Latest Updates
-
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್
ಶನಿ ಸಾಡೇಸಾತಿ: ಈ ರಾಶಿಯವರಲ್ಲಿ ಶನಿಯಿಂದ ಸಮಸ್ಯೆ..! ಇನ್ನೆಷ್ಟು ದಿನ ಕಾಡಲಿದ್ದಾನೆ ನೋಡಿ!
ಜ್ಯೋತಿಷ್ಯ ಶಾಸ್ತ್ರದಲ್ಲಿ ಎಲ್ಲಾ ಗ್ರಹಗಳನ್ನು ಅವುಗಳ ಚಲನೆಯನ್ನು ಪ್ರಮುಖ ವಿದ್ಯಮಾನವಾಗಿ ನೋಡಲಾಗಿದೆ. ಅದರಂತೆ ಶನಿಯನ್ನು ಕೂಡ ಪ್ರಮುಖ ಗ್ರವಾಗಿ ಪರಿಗಣಿಸಲಾಗಿದೆ. ನಿಧಾನವಾಗಿ ಚಲಿಸುವ ಶನಿಯು ಒಂದು ರಾಶಿಯಲ್ಲಿ ಎರಡೂವರೆ ವರ್ಷಗಳ ಕಾಲ ನೆಲೆಸುತ್ತಾನೆ. ಈ ಸಮಯದಲ್ಲಿ ಶನಿಯಿಂದ ಹಲವು ರೀತಿಯಲ್ಲಿ ಪ್ರಭಾವಕ್ಕೊಳಗಾಗುವುದು ನೋಡಬಹುದು.
ಇಂತಹ ಪ್ರಭಾವಗಳಲ್ಲಿ ಶನಿ ಸಾಡೇ ಸಾತಿ ಕೂಡ ಒಂದು. ಜ್ಯೋತಿಷ್ಯದಲ್ಲಿ ಶನಿ ಸಾಡೇ ಸತಿಯನ್ನು ಜೀವನದ ಒಂದು ಪ್ರಮುಖ ಮತ್ತು ಪ್ರಭಾವಶಾಲಿ ಹಂತವೆಂದು ಪರಿಗಣಿಸಲಾಗುತ್ತದೆ. ಶನಿ ಗ್ರಹವು ವ್ಯಕ್ತಿಯ ಜನ್ಮ ಕುಂಡಲಿಯಲ್ಲಿ ಚಂದ್ರ ರಾಶಿಯಿಂದ 12 ನೇ, 1 ನೇ ಮತ್ತು 2 ನೇ ಮನೆಯಲ್ಲಿ ಪ್ರಯಾಣಿಸಿದಾಗ ಈ ಅವಧಿ ಪ್ರಾರಂಭವಾಗುತ್ತದೆ.

ಇದರ ಒಟ್ಟು ಅವಧಿ ಸುಮಾರು ಏಳೂವರೆ ವರ್ಷಗಳು, ಆದ್ದರಿಂದ ಇದನ್ನು ಸಾಡೇ ಸತಿ ಎಂದು ಕರೆಯಲಾಗುತ್ತದೆ. ಶನಿ ಸಾಡೇಸಾತಿ ಎಂದರೆ ಏಳೂವರೆ ವರ್ಷ ಪಡಬಾರದ ಕಷ್ಟ ಅನುಭವಿಸುತ್ತಾರೆ. ಶನಿಯು ಹೆಸರಿಗೆ ಕಳಂಕ ತರುತ್ತಾನೆ, ವೃತ್ತಿ ಜೀವನದಲ್ಲಿ ಅನೇಕ ತೊಂದರೆಗಳು ಎದುರಾಗುವುದು, ಕುಟುಂಬ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಉಂಟು ಮಾಡುವುದು, ಆರ್ಥಿಕ ಸಂಕಷ್ಟ ಎದುರಿಸುವುದು ಸೇರಿ ಹಲವು ರೀತಿಯಲ್ಲಿ ಶನಿಯಿಂದ ಸಮಸ್ಯೆಯಾಗುವುದು ನೋಡಬಹುದು.
ಸಾಡೇ ಸತಿ ಸಾಮಾನ್ಯವಾಗಿ ಕಷ್ಟಗಳು ಮತ್ತು ನಷ್ಟಗಳನ್ನು ಮಾತ್ರ ನೀಡುತ್ತದೆ ಎಂಬ ನಂಬಿಕೆ ಇದೆ, ಆದರೆ ವಾಸ್ತವದಲ್ಲಿ ಅದು ಹಾಗಲ್ಲ. ಶನಿ ದೇವ ನ್ಯಾಯದ ದೇವರು ಮತ್ತು ಈ ಸಮಯವು ಒಬ್ಬ ವ್ಯಕ್ತಿಗೆ ಅವನ ಕಾರ್ಯಗಳಿಗೆ ಸರಿಯಾದ ಫಲಿತಾಂಶ, ಕರ್ಮ ಫಲ ನೀಡುತ್ತಾನೆ. ಸತ್ಯ, ನ್ಯಾಯಯುತ ಮಾರ್ಗದಲ್ಲಿರುವವರಿಗೆ ಶನಿ ಆಶೀರ್ವದಿಸುತ್ತಾನೆ ಎಂದು ಸಹ ನಂಬಲಾಗಿದೆ. ಆದ್ರೆ ಶನಿಯು ಸಸ್ಯ ಯಾವ ರಾಶಿಯವರಲ್ಲಿನ ಚಲನೆಯಿಂದ ಹೆಚ್ಚು ಸಮಸ್ಯೆ ಎದುರಿಸುತ್ತಾರೆ. ಯಾವ ರಾಶಿಯಲ್ಲಿ ಶನಿ ಸಾಡೇಸಾತಿ ಯಾವ ಹಂತದಲ್ಲಿದೆ ನೋಡೋಣ
ಮೇಷ ರಾಶಿ
ಮೇಷ ರಾಶಿಯವರಲ್ಲಿ ಶನಿಯ ಸಾಡೇ ಸಾತಿ ಆರಂಭಗೊಂಡಿದೆ. ನಿಮ್ಮಲ್ಲಿ ಮೊದಲ ಹಂತದಲ್ಲಿ ಸಾಡೆ ಸಾತಿ ಇದೆ. ಈ ಪರಿಣಾಮವು 2032 ಮೇ ಕೊನೆಯ ವಾರದ ವರೆಗೂ ಮುಂದುವರೆಯಲಿದೆ. ಈ ಸಮಯದಲ್ಲಿ ನೀವು ಅನೇಕ ರೀತಿಯಲ್ಲಿ ಹಿನ್ನಡೆಗಳ ಎದುರಿಸುವುದು ನೋಡಬಹುದು. ಹಾಗೆ ಕೆಲವೊಂದು ಕೆಲಸದಲ್ಲಿ ಶನಿಯ ಪ್ರಭಾವದ ಕಾರಣ ತಾತ್ಕಾಲಿಕ ಹಿನ್ನಡೆ, ವಿಫಲತೆ ನೋಡಬಹುದು. ಹೊಸ ಕೆಲಸಗಳ ಆರಂಭದಲ್ಲಿ ಆತುರದಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಸೂಕ್ತ ಪರಿಹಾರಗಳೊಂದಿಗೆ ಮುನ್ನಡೆಯುವುದು ಸೂಕ್ತ.
ಕುಂಭ ರಾಶಿ
ಕುಂಭ ರಾಶಿಯವರಲ್ಲಿ ಶನಿ ಸಾಡೇ ಸಾತಿಯು ಕೊನೆಯ ಹಂತ ತಲುಪಿದೆ. ಇದರ ಫಲಿತಾಂಶವಾಗಿ ನಿಮ್ಮಲ್ಲಿಯೂ ಹಲವು ಹಿನ್ನಡೆಗಳು ಎದುರಾಗುತ್ತವೆ. ಈ ಸಾಡೆ ಸಾತಿಯ ಪರಿಣಾಮಣವು 2028 ಫೆಬ್ರವರಿ 23ರ ವರೆಗೂ ಮುಂದುವರೆಯಲಿದೆ. ಈ ನಡುವೆ ನಿಮ್ಮಲ್ಲಿ ಹಲವು ರೀತಿಯ ಸಮಸ್ಯೆಗಳ ಎದುರಿಸಿರುತ್ತೀರಿ, ಈಗಾಗಲೆ ನಿಮ್ಮ ದೊಡ್ಡ ಹಣಕಾಸು ಸಂಬಂಧಿ ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದೀರಿ. ಹಾಗೆ ಮುಂದೆ ಆರೋಗ್ಯದ ವಿಚಾರದಲ್ಲಿ ನಿಮಿಗೆ ಸಮಸ್ಯೆಗಳು ಎದುರಾಗಬಹುದು. ಔದ್ಯೋಗಿಕ ವಿಚಾರದಲ್ಲಿ ನೀವು ಅಂದುಕೊಂಡಂತೆ ಇರುವುದಿಲ್ಲ. ಈ ಸಮಯದಲ್ಲಿ ನೀವು ಹಲವು ಉದ್ಯೋಗ ಬದಲಾಯಿಸಬಹುದು. ವ್ಯವಹಾರಗಳಲ್ಲಿ ಏರಳಿತ ನೋಡುವಿರಿ.
ಮೀನ ರಾಶಿ
ಮೀನ ರಾಶಿಯವರು ಸಾಡೇಸಾತಿಯ ಎರಡನೇ ಹಂತದ ಮೂಲಕ ಹೋಗುತ್ತಿದ್ದಾರೆ. ಈ ಸ್ಥಿತಿಯು 2030 ಏಪ್ರಿಲ್ 17 ರ ವರೆಗೆ ಇರುತ್ತದೆ. ಈ ಸಮಯದಲ್ಲಿ ಭಾವನಾತ್ಮಕ ಅಸಮತೋಲನ ಮತ್ತು ಆರ್ಥಿಕ ಏರಿಳಿತಗಳನ್ನು ಕಾಣಬಹುದು, ಆದ್ದರಿಂದ ಬುದ್ಧಿವಂತಿಕೆಯಿಂದ ನಿರ್ಧಾರಗಳ ತೆಗೆದುಕೊಳ್ಳಿ. ವ್ಯಾಪಾರ, ವ್ಯವಹಾರ ಸಂಬಂಧವಾಗಿ ವೇಗ ಹೆಚ್ಚಾಗದೆ ಇರಬಹುದು. ಸರ್ಕಾರಿ ದಾಖಲೆಗಳು, ಕಚೇರಿ ವಿಚಾರಗಳಲ್ಲಿ ಮತ್ತಷ್ಟು ದಿನಗಳ ಸಮಸ್ಯೆ ಬರಬಹುದು.



Click it and Unblock the Notifications