Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕುಂಭ ರಾಶಿಯಲ್ಲಿ ಅಸ್ತಂಗತವಾಗಿದ್ದ ಶನಿಯ ಉದಯ: ಈ ರಾಶಿಯವರಿಗೆ ಶುಭ ಉಂಟಾಗಲಿದೆ
ಶನಿಯು ನ್ಯಾಯದ ದೇವತೆ, ಶನಿಯು ಅಸ್ತಂಗತವಾಗಿದ್ದಾಗ ಅದರ ಪ್ರಭಾವ ಒಳ್ಳೆಯದಾಗಿರಲ್ಲ, ಆದರೆ ಕುಂಭರಾಶಿಯಲ್ಲಿ ಅಸ್ತಂಗತವಾಗಿದ್ದ ಶನಿ ಉದಯವಾಗಲಿದೆ. ಶನಿಯು ಮಾರ್ಚ್ 18, 2024 ರಂದು ಕುಂಭ ರಾಶಿಯಲ್ಲಿ ಮತ್ತೆ ಉದಯಿಸುತ್ತದೆ.
ಭೂಮಿಯು ಚಂದ್ರನನ್ನು ಹೊಂದಿರುವಂತೆ, ಶನಿ ಗ್ರಹವು ಸಹ ಒಟ್ಟು 62 ಉಪಗ್ರಹಗಳನ್ನು ಹೊಂದಿದೆ. ಪ್ರತಿ ವರ್ಷ ಶನಿಯು ಸುಮಾರು 135 ದಿನಗಳವರೆಗೆ ಹಿಮ್ಮುಖ ಚಲನೆಯಲ್ಲಿ ಚಲಿಸುತ್ತದೆ , ಇದೀಗ ಕುಂಭ ರಾಶಿಯಲ್ಲಿರುವ ಶನಿ ಮತ್ತೆ ಕುಂಭ ರಾಶಿಗೆ ಬರಲು 30 ವರ್ಷ ಬೇಕು. ಇದೀಗ ಶನಿ ಉದಯದ ಈ ಅವಧಿ ಯಾರಿಗೆ ಯಾವ ರೀತಿಯ ಪ್ರಭಾವ ಬೀರಲಿದೆ ಎಂದು ನೋಡೋಣ:

ಕುಂಭ ರಾಶಿಯಲ್ಲಿ ಶನಿ ಉದಯ: ಸಮಯ
ಮಾರ್ಚ್ 18, 2024 ರಂದು ಬೆಳಗ್ಗೆ 07:49 ಕ್ಕೆ ಶನಿ ದೇವನು ಕುಂಭ ರಾಶಿಯಲ್ಲಿ ಉದಯವಾಗಲಿದೆ. ಶನಿಯು ಈಗ ಬಹಳ ಸಮಯದ ನಂತರ ತನ್ನ ಅಸ್ತಂಗತ ಸ್ಥಿತಿಯಿಂದ ಹೊರಬರುತ್ತಾನೆ. ಈ ಶನಿ ಉದಯದಿಮದ ಈ ರಾಶಿಗಳಿಗೆ ಒಳ್ಳೆಯದು:
ಮೇಷ ರಾಶಿ
ಮೇಷ ರಾಶಿಯವರಿಗೆ ಶನಿಯು ನಿಮ್ಮ ಹತ್ತನೇ ಮತ್ತು ಹನ್ನೊಂದನೇ ಮನೆಯ ಅಧಿಪತಿಯಾಗಿದ್ದು ನಿಮ್ಮ ಹನ್ನೊಂದನೇ ಮನೆಯಲ್ಲಿ ಉದಯವಾಗಲಿದೆ. ಇದರ ಪರಿಣಾಮವಾಗಿ ವೃತ್ತಿಪರ ಜೀವನ ಅನುಕೂಲಕರವಾಗಿದೆ. ಶನಿ ಉದಯವಾದಾಗ ನಿಮ್ಮ ಸೌಕರ್ಯ ಹೆಚ್ಚಾಗಲಿದೆ. ವೃತ್ತಿ ಬದುಕಿನಲ್ಲಿ ಬಡ್ತಿ ಸಿಗಲಿದೆ. ಕುಂಭ ರಾಶಿಯಲ್ಲಿ ಶನಿಯ ಉದಯದ ಸಮಯದಲ್ಲಿ, ನೀವು ಹಠಾತ್ ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆಯಿದೆ, ವ್ಯಾಪಾರಿಗಳಿಗೆ ಈ ಅವಧಿ ಅನುಕೂಲಕರವಾಗಿರಲಿದೆ.
ವೃಷಭ ರಾಶಿ
ವೃಷಭ ರಾಶಿಯವರಲ್ಲಿ ಶನಿ 10ನೇ ಮನೆಯಲ್ಲಿ ಉದಯವಾಗಲಿದೆ. ಈ ಸ್ಥಾನ ನಿಮಗೆ ಲಾಭದಾಯಕ. ಹಾಗಾಗಿ ವೃತ್ತಿ ಬದುಕಿಗೆ ತುಂಬಾ ಒಳ್ಳೆಯದು. ಈ ಸಮಯದಲ್ಲಿ ನೀವು ನಿಮ್ಮ ಕಠಿಣ ಪರಿಶ್ರಮದ ಫಲವನ್ನು ನೀವು ಪಡೆಯುತ್ತೀರಿ ಅದು, ಸ್ವಂತ ವ್ಯಾಪಾರ ಮಾಡುತ್ತಿರುವವರು ತಮ್ಮ ವ್ಯವಹಾರದಲ್ಲಿ ಹೆಚ್ಚಳವನ್ನು ಕಾಣುತ್ತಾರೆ. ಈ ಅವಧಿ ಆರ್ಥಿಕವಾಗಿ ಒಳ್ಳೆಯದಿದೆ.
ಮಿಥುನ ರಾಶಿ
ಶನಿಯು ನಿಮ್ಮ 9ನೇ ಮನೆಯಲ್ಲಿ ಉದಯವಾಗಲಿದೆ. ನೀವು ಉನ್ನತ ಶಿಕ್ಷಣವನ್ನು ಪಡೆಯಲು ಯೋಚಿಸುತ್ತಿದ್ದರೆ ಅಥವಾ ಅದರಲ್ಲಿ ವಿಳಂಬವನ್ನು ಎದುರಿಸುತ್ತಿದ್ದರೆ, ಈ ಸಮಯವನ್ನು ನಿಮಗೆ ಅನುಕೂಲಕರವೆಂದು ಪರಿಗಣಿಸಲಾಗುವುದು. ಈ ಅವಧಿಯಲ್ಲಿ ದೂರ ಪ್ರಯಾಣದ ಸಾಧ್ಯತೆ ಇದೆ, ವಿದೇಶಕ್ಕೆ ಹೋಗಲು ಬಯಸುವವರಿಗೆ ಅನುಕೂಲಕರವಾಗಲಿದೆ. ವ್ಯಾಪಾರ ಅಥವಾ ಉದ್ಯೋಗದ ಕಾರಣದಿಂದಾಗಿ ನೀವು ದೂರದ ಪ್ರಯಾಣಕ್ಕೆ ಹೋಗಬೇಕಾಗಬಹುದು. ಆರ್ಥಿಕವಾಗಿ ಪ್ರಗತಿ ಹೊಂದುತ್ತೀರಿ.
ಕನ್ಯಾರಾಶಿ
ಕನ್ಯಾ ರಾಶಿಯವರಲ್ಲಿ 6ನೇ ಮನೆಯಲ್ಲಿ ಉದಯವಾಗಲಿದೆ ಈ ಅವಧಿಯಲ್ಲಿ ಏನಾದರೂ ಕಾನೂನು ಪ್ರಕರಣವಿದ್ದರೆ ತೀರ್ಪು ನಿಮ್ಮ ಪರವಾಗಿ ಬರಲಿದೆ. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಮಾಡುತ್ತಿದ್ದರೆ ಯಶಸ್ಸನ್ನು ಪಡೆಯುತ್ತಾರೆ. ಸರ್ಕಾರಿ ಉದ್ಯೋಗಕ್ಕೆ ಪ್ರಯತ್ನಿಸುತ್ತಿದ್ದರೆ ಕೆಲಸ ಸಿಗಲಿದೆ, ವೃತ್ತಿ ಹಾಗೂ ವೈಯಕ್ತಿಕ ಬದುಕಿನ ದೃಷ್ಟಿಯಿಂದ ಈ ಅವಧಿ ಒಳ್ಳೆಯದಿದೆ. ಆರ್ಥಿಕವಾಗಿ ಒಳ್ಳೆಯದಿದೆ.
ತುಲಾ ರಾಶಿ
ಶನಿಯು ತುಲಾ ರಾಶಿಯವರಿಗೆ ಬಹಳ ಪ್ರಯೋಜನಕಾರಿ ಗ್ರಹವೆಂದು ಪರಿಗಣಿಸಲಾಗುವುದು. ಸಾಮಾಜಿಕ ಕಲ್ಯಾಣ ಅಥವಾ ಸಾಮಾಜಿಕ ಚಟುವಟಿಕೆಗಳೊಂದಿಗೆ ಸಂಬಂಧ ಹೊಂದಿರುವವರಿಗೆ ಶನಿಯ ಉದಯ ಒಳ್ಳೆಯದು. ಈ ಸಮಯದಲ್ಲಿ, ನೀವು ಧಾರ್ಮಿಕ ಚಟುವಟಿಕೆಗಳ ಕಡೆಗೆ ಒಲವು ತೋರುತ್ತೀರಿ . ಸ್ವಂತ ವ್ಯಾಪಾರ ಮಾಡುತ್ತಿದ್ದರೆ ಆರ್ಥಿಕವಾಗಿ ಬೆಳೆಯುತ್ತೀರಿ, ವ್ಯಾಪಾರ ವಿಸ್ತರಣೆ ಆಗಲಿದೆ.
ಮಕರ ಸಂಕ್ರಾಂತಿ
ಮಕರ ರಾಶಿಯವರಲ್ಲಿ 8ನೇ ಮನೆಯಲ್ಲಿ ಉದಯವಾಗುವುದು. ವೃತ್ತಿ ಹಾಗೂ ಆರ್ಥಿಕ ಬದುಕಿನ ದೃಷ್ಟಿಯಿಂದ ಈ ಅವಧಿ ಒಳ್ಳೆಯದು. ತಮ್ಮದೇ ಆದ ಕುಟುಂಬ ವ್ಯವಹಾರವನ್ನು ಮಾಡುತ್ತಿರುವವರು ಉತ್ತಮ ಲಾಭ ಗಳಿಸುತ್ತಾರೆ. ಧಾರ್ಮಿಕ ಕಾರ್ಯಗಳತ್ತ ಗಮನ ಹೆಚ್ಚಾಗಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications