ನಿಮ್ಮ ರಾಶಿಗೆ ಯಾವ ಇಸವಿಯಿಂದ- ಯಾವ ಇಸವಿಯವರಿಗೆ ಶನಿ ಸಾಡೇಸಾತಿ ಪ್ರಭಾವ ಇರಲಿದೆ?

ನವಗ್ರಹಗಳಲ್ಲಿಯೇ ಅತ್ಯಂತ ನಿಧಾನವಾಗಿ ಚಲಿಸುವ ಗ್ರಹ ಶನಿ. ಇದು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸಲು ಎರಡೂವರೆ ವರ್ಷ ಸಮಯ ತೆಗೆದುಕೊಳ್ಳುತ್ತದೆ. ಇದೀಗ ಶನಿಯು ಕುಂಭ ರಾಶಿಯಲ್ಲಿದೆ, ಇದೆ 29ಕ್ಕೆ ಶನಿಯು ಹಿಮ್ಮುಖ ಚಲನೆ ಮಾಡುವುದು.

30 ವರ್ಷದ ಬಳಿಕ ಶನಿಯು ಕುಂಭ ರಾಶಿಯಲ್ಲಿ ಹಿಮ್ಮುಖ ಚಲನೆ ಮಾಡುತ್ತಿದೆ, ಈ ಚಲನೆ ಕೆಲವು ರಾಶಿಗಳ ಮೇಲೆ ಶುಭ ಇನ್ನು ಕೆಲ ಗ್ರಹಗಳ ಮೇಲೆ ಅಶುಭ ಪ್ರಭಾವ ಬೀರುವುದು, 138 ದಿನಗಳವರೆಗೆ ಹಿಮ್ಮುಖ ಚಲನೆ ಮಾಡಲಿದೆ.

Shani Sade Sathi

ಈಗ ಮೂರು ರಾಶಿಗಳಲ್ಲಿ ಶನಿ ಸಾಡೇಸಾತಿ ನಡೆಯುತ್ತಿದೆ
ಶನಿಯು ಕುಂಭದಲ್ಲಿ ಸ್ಥಿತನಾಗಿರುವುದರಿಂದ ಮಕರ, ಕುಂಭ, ಮೀನ ರಾಶಿಗಳಲ್ಲಿ ಶನಿಯ ಸಾಡೇ ಸತಿ ನಡೆಯುತ್ತಿದೆ. ಜನವರಿ 17, 2023 ರಿಂದ ಮಾರ್ಚ್ 29, 2025 ರವರೆಗೆ ಶನಿಯು ಕುಂಭ ರಾಶಿಯಲ್ಲಿ ಇರುತ್ತಾನೆ. 2025ಕ್ಕೆ ಮಕರ ರಾಶಿಯವರು ಶನಿ ಸಾಡೇಸಾತಿಯಿಂದ ಮುಕ್ತರಾಗುತ್ತಾರೆ.

ಯಾವ ರಾಶಿಗಳ ಮೇಲೆ ಎಷ್ಟರಿಂದ ಎಷ್ಟರವರೆಗೆ ಶನಿ ಸಾಡೇಸಾತಿ ಇರಲಿದೆ?

ಮೇಷ ರಾಶಿಯ ಮೇಲೆ ಸಾಡೇ ಸತಿ - 29 ಮಾರ್ಚ್ 2025 ರಿಂದ 31 ಮೇ 2032

ವೃಷಭ ರಾಶಿಯ ಮೇಲೆ ಸಾಡೆ ಸತಿ - 03 ಜೂನ್ 2027 ರಿಂದ 13 ಜುಲೈ 2034

ಮಿಥುನ ರಾಶಿಯಲ್ಲಿ ಸಾಡೆ ಸತಿ - 08 ಆಗಸ್ಟ್ 2029 ರಿಂದ 27 ಆಗಸ್ಟ್ 2036

ಕರ್ಕ ರಾಶಿಯ ಮೇಲೆ ಸಾಡೇ ಸತಿ - 31 ಮೇ 2032 ರಿಂದ 22 ಅಕ್ಟೋಬರ್ 2038 ರವರೆಗೆ

ಸಿಂಹ ರಾಶಿಯಲ್ಲಿ ಸಾಡೆ ಸತಿ - 13 ಜುಲೈ 2034 ರಿಂದ 29 ಜನವರಿ 2041

ಕನ್ಯಾ ರಾಶಿಯ ಮೇಲೆ ಸಾಡೆ ಸತಿ - 27 ಆಗಸ್ಟ್ 2036 ರಿಂದ 12 ಡಿಸೆಂಬರ್ 2043

ತುಲಾ ರಾಶಿಯಲ್ಲಿ ಸಾಡೆ ಸತಿ - 22 ಅಕ್ಟೋಬರ್ 2038 ರಿಂದ 08 ಡಿಸೆಂಬರ್ 2046

ವೃಶ್ಚಿಕ ರಾಶಿಯ ಮೇಲೆ ಸಾಡೆ ಸತಿ - 28 ಜನವರಿ 2041 ರಿಂದ 3 ಡಿಸೆಂಬರ್ 2049

ಧನು ರಾಶಿಯಲ್ಲಿ ಸಾಡೆ ಸತಿ - 12 ಡಿಸೆಂಬರ್ 2043 ರಿಂದ 3 ಡಿಸೆಂಬರ್ 2049ರವರೆಗೆ ಇರಲಿದೆ.

ಇನ್ನು ಕೆಲವೇ ತಿಂಗಳಿನಲ್ಲಿ ಶನಿಸಾಡೇಸಾತಿಯಿಂದ ಮುಕ್ತಿ ಪಡೆಯಲಿರುವ ಮಕರ ರಾಶಿಯವರು

ಕಳೆದ ಏಳು ವರ್ಷದಿಂದ ಶನಿ ಸಾಡೇಸಾತಿ ಪ್ರಭಾವಕ್ಕೆ ಸಿಲುಕಿರುವ ಮಕರ ರಾಶಿಯವರು ಶನಿ ಸಾಡೇಸಾತಿಯಿಂದ ಮುಕ್ತರಾಗುತ್ತಾರೆ.
29 ಮಾರ್ಚ್ 2025ಕ್ಕೆ ಶನಿ ಸಾಡೇಸಾತಿ ಕೊನೆಗೊಳ್ಳಲಿದೆ.

ಕುಂಭ ರಾಶಿಯ ಮೇಲೆ ಸಾಡೇ ಸತಿ- ಕುಂಭ ರಾಶಿಯ ಮೇಲೆ ಶನಿಯ ಸಾಡೇ ಸತಿಯ ಎರಡನೇ ಹಂತ ನಡೆಯುತ್ತಿದೆ. 23 ಫೆಬ್ರವರಿ 2028 ರ ವೇಳೆಗೆ ಇದು ಕೊನೆಯ ಹಂತಕ್ಕೆ ತಲುಪುವುದು, ಈ ಅವಧಿ ಪ್ರಯೋಜನಕಾರಿಯಾಗಿದೆ.

ಮೀನ ರಾಶಿಯ ಮೇಲೆ ಸಾಡೇ ಸತಿ - ಮೀನ ರಾಶಿಯ ಜನರ ಮೇಲೆ ಶನಿಗ್ರಹದ ಮೊದಲ ಹಂತವು ಮುಂದುವರಿಯುತ್ತದೆ. ಈ ಅವಧಿಯಲ್ಲಿ ಹೆಚ್ಚಿನ ಸವಾಲುಗಳು ಇರಲಿದೆ, ಇದರ ಪ್ರಭಾವ ಏಪ್ರಿಲ್ 7, 2030 ರವರೆಗೆ ಇರಲಿದೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Shani Sade Sathi Time On Each Zodiac In Kannada

Shani Sade Sathi Affects On Each Zodiac, read on.
Story first published: Tuesday, June 25, 2024, 22:30 [IST]
X
Desktop Bottom Promotion