Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಾರ್ಗಿಯಾಗಿ ಚಲನೆ ಆರಂಭಿಸಿದ ಶನಿ: 2024 ಈ 3 ರಾಶಿಯವರಿಗೆ ಲಾಭದ ವರ್ಷವಾಗಲಿದೆ
ನವಗ್ರಹಗಳಲ್ಲಿಯೇ ಶನಿಯ ಪ್ರಭಾವ ತುಂಬಾ ಮಹತ್ವವನ್ನು ಹೊಂದಿದೆ. ಶನಿಯು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸಲು ಕನಿಷ್ಠ ಎರಡೂವರೆ ವರ್ಷ ಬೇಕು. ಶನಿಯು 2023 ರ ಆರಂಭದಲ್ಲಿ ಕುಂಭ ರಾಶಿಗೆ ಸಂಚರಿಸಿತು. ಅದಾಗಿ ಕೆಲವೇ ತಿಂಗಳುಗಳಲ್ಲಿ ಹಿಮ್ಮುಖ ಚಲನೆ ಪ್ರಾರಂಭಿಸಿತ್ತು, ಹಿಮ್ಮುಖ ಚಲನೆಯಲ್ಲಿದ್ದ ಶನಿಯು ನವೆಂಬರ್ 4 ರಂದು ಮಾರ್ಗಿಯಾಗಿ ಚಲಿಸಿದೆ.
ಶನಿಯ ಈ ಸಂಚಾರ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಿದ್ದು ಕೆಲವೊಂದು ರಾಶಿಯವರಿಗೆ ಶನಿ ಮಾರ್ಗಿಯಾದಾಗ ತುಂಬಾ ಒಳ್ಳೆಯ ಪ್ರಭಾವ ಬೀರಿದೆ. ಶನಿಯ ಪ್ರಭಾವದಿಂದಾಗಿ 2024ರಲ್ಲಿ ಈ ರಾಶಿಯವರು ಅನೇಕ ಉತ್ತಮಪ್ರಯೋಜನಗಳನ್ನು ಪಡೆಯುತ್ತಾರೆ ಎಂದು ಹೇಳಲಾಗುವುದು, ಆ ರಾಶಿಗಳು ಯಾವುವು ಎಂದು ನೋಡುವುದಾದರೆ.........

ಸಿಂಹ ರಾಶಿ
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಶನಿಯು ನೇರವಾಗಿ ಕುಂಭ ರಾಶಿಯಲ್ಲಿ ಚಲಿಸುತ್ತಿರುವುದರಿಂದ ಸಿಂಹ ರಾಶಿಯವರಿಗೆ ಬಹಳ ಫಲಪ್ರದವಾಗಿದೆ. ಈ ಅವಧಿಯಲ್ಲಿ ಜೀವನದಲ್ಲಿ ಸಾಕಷ್ಟು ಪ್ರಗತಿ ಕಾಣುವಿರಿ. ನಿಮ್ಮ ಆರ್ಥಿಕ ಸ್ಥಿತಿ ತುಂಬಾ ಉತ್ತಮವಾಗಲಿದೆ. ಉದ್ಯೋಗದಲ್ಲಿ, ವ್ಯವಹಾರದಲ್ಲಿ ನೀವು ತುಂಬಾನೇ ಪ್ರಗತಿ ಕಾಣುವಿರಿ, ಇದರಿಂದಾಗಿ ನಿಮ್ಮ ಆರ್ಥಿಕ ಸ್ಥಿತಿ ತುಂಬಾನೇ ಚೆನ್ನಾಗಿರಲಿದೆ. ಈ ಅವಧಿಯಲ್ಲಿ ಉದ್ಯೋಗಿಗಳು ಬಡ್ತಿಯ ಲಾಭವನ್ನು ಪಡೆಯುತ್ತಾರೆ. ಒಟ್ಟಿನಲ್ಲಿ ಶನಿಯ ಈ ಸಂಚಾರ ಸಿಂಹರಾಶಿಯವರಿಗೆ ಅದೃಷ್ಟವನ್ನು ಹೊತ್ತು ತಂದಿದೆ, ಇದರ ಫಲ 2024ರಲ್ಲಿ ಹೆಚ್ಚಾಗಿ ಕಾಣುವಿರಿ.
ಮೇಷ ರಾಶಿ
ಕುಂಭ ರಾಶಿಯಲ್ಲಿ ಶನಿಯು ನೇರವಾಗಿರುವುದರಿಂದ ಈ ಸಮಯವು ಮೇಷ ರಾಶಿಯವರಿಗೂ ತುಂಬಾನೇ ಅನುಕೂಲಕರ ಫಲಿತಾಂಶ ನೀಡುತ್ತದೆ. ಮೇಷ ರಾಶಿಯವರು ಈ ಅವಧಿಯಲ್ಲಿ ಮಾಡುವ ಕೆಲಸ ಕಾರ್ಯಗಳಲ್ಲಿ ಯಶಸ್ಸು ಪಡೆಯುತ್ತೀರಿ. ಶನಿಯ ಮಂಗಳಕರದೃಷ್ಟಿಯಿಂದ ಈ ಅವಧಿಯಲ್ಲಿ ಆದಾಯದಲ್ಲಿ ಅಪಾರ ಹೆಚ್ಚಳ ಕಂಡುಬರುತ್ತದೆ.ಈ ಸಮಯದಲ್ಲಿ ನೀವು ಮಾಡಿದ ಹೂಡಿಕೆಯ ಲಾಭವನ್ನು ಪಡೆಯಬಹುದು. ಉದ್ಯೋಗಿಗಳಿಗೆ ಬಡ್ತಿಯೊಂದಿಗೆ ವರ್ಗಾವಣೆಯ ಲಾಭವೂ ದೊರೆಯಲಿದೆ. ಈ ಸಮಯದಲ್ಲಿ, ಉದ್ಯೋಗವನ್ನು ಹುಡುಕುತ್ತಿರುವ ಜನರು ಸಹ ಉತ್ತಮ ಆಯ್ಕೆಗಳನ್ನು ಪಡೆಯಬಹುದು. ಅಷ್ಟೇ ಅಲ್ಲ, ವ್ಯಾಪಾರ ಮಾಡುವವರು ಈ ಸಮಯದಲ್ಲಿ ಉತ್ತಮ ಲಾಭವನ್ನು ಪಡೆಯುತ್ತಾರೆ.
ಮಕರ ಸಂಕ್ರಾಂತಿ
ಶನಿ ಮಾರ್ಗಿಯಾದಾಗಿನಿಂದ ಮಕರ ರಾಶಿಯವರ ಜೀವನದಲ್ಲೂ ತುಂಬಾನೇ ಧನಾತ್ಮಕ ಬದಲಾವಣೆ ಕಂಡು ಬರುವುದು. ಶನಿಯ ಪ್ರಭಾವದಿಂದ 2024 ನಿಮಗೆ ಅದ್ಭುತವಾಗಿರುತ್ತದೆ. ಕುಂಭ ರಾಶಿಯಲ್ಲಿ ಶನಿ ನೇರವಾಗಿ ತಿರುಗಿದ ತಕ್ಷಣ ಮಕರ ರಾಶಿಯವರಿಗೆ ಒಳ್ಳೆಯ ದಿನಗಳು ಆರಂಭವಾಗುತ್ತವೆ. ಈ ಅವಧಿಯಲ್ಲಿ ಶನಿದೇವನ ನೇರ ಸಂಚಾರವು ಮಕರ ರಾಶಿಯವರಿಗೆ ಆರ್ಥಿಕ ಲಾಭವನ್ನು ತರುತ್ತದೆ. ಅಷ್ಟೇ ಅಲ್ಲ ಜನರಲ್ಲಿ ಆತ್ಮಸ್ಥೈರ್ಯ ಹೆಚ್ಚಾಗುವುದು. ಈ ಸಮಯವು ಉದ್ಯಮಿಗಳಿಗೂ ಅನುಕೂಲಕರವಾಗಿದೆ. ವ್ಯಾಪಾರದಲ್ಲಿ ಭಾರೀ ಲಾಭ ಉಂಟಾಗಲಿದೆ. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ. ಉದ್ಯೋಗಸ್ಥರಿಗೆ ಬಡ್ತಿ ದೊರೆಯುವ ಸಾಧ್ಯತೆ ಕಂಡುಬರುತ್ತಿದೆ. ಶನಿಯು ನಿಮಗೆ ಎಲ್ಲಾ ವಿಚಾರಗಳಲ್ಲೂ ಉತ್ತಮ ಪ್ರಯೋಜನ ನೀಡಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications