Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಜೂನ್ 30ರಿಂದ ಶನಿಯ ಹಿಮ್ಮುಖ ಚಲನೆ: 139 ದಿನ ಈ 3 ರಾಶಿಗಳಿಗೆ ತುಂಬಾನೇ ಅದ್ಭುತವಾಗಿರಲಿದೆ
ಶನಿಯು ಕುಂಭ ರಾಶಿಯಲ್ಲಿದೆ, ಶನಿಯು ಕುಂಭ ರಾಶಿಯಲ್ಲಿ 2023ಕ್ಕೆ ಬಂದಿದೆ, ಈ ವರ್ಷ ಪೂರ್ತಿ ಇದೇ ರಾಶಿಯಲ್ಲಿ ಇದ್ದು 2025ರಲ್ಲಿ ಮೀನ ರಾಶಿಗೆ ಸಂಚರಿಸುತ್ತದೆ. ಶನಿಯು ಕುಂಭ ರಾಶಿಯಲ್ಲಿರುವಾಗ ಜೂನ್ 30ಕ್ಕೆ ಅದು ಹಿಮ್ಮುಖ ಚಲನೆ ಮಾಡಲಿದೆ.
ಸಾಮಾನ್ಯವಾಗಿ ಯಾವುದೇ ಗ್ರಹ ಹಿಮ್ಮುಖ ಚಲನೆ ಮಾಡುವಾಗ ಅದು ಶುಭ ಫಲ ಬೀರುವುದಿಲ್ಲ, ಆದರೆ ಕೆಲವೊಮ್ಮೆ ಅದರ ಸ್ಥಾನದ ಪ್ರಕಾರ ಅದು ಒಳ್ಳೆಯ ಪ್ರಭಾವ ಬೀರುವುದು.

ಅದೇ ರೀತಿ ಶನಿಯು ಕುಂಭ ರಾಶಿಯಲ್ಲಿ ಹಿಮ್ಮುಖ ಚಲನೆಯಲ್ಲಿರುವಾಗ ಕೆಲವೊಂದು ರಾಶಿಗೆ ಅದ್ಭುತವಾಗಿರಲಿದೆ. ಶನಿಯು 139 ದಿನ ಹಿಮ್ಮುಖ ಚಲನೆ ಮಾಡುತ್ತದೆ, ಈ ಅವಧಿ ಈ ರಾಶಿಗಳಿಗೆ ಅತ್ಯಂತ ಪ್ರಯೋಜನಕಾರಿಯಾಗಲಿದೆ, ಈ ರಾಶಿಯವರು ವೃತ್ತಿ ಬದುಕಿನಲ್ಲಿ ಉತ್ತಮ ಪ್ರಯೋಜನ ಪಡೆಯುತ್ತೀರಿ.
ಮೇಷ ರಾಶಿ
ಶನಿಯ ವಕ್ರೀಯ ಚಲನೆ ಮೇಷ ರಾಶಿಯವರಿಗೆ ಅತ್ಯಂತ ಮಂಗಳಕರವಾಗಿದೆ. ಶನಿಯು ಜೂನ್ 30ಕ್ಕೆ ಹಿಮ್ಮುಖ ಚಲನೆ ಮಾಡಲಾರಂಭಿಸಿದಾಗ ಶನಿಯು ನಿಮಗೆ ತುಂಬಾನೇ ಪ್ರಯೋಜನಕಾರಿಯಾದ ಫಲ ನೀಡಲಿದೆ. ಮೇಷ ರಾಶಿಯವರು ಈ ಅವಧಿಯಲ್ಲಿ ಆದಾಯ ಮತ್ತು ಲಾಭ ಪಡೆಯುತ್ತೀರಿ, ಹೊಸ ಆದಾಯ ಮೂಲ ಪಡೆಯುತ್ತೀರಿ, ಅಲ್ಲದೆ ಹೊಸ ಹೂಡಿಕೆಗೆ ಕೂಡ ಈ ಅವಧಿ ನಿಮಗೆ ತುಂಬಾ ಉತ್ತಮವಾಗಿದೆ. ಅಲ್ಲದೆ ಈ ಅವಧಿಯಲ್ಲಿ ನೀವು ಮಾಡುವ ಹೂಡಿಕೆಯಿಂದ ನಿಮಗೆ ಉತ್ತಮ ಲಾಭ ಕೂಡ ದೊರೆಯಲಿದೆ.
ಹೊಸ ಉದ್ಯೋಗ ಅವಕಾಶಗಳು ದೊರೆಯಲಿದೆ, ವ್ಯಾಪಾರಿಗಳು ಈ ಅವಧಿಯಲ್ಲಿ ಉತ್ತಮ ಪ್ರಯೋಜನ ಪಡೆಯುತ್ತೀರಿ.
ವೃಷಭ ರಾಶಿ
ಕುಂಭ ರಾಶಿಯಲ್ಲಿ ಶನಿಯು ಹಿಮ್ಮುಖ ಚಲನೆ ಪ್ರಾರಂಭಿಸಿದಾಗ ವೃಷಭ ರಾಶಿಯವರಿಗೆ ವಿಶೇಷವಾಗಿ ಅನುಕೂಲಕರವಾಗಿದೆ. ಶನಿಯ ಪ್ರಭಾವದಿಂದಾಗಿ ವೃತ್ತಿ ಬದುಕಿನಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುವುದು. ಉದ್ಯೋಗದಲ್ಲಿ ಉತ್ತಮ ಪ್ರಗತಿ ಸಿಗಲಿದೆ, ವ್ಯಾಪಾರಿಗಳಿಗೆ ಉತ್ತಮ ಲಾಭ , ವೃತ್ತಿ ಬದುಕಿನಲ್ಲಿ ಏನಾದರೂ ಬದಲಾವಣೆ ಮಾಡಿಲು ಯೋಚಿಸಿದ್ದರೆ ಹೊಸ ಕೆಲಸಕ್ಕೆ ಪ್ರಯತ್ನ ಮಾಡಲು ಈ ಅವಧಿ ಉತ್ತಮವಾಗಿದೆ. ಕುಟುಂಬದಲ್ಲಿ ಪರಿಸ್ಥಿತಿ ಚೆನ್ನಾಗಿರಲಿದೆ, ಆರ್ಥಿಕವಾಗಿ ಪ್ರಗತಿಯನ್ನು ಕಾಣುತ್ತೀರಿ.
ಮಕರ ರಾಶಿ
ಶನಿಯು ಕುಂಭ ರಾಶಿಯಲ್ಲಿ ಹಿಮ್ಮುಖ ಚಲನೆಯಲ್ಲಿ ಇರುವಾಗ ಮಕರ ರಾಶಿಯವರು ಕೂಡ ಅತ್ಯುತ್ತಮ ಪ್ರಯೋಜನ ಪಡೆಯುತ್ತೀರಿ. ಶನಿಯು ಮಕರ ರಾಶಿಯ 2ನೇ ಮನೆಯಲ್ಲಿ ಹಿಮ್ಮುಖ ಚಲನೆ ಮಾಡುತ್ತಿದೆ. ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸ ತುಂಬಾ ಚೆನ್ನಾಗಿರಲಿದೆ. ವೃತ್ತಿ ಬದುಕಿನಲ್ಲಿ ನಿಮಗೆ ಅದ್ಭುತ ಅವಕಾಶ ದೊರೆಯಲಿದೆ. ನಿಮಗೆ ಬರಬೇಕಾಗಿದ್ದ ಹಣ ನಿಮ್ಮ ಕೈ ಸೇರಲಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
