ಶನಿ ಮಾರ್ಗಿಯಾಗಿ ಚಲಿಸಲಾರಂಭಿಸಿದಾಗ ಈ 3 ರಾಶಿಯವರು ಅದ್ಭುತ ಪ್ರಯೋಜನ ಪಡೆಯುವಿರಿ

ಶನಿಯು ತುಂಬಾ ನಿಧಾನಕ್ಕೆ ಸಾಗುವ ಗ್ರಹವಾಗಿದ್ದು ಪ್ರಸ್ತುತ ಕುಂಭ ರಾಶಿಯಲ್ಲಿದೆ, ಶನಿಯು ಎರಡೂವರೆ ವರ್ಷಗಳ ಒಂದು ರಾಶಿಯಲ್ಲಿದ್ದು ನಂತರ ರಾಶಿ ಬದಲಾವಣೆ ಮಾಡುತ್ತದೆ. ಶನಿಯು 2025ಕ್ಕೆ ರಾಶಿ ಬದಲಾವಣೆ ಮಾಡುವುದು, ಆದರೆ ಶನಿಯು ಈಗ ಹಿಮ್ಮುಖ ಚಲನೆಯಲ್ಲಿದೆ. ಶನಿಯು ಹಿಮ್ಮುಖ ಚಲನೆ ಮಾಡಿದಾಗ ಕೆಲ ರಾಶಿಗಳು ಹೆಚ್ಚಿನ ಸವಾಲು ಎದುರಿಸುತ್ತಾರೆ, ಅಂಥವರು ಶನಿಯು ಮಾರ್ಗಿಯಾದಾಗ ಹೆಚ್ಚಿನ ಪ್ರಯೋಜನ ಪಡೆಯುತ್ತಾರೆ.

ಶನಿಯು ನವೆಂಬರ್ 15ರಿಂದ ಮಾರ್ಗಿಯಾಗಿ ಚಲಿಸಲಿದ್ದು ಅಲ್ಲಿಂದ ಈ ರಾಶಿಯವರು ಅದೃಷ್ಟದ ಬೆಂಬಲದಿಂದಾಗಿಯಿಂದಾಗಿ ಪ್ರಗತಿ ಹೊಂದುತ್ತಾರೆ.

Shani Margi 2024

ಮಿಥುನ ರಾಶಿ

ಮಿಥುನರಾಶಿಯವರಿಗೆ ಈ ದಿನ ತುಂಬಾ ಪ್ರಯೋಜನಕಾರಿಯಾಗಿದೆ. ಶನಿಯು ಅಕ್ಟೋಬರ್ ಬಳಿಕ ಮಾರ್ಗಿಯಾಗಿ ಚಲಿಸಿದಾಗ ನಿಮ್ಮ ಸಮಸ್ಯೆಗಳು ಕಡಿಮೆಯಾಗುವುದು, ಅದೃಷ್ಟದ ಬೆಂಬಲ ನಿಮ್ಮ ಜೊತೆ ಇರುವುದರಿಂದ ಕೆಲಸ ಕಾರ್ಯಗಳು ಉತ್ತಮವಾಗಿ ನಡೆಯಲಿದೆ. ಆರ್ಥಿಕವಾಗಿ ಈ ಅವಧಿ ಉತ್ತಮವಾಗಿದೆ.
ವ್ಯಾಪಾರಿಗಲು ಈ ಅವಧಿಯಲ್ಲಿ ಉತ್ತಮ ಆರ್ತಿಕ ಪ್ರಯೋಜನ ಪಡೆಯುತ್ತೀರಿ, ಇರುವ ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ, ಹೊಸ ವ್ಯವಹಾರ ಪ್ರಾರಂಭಿಸಲು ಈ ಸಮಯ ನಿಮಗೆ ಉತ್ತಮವಾಗಿದೆ.

ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ನಿಮ್ಮ ಸಂಗಾತಿಯ ನಡುವಿನ ಬಾಂಧವ್ಯ ಚೆನ್ನಾಗಿರಲಿದೆ. ನಿಮ್ಮ ನಡುವೆ ಏನಾದರೂ ಭಿನ್ನಾಭಿಪ್ರಾಯವಿದ್ದರೆ ಅದು ಕಡಿಮೆಯಾಗಲಿದೆ. ಆರೋಗ್ಯದ ದೃಷ್ಟಿಯಿಂದ ಕೂಡ ಈ ಸಮಯ ನಿಮಗೆ ಉತ್ತಮವಾಗಿದೆ.

ವೃಶ್ಚಿಕ ರಾಶಿ

ಶನಿಯು ವಕ್ರೀಯ ಚಲನೆಯಲ್ಲಿರುವ ಈ ಅವಧಿಯಲ್ಲಿ ವೃಶ್ಚಿಕ ರಾಶಿಯವರು ಕೆಲ ಸಮಸ್ಯೆಗಳನ್ನು ಎದುರಿಸಬಹುದು, ಅದರೆ ಅಕ್ಟೋಬರ್ ಬಳಿಕ ಶನಿಯು ಮಾರ್ಗಿಯಾಗಿ ಚಲಿಸಲಾರಂಭಿಸಿದ ಮೇಲೆ ನೀವು ಉತ್ತಮ ಪ್ರಯೋಜನ ಪಡೆಯುತ್ತೀರಿ. ಈ ಅವಧಿಯಲ್ಲಿ ಆರ್ಥಿಕವಾಗಿ ಉತ್ತಮ ಪ್ರಯೋಜನ ಪಡೆಯುವಿರಿ.

ಆಸ್ತಿ ಖರೀದಿಸಬೇಕು ಅಥವಾ ವಾಹನ ಖರದೀಸಬೇಕೆಂದು ನಿವು ಬಯಸುತ್ತಿದ್ದರೆ ಈ ಸಮಯದ ಬಳಿಕ ನಿಮಗೆ ಅನುಕೂಲಕರವಾಗಲಿದೆ. ವೃತ್ತಿ ಬದುಕಿನ ದೃಷ್ಟಿಯಿಂದಲೂ ತುಂಬಾ ಉತ್ತಮವಾಗಿದೆ. ವೃತ್ತಿ ಬದುಕಿನಲ್ಲಿ ಬಡ್ತಿ ಪಡೆಯುತ್ತೀರಿ, ಕೆಲಸ ಬದಲಾಯಿಸಲು ಪ್ರಯತ್ನ ಮಾಡುತ್ತಿದ್ದರೆ ಈ ಸಮಯದ ಬಳಿಕ ನಿಮಗೆ ಉತ್ತಮ ಅವಕಾಶ ಸಿಗಲಿದೆ.

ಕೆಲಸ ಕಾರ್ಯಗಳಲ್ಲಿ ಯಶಸ್ಸು ಪಡೆಯುತ್ತೀರಿ, ವ್ಯಾಪಾರಿಗಳಿಗೆ ಈ ಅವಧಿ ಅನುಕೂಲಕರವಾಗಿದೆ, ವೈವಾಹಿಕ ಜೀವನ ಚೆನ್ನಾಗಿರಲಿದೆ. ಆರೋಗ್ಯ ಕೂಡ ಉತ್ತಮವಾಗಿರಲಿದೆ.

ಮಕರ ಸಂಕ್ರಾಂತಿ

ಮಕರ ರರಾಶಿ ಶನಿ ಸಾಡೇಸಾತಿಯ ಕೊನೆಯ ಹಂತ ನಡೆಯುತ್ತಿದ್ದು, ಶನಿ ಮಾರ್ಗಿಯಾಗಿ ಚಲಿಸಲಾರಂಭಿಸಿದಾಗ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಆರ್ಥಿಕ ಸಮಸ್ಯೆ ಬಗೆಹರಿಯಲಿದೆ, ಸಮಾಜದಲ್ಲಿ ನಮ್ಮ ಸ್ಥಾನ ಮಾನ ಹೆಚ್ಚಾಗಲಿದೆ. ಉದ್ಯೋಗದಲ್ಲಿ ಸವಾಲುಗಳನ್ನು ಎದುರಿಸಿದರೆ ಅದು ದೂರಾಗಲಿದೆ. ಹೆಚ್ಚು ಆರ್ಥಿಕ ಪ್ರಯೋಜನ ಪಡೆಯಲು ಸಾಧ್ಯವಾಗುವುದು.

ವ್ಯಾಪಾರಿಗಳ ವ್ಯವಹಾರ ಉತ್ತಮವಾಗಿರಲಿದೆ. ಕುಟುಂಬ ಜೀವನದ ಚೆನ್ನಾಗಿರಲಿದೆ. ಹೊಸ ಕೆಲಸಕ್ಕೆ ಪ್ರಯತ್ನ ಮಾಡುತ್ತಿದ್ದರೆ ಈ ಅವಧಿಯಲ್ಲಿ ಉತ್ತಮ ಫಲಿತಾಂಶ ದೊರೆಯಲಿದೆ. ಆರೋಗ್ಯ ಸಮಸ್ಯೆಯಿದ್ದರೆ ಸುಧಾರಣೆ ಕಂಡು ಬರಲಿದೆ.

ಶನಿ ಮಂತ್ರ

"ಓಂ ಹಿಲ್ಮ್ ಶಾಮ್ ಶನಾಯ ನಮ"

"ಓಂ ಪ್ರಾಮ್ ಪ್ರೀಮ್ ಪ್ರೌಮ್ ಸಹ ಶಾನೈಶ್ರಾಯ ನಮ"

"ಓಂ ಶಾಮ್ ಶನೇಶ್ಚಾರ ನಮಃ"

"ಔಮ್ ಐಂಗ್ ಹರಿಂಗ್ ಶರಿಂಗ್ ಶಂಗ್ ಶನೈಶ್ಚರಾಯ ನಮ ಔಮ್"

ಶನಿ ಗಾಯತ್ರಿ ಮಂತ್ರ
ಓಂ ಶನೈಶ್ಚರಾಯ ವಿದ್ಮಯೇ ಸೂರ್ಯಪುತ್ರಾಯ ದಹಿಮಹಿ ತನ್ನೊ ಮಂಡಾ ಪ್ರಚೋದಾಯತ್

ಶನಿ ಧ್ಯಾನ ಮಂತ್ರ

ನೀಲಂಜನ ಸಮಾಭಮ್ ರವಿಪುತ್ರಂ

ಯಮಗ್ರಾಜಂ ಚಯಾ ಮಾರ್ತಾಂದ

ಸಂಭಾತ್ ತಮ್ ನಮಮಿ ಶೈಶ್ಚರಂ

ಈ ಮಂತ್ರಗಳನ್ನು ಪ್ರತಿದಿನ ಪಠಣೆ ಮಾಡಿದರೆ ತುಂಬಾ ಒಳ್ಳೆಯದು, ಶನಿಯ ದೋಷಗಳು ಕಡಿಮೆಯಾಗಿದೆ ಅದೃಷ್ಟದ ಬೆಂಬಲ ಸಿಗಲಿದೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Shani Margi 2024: turely Blessing For tHese Zodiac Signs

Shani Margi 2024: Theese zodiac gets benefits wwhen shani start moving as direct
Story first published: Tuesday, September 10, 2024, 21:53 [IST]
X
Desktop Bottom Promotion