Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ಶನಿಯ ನಕ್ಷತ್ರ ಬದಲಾವಣೆ: ಅಕ್ಟೋಬವರೆಗೆ ಈ 3 ರಾಶಿಯವರು ಇದರ ಉತ್ತಮ ಫಲ ಪಡೆಯುವಿರಿ
ಎಲ್ಲರೂ ಶನಿಯ ಕೆಟ್ಟ ಪ್ರಭಾವದ ಬಗ್ಗೆ ತುಂಬಾನೇ ಭಯ ಪಡುತ್ತಾರೆ. ಏಕೆಂದರೆ ಶನಿಯ ಪ್ರಭಾವ ಅಷ್ಟು ಭೀಕರವಾಗಿರುತ್ತದೆ. ಶನಿಯು ಕರ್ಮದ ಫಲ ನೀಡುವ ದೇವರಾಗಿದೆ, ಈ ಶನಿಯು ಎರಡೂವರೆ ವರ್ಷಕ್ಕೊಮ್ಮ ರಾಶಿ ಬದಲಾವಣೆ ಮಾಡುತ್ತದೆ. ಇದೀಗ ಶನಿಯು ಕುಂಭ ರಾಶಿಯಲ್ಲಿದೆ. ಶನಿಯು ಒಂದು ನಿರ್ಧಿಷ್ಟ ಸಮಯದ ನಂತರ ಶನಿಯು ನಕ್ಷತ್ರ ಬದಲಾವಣೆ ಮಾಡುತ್ತದೆ. ಈ ಏಪ್ರಿಲ್ 6ಕ್ಕೆ ಶನಿಯು ರಾಶಿ ಬದಲಾವಣೆ ಮಾಡುತ್ತಿದೆ.

ಶನಿಯು ಯಾವ ನಕ್ಷತ್ರಕ್ಕೆ ಸಂಚರಿಸಲಿದೆ?
ಶತಭಿಷಾ ನಕ್ಷತ್ರದಲ್ಲಿ ಇರುವ ಶನಿಯು ಏಪ್ರಿಲ್ 6 ಮಧ್ಯಾಹ್ನ 03:55 ಕ್ಕೆ ಗುರು ಅಧಿಪತಿಯಾಗಿರುವ ಪೂರ್ವಭಾದ್ರಪದ ನಕ್ಷತ್ರಕ್ಕೆ ಸಂಚರಿಸಲಿದೆ. ಗುರುವಾರ, ಅಕ್ಟೋಬರ್ 3, 2024 ರವರೆಗೆ ಶನಿಯು ಗುರುವಿನ ನಕ್ಷತ್ರಪುಂಜದಲ್ಲಿ ಇರುತ್ತಾನೆ. ಶನಿಯ ಈ ನಕ್ಷತ್ರ ಬದಲಾವಣೆ ಕೆಲ ರಾಶಿಯವರಿಗೆ ತುಂಬಾನೇ ಮಂಗಳಕರವಾಗಿರಲಿದೆ.
ಪೂರ್ವಾಭಾದ್ರಪದ ನಕ್ಷತ್ರದಲ್ಲಿ ಶನಿಯ ಸಂಚಾರದಿಂದಾಗಿ ಈ 3 ರಾಶಿಯವರಿಗೆ ಸಂಪತ್ತು ಮತ್ತು ಸಮೃದ್ಧಿ ಹೆಚ್ಚಾಗಲಿದೆ.
ಮೇಷ ರಾಶಿ
ಪೂರ್ವಭಾದ್ರಪದ ನಕ್ಷತ್ರದಲ್ಲಿ ಶನಿಯ ಸಂಚಾರ ಮಾಡಿದಾಗ ಮೇಷ ರಾಶಿಯವರಿಗೆ ತುಂಬಾ ಒಳ್ಳೆಯದು. ಈ ಅವಧಿಯಲ್ಲಿ ನಿಮ್ಮ ಆದಾಯದಲ್ಲಿ ಭಾರಿ ಏರಿಕೆಯಾಗಲಿದೆ. ನೀವು ಹಣವನ್ನು ಗಳಿಸುವಲ್ಲಿ ಉಳಿಸುವಲ್ಲಿ ಯಶಸ್ವಿಯಾಗುತ್ತದೆ. ಈ ಅವಧಿಯಲ್ಲಿ ಕುಟುಂಬದ ವ್ಯವಹಾರ ನೋಡುತ್ತಿದ್ದರೆ ತುಂಬಾನೇ ಲಾಭ ಗಳಿಸುತ್ತೀರಿ. ಶನಿಯ ಸಂಚಾರದ ಸಮಯದಲ್ಲಿ, ನೀವು ಒಂದಲ್ಲ ಹಲವು ಮೂಲಗಳಿಂದ ಹಣವನ್ನು ಗಳಿಸಲು ಸಾಧ್ಯವಾಗುವುದು. ನೀವು ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದ್ದರೆ ಒಳ್ಳೆಯ ಲಾಭ ಗಳಿಸುತ್ತೀರಿ.
ವೃಷಭ ರಾಶಿ
ಪೂರ್ವಭಾದ್ರಪದ ನಕ್ಷತ್ರದಲ್ಲಿ ಶನಿದೇವನ ಸಂಚಾರವು ವೃಷಭ ರಾಶಿಯವರಿಗೆ ತುಂಬಾ ಶುಭಕರವಾಗಿರಲಿದೆ. ಶನಿಯ ಪೂರ್ವಭಾದ್ರಪದ ಸಮಯದಲ್ಲಿ ನಿಮಗೆ ವೃತ್ತಿ ಅಥವಾ ವ್ಯಾಪಾರ ಕ್ಷೇತ್ರದಲ್ಲಿ ಅಪಾರ ಯಶಸ್ಸನ್ನು ಪಡೆಯಲು ಸಾಧ್ಯವಾಗುವುದು. ಉದ್ಯೋಗಿಗಳು ಈ ಅವಧಿಯಲ್ಲಿ ಬಡ್ತಿಯನ್ನು ಪಡೆಯುತ್ತೀರಿ. ಉದ್ಯೋಗ ಮತ್ತು ವ್ಯಾಪಾರ ಮಾಡುವವರು ಈ ಅವಧಿಯಲ್ಲಿ ಉತ್ತಮ ಲಾಭವನ್ನು ಪಡೆಯುತ್ತಾರೆ. ವಿವಿಧ ಗ್ರಹಗಳ ಶುಭ ಪರಿಣಾಮಗಳಿಂದಾಗಿ, ನಿಮ್ಮ ಅನೇಕ ಅಪೂರ್ಣ ಕಾರ್ಯಗಳು ಪೂರ್ಣಗೊಳ್ಳುತ್ತವೆ. ಕೆಲಸದ ಸ್ಥಳದಲ್ಲಿ ನೀವು ಹೊಸ ಜವಾಬ್ದಾರಿಗಳನ್ನು ಪಡೆಯಬಹುದು. ಈ ಅವಧಿಯಲ್ಲಿ ನಿಮ್ಮ ಕುಟುಂಬದಲ್ಲಿ ಸಂತೋಷ, ನೆಮ್ಮದಿ ಇರಲಿದೆ.
ಮಕರ ರಾಶಿ
ಶನಿಯು ಪೂರ್ವಭಾದ್ರಪದ ನಕ್ಷತ್ರಕ್ಕೆ ಸಂಚರಿಸಿದಾಗ ಸಂಚಾರವು ಮಕರ ರಾಶಿಯ ಜನರಿಗೆ ಬಹಳ ಫಲಪ್ರದವಾಗಿದೆ, ಶನಿಯು ಈಗ ನಿಮ್ಮ ಸಂಪತ್ತಿನ ಮನೆಯಲ್ಲಿ ಇರಲಿದೆ. ಪರಿಣಾಮವಾಗಿ, ಶನಿಯ ಸಂಕ್ರಮಣದ ಅವಧಿಯು ನಿಮಗೆ ಹಠಾತ್ ಆರ್ಥಿಕ ಲಾಭವನ್ನು ತರಬಹುದು. ವ್ಯಾಪಾರಿಗಳು ಉತ್ತಮ ಲಾಭ ಗಳಿಸಲು ಸಾಧ್ಯವಾಗುವುದು. ಈ ಸಮಯದಲ್ಲಿ, ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ , ಈ ಅವಧಿ ಆಸ್ತಿ ಅಥವಾ ವಾಹನ ಖರೀದಿಸಲು ಪ್ರಯತ್ನಿಸಿದರೆ ಅದು ಸಾಧ್ಯವಾಗುವುದು.ಶನಿ ಕೃಪೆಯಿಂದ ಈ ಅವಧಿ ನಿಮಗೆ ತುಂಬಾನೇ ಮಂಗಳಕರವಾಗಿದೆ.
ಶನಿ ದೇವನ ಮಂತ್ರ ಪಠಿಸಿ
"ಓಂ ಹಿಲ್ಮ್ ಶಾಮ್ ಶನಾಯ ನಮ"
"ಓಂ ಪ್ರಾಮ್ ಪ್ರೀಮ್ ಪ್ರೌಮ್ ಸಹ ಶಾನೈಶ್ರಾಯ ನಮ"
"ಓಂ ಶಾಮ್ ಶನೇಶ್ಚಾರ ನಮಃ"
"ಔಮ್ ಐಂಗ್ ಹರಿಂಗ್ ಶರಿಂಗ್ ಶಂಗ್ ಶನೈಶ್ಚರಾಯ ನಮ ಔಮ್"
ಶನಿ ಗಾಯತ್ರಿ ಮಂತ್ರ
ಓಂ ಶನೈಶ್ಚರಾಯ ವಿದ್ಮಯೇ ಸೂರ್ಯಪುತ್ರಾಯ ದಹಿಮಹಿ ತನ್ನೊ ಮಂಡಾ ಪ್ರಚೋದಾಯತ್ ಶನಿ ಧ್ಯಾನ ಮಂತ್ರ ನೀಲಂಜನ ಸಮಾಭಮ್ ರವಿಪುತ್ರಂ ಯಮಗ್ರಾಜಂ ಚಯಾ ಮಾರ್ತಾಂದ ಸಂಭಾತ್ ತಮ್ ನಮಮಿ ಶೈಶ್ಚರಂ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
