Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಡಿಸೆಂಬರ್‌ನಲ್ಲಿ ಶನಿ ಮಹಾದಶಾ ಯೋಗದಿಂದ ಈ ರಾಶಿಯವರಿಗೆ 19 ವರ್ಷ ಯೋಗ!!
2025ರಲ್ಲಿ ಹಲವು ಗ್ರಹಗತಿಗಳ ಬದಲಾವಣೆಗಳಿಂದ ಯೋಗಗಳು ಉಂಟಾಗುತ್ತಿರುವುದು ನಮಗೆಲ್ಲಾ ತಿಳಿದಿದೆ. ಹಾಗೆ ಇದೆ ಡಿಸೆಂಬರ್‌ನಲ್ಲು ಗ್ರಹಗತಿಗಳ ಬದಲಾವಣೆಯು ಹಲವು ರೀತಿಯ ಲಾಭ ನಷ್ಟಕ್ಕೆ ಕಾರಣವಾಗುತ್ತಿದೆ. ಇನ್ನು ಈ ಡಿಸೆಂಬರ್‌ನಲ್ಲಿ ಶನಿ ಗ್ರಹದ ಸಂಚಾರವು ಶನಿ ಮಹಾದಶ ಯೋಗಕ್ಕೆ ಕಾರಣವಾಗುತ್ತಿದೆ.
ಜ್ಯೋತಿಷ್ಯಶಾಸ್ತ್ರದಲ್ಲಿ ಶನಿ ಗ್ರಹವನ್ನು ಅತ್ಯಂತ ಶಕ್ತಿಯುತ ಹಾಗೂ ಜೀವನದ ಚಿತ್ರಣ ಬದಲಿಸುವಂತಹ ಗ್ರಹ ಎಂದು ನಂಬಲಾಗಿದೆ. ಶನಿಯ ಪ್ರಭಾವವು ಪ್ರತಿ ರಾಶಿಯಲ್ಲಿ ವಿಭಿನ್ನ ಫಲಿತಾಂಶಗಳನ್ನು ನೀಡುತ್ತದೆ. ಶನಿಯು ಅನುಕೂಲಕರವಾಗಿದ್ದರೆ, ನಿರ್ದಿಷ್ಟ ರಾಶಿಯ ಜನರು ಎಲ್ಲಾ ಲಾಭಗಳನ್ನು ಪಡೆಯುತ್ತಾರೆ. ಶನಿಯು ಪ್ರತಿಕೂಲ ಸ್ಥಾನದಲ್ಲಿದ್ದರೆ ಅವರು ಅನೇಕ ಬಿಕ್ಕಟ್ಟುಗಳು ಮತ್ತು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 19 ವರ್ಷಗಳ ಕಾಲ ನಡೆಯುವ ಶನಿ ಮಹಾದಶ ಈ ಡಿಸೆಂಬರ್‌ನಲ್ಲಿ ಆರಂಭಗೊಂಡಿದೆ. ಹೀಗಾಗಿ ಹಲವು ರಾಶಿಯವರು ಶನಿಯ ಅನುಗ್ರಹಕ್ಕೆ ಕಾರಣರಾಗುತ್ತಾರೆ. ಅವರ ಹಣಕಾಸಿನಲ್ಲಿ ಸುಧಾರಣೆ ಕಂಡುಬರುತ್ತದೆ ಮತ್ತು ಅವರು ಜೀವನದಲ್ಲಿ ಅನೇಕ ಸಾಧನೆಗಳನ್ನು ಸಾಧಿಸುತ್ತಾರೆ. ಯಾವ ರಾಶಿಯವರಿಗೆ ಈ ಲಾಭಗಳು ಸಿಗಲಿವೆ ಎಂದು ತಿಳಿದುಕೊಳ್ಳೋಣ
ಕನ್ಯಾ ರಾಶಿ
ಶನಿಯು ಕನ್ಯಾರಾಶಿಯಲ್ಲಿ 5ನೇ ಮನೆಯಲ್ಲಿ ಮತ್ತು 6ನೇ ಮನೆಯಲ್ಲಿ ಸಂಚರಿಸಲಿದೆ. ಹೀಗಾಗಿ ಕನ್ಯಾ ರಾಶಿಯ ಮಂದಿಗೆ ಬಹಳಷ್ಟು ಲಾಭವಿದೆ. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಅತ್ಯಧೀಕ ಲಾಭ ಈ ಸಮಯದಲ್ಲಿ ನೋಡಬಹುದು. ವರ್ಷದ ಪೂರ್ಣ ಪ್ರಮಾಣದ ಸಂಪತ್ತಿನ ಲಾಭ, ಆರೋಗ್ಯಕರ ಲಾಭ ಪಡೆಯುತ್ತಾರೆ. ಶನಿದೇವನ ಕೃಪೆಯಿಂದ ಅವರು ಜೀವನದಲ್ಲಿ ಎದುರಿಸುವ ಯಾವುದೇ ಸಮಸ್ಯೆಯನ್ನು ಎದುರಿಸುವ ಧೈರ್ಯ ಮತ್ತು ಶಕ್ತಿಯನ್ನು ಪಡೆಯಲಿದ್ದಾರೆ. ಹಾಗೆ ವರ್ಷದ ಕೊನೆಯಲ್ಲಿ ಅವರ ಜೀವನ ಸಂತೋಷದಿಂದ ಕಳೆಯಲಿದ್ದಾರೆ. ಬಹುಕಾಲದಿಂದ ಇದ್ದ ಒಂದು ಸಮಸ್ಯೆ ದೂರಾಗಲಿದೆ. ಇಲ್ಲವೆ ಪರಿಹಾರ ಸಿಗಲಿದೆ.
ಧನು ರಾಶಿ
ಧನು ರಾಶಿಯ ಎರಡು ಮತ್ತು ಮೂರನೇ ಮನೆಗಳಲ್ಲಿ ಶನಿ ನೆಲಸಲಿದ್ದಾನೆ. ಹೀಗಾಗಿ ಶನಿಯ ಮಹಾದಶಾದಿಂದಾಗಿ ಈ ರಾಶಿಯವರಿಗೆ ಹಿಂದೆಂದು ಕಾಣದಷ್ಟು ಸಂಪತ್ತಿನ ಹರಿವು ಇರಲಿದೆ. ಧನು ರಾಶಿಯ ಜನರು ಯಾವುದೇ ವ್ಯಾಪಾರ, ವ್ಯಹಹಾರ ಮಾಡುತ್ತಿದ್ದರೂ ಕೂಡ ಅದರಲ್ಲಿ ಲಾಭ ಗಳಿಸುವ ಸಾಧ್ಯತೆ ಇದೆ. ಹಾಗೆ ಲಾಭದ ಪ್ರಮಾಣವೂ ಕೂಡ ಹೆಚ್ಚಾಗಲಿದೆ. ಕಠಿಣ ಶ್ರಮದ ಫಲವಾಗಿ ನಿಮಗೆ ಹಣದ ಹರಿವು ಹೆಚ್ಚಾಗಲಿದೆ. ನಿಮ್ಮ ನಾಯಕತ್ವದ ದೃಷ್ಟಿ ಹಾಗೂ ಗುಣಗಳಿಂದ ನಿಮಗೆ ಹೊಸ ಜವಾಬ್ದಾರಿ ಒಲಿಯಲಿದೆ. ಅವಿವಾಹಿತರಾಗಿದ್ದರೆ ನಿಮ್ಮ ವಿವಾಹಕ್ಕೆ ಇದ್ದ ದೊಡ್ಡ ಅಡಚಣೆಯೊಂದು ನಿವಾರಣೆಯಾಗಲಿದೆ, ಇದರಿಂದ ಶುಭ ಸುದ್ದಿ ಕೇಳುವಿರಿ.
ತುಲಾ ರಾಶಿ
ತುಲಾ ರಾಶಿಯ ನಾಲ್ಕು ಮತ್ತು ಐದನೇ ಮನೆಗಳಿಗೆ ಶನಿಯು ಅಧಿಪತಿಯಾಗಿರುತ್ತಾನೆ. ಈ ನಡುವೆ ಶನಿ ಮಹಾದಶಾ ಯೋಗದಿಂದಾಗಿ ಹಲವು ಆಕಾಂಕ್ಷೆಗಳು ಈಡೇರಲಿವೆ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುವ ಜೊತೆಗೆ ಹೊಸ ಹಣಕಾಸಿನ ನೆರವು ನಿಮಗೆ ಸಿಗಲಿದೆ. ಉದ್ಯೋಗಾಕಾಂಕ್ಷಿಗಳಿಗೆ ಹೊಸ ಉದ್ಯೋಗ ಸಿಗಲಿದೆ, ಆದರೆ ನಿಮ್ಮ ಅಭಿರುಚಿಗೆ ತಕ್ಕಂತೆ ನೆಮ್ಮದಿ ಇರುವುದಿಲ್ಲ. ಬಹುದಿನದ ಬಯಕೆಗಳು ಈಡೇರುವ ಸಮಯವಿದು.
ಮೀನ ರಾಶಿ
ಶನಿಯು ಮೀನ ರಾಶಿಯ 12ನೇ ಮನೆಯಲ್ಲಿದೆ. ಆದ್ದರಿಂದ, ಶನಿ ಮಹಾದಶಾದಿಂದಾಗಿ ಮೀನ ರಾಶಿಯವರಿಗೆ ಅನೇಕ ಲಾಭಗಳು ಒಲಿದು ಬರಲಿದೆ. ಅದರಲ್ಲೂ ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಹಾಗೂ ಹಣದ ವ್ಯವಹಾರಗಳು ಯಾವುದೇ ಅಡ್ಡಿ ಆತಂಕವಿಲ್ಲದೆ ನೆರವೇರಲಿದೆ. ಮನೆಯಲ್ಲಿ ಮಿಶ್ರ ಫಲ ಇರಲಿದೆ. ನಿಮ್ಮ ನೆರವಿನಿಂದ ಹಿರಿಯರು ಸಂತಸ ಪಡಲಿದ್ದಾರೆ. ಶನಿ ದೇವರ ಅನುಗ್ರಹದಿಂದಾಗಿ ನಿಮ್ಮ ಹಳೆಯ ದೋಷಗಳು ನಿವಾರಣಯಾಗುತ್ತವೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯನ್ನು ಖಾತರಿಪಡಿಸಲಾಗಿಲ್ಲ. ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕನ್ನಡ ಬೋಲ್ಡ್ ಸ್ಕೈ ಖಚಿತಪಡಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications