Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Shani Retrograde 2025: 139 ದಿನಗಳ ಕಾಲ ಶನಿ ಹಿಮ್ಮುಖ ಚಲನೆ: ಯಾರಿಗೆಲ್ಲಾ ಲಾಭದಾಯಕ ಗೊತ್ತಾ?
ವೈದಿಕ ಜ್ಯೋತಿಷ್ಯದಲ್ಲಿ ಶನಿ ಗ್ರಹಕ್ಕೆ ಬಹಳ ಪ್ರಾಮುಖ್ಯತೆ ನೀಡಲಾಗುತ್ತದೆ. ಅಲ್ಲದೆ ಶನಿ ಒಬ್ಬರ ಜೀವನದಲ್ಲಿ ಲಾಭ ಹಾಗೂ ನಷ್ಟ ಎರಡನ್ನೂ ತರುವಂತಹ ಗ್ರಹ. ಆದ್ರೆ ಶನಿ ಬಹಳ ನಿಧಾನವಾಗಿ ಚಲಿಸುವ ಕಾರಣದಿಂದಾಗಿ ಎರಡೂವರೆ ವರ್ಷಗಳ ಕಾಲ ಒಂದೇ ರಾಶಿಯಲ್ಲಿ ಚಲಿಸುವುದು ನೋಡಬಹುದು. 12 ರಾಶಿಗಳ ಮೇಲೆಯೂ ಶನಿ ಪ್ರಭಾವ ಉಂಟು ಮಾಡುವುದನ್ನು ನೋಡಬಹುದು.
ಹೀಗಾಗಿ ಶನಿಯ ಉತ್ತಮ ಪ್ರಭಾವಕ್ಕೆ ಒಳಗಾದರೆ ಅವರ ಜೀವನ ಬದಲಾಗುತ್ತದೆ, ಆದ್ರೆ ಶನಿಯ ಕೋಪಕ್ಕೆ ಒಳಗಾದರೆ ನಾನಾ ರೀತಿಯ ಸಮಸ್ಯೆಗಳ ಎದುರಿಬೇಕಾಗುತ್ತದೆ. ಶನಿ ಸದ್ಯ ಮೀನ ರಾಶಿಯಲ್ಲಿ ಚಲಿಸುತ್ತಿದ್ದಾನೆ, ಇದೇ ವರ್ಷ ಮಾರ್ಚ್ 30ರಂದು ಶನಿ ಮೀನ ರಾಶಿ ಪ್ರವೇಶಿಸಿದ್ದಾನೆ. ಆದ್ರೆ ಜುಲೈನಲ್ಲಿ ಶನಿ ಹಿಮ್ಮುಖ ಚಲನೆ (Shani Retrograde 2025)ಗೆ ಮುಂದಾಗುತ್ತಿದ್ದಾನೆ.

ಶನಿ ಮೀನ ರಾಶಿಯಲ್ಲಿ ಸುಮಾರು 139 ದಿನಗಳ ಕಾಲ ಹಿಮ್ಮುಖ ಚಲನೆಯಲ್ಲಿರಲಿದ್ದಾನೆ. ಶನಿಯ ಈ ಹಿಮ್ಮುಖ ಚಲನೆಯಿಂದಾಗಿ ಹಲವು ರಾಶಿಗಳ ಮೇಲೆ ಪರಿಣಾಮ ಬೀರುವುದು ನೋಡಬಹುದು. ಇದು ಕೆಲವು ರಾಶಿಗಳಿಗೆ ಅಶುಭ ತಂದರೆ ಮತ್ತೆ ಉಳಿದ ರಾಶಿಗಳ ಮೇಲೆ ಉತ್ತಮ ಪರಿಣಾಮಕ್ಕೆ ಕಾರಣವಾಗಲಿದೆ. ಹಾಗಾದ್ರೆ ಶನಿಯ ಈ ಹಿಮ್ಮುಖ ಚಲನೆಯಿಂದ ಯಾರಿಗೆ ಲಾಭವಾಗಲಿದೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
ಕರ್ಕ ರಾಶಿ
ಶನಿಯ ಹಿಮ್ಮುಖ ಚಲನೆಯು ಕರ್ಕ ರಾಶಿಯವರಲ್ಲಿ ಲಾಭದಾಯಕವಾಗಲಿದೆ. ಶನಿ ಕರ್ಕ ರಾಶಿಯ 9ನೇ ಮನೆಯಲ್ಲಿ ಹಿಮ್ಮುಖ ಚಲನೆಯಲ್ಲಿರುವುದರಿಂದ ಅದೃಷ್ಟವನ್ನು ತಲಿದೆ, ಅಲ್ಲದೆ ಕೇತು ಸಮಸ್ಯೆಗೆ ಪರಿಹಾರ ಪಡೆಯುತ್ತೀರಿ. ನೀವು ಯಾವುದೇ ಕೆಲಸದಲ್ಲಿ ಅಡೆತಡೆಗಳ ನೋಡಿದ್ದರೆ ಈ ಸಮಯದಲ್ಲಿ ಯಶಸ್ಸು ಗಳಿಸಬಹುದು. ನೀವು ಪಾಲುದಾರಿಕೆ ವ್ಯವಹಾರದಲ್ಲಿದ್ದರೆ ಉತ್ತಮ ಲಾಭ ನೋಡಬಹುದು. ಅನಿರೀಕ್ಷಿತ ಮೂಲದಿಂದ ನೀವು ಲಾಭ ನೋಡಬಹುದು. ದೀರ್ಘ ಪ್ರಯಾಣಗಳಲ್ಲಿ ಶುಭಕರ ಫಲಿತಾಂಶ ಇರಲಿದೆ.
ಮಕರ ರಾಶಿ
ಶನಿಯು ಮಕರ ರಾಶಿಯ 3 ನೇ ಮನೆಯಲ್ಲಿ ಚಲಿಸಲಿದ್ದಾನೆ. ಇದು ನಿಮಗೆ ಅನೇಕ ಕೆಲಸಗಳಲ್ಲಿ ಆತ್ಮಸ್ಥೈರ್ಯ, ಧೈರ್ಯಕ್ಕೆ ಕಾರಣವಾಗಲಿದೆ. ನೀವು ಬಹಳ ಸಮಯದಿಂದ ಮಾಡಿ ಮುಗಿಸಲು ಉತ್ನಿಸುತ್ತಿದ್ದ ಕೆಲಸಗಳನ್ನು ಈ ಸಮಯದಲ್ಲಿ ಪೂರ್ಣ ಮಾಡಬಹುದು. ಕೆಲಸ ಹಾಗೂ ವೃತ್ತಿ ಜೀವನದಲ್ಲಿ ಪ್ರಗತಿ ನೋಡುತ್ತೀರಿ. ಉದ್ಯೋಗ ಸಂಬಂಧಿಸಿದಂತೆ ನಿಮಗೆ ಉತ್ತಮ ದಿನವಾಗಿರಲಿದೆ. ಶನಿಯ ಆಶೀರ್ವಾದವು ನಿಮಗೆ ಹಠಾತ್ ಧನಲಾಭಗಳಿಗೆ ಕಾರಣವಾಗಬಹುದು. ಸಂಬಂಧಗಳಲ್ಲಿ ನಿಮಗೆ ಉತ್ತಮ ಫಲ ಇರಲಿದೆ. ನಿಮ್ಮ ಬಹುಕಾಲದ ಅನಾರೋಗ್ಯದ ಸಮಸ್ಯೆ ನಿವಾರಣೆಯಾಗಬಹುದು. ಮನೆಯಲ್ಲಿ ಶುಭ ಕಾರ್ಯ ಸಂಬಂಧಿಸಿದಂತೆ ಖರ್ಚುಗಳು ಹೆಚ್ಚಾದರು ಅದರಿಂದ ಸಂತಸ ಇರಲಿದೆ.
ಮಿಥುನ ರಾಶಿ
ಶನಿಯು ಮಿಥುನ ರಾಶಿಯ 10 ನೇ ಮನೆಯಲ್ಲಿರುತ್ತಾನೆ. ಇದರಿಂದಾಗಿ ತಮ್ಮ ವ್ಯವಹಾರಗಳಲ್ಲಿ ಅತ್ಯುತ್ತಮ ಫಲಿತಾಂಶ ಪಡೆಯಲಿದ್ದೀರಿ. ಉದ್ಯಮಿಗಳಿಗೂ ಇದು ಲಾಭ ತರುವ ಸಮಯ ಆಗಿರಲಿದೆ. ಹೊಸ ವ್ಯವಹಾರಗಳು, ವ್ಯಾಪಾರಗಳ ಆರಂಭಿಸಿದ್ದರೆ ಅದರಿಂದ ಲಾಭ ಪಡೆಯುವ ಕಾಲವಾಗಲಿದೆ. ಅವಿವಾಹಿತರಲ್ಲಿ ಶುಭ ಸುದ್ದಿ ಪಡೆಯುವ ಸಮಯವಿದು. ಅದೃಷ್ಟದ ಬೆಂಬಲದಿಂದಾಗಿ ನಿಮ್ಮ ಎಲ್ಲಾ ಕೆಲಸಗಳಲ್ಲಿ ಧನಾತ್ಮಕ ಫಲಿತಾಂಶ ನೋಡಬಹುದು. ಹೊಸ ಜವಾಬ್ದಾರಿಗಳು ನಿಮಗೆ ಒಲಿಯಲಿದೆ ಹಾಗೆ ಕೌಟುಂಬಿಕ ವಿಚಾರದಲ್ಲಿದ್ದ ಹಣಕಾಸು ಒತ್ತಡ ನಿವಾರಣೆಯಾಗಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿ)



Click it and Unblock the Notifications
