Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಶನಿಯ ನಕ್ಷತ್ರ ಬದಲಾವಣೆ: ಈ 3 ರಾಶಿಗಳು ಬಯಸಿದ್ದು ನೆರವೇರಲಿದೆ, ಹಣಕಾಸು ತುಂಬಾ ಚೆನ್ನಾಗಿರಲಿದೆ
ಶನಿಯು ಎರಡೂವರೆ ವರ್ಷದ ಬಳಿಕ ಈ ತಿಂಗಳ (ಮಾರ್ಚ್ ) 29ಕ್ಕೆ ರಾಶಿ ಬದಲಾವಣೆ ಮಾಡುತ್ತಿದೆ, ಶನಿಯು ಕುಂಭ ರಾಶಿಯನ್ನು ಬಿಟ್ಟು ಮೀನ ರಾಶಿಗೆ ಸಂಚಾರ ಮಾಡುತ್ತಿದೆ. ಅಲ್ಲದೆ ಏಪ್ರಿಲ್‌ನಲ್ಲಿ ನಕ್ಷತ್ರ ಬದಲಾವಣೆ ಕೂಡ ಮಾಡಲಿದೆ. ಏಪ್ರಿಲ್ 28ಕ್ಕೆ ಶನಿಯು ಉತ್ತರ ಭಾದ್ರಪದ ನಕ್ಷತ್ರಕ್ಕೆ ಪ್ರವೇಶ ಮಾಡಲಿದೆ.
ಶನಿಯು ನಕ್ಷತ್ರ ಬದಲಾವಣೆ ಮಾಡಿದಾಗ ಈ ನಕ್ಷತ್ರ ಬದಲಾವಣೆ ಕೆಲ ರಾಶಿಗಳಿಗೆ ಆರ್ಥಿಕವಾಗಿ ತುಂಬಾನೇ ಪ್ರಯೋಜನ ನೀಡಲಿದೆ. ವೃತ್ತಿ ಬದುಕಿನಲ್ಲಿ ಧನಾತ್ಮಕ ಬದಲಾವಣೆ ಕಾಣುತ್ತೀರಿ, ಶನಿಯ ನಕ್ಷತ್ರ ಬದಲಾವಣೆಯಿಂದ ಈ ರಾಶಿಯವರು ತುಂಬಾ ಉತ್ತಮ ಪ್ರಯೋಜನ ಪಡೆಯುತ್ತೀರಿ:

ವೃಷಭ ರಾಶಿ
ವೃಷಭ ರಾಶಿಯವರು ಶನಿಯು ಉತ್ತರ ಭಾದ್ರಪದ ನಕ್ಷತ್ರಕ್ಕೆ ಸಂಚಾರ ಮಾಡಿದಾಗ ತುಂಬಾ ಉತ್ತಮ ಪ್ರಯೋಜನ ಪಡೆಯುತ್ತೀರಿ. ನಿಮ್ಮ ವೃತ್ತಿ ಬದುಕಿನಲ್ಲಿ ನೀವು ತುಂಬಾನೇ ಪ್ರಯೋಜನ ಪಡೆಯುತ್ತೀರಿ. ನಿರೀಕ್ಷೆ ಮಾಡುತ್ತಿರುವ ಬಡ್ತಿ ಸಿಗಲಿದೆ, ಕೆಲಸದಲ್ಲಿ ಬದಲಾವಣೆ ಮಾಡಬೇಕೆಂದು ಯೋಚಿಸುತ್ತಿದ್ದರೆ ನಿಮಗೆ ಉತ್ತಮ ಅವಕಾಶಗಳು ದೊರೆಯಲಿದೆ.
ವ್ಯಾಪಾರಸ್ಥರಿಗೂ ಉತ್ತಮ ಪ್ರಯೋಜನ ಪಡೆಯಬಹುದು, ನೀವು ವ್ಯಾಪಾರವನ್ನು ವಿಸ್ತರಣೆ ಮಾಡಲ ಬಯಸುವುದಾದರೆ ಈ ಅವಧಿ ಅನುಕೂಲಕರವಾಗಿದೆ. ಹೊಸ ವ್ಯವಹಾರ ಪ್ರಾರಂಭಿಸಿದರೆ ಉತ್ತಮ ಯಶಸ್ಸು ಪಡೆಯಲು ಸಾಧ್ಯವಾಗಲಿದೆ.
ಆರ್ಥಿಕ ಕಾರಣಗಳಿಂದ ಬಾಕಿಯುಳಿದ ಕೆಲಸ ಕಾರ್ಯವು ಈ ಅವಧಿಯಲ್ಲಿ ಚುರುಕುಗೊಳ್ಳಲಿದೆ. ಸಾಲ ಮಾಡಿದ್ದರೆ ಆ ಸಾಲವನ್ನು ತೀರಿಸಲು ಸಾಧ್ಯವಾಗಲಿದೆ.
ಕರ್ಕ ರಾಶಿಯವರು
ಕರ್ಕ ರಾಶಿಯವರು ಶನಿ ರಾಶಿ ಬದಲಾವಣೆಯಿಂದಲೇ ಉತ್ತಮ ಪ್ರಯೋಜನ ಪಡೆಯುತ್ತೀರಿ, ಏಕೆಂದರೆ ಶನಿ ಧೈಯ್ಯದಿಂದ ಮುಕ್ತರಾಗುತ್ತೀರಿ. ಶನಿ ಧೈಯ್ಯ ಇರುವಾಗ ಎದುರಿಸಿದ ಸಮಸ್ಯೆಗಳು ದೂರಾಗಲಿದೆ. ಕೆಲಸದಲ್ಲಿನ ಅಡೆತಡೆಗಳು ದೂರಾಗಲಿದೆ, ವ್ಯಾಪಾರಸ್ಥರಿಗೆ ಸವಾಲಿನ ಸಮಯ ದೂರಾಗಲಿದೆ. ಆರ್ಥಿಕವಾಗಿ ಅಭಿವೃದ್ಧಿಯನ್ನು ಕಾಣುತ್ತೀರಿ.
ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದರೆ ಅದರಿಂದ ಮುಕ್ತರಾಗಲು ಸಾಧ್ಯವಾಗಲಿದೆ, ಸಾಲ ಮಾಡಿದ್ದರೆ ನೀವು ಸಾಲಮುಕ್ತರಾಗಬಹುದು. ಉದ್ಯೋಗದಲ್ಲಿ ಬದಲಾವಣೆ ಅಥವಾ ಕೆಲಸದಲ್ಲಿ ಬಡ್ತಿಯ ನಿರೀಕ್ಷೆಯಲ್ಲಿದ್ದರೆ ಈ ಅವಧಿಯಲ್ಲಿ ಅದು ಸಾಧ್ಯವಾಗಲಿದೆ. ವ್ಯಾಪಾರಸ್ಥರು ತಮ್ಮ ವ್ಯವಹಾರದಲ್ಲಿ ಬಯಸಿದ ಲಾಭ ಪಡೆಯಲು ಸಾಧ್ಯವಾಗಲಿದೆ.
ವಿದೇಶದಲ್ಲಿ ಕೆಲಸ ಬಯಸಿದ್ದರೆ ಈ ನಕ್ಷತ್ರ ಬದಲಾವಣೆಯ ನಂತರ ನಿಮಗೆ ಉತ್ತಮ ಅವಕಾಶಗಳು ದೊರೆಯಲಿದೆ. ಶನಿಯು ಮೀನ ರಾಶಿಗೆ ಸಂಚರಿಸಿದ ದಿನದಿಂದಲೇ ನಿಮ್ಮ ಬದುಕಿನಲ್ಲಿ ಹಲವು ಧನಾತ್ಮಕ ಬದಲಾವಣೆ ಕಾಣಬಹುದು, ಈ ತಿಂಗಳಿಂದ ನಿಮ್ಮ ಬದುಕಿನಲ್ಲಿ ಧನಾತ್ಮಕ ಬದಲಾವಣೆಯನ್ನು ಕಾಣಬಹುದು.
ತುಲಾ ರಾಶಿ
ಶನಿಯು ಉತ್ತರ ಬಾದ್ರಪದ ನಕ್ಷತ್ರಕ್ಕೆ ಸಂಚಾರ ಮಾಡಿದಾಗ ತುಲಾ ರಾಶಿಯವರು ಅನೇಕ ಶುಭ ಫಲಿತಾಂಶ ಪಡೆಯಬಹುದು. ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಪ್ರಯತ್ನಗಳಿಗೆ ಉತ್ತಮ ಫಲ ಸಿಗಲಿದೆ. ನಿಮ್ಮ ಬಹುಮುಖ್ಯವಾದ ಆಸೆ ಈ ಅವಧಿಯಲ್ಲಿ ಕಾಣುತ್ತೀರಿ.
ಆರ್ಥಿಕವಾಗಿ ನೋಡುವುದಾದರೆ ಇಟ್ಟ ಹೆಜ್ಜೆಯಲ್ಲಿ ಯಶಸ್ಸು ನಿಮಗೆ ಒಲಿಯಲಿದೆ, ಅದಷ್ಟದ ಬೆಂಬಲ ನಿಮಗೆ ಇರುವುದರಿಂದ ವೃತ್ತಿ ಬದುಕಿನಲ್ಲಿ ಅನೇಕ ಉತ್ತಮ ಬದಲಾವಣೆ ಕಾಣಬಹುದು.ಸರ್ಕಾರಿ ಕೆಲಸಕ್ಕೆ ಪ್ರಯತ್ನ ಮಾಡುತ್ತಿರುವವರು ಈ ನಕ್ಷತ್ರ ಬದಲಾವಣೆಯ ಬಳಿಕ ತಾವು ನೀರೀಕ್ಷೆ ಮಾಡಿದ ಸರಕಾರಿ ಕೆಲಸ ಪಡೆಯುವಲ್ಲಿ ಯಶಸ್ಸು ಪಡೆಯುತ್ತೀರಿ. ಕುಟುಂಬ ಜೀವನ ಚೆನ್ನಾಗಿರಲಿದೆ.
ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications