ಕುಂಭ ರಾಶಿಯಲ್ಲಿ ಶನಿ ಹಿಮ್ಮುಖ ಚಲನೆ: ಈ 5 ರಾಶಿಯವರ ವೃತ್ತಿ ಬದುಕಿನಲ್ಲಿ ಸವಾಲಿನ ಸಮಯ

ಕುಂಭ ರಾಶಿಯಲ್ಲಿರುವ ಶನಿಯು ಜೂನ್‌ 30ಕ್ಕೆ ಹಿಮ್ಮುಖ ಚಲನೆ ಮಾಡಲಿದೆ, ಈ ಚಲನೆ 139 ದಿನ ನಡೆಯಲಿದೆ, ಈ ಅವಧಿ ಕೆಲ ರಾಶಿಗಳಿಗೆ ಅನುಕೂಲಕರವಲ್ಲ, ವೃತ್ತಿ ಬದುಕಿನಲ್ಲಿ ಹಲವು ಸವಾಲುಗಳನ್ನು ಎದುರಿಸಬಹುದು, ಎಲ್ಲಾ ಸಮಸ್ಯೆಗಳನ್ನು ಈ ರಾಶಿಯವರು ತಾಳ್ಮೆಯಿಂದ ನಿಭಾಯಿಸಬೇಕು.

ಎಲ್ಲವೂ ಸರಿಯಾಗಲಿದೆ, ಆದರೆ ತಾಳ್ಮೆ ಅಗ್ಯತ. ಶನಿಯು ಹಿಮ್ಮುಖ ಚಲನೆಯಲ್ಲಿರುವಾಗ ಈ ರಾಶಿಯವರು ವೃತ್ತಿ ಬದುಕಿನಲ್ಲಿ ತುಂಬಾನೇ ಜಾಗ್ರತೆವಹಿಸಿ.

Shani Retrograde 2024

ವೃಷಭ ರಾಶಿ

ವೃಷಬ ರಾಶಿಯಲ್ಲಿ ಶನಿಯು 10ನೇ ಮನೆಯಲ್ಲಿ ಹಿಮ್ಮುಖ ಚಲನೆ ಮಾಡಲಿದೆ, ಈ ಅವಧಿಯಲ್ಲಿ ವೃತ್ತಿ ಬದುಕಿನಲ್ಲಿ ಹಲವು ಸವಾಲುಗಳು ಕಂಡು ಬರುವುದು. ಕೆಲಸದ ಒತ್ತಡ ಹೆಚ್ಚಾಗಲಿದೆ, ಇದರಿಂದ ತುಂಬಾನೇ ಆಯಾಸ ಉಂಟಾಗುವುದು. ಅಲ್ಲದೆ ಕೆಲಸವನ್ನು ಪೂರ್ಣಗೊಳಿಸಲು ಹಲವು ಸಮಸ್ಯೆಗಳನ್ನು ಎದುರಿಸಬಹುದು. ವ್ಯಾಪಾರಿಗಳು ತಮ್ಮ ಪ್ರತಿಸ್ಪರ್ಧಿಗಳಿಂದ ಕಠಿಣ ಸ್ಪರ್ಧೆಯನ್ನು ಎದುರಿಸಬಹುದು, ಇದರಿಂದಾಗಿ ಲಾಭ ಗಳಿಸಲು ಕಷ್ಟವಾಗುವುದು.

ಮಿಥುನ ರಾಶಿ

ಮಿಥುನ ರಾಶಿಯಲ್ಲಿ ಶನಿಯು 9ನೇ ಮನೆಯಲ್ಲಿ ಹಿಮ್ಮುಖ ಚಲನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ಆತ್ಮವಿಶ್ವಾಸ ತುಂಬಾನೇ ಕಡಿಮೆ ಇರಲಿದೆ, ಅಲ್ಲದೆ ವೃತ್ತಿ ಬದುಕಿನಲ್ಲಿ ಒಳ್ಳೆಯ ಅವಕಾಶಗಳು ಕೈ ತಪ್ಪುವುದು ಇದರಿಂದ ನಿರಾಸೆ ಉಂಟಾಗುವುದು. ಅಲ್ಲದೆ ಈ ಅವಧಿಯಲ್ಲಿ ನಿಮ್ಮ ಹೆಸರಿಗೆ ಧಕ್ಕೆ ಉಂಟಾಗದಂತೆ ಕೂಡ ನೀವು ಹೆಚ್ಚು ಜಾಗ್ರತೆವಹಿಸಬೇಕು. ನೀವು ಎಷ್ಟೇ ಕಷ್ಟಪಟ್ಟು ದುಡಿದರೂ ನಿಮ್ಮ ಕೆಲಸ ಯಾರೂ ಗುರುತಿಸುತ್ತಿಲ್ಲ ಎಂಬ ನೋವು ಕಾಡುವುದು.

ತುಲಾ ರಾಶಿ

ತುಲಾ ರಾಶಿಯವರಲ್ಲಿ ಶನಿಯು ನಿಮ್ಮ 5ನೇ ಮನೆಯಲ್ಲಿ ಹಿಮ್ಮುಖ ಚಲನೆ ಮಾಡಲಿದೆ. ಈ ಅವಧಿಯಲ್ಲಿ ಕೆಲಸದಲ್ಲಿ ಅಭದ್ರತೆ ಉಂಟಾಗುವುದು, ಭವಿಷ್ಯದ ಬಗ್ಗೆ ಚಿಂತೆ ಕಾಡುವುದು. ಕೆಲವೊಂದು ಅವಕಾಶಗಳು ಕೈ ಬಂದಿದ್ದು ಬಾಯಿಗೆ ಬರಲಿಲ್ಲ ಎಂಬಂತೆ ಕೈ ತಪ್ಪುವುದರಿಂದ ತುಂಬಾನೇ ಚಿಂತೆ ಕಾಡುವುದು.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯಲ್ಲಿ ಶನಿಯು ನಿಮ್ಮ 4ನೇ ಮನೆಯಲ್ಲಿ ಹಿಮ್ಮುಖ ಚಲನೆ ಮಾಡಲಿದೆ. ಈ ಸಮಯದಲ್ಲಿ ಕೆಲಸದಲ್ಲಿ ನಿಮ್ಮ ಪ್ರಯತ್ನಕ್ಕೆ ಉತ್ತಮ ಫಲ ಸಿಗುವುದು ಕಷ್ಟವಾಗುವುದು, ಇದರಿಂದ ನಿಮಗೆ ತುಂಬಾನೇ ಚಿಂತೆ ಕಾಡುವುದು, ಅಲ್ಲದೆ ಉದ್ಯೋಗಿಗಳಿಗೆ ಕೆಲಸದ ಒತ್ತಡ ಹೆಚ್ಚಾಗಲಿದೆ, ಕೆಲವರಿಗೆ ಕೆಲಸ ಕಳೆದುಕೊಳ್ಳುವ ಪರಿಸ್ಥಿತಿ ಕುಡ ಬರಬಹುದು.

ಮೀನ ರಾಶಿ

ಮೀನ ರಾಶಿಯಲ್ಲಿ ಶನಿಯು 12ನೇ ಮನೆಯಲ್ಲಿ ಹಿಮ್ಮುಖ ಚಲನೆ ಮಾಡುತ್ತದೆ. ಈ ಅವಧಿಯಲ್ಲಿ ಕೆಲಸದಲ್ಲಿ ಖುಷಿ ಇರಲಿದೆ. ಉದ್ಯೋಗಿಗಳಿಗೆ, ವ್ಯಾಪಾರಸ್ಥರಿಗೆ ಕೆಲಸದಲ್ಲಿ ಒತ್ತಡ ಅಧಿಕವಿರಲಿದೆ. ಕೆಲಸದ ಜಾಗದಲ್ಲಿ ನಿಮ್ಮ ಕೆಲಸ ಸರಿಯಾದ ಮನ್ನಣೆ ಸಿಗುವುದು ಕಷ್ಟವಾಗುವುದು.

ಶನಿಯ ಕೆಟ್ಟ ಪ್ರಭಾವದಿಂದ ಪಾರಾಗಲು ಈ ಶನಿಸ್ತೋತ್ರ ಪಠಿಸಿ
ಶನಿ ಸ್ತೋತ್ರ ಪಠಿಸಿ
ಹೌದು ಪ್ರತಿದಿನ ಶನಿ ಸ್ತೋತ್ರ ಪಠಿಸಿ, ಇದರಿಂದ ಶನಿಯ ಕೆಟ್ಟ ಪ್ರಭಾವ ತುಂಬಾನೇ ಕಡಿಮೆಯಾಗುವುದು.

ಧ್ಯಾತ್ವ ಸರಸ್ವತೀಂ ದೇವೀಂ ಗಣನಾಥ ವಿನಾಯಕಮ್
ರಾಜಾ ದಶರಥಃ ಸ್ತೋತ್ರಂ ಸೌರೇರಿದಮಥಾಕರೋತ್‌

ದಶರಥ ಉವಾಚ|
ನಮಃ ಕೃಷ್ಣಾಯ ನೀಲಾಯ ಶಿತಿಕಂಠನಿಭಾಯ ಚ|
ನಮೋ ನೀಲಮಯೂಖಾಯ ನೀಲೋತ್ಪಲನಿಭಾಯ ಚ
ನಮೋ ನೀಲಮಯೂಖಾಯ ನೀಲೋತ್ಪಲನಿಭಾಯ ಚ

ನಮೋ ನಿರ್ಮಾಂಸದೇಹಾಯ ದೀರ್ಘಶ್ಮಶ್ರುಜಟಾಯು ಚ
ನಮೋ ವಿಶಾಲನೇತ್ರಾಯ ಶುಷ್ಕೋದರ ಭಯಾನಕ|

ನಮಃ ಪರುಷಗಾತ್ರಾಯ ಸ್ಥೂಲರೋಮಾಯ ವೈ ಮಃ
ನಮೋ ನಿತ್ಯಂ ಕ್ಷುಧಾರ್ತಾಯ ನಿತ್ಯತಪ್ತಾಯ ವೈ ನಮಃ

ನಮಃ ಕಾಲಾಗ್ನಿದೂಪಾಯ ಕೃತಾಂತಕ ನಮೋಸ್ತು ತೇ
ನಮಸ್ತೇ ಕೋಟರಾಕ್ಷಾಯ ದುರ್ನಿರೀಕ್ಷ್ಯಾಯ ವೈ ನಮಃ|

ನಮೋ ಘೋರಾಯ ರೌದ್ರಾಯ ಭೀಷಣಾಯ ಕರಾಳಿನೇ
ನಮಸ್ತೇ ಸರ್ವಭಕ್ಷಾಯ ವಲೀಮುಖ ನಮೋಸ್ತು ತೇ|

ಸೂರ್ಯಪುತ್ರ ನಮಸ್ತೇಸ್ತು ಭಾಸ್ಕರೇ ಭಯದಾಯಕ
ಅಧೋದೃಷ್ಟೇ ನಮಸ್ತುಭ್ಯಂ ವಪುಃಶ್ಯಾಮ ನಮೋಸ್ತು ತೇ|

ನಮೋ ಮಂದಗತೇ ತುಭ್ಯಂ ನಿಸ್ತ್ರಿಂಶಾಯ ನಮೋ ನಮಃ
ತಪಸಾ ದಗ್ಧದೇಹಾಯ ನಿತ್ಯಯೋಗರತಾಯ ಚ|

ನಮಸ್ತೇ ಜ್ಞಾನನೇತ್ರಾಯ ಕಾಶ್ಯಾಪಾತ್ಮಜಸೂನವೇ
ತುಷ್ಣೋ ದದಾಸಿ ವೈ ರಶಜ್ಯಂ ರುಷ್ಟೋ ಹರಸಿ ತತ್‌ ಕ್ಷಣಾತ್‌|

ದೇವಾಸುರಮನುಷ್ಯಾಶ್ಚ ಪಶುಪಕ್ಷಿಸರೀಸೃಪಾಃ
ತ್ವಯಾ ವಿಲೋಚಿತಾಃ ಸೌರೇ ದೈನ್ಯಮಾಶು ವ್ರಜಂತಿ ಚ

ಬ್ರಹ್ಮಾ ಶಕ್ರೋ ಯಮಶ್ಚೈವ ಋಷಯ ಸಪ್ತತಾರಕಾಃ
ರಾಜ್ಯಭ್ರಷ್ಟಾಶ್ಚ ತೇ ಸರ್ವೇ ತವ ದೃಷ್ಟ್ಯಾ ವಿಲೋಚಿತಾಃ

ದೇಶಾ ನಗರಗ್ರಾಮಾಶ್ಚ ದ್ವೀಪಾಶ್ಚೈವಾದ್ರಯಸ್ತಥಾ
ರೌದ್ರಾದೃಷ್ಟ್ಯಾ ತು ಯೇ ದೃಷ್ಟಾಃ ಕ್ಷಯಂ ಗಚ್ಛಂತಿ ತ್‌ತ್ ಕ್ಷಣಾತ್|

ಪ್ರಸಾದಂ ಕುರು ಮೇ ಸೌರೇ ವರಾರ್ಥೇಹಂ ತವಾಸ್ರತಃ
ಸೌರೇ ಕ್ಷಮಸ್ವಾಪರಾಧಂ ಸರ್ವಭೂತಹಿತಾಯ ಚ|
ಇತಿ ದಶರಥ ಕೃತ ಶ್ರೀ ಶಬೈಶ್ಚರ ಸ್ತೋತ್ರಮ್||

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Shani Retrograde 2024: 5 Zodiac Face Challenge In Job During This Time, Remedies

Shani Retrograde 2024: These 5 zodiac face problem in their job, there remedies help to reduce stress
Story first published: Thursday, June 20, 2024, 21:00 [IST]
X
Desktop Bottom Promotion