Latest Updates
-
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಬಿಸಿಗಾಳಿ ಕಾಟವೇ? ಈ ತಂಪು ಪಾನೀಯಗಳೇ ನಿಮ್ಮ ರಕ್ಷಕ -
ಹಬ್ಬದ ಫ್ಯಾಷನ್: ಈ ಟಿಪ್ಸ್ ಫಾಲೋ ಮಾಡಿ ಮಿಂಚಿ!
ಶನಿ ಪಥ ಬದಲಾವಣೆಯಿಂದಾಗಿ ಸಾಡೆಸಾತಿ: ಈ ರಾಶಿಯವರಲ್ಲಿ ಬಿಕ್ಕಟ್ಟು, ಅಡ್ಡಿ, ಆರ್ಥಿಕ ಸಮಸ್ಯೆ
ಜ್ಯೋತಿಷ್ಯ ಶಾಸ್ತ್ರದಲ್ಲಿ ಹಲವು ಗ್ರಹಗಳ ಚಲನೆಯು ಅತ್ಯಂತ ಪ್ರಭಾವಶಾಲಿ ಪ್ರಕ್ರಿಯೆ ಎಂದು ಕರೆಯಲಾಗುತ್ತದೆ. ಪ್ರತಿಯೊಂದು ಗ್ರಹಗಳು ಕೂಡ ನಿರ್ದಿಷ್ಟ ಸಮಯದಲ್ಲಿ ನಿರ್ದಿಷ್ಟ ರಾಶಿಗೆ ಚಲಿಸುವುದು ಬಹಳ ಅನುಕೂಲವಾಗಿರಲಿದೆ. ಹಾಗೆ ಹಲವು ಗ್ರಹಗಳ ಚಲನೆಯು ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಉಂಟು ಮಾಡಲಿದೆ. ಹಾಗೆ ಕೆಲವರಿಗೆ ಶುಭವಾಗುವುದು ಹಾಗೆ ಮತ್ತೆ ಕೆಲವರಿಗೆ ಇದು ಸಂಕಷ್ಟಗಳಿಗೂ ಕಾರಣವಾಗುತ್ತವೆ.
ಗ್ರಹಗಳು ನಿಯತಕಾಲಿಕವಾಗಿ ತಮ್ಮ ರಾಶಿ ಅಲ್ಲದೆ ನಕ್ಷತ್ರ ಕೂಡ ಬದಲಾಯಿಸುತ್ತವೆ. ಇದು ಎಲ್ಲಾ 12 ರಾಶಿಗಳ ಮೇಲೆಯೂ ಪರಿಣಾಮ ಬೀರುತ್ತದೆ. ಅವರ ಜೀವನದಲ್ಲಿ ಮಹತ್ವದ ಬದಲಾವಣೆಗಳಿಗೆ ಇದು ಕಾರಣವಾಗುವುದು ನೋಡಬಹುದು. ಸದ್ಯ ಈಗ ಶನಿಯ ಚಲನೆಯಲ್ಲಿನ ಬದಲಾವಣೆಯು ಹಲವು ರೀತಿಯ ಬದಲಾವಣೆಗಳ ನಾವು ನೋಡಬಹುದು.

2026ರಲ್ಲಿ ಶನಿಯು ಮೀನ ರಾಶಿಯಲ್ಲಿರುತ್ತಾನೆ. ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ ಶನಿಯು ಮೀನ ರಾಶಿಯಲ್ಲಿರುವವರೆಗೆ ಶನಿಯ ಸಾಡೇ ಸಾತಿಯ ನೆರಳು ಮೂರು ನಿರ್ದಿಷ್ಟ ರಾಶಿಗಳ ಮೇಲೆ ಬೀಳಲಿದೆ. ಇದು ಜೂನ್‌ನಿಂದ ಮುಂದಿನ ಒಂದು ವರ್ಷದವರೆಗೂ ಶನಿಯ ವಕ್ರದೃಷ್ಟಿಗೆ ಕೆಲ ರಾಶಿಯವರು ಸಿಲುಕುತ್ತಾರೆ. ಇದು ಅವರ ಜೀವನದಲ್ಲಿ ಅಡೆತಡೆಗಳು, ಸಮಸ್ಯೆಗಳು, ಬಕ್ಕಟ್ಟು ತರುತ್ತದೆ.
ಹಾಗಾದ್ರೆ ಶನಿಯ ಈ ಚಲನೆಯು ಯಾವೆಲ್ಲಾ ರಾಶಿಯವರಿಗೆ ದುರಾದೃಷ್ಟಕ್ಕೆ ಕಾರಣವಾಗುತ್ತಿದೆ? ಯಾವೆಲ್ಲಾ ರಾಶಿಯವರಿಗೆ ಶನಿಯ ಸಾಡೇಸಾತಿಯ ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಮೇಷ ರಾಶಿ
ಮೇಷ ರಾಶಿಯವರಿಗೆ ಶನಿಯ ಈ ಸಾಡೇಸಾತಿಯ ಕಾರಣದಿಂದಾಗಿ ಜೂನ್ 3ರ ವರೆಗೂ ಬಹಳ ಸಮಸ್ಯೆಗಳು, ಅಡ್ಡಿಗಳು ಎದುರಾಗುವುದು ನೋಡಬಹುದು. ಅದ್ರಲ್ಲೂ ನಿಮ್ಮ ಉದ್ಯೋಗ ಸಂಬಂಧಿತ ವಿಚಾರದಲ್ಲಿ ಸವಾಲಿನ ದಿನಗಳ ನೋಡುವಿರಿ. ನಿಮ್ಮ ವೆಚ್ಚಗಳು ದಿಢೀರ್ ಹೆಚ್ಚಾಗುತ್ತದೆ. ಹಾಗೆ ನಿಮ್ಮ ಕೈ ಸೇರಬೇಕಿದ್ದ ಹಣ ಸಿಗದೆ ಇರಬಹುದು. ಇದರಿಂದ ನಿಮ್ಮಲ್ಲಿ ಬಹಳ ಸಮಸ್ಯೆಗಳು, ಚಿಂತೆಗಳು ಎದುರಾಗುವುದು. ಸಾಮಾಜದಲ್ಲಿ ನಿಮ್ಮ ಮೇಲಿನ ಗೌರವ ಕಡಿಮೆಯಾಗಬಹುದು. ಹಾಗೆ ಸಂಬಂಧಿಕರಿಂದ ನೀವು ನಿರ್ಲಕ್ಷ್ಯಕ್ಕೆ ಒಳಗಾಗುವ ಸಾಧ್ಯತೆಗಳು ಹೆಚ್ಚಾಗುತ್ತದೆ.
ಕುಂಭ ರಾಶಿ
ಕುಂಭ ರಾಶಿ ಜನರಿಗೆ ಶನ ಚಲನೆಯಿಂದಾಗಿ 2027ರ ಮಧ್ಯಭಾಗದ ವರೆಗೂ ಬಹಳಷ್ಟು ಅಡ್ಡಿ ಆತಂಕಗಳನ್ನು ನೋಡಬಹುದು. ನಿಮಗೆ ಒಂದಲ್ಲಾ ಒಂದು ರೀತಿಯ ಸೋಲು, ಅಡ್ಡಿಗಳು, ನಷ್ಟವನ್ನು ಈ ಸಮಯವು ತರಲಿದೆ. ಹೂಡಿಕೆಗಳ ಮಾಡುವುದು ಕೈ ಸುಟ್ಟುಕೊಳ್ಳಲು ದಾರಿಯಾಗುತ್ತದೆ. ಅನಾರೋಗ್ಯ ಸಮಸ್ಯೆಯಿಂದ ನಿಮ್ಮ ದೊಡ್ಡ ಉಳಿತಾಯದ ಹಣವೊಂದನ್ನು ವ್ಯಯಿಸಬೇಕಾಗುತ್ತದೆ. ಅನಗತ್ಯ ಖರ್ಚುಗಳು ಹೆಚ್ಚಾಗುವುದು. ಕುಟುಂಬದಲ್ಲಿ ನಿಮ್ಮ ಮೇಲೆ ತಪ್ಪು ತಿಳುವಳಿಕೆಗಳು ಮೂಡಬಹುದು.
ಮೀನ ರಾಶಿ
ಮೀನ ರಾಶಿಯವರಿಗೆ ಶನಿಯ ಚಲನೆಯು ಹಲವು ರೀತಿಯಲ್ಲಿ ಅನಾನುಕೂಲವನ್ನು ತರಲಿದೆ. ಕಠಿಣ ಸಮಯದಲ್ಲಿ ನಿಮಗೆ ಹಣಕಾಸಿನ ಒತ್ತಡ ಎದುರಾಗಲಿದೆ. ಹಣಕಾಸಿನ ನಿರ್ಬಂಧಗಳು ನಿಮ್ಮ ಹೊಸ ಮನೆ, ಭೂಮಿ ಅಥವಾ ವಾಹನವನ್ನು ಖರೀದಿಸುವ ಕನಸನ್ನು ತಾತ್ಕಾಲಿಕವಾಗಿ ವಿಳಂಬಗೊಳಿಸಬಹುದು. ಯಾವುದೇ ಆತುರದ ನಿರ್ಧಾರಗಳು ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು. ದೀರ್ಘಕಾಲದ ಅನಾರೋಗ್ಯ ಸಮಸ್ಯೆಗಳಿಂದ ನಿಮ್ಮ ವ್ಯಾಪಾರ, ವ್ಯವಹಾರ ಸೇರಿ ದೈನಂದಿನ ಕೆಲಸ ಕಾರ್ಯಗಳಲ್ಲಿಯೂ ಸಹ ಅಡ್ಡಿಗಳು ಎದುರಾಗುತ್ತದೆ. ನಿಮ್ಮ ರಾಜಕೀಯ ವಿಚಾರಗಳಲ್ಲಿ ಹಿನ್ನಡೆ ಅನುಭವಿಸುವಿರಿ. ಹಾಗೆ ನೀವು ಬಹು ಸಮಯದಿಂದ ಇಟ್ಟುಕೊಂಡಿದ್ದ ಆಸೆಯೊಂದು ಮತ್ತೆ ಮುಂದೂಡಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಊಹೆಗಳು ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹವಾಗಿದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. )



Click it and Unblock the Notifications











