ಈ 5 ರಾಶಿಯವರು ಈ ಶನಿ ಪರಿಹಾರ ಮಾಡಿದರೆ ಕಷ್ಟಗಳು ಕಡಿಮೆಯಾಗುವುದು

ಶನಿಯು ಕುಂಭ ರಾಶಿಯಲ್ಲಿ ಮಾರ್ಗಿಯಾಗಿ ಸಂಚಾರದಲ್ಲಿದೆ. ಶನಿಯ ಈ ಸಂಚಾರ ಕೆಲ ರಾಶಿಯಯವರಿಗೆ ಶುಭ, ಇನ್ನು ಕೆಲವು ರಾಶಿಯವರು ಜಾಗ್ರತೆವಹಿಸಬೇಕು. ಅದರಲ್ಲೂ ಈ ಸಂಚಾರ 5 ರಾಶಿಯವರ ಮೇಲೆ ಸ್ವಲ್ಪ ಕೆಟ್ಟ ಪ್ರಬಾವ ಬೀರಲಿದೆ. ಈ 5 ರಾಶಿಯವರಿಗೆ ಶನಿಗೆ ಪರಿಹಾರ ಮಾಡಿದರೆ ಸಮಸ್ಯೆಗಳು ಕಡಿಮೆಯಾಗಲಿದೆ.

ಮಿಥುನ ರಾಶಿ
ಶನಿಯು ನಿಮ್ಮ 9ನೇ ಮನೆಯಲ್ಲಿ ಮಾರ್ಗಿಯಾಗಿರುವುದರಿಂದ ತಂದೆಯ ಆರೋಗ್ಯಕ್ಕಾಗಿ ಹಣವನ್ನು ಖರ್ಚು ಮಾಡಬೇಕಾಗಬಹುದು. ನಿಮ್ಮ ಖರ್ಚುಗಳು ತುಂಬಾನೇ ಹೆಚ್ಚಾಗಲಿದೆ. ಆದ್ದರಿಂದ ಹೆಚ್ಚಿನ ಲಾಭಗಳನ್ನು ಪಡೆಯಲು ನೀವು ಸರಿಯಾದ ಯೋಜನೆಯನ್ನು ಮಾಡಬೇಕಾಗುತ್ತದೆ. ಆ ವ್ಯಾಪಾರಿಗಳು ಜಾಗ್ರತೆಯಿಂದ ಹೂಡಿಕೆ ಮಾಡಿ. ಅಹಂಕಾರದ ವರ್ತನೆ ಮನೆಯಲ್ಲಿ ಸಮಸ್ಯೆ ಹೆಚ್ಚಿಸಲಿದೆ, ಆದ್ದರಿಂದ ಈ ಬಗ್ಗೆ ಗಮನಹರಿಸಿ.

Shani Margi In Kumba Rashi,Shani Margi

ಕರ್ಕ ರಾಶಿ
ಶನಿಯು 8ನೇ ಮನೆಯಲ್ಲಿ ಮಾರ್ಗಿಯಾಗಿದೆ. ಕರ್ಕ ರಾಶಿಯವರಿಗೆ ಆರ್ಥಿಕ ಸಮಸ್ಯೆ ಎದುರಾಗಬಹುದು, ವೃತ್ತಿ ಜೀವನದಲ್ಲಿ ಒತ್ತಡ ಇರಲಿದೆ. ಕೆಲಸ ಬದಲಾಯಿಸಲು ನೀವು ಯೋಚಿಸಬಹುದು. ವ್ಯಾಪಾರಿಗಳೂ ಅನೇಕ ಸವಾಲುಗಳನ್ನು ಎದುರಿಸಬಹುದು. ಬರಬೇಕಾಗಿರುವ ಹಣ ಸರಿಯಾದ ಸಮಯಕ್ಕೆ ಸೇರಲ್ಲ, ಸಾಲ ಮಾಡಬೇಕಾಗಿ ಬರುವುದು. ಕುಟುಂಬ ಜೀವನದಲ್ಲಿ ಕೆಲವೊಂದು ಸಮಸ್ಯೆ ಇರುತ್ತದೆ, ಆರೋಗ್ಯ ಸಮಸ್ಯೆ ಕಾಡುತ್ತಲೇ ಇರುತ್ತದೆ.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಲ್ಲಿ ಶನಿ 3ನೇ ಮನೆಯಲ್ಲಿ ಮಾರ್ಗಿಯಾಗಿದೆ. ಈ ಅವಧಿಯಲ್ಲಿ ಹಣಕಾಸಿನ ಖರ್ಚು ಹೆಚ್ಚಾಗಲಿದೆ. ವೃತ್ತಿಜೀವನದಲ್ಲಿ ತೃಪ್ತಿ ಇರಲ್ಲ. ಕೆಲಸ ಬದಲಾಯಿಸಲು ಯೋಚಿಸಬಹುದು. ವ್ಯಾಪಾರಿಗಳಿಗೂ ಕಠಿಣ ಸ್ಪರ್ಧೆ ಇರಲಿದೆ. ಕುಟುಂಬದಲ್ಲಿ ಸಮಸ್ಯೆ ಇರುತ್ತದೆ. ಮನೆಯ ಸದಸ್ಯರಲ್ಲಿ ಭಿನ್ನಾಭಿಪ್ರಾಯವಿರಬಹುದು, ಆರೋಗ್ಯದ ಕಡೆಯೂ ಗಮನಹರಿಸಬೇಕು.

ಕುಂಭ ರಾಶಿ
ಶನಿಯು ಕುಂಭ ರಾಶಿಯಲ್ಲಿದೆ, ಕುಂಭ ರಾಶಿಯಲ್ಲಿ ಈಗ ಮಾರ್ಗಿಯಾಗಿದೆ. ಕುಂಭ ರಾಶಿಯಲ್ಲಿ ಶನಿಯ ನೇರ ಸ್ಥಾನದಿಂದಾಗಿ, ಕಾಲು ನೋವು, ಕಣ್ಣುಗಳಲ್ಲಿ ನೋವು ಮುಂತಾದ ಆರೋಗ್ಯ ಸಂಬಂಧಿಸಿದ ಸಮಸ್ಯೆ ಕಾಡಬಹುದು. ನಿಮ್ಮ ವೃತ್ತಿಯಲ್ಲಿ ಸ್ವಲ್ಪ ವಿಳಂಬ ಕಾಣಬಹುದು. ಕುಂಭ ರಾಶಿಯಲ್ಲಿ ಶನಿಯು ಮಾರ್ಗಿಯಾದಾಗ ನಿಮ್ಮ ಕೆಲಸದ ಸ್ಥಳದಲ್ಲಿ ನಿಮ್ಮ ಸಹೋದ್ಯೋಗಿಗಳಿಂದ ನೀವು ಕೆಲವು ಅಡೆತಡೆಗಳನ್ನು ಎದುರಿಸಬೇಕಾಗಬಹುದು. ಈ ಅವಧಿಯಲ್ಲಿ ನಿದ್ರಾಹೀನತೆ ಸಮಸ್ಯೆ ಕಾಡಬಹುದು.

ಮೀನ ರಾಶಿ
ಮೀನ ರಾಶಿಯಲ್ಲಿ 12ನೇ ಮನೆಯಲ್ಲಿ ಮಾರ್ಗಿಯಾಗಿದೆ. ಈ ಅವಧಿಯಲ್ಲಿ ಖರ್ಚು ಅಧಿಕವಿರಲಿದೆ. ವೃತ್ತಿ ಬದುಕಿನಲ್ಲಿಯೂ ತೃಪ್ತಿ ಇರಲಿದೆ. ನಿಮ್ಮ ಪ್ರಸ್ತುತ ಕೆಲಸದಲ್ಲಿ ಹೆಚ್ಚಿನ ಒತ್ತಡವಿರಲಿದೆ. ಈ ಕಾರಣದಿಂದಾಗಿ, ಉದ್ಯೋಗಗಳನ್ನು ಬದಲಾಯಿಸುವ ಬಗ್ಗೆಯೂ ನೀವು ಯೋಚಿಸಬಹುದು. ನೀವು ದೊಡ್ಡ ನಷ್ಟವನ್ನು ಅನುಭವಿಸಬೇಕಾಗಬಹುದು.ಕುಟುಂಬದಲ್ಲಿಯೂ ಕೆಲವು ಒತ್ತಡದ ಪರಿಸ್ಥಿತಿ ಇರಲಿದೆ. ವೈವಾಹಿಕ ಜೀವನದಲ್ಲಿ ಹೊಂದಾಣಿಕೆಯ ಕೊರತೆ ಇರಲಿದೆ. ಕೆಲವೊಂದು ಆರೋಗ್ಯ ಸಮಸ್ಯೆಗಳೂ ಕಾಡುವುದು.

ಶನಿಗೆ ಪರಿಹಾರ
* ಪ್ರತಿ ಶನಿವಾರ ಶನಿ ದೇವಾಲಯಕ್ಕೆ ಭೇಟಿ ನೀಡಿ ಎಳ್ಳೆಣ್ಣೆ ಅಥವಾ ಸಾಸಿವೆಯೆಣ್ಣೆಯಲ್ಲಿ ನಿಮ್ಮ ಮುಖ ನೋಡಿ ಎಣ್ಣೆಯನ್ನು ದಾನ ಮಾಡಿ.
* ಶನಿವಾರ ಬಡವರಿಗೆ, ನಿರ್ಗತಿಕರಿಗೆ ದಾನ ಮಾಡಿ. ಕಪ್ಪು ಕಂಬಳಿ, ಎಳ್ಳು, ಆಹಾರ ವಸ್ತುಗಳನ್ನು ದಾನ ಮಾಡಿ
* ಹನುಮಂತನ ದೇವಾಲಯಕ್ಕೆ ಮಂಗಳವಾರ, ಶನಿವಾರ ಭೇಟಿ ನೀಡಿ
* ಪ್ರತಿನಿತ್ಯ ಹನುಮಾನ್ ಚಾಲೀಸಾ ಪಠಿಸಿ.
* ಶನಿವಾರ ಶನಿ ಮಂತ್ರ ಪಠಿಸಿ
* ಶನಿವಾರ ಆಲದ ಮರದ ಕೆಳಗಡೆ ಎಳ್ಳೆಣ್ಣೆಯ ದೀಪ ಹಚ್ಚಿಡಿ.

ಶನಿ ಮಂತ್ರ
"ಓಂ ಹಿಲ್ಮ್ ಶಾಮ್ ಶನಾಯ ನಮ"
"ಓಂ ಪ್ರಾಮ್ ಪ್ರೀಮ್ ಪ್ರೌಮ್ ಸಹ ಶಾನೈಶ್ರಾಯ ನಮ"
"ಓಂ ಶಾಮ್ ಶನೇಶ್ಚಾರ ನಮಃ
" "ಔಮ್ ಐಂಗ್ ಹರಿಂಗ್ ಶರಿಂಗ್ ಶಂಗ್ ಶನೈಶ್ಚರಾಯ ನಮ ಔಮ್

ಶನಿ ಗಾಯತ್ರಿ ಮಂತ್ರ
ಓಂ ಶನೈಶ್ಚರಾಯ ವಿದ್ಮಯೇ ಸೂರ್ಯಪುತ್ರಾಯ ದಹಿಮಹಿ ತನ್ನೊ ಮಂಡಾ ಪ್ರಚೋದಾಯತ್

ಸಾಡೇಸಾತಿ ಶನಿ ಮಂತ್ರ
"ಶ್ರೀ ನೀಲಾಂಜನ ಸಮಾಭಾಸಂ ರವಿ ಪುತ್ರಂ ಯಮಾಗ್ರಜಂ ಛಾಯಾ ಮಾರ್ತಾಂಡ ಸಂಭೂತಾಂ ತಂ ನಮಾಮಿ ಶನೈಶ್ಚರಂ"
"ಓಂ ಶನ್ನೋದೇವಿರಾಭಿಷ್ಟಯ ಆಪೋ ಭವಂತು ಪಿತಯೇ ಶನ್ಯೋರಭಿಸ್ತವಂತು ನಃ, ಓಂ ಶಂ ಶನೈಶ್ಚರಾಯ ನಮಃ"
ಶನಿ ವೈದಿಕ ಮಂತ್ರ
"ಓಂ ಶನ್ನೋ ದೇವಿರಭಿಷ್ಟ್ದಾಪೋ ಭವಂತು ಪಿತಯೇ"

ಈ ಮಂತ್ರಗಳನ್ನು ನಿಯಮಿತವಾಗಿ ಪಠಿಸುವುದರಿಂದ ಶನಿಯ ಕೆಟ್ಟ ಪ್ರಭಾವವನ್ನು ಕಡಿಮೆ ಮಾಡಬಹುದು.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Shani Margi In Kumba Rashi: Unlucky To 5 Zodiac Signs

Shani Margi In Kumba Rashi: These 5 zodiac signs need to be careful in this period, do these remedies to reduce bad affect of shani, read on..
X
Desktop Bottom Promotion