶಿ
ಮೀನ ರಾಶಿಯಲ್ಲಿ ಶನಿ ಸಾಡೇಸಾತಿಯ ಕಠಿಣ ಹಂತ ಶುರುವಾಗುವುದು, ಈ ಅವಧಿಯಲ್ಲಿ ನೀವು ಪ್ರತಿಯೊಂದ ಹೆಜ್ಜೆಯನ್ನೂ ಆಲೋಚಿಸಿ ಇಡಬೇಕು. ಆದಷ್ಟೂ ಅನಗ್ಯತ ವಿವಾದಗಳಿಗೆ ಸಿಲುಕಿಕೊಳ್ಳದಂತೆ ಜಾಗ್ರತೆವಹಿಸಿ. ಶನಿಯ ಕಷ್ಟಗಳಿಂದ ಪಾರಾಗಲು ಶನಿ ಕೃಪೆಗೆ ಪಾತ್ರರಾಗುವ ಕಾರ್ಯವನ್ನು ಮಾಡಿ. ಶನಿವಾರ ಶನಿ ದೇವಾಲಯಕ್ಕೆ ಭೇಟಿ, ಪ್ರತಿದಿನ ಹನುಮಾನ್ ಚಾಲೀಸ ಪಠಿಸಿ, ಬಡವರಿಗೆ ಆಹಾರ, ವಸ್ತ್ರ ದಾನ ಮಾಡಿ. ಪ್ರತಿ ಶನಿವಾರ ಕಪ್ಪು ಎಳ್ಳು ಜೊತೆಗೆ ನಿರ್ಗತಿಕರಿಗೆ ಆಹಾರ ದಾನ ಮಾಡುವುದು ಒಳ್ಳೆಯದು. ಹೀಗೆ ಮಾಡುವುದರಿಂದ ಶನಿಯ ಕೆಟ್ಟ ಪ್ರಭಾವ ಕಡಿಮೆಯಾಗುವುದು.
ಶನಿ ಧೈಯ್ಯ ಯಾವ ರಾಶಿಗಳಲ್ಲಿ ಇರಲಿದೆ
ಶನಿ ಧೈಯ್ಯ ವೃಶ್ಚಿಕ ರಾಶಿಯಲ್ಲಲಿ ಕೊನೆಯಾಗುವುದು, ಧನು ರಾಶಿಗೆ ಪ್ರಾರಂಭವಾಗುವುದು, ಕರ್ಕ ರಾಶಿಯಲ್ಲಿ ಕೊನೆಯಾಗಿ ಸಿಂಹ ರಾಶಿಗೆ ಶುರುವಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications