ಶನಿಯ ನಕ್ಷತ್ರ ಬದಲಾವಣೆ: ಶನಿ ಕೃಪೆಯಿಂದ ಈ 3 ರಾಶಿಯವರಿಗೆ ಯಶಸ್ಸು ಗ್ಯಾರಂಟಿ

ಕರ್ಮದ ದೇವರಾದ ಶನಿಯು ಕುಂಭ ರಾಶಿಯಲ್ಲಿದೆ. 2025ಕ್ಕೆ ಕುಂಭ ರಾಶಿಯಿಂದ ಮೀನ ರಾಶಿಗೆ ಸಂಚರಿಸಲಿದೆ, ಆದರೆ ಶನಿಯು ನಕ್ಷತ್ರ ಬದಲಾವಣೆ ಮಾಡುತ್ತದೆ. ಇದೀಗ ಪೂರ್ವಭಾದ್ರಪದ ನಕ್ಷತ್ರದಲ್ಲಿರುವ ಶನಿಯು ಆಗಸ್ಟ್‌ 18ಕ್ಕೆ ಪೂರ್ವ ಭಾದ್ರಪದ ನಕ್ಷತ್ರದ ಮೊದಲ ಸ್ಥಾನ ತಲುಪಲಿದೆ.

ಏಪ್ರಿಲ್ 06, 2024 ರಂದು, ಶನಿದೇವನು ಗುರುವಿನ ಪೂರ್ವ ಭಾದ್ರಪದ ನಕ್ಷತ್ರವನ್ನು ಪ್ರವೇಶಿಸಿದನು. ಈಗ ಆಗಸ್ಟ್ 18 ರಂದು ಶನಿಯು ಈ ರಾಶಿಯ ಮೊದಲ ಸ್ಥಾನವನ್ನು ಪ್ರವೇಶಿಸಲಿದೆ. ಶನಿಯು ಅಕ್ಟೋಬರ್ 03 ರವರೆಗೆ ಇದೇ ಸ್ಥಾನದಲ್ಲಿ ಇರಲಿದೆ. ಈ ಅವಧಿ ಈ ರಾಶಿಯವರಿಗೆ ಶನಿಕೃಪೆಯಿಂದಾಗಿ ತುಂಬಾನೇ ಒಳಿತಾಗಲಿದೆ.

Shani Nakshtra Transit 2024

ಮಿಥುನ ರಾಶಿ

ಶನಿ ಕೃಪೆಯಿಂದಾಗಿ ಮಿಥುನ ರಾಶಿಯವರಿಗೆ ತುಂಬಾ ಒಳ್ಳೆಯದಾಗಲಿದೆ. ಈ ಅವಧಿಯಲ್ಲಿ ನೀವು ವೃತ್ತಿ ಕ್ಷೇತ್ರದಲ್ಲಿ, ವೈಯಕ್ತಿಕ ಜೀವನದಲ್ಲಿ ತುಂಬಾ ಉತ್ತಮ ಪ್ರಯೋಜನ ಪಡೆಯುತ್ತೀರಿ. ಈ ಅವಧಿಯಲ್ಲಿ ನೀವು ಪ್ರತಿಯೊಂದು ಹೆಜ್ಜೆಯಲ್ಲಿ ನೀವು ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುತ್ತೀರಿ. ಹಲವು ಕಾರಣಗಳಿಂದ ಅಪೂರ್ಣವಾಗಿದ್ದರೆ ಈ ಅವಧಿ ಪೂರ್ಣವಾಗಲಿದೆ.

ವೃತ್ತಿ ಕ್ಷೇತ್ರದಲ್ಲಿ ತುಂಬಾನೇ ಉತ್ತಮ ಪ್ರಯೊಜನ ಪಡೆಯುತ್ತೀರಿ. ನೀವು ಊಹಿಸಿದಂತೆಯೇ ಉತ್ತಮ ಪ್ರಗತಿ ಪಡೆಯುತ್ತೀರಿ. ಶನಿ ಕೃಪೆಯಿಂದ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳು ದೂರಾಗಲಿದೆ.

ಆರ್ಥಿಕ ಬದುಕು: ಆರ್ಥಿಕವಾಗಿ ನೀವು ಉತ್ತಮ ಪ್ರಯೋಜನ ಪಡೆಯುತ್ತೀರಿ, ವ್ಯಾಪಾರಿಗಳು ಲಾಭ ಗಳಿಸುತ್ತಾರೆ, ಉದ್ಯೋಗಿಗಳು ತಮ್ಮ ವೃತ್ತಿ ಬದುಕಿನಲ್ಲಿ ಉತ್ತಮ ಬೆಳವಣಿಗೆ ಕಾಣುವುದರಿಂದ ಅರ್ಥಿಕವಾಗಿ ಪ್ರಯೋಜನ ಪಡೆಯುತ್ತೀರಿ.

ಶನಿಯ ಕೃಪೆ ಮೇಲೆ ಇರುವುದರಿಂದ ಕೌಟುಂಬಿಕ ಸಮಸ್ಯೆಗಳು ದೂರಾಗಲಿದೆ, ನಿಮ್ಮ ಹಾಗೂ ಸಂಗಾತಿಯ ಬಾಂಧವ್ಯ ಚೆನ್ನಾಗಿರಲಿದೆ. ಕುಟುಂಬದಲ್ಲಿ ಸಂತೋಷ ಇರಲಿದೆ.

ಆರೋಗ್ಯ ಕೂಡ ಉತ್ತಮವಾಗಿರಲಿದೆ.

ಕುಂಭ ರಾಶಿ

ಕುಂಭ ರಾಶಿಯಲ್ಲಿ ಶನಿ ಇದೆ, ಅಲ್ಲದೆ ಶನಿ ಶನಿಯ ಸಾಡೇ ಸತಿಯ ಕೊನೆಯ ಘಟ್ಟ ನಡೆಯುತ್ತಿದೆ. ಶನಿಯ ಈ ನಕ್ಷತ್ರ ಬದಲಾವಣೆ ನಿಮಗೆ ಅನುಕೂಲಕರವಾಗಿದೆ.
ಆರ್ಥಿಕ ಜೀವನ: ಆರ್ಥಿಕವಾಗಿ ತುಂಬಾ ಒಳ್ಳೆಯದಿದೆ, ಉಳಿತಾಯ ಮಾಡಲು ಸಾಧ್ಯವಾಗುವುದು. ಅಲ್ಲದೆ ನೀವು ಬಯಸಿದ ವಸ್ತುಗಳನ್ನು ಖರೀದಿಸುತ್ತೀರಿ, ನಿಮ್ಮ ಸೌಕರ್ಯ ಹೆಚ್ಚಾಗಲಿದೆ. ಇನ್ನು ಹಣದ ಕಾರಣದಿಂದ ಬಾಕಿಯುಳಿದ ಕೆಲಸವು ಈ ಅವಧಿಯಲ್ಲಿ ಪೂರ್ಣಗೊಳ್ಳಲಿದೆ.

ವೃತ್ತಿ ಬದುಕು: ವೃತ್ತಿ ಬದುಕಿಗೂ ಈ ಅವಧಿ ತುಂಬಾ ಉತ್ತಮವಾಗಿರಲಿದೆ. ಈ ಅವಧಿ ಕೆಲಸ ಬದಲಾವಣೆಗೆ ಉತ್ತಮವಾಗಿದೆ. ಇನ್ನು ವೃತ್ತಿ ಬದುಕಿನಲ್ಲಿ ಉತ್ತಮ ಪ್ರಗತಿ ಕಂಡು ಬರಲಿದೆ.

ಕುಟುಂಬ ಜೀವನ: ಕುಟುಂಬ ಜೀವನದಲ್ಲಿ ಸಮಸ್ಯೆ ಬಗೆಹರಿಯಲಿದೆ. ವೈವಾಹಿಕ ಜೀವನದಲ್ಲಿ ಏನಾದರು ಸಮಸ್ಯೆಯಿದ್ದರೆ ಅದು ಬಗೆಹರಿಯಲಿದೆ. ಕುಟುಂಬದಲ್ಲಿ ವಾತಾವರಣ ಸುಧಾರಿಸುವುದು.

ಆರೋಗ್ಯ: ಆರೋಗ್ಯ ಸಮಸ್ಯೆ ಇದ್ದರೆ ಈ ಅವಧಿಯಲ್ಲಿ ನೀವು ಸುಧಾರಣೆ ಕಾಣುತ್ತೀರಿ, ಈ ಅವಧಿಯಲ್ಲಿ ದೈಹಿಕ ಹಾಗೂ ಮಾನಸಿಕ ಆರೋಗ್ಯ ತುಂಬಾ ಚೆನ್ನಾಗಿರಲಿದೆ.

ತುಲಾ ರಾಶಿ

ತುಲಾ ರಾಶಿಯವರಿಗೆ ಶನಿ ಕೃಪೆಯಿಂದ ತುಂಬಾ ಒಳಿತಾಗಲಿದೆ.

ವೃತ್ತಿ ಬದುಕು: ವೃತ್ತಿ ಕ್ಷೇತ್ರದಲ್ಲಿ ತುಂಬಾ ಪ್ರಗತಿ ಕಾಣುತ್ತೀರಿ. ಇನ್ನು ಕೆಲಸ ಬದಲಾವಣೆ ಬಗ್ಗೆ ಆಲೋಚಿಸುತ್ತಿದ್ದರೆ ಈ ಅವಧಿ ನಿಮಗೆ ಉತ್ತಮವಾಗಿರಲಿದೆ.

ಆರ್ಥಿಕ ಬದುಕು: ಆರ್ಥಿಕವಾಗಿ ಈ ಅವಧಿ ತುಂಬಾ ಚೆನ್ನಾಗಿರಲಿದೆ, ಅಲ್ಲದೆ ತುಂಬಾ ಸಮಯದಿಂದ ಬರಬೇಕಾಗಿರುವ ಹಣ ಕೂಡ ನಿಮ್ಮ ಕೈ ಸೇರಲಿದೆ. ಈ ಅವಧಿಯಲ್ಲಿ ಹಣ ಉಳಿತಾಯ ಮಾಡಲು ಸಾಧ್ಯವಾಗುವುದು. ಈ ಸಮಯದಲ್ಲಿ ಆಸ್ತಿ, ವಾಹನ ಖರೀದಿಸಲು ಸಾಧ್ಯವಾಗುವುದು.

ವೈವಾಹಿಕ ಬದುಕಿನಲ್ಲಿನ ಸಮಸ್ಯೆ ದೂರಾಗಲಿದೆ. ಕುಟುಂಬದಲ್ಲಿ ನೆಮ್ಮದಿ, ಸಂತೋಷ ಇರಲಿದೆ. ಆರೋಗ್ಯ ಚೆನ್ನಾಗಿರಲಿದೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Shani Nakshtra Transit: Lucky to These 3 Zodiac Signs In Kannada

Shani Nakshtra Transit 2024: These 3 zodiac gets more benefits, read on...
Story first published: Wednesday, August 14, 2024, 18:05 [IST]
X
Desktop Bottom Promotion