Latest Updates
-
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ -
ಈ 3 ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು! ಹಳೆಯ ನೆನಪುಗಳು ಕಾಡುತ್ತೆ -
March 09 Horoscope: ಶುಭ ಕಾರ್ಯದಲ್ಲಿ ಭಾಗಿಯಾಗುವ ಸಾಧ್ಯತೆ ಹೆಚ್ಚು! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ!
ಜೂನ್‌ನಿಂದ ಶನಿಯ ಹಿಮ್ಮುಖ ಚಲನೆ: ಈ 3 ರಾಶಿಯವರಿಗೆ ತ್ರಿಕೋನ ರಾಜಯೋಗ, ಅದೃಷ್ಟವೋ... ಅದೃಷ್ಟ
ನವಗ್ರಹಗಳಲ್ಲಿ ಶನಿಯು ದೀರ್ಘಾವಧಿ ಪ್ರಭಾವ ಬೀರುವ ಗ್ರಹವಾಗಿದೆ. ಶನಿಯ ಒಳ್ಳೆಯ ಪ್ರಭಾವವಾಗಿರಲಿ, ಕೆಟ್ಟ ಪ್ರಭಾವವಾಗಿರಲಿ ಅದರ ಪ್ರಭಾವ ದೀರ್ಘವಾಗಿರುತ್ತದೆ. ಇದೀಗ ಶನಿಯು ಕುಂಭ ರಾಶಿಯಲ್ಲಿ ಇದೆ, 2025ಕ್ಕೆ ಶನಿಯು ರಾಶಿ ಬದಲಾವಣೆ ಮಾಡುತ್ತದೆ. ಶನಿಯುಈ ಜೂನ್‌ನಲ್ಲಿ ವಕ್ರೀಯವಾಗಿ ಚಲಿಸಲಿದೆ.
ಶನಿಯು ಜೂನ್ 29, 2024 ರಂದು ರಾತ್ರಿ 11:40 ಕ್ಕೆ ಕುಂಭ ರಾಶಿಯಲ್ಲಿ ಹಿಮ್ಮುಖ ಚಲನೆ ಮಾಡುತ್ತದೆ. ಶನಿಯು ಹಿಮ್ಮುಖ ಚಲನೆ ಮಾಡಲಾರಂಭಿಸಿದಾಗ ತ್ರಿಕೋನ ರಾಜಯೋಗ ಉಂಟಾಗಲಿದೆ.

ಕೇಂದ್ರ ತ್ರಿಕೋನ ರಾಜಯೋಗ ಎಂದರೇನು?
ಜಾತಕದ ಮೊದಲ, ನಾಲ್ಕನೇ, ಏಳನೇ ಮತ್ತು ಹತ್ತನೇ ಮನೆಗಳನ್ನು ಕೇಂದ್ರ ಎಂದು ಕರೆಯಲಾಗುತ್ತದೆ ಮತ್ತು ಐದು ಮತ್ತು ಒಂಬತ್ತನೇ ಮನೆಗಳನ್ನು ತ್ರಿಕೋನ ಎಂದು ಕರೆಯಲಾಗುವುದು. ಮಧ್ಯದ ಮನೆಗಳನ್ನು ವಿಷ್ಣುವಿನ ಸ್ಥಳವೆಂದು ಹೇಳಲಾಗುವುದು, ತ್ರಿಕೋನ ಮನೆಗಳಲ್ಲಿ ಲಕ್ಷ್ಮಿ ದೇವಿಯ ಪ್ರಾಬಲ್ಯವಿದೆ. ಕೇಂದ್ರ ತ್ರಿಕೋನ ಮನೆಗಳ ನಡುವೆ ಸಂಬಂಧ ಉಂಟಾದಾಗ, ಕೇಂದ್ರ ತ್ರಿಕೋನ ರಾಜಯೋಗ ಉಂಟಾಗುವುದು.
ಈ ತ್ರಿಕೋನ ರಾಜಯೋಗ ಈ ರಾಶಿಗಳಿಗೆ ತುಂಬಾನೇ ಅನುಕೂಲಕರವಾಗಿದೆ:
ಕುಂಭ ರಾಶಿ
ಕುಂಭ ರಾಶಿಯಲ್ಲಿ ಶನಿ ಹಿಮ್ಮುಖ ಚಲನೆ ಮಾಡುವಾಗ ಕುಂಭ ರಾಶಿಯಲ್ಲಿಯೇ ತ್ರಿಕೋನ ರಾಜಯೋಗ ಉಂಟಾಗುವುದು. ಈ ಅವಧಿಯಲ್ಲಿ ನೀವು ತುಂಬಾನೇ ಪ್ರಯೋಜನ ಪಡೆಯುತ್ತೀರಿ. ನಿಮ್ಮ ಆತ್ಮವಿಶ್ವಾಸವು ಹೆಚ್ಚು ಹೆಚ್ಚಾಗುತ್ತದ. ನಿಮ್ಮ ವೃತ್ತಿ ಕ್ಷೇತ್ರದಲ್ಲಿ ನೀವು ಪ್ರಗತಿ ಮತ್ತು ಯಶಸ್ಸನ್ನು ಸಾಧಿಸುವಿರಿ. ನಿಮ್ಮ ಹಣಕಾಸಿನ ಒರಿಸ್ಥಿತಿ ಮತ್ತಷ್ಟು ಉತ್ತಮವಾಗಲಿದೆ. ನಿಮ್ಮ ಕೆಲಸ ಕಾರ್ಯಗಳಲ್ಲಿ ಉತ್ತಮ ಯಶಸ್ಸು ಪಡೆಯುತ್ತೀರಿ. ನೀವು ಪ್ರಯತ್ನ ಪಡುತ್ತಿರುವ ಉದ್ಯೋಗ ಸಿಗಲಿದೆ, ಉದ್ಯೋಗಿಗಳಿಗೆ ಬಡ್ತಿ ಸಿಗಲಿದೆ.
ಮಿಥುನ ರಾಶಿ
ಮಿಥುನ ರಾಶಿಯಲ್ಲಿ ಕೂಡ ತ್ರಿಕೋನ ರಾಜಯೋಗವು ರೂಪುಗೊಳ್ಳಲಿದೆ. ಶನಿಯ ಹಿಮ್ಮೆಟ್ಟುವಿಕೆ ನಿಮಗೆ ಹಲವಾರು ಯೋಜನಗಳನ್ನು ತರುತ್ತದೆ. ನಿಮ್ಮ ಪ್ರತಿಯೊಂದು ಹೆಜ್ಜೆಯಲ್ಲಿಯೂ ಯಶಸ್ಸು ದೂರಲಿದೆ. ಈ ಅವಧಿಯಲ್ಲಿ ಮನೆಯಲ್ಲಿ ಶುಭ ಕಾರ್ಯಗಳು ಉಂಟಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ತಮ್ಮ ಪ್ರಯತ್ನಗಳಲ್ಲಿ ಖಂಡಿತವಾಗಿ ಯಶಸ್ಸು ಪಡೆಯುತ್ತಾರೆ. ನಿಮ್ಮ ಬಾಕಿಯಿರುವ ಕೆಲಸವನ್ನೂ ಈಗ ಪೂರ್ಣಗೊಳ್ಳಲಿದೆ. ಈ ಅವಧಿಯಲ್ಲಿ ನಿಮ್ಮಆತ್ಮವಿಶ್ವಾಸ ಹೆಚ್ಚಾಗಲಿದೆ.
ವೃಷಭ ರಾಶಿ
ಕೇಂದ್ರ ತ್ರಿಕೋನ ರಾಜಯೋಗ ವೃಷಭ ರಾಶಿಯಲ್ಲಿಯೂ ಉಂಟಾಗಲಿದೆ. ವೃಷಭ ರಾಶಿಯ ಜನರ ವೃತ್ತಿಜೀವನದಲ್ಲಿ ಪ್ರಗತಿಯ ಸಾಧ್ಯತೆಯಿದೆ. ಈ ಸಮಯವು ಉದ್ಯಮಿಗಳಿಗೂ ಪ್ರಯೋಜನಕಾರಿಯಾಗಿದೆ. ನೀವು ಯಾವುದೇ ಯೋಜನೆಗಳು ಮತ್ತು ತಂತ್ರಗಳನ್ನು ಮಾಡಿದರೂ, ಅವೆಲ್ಲವೂ ಯಶಸ್ವಿಯಾಗುತ್ತವೆ. ನಿಮ್ಮ ಆದಾಯದ ಮೂಲಗಳು ಸಹ ಹೆಚ್ಚಾಗುತ್ತವೆ. ನಿಮ್ಮ ಶರ್ಥಿಕ ಸ್ಥಿತಿಯಲ್ಲಿ ತುಂಬಾನೇ ಪ್ರಗತಿ ಕಂಡು ಬರಲಿದೆ. ಕೆಲಸ ಬದಲಾಯಿಸಲು ಈ ಅವಧಿ ಉತ್ತಮವಾಗಿದೆ. ವ್ಯಾಪಾರಿಗಳು ಉತ್ತಮ ಆರ್ಥಿಕ ಲಾಭ ಪಡೆಯುತ್ತೀರಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











