Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಶನಿ ಮಹಾದಶಾ ಯೋಗದಿಂದ ಈ 3 ರಾಶಿಯವರಿಗೆ 19 ವರ್ಷ ಅದೃಷ್ಟವೋ ಅದೃಷ್ಟ..!
ಎಲ್ಲಾ ಗ್ರಹಗಳು ನಮ್ಮ ರಾಶಿ ಚಕ್ರದ ಮೇಲೆ ಪರಿಣಾಮ ಬೀರುತ್ತವೆ ಅನ್ನೋದನ್ನು ನಾವು ತಿಳಿದಿದ್ದೇವೆ. ನಮ್ಮೆಲ್ಲಾ ಗ್ರಹಗತಿಗಳ ಪರಿಣಾಮಕಾರಿ ವಿಚಾರಗಳ ಹಿಂದೆ ಒಂದಲ್ಲಾ ಒಂದು ಗ್ರಹಗಳ ಸಂಚಾರ ಪ್ರಭಾವವಿರುತ್ತದೆ. ಈಗ 19 ವರ್ಷಗಳ ಬಳಿಕ ಶನಿ ಮಹಾದಶಾ ಯೋಹ ಬರುತ್ತಿದೆ. ಶನಿ ಅತ್ಯಂತ ನಿಧಾನವಾಗಿ ಚಲಿಸುವ ಗ್ರಹ ಆಗಿರುವುದರಿಂದ 19 ವರ್ಷಗಳ ಕಾಲ ಈ ಮಹಾದಶಾ ಯೋಗ ಇರಲಿದೆ.
ಶನಿಯು ಒಂದೂವರೆ ವರ್ಷಗಳ ಕಾಲ ಒಂದೇ ರಾಶಿಯಲ್ಲಿ ಇರುತ್ತಾನೆ. ಇದು ಹಲವು ರಾಶಿಗಳ ಮೇಲೆ ಪ್ರಭಾವ ಉಂಟು ಮಾಡುತ್ತಿರುತ್ತದೆ. ಶನಿ ದೇವರು ಒಬ್ಬರ ಕಾರ್ಯಗಳಿಗೆ ಅನುಗುಣವಾಗಿ ಫಲಿತಾಂಶಗಳನ್ನು ನೀಡಬಹುದು. ಮತ್ತು ಒಳ್ಳೆಯ ಕಾರ್ಯಗಳನ್ನು ಮಾಡಿದವರಿಗೆ ಶನಿಯಿಂದ ಒಳಿತಾಗಲಿದೆ. ಹಾಗೆ ಕೆಟ್ಟ ಕೆಲಸಗಳ ಮಾಡುವವರನ್ನು ಶುಕ್ಷಿಸುತ್ತಾನೆ ಎಂದು ಹೇಳಲಾಗುತ್ತದೆ.

ಶನಿಯ ಏಳೂವರೆ ಶನಿ, ಅಷ್ಟಮ ಶನಿ, ಅರ್ಥಾಷ್ಟಮ ಶನಿ ಮಾತ್ರ ಒಬ್ಬರ ಜೀವನದ ಮೇಲೆ ಪ್ರಭಾವ ಬೀರುವುದಿಲ್ಲ. ಶನಿಯ ಮಹಾದಶಾ ಯೋಗವು ಸಹ ಹಲವರ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಆದರೆ ಕೆಲವರಲ್ಲಿ ಇದು ಸಮಸ್ಯೆಯನ್ನೂ ಕೂಡ ತರಬಹುದು. ಹಾಗೆ 19 ವರ್ಷಗಳ ಕಾಲ ಶನಿ ಮಹಾದಶಾ ಯೋಗ ಯಾವೆಲ್ಲಾ ರಾಶಿಗೆ ಲಾಭದಾಯಕವಾಗಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಶನಿ ಮಹಾದಶಾ ಪ್ರಭಾವವು ಪ್ರತಿ ರಾಶಿಯವರಿಗೆ ಶನಿಯ ಸ್ಥಾನವನ್ನು ಅವಲಂಬಿಸಿ ಬದಲಾಗುತ್ತದೆ. ಕೆಲವೊಂದು ರಾಶಿಗೆ ಇದು ಲಾಭದಾಯಕವಾಗಿ ಪರಿಣಮಿಸಿದರೆ ಮತ್ತೆ ಕೆಲವರಿಗೆ ಇದು ಸಂಕಷ್ಟಗಳ ತರಬಹುದು.
ಕನ್ಯಾರಾಶಿ
ಕನ್ಯಾ ರಾಶಿಯವರಿಗೆ ಶನಿ ಮಹಾದಶಾ ಹೆಚ್ಚಿನ ಲಾಭವನ್ನು ತರಲಿದೆ. ಈ ರಾಶಿ ಜನರಲ್ಲಿ ಶನಿ ದೇವರ ಆಶೀರ್ವಾದದಿಂದ ಅತ್ಯಂತ ಶಕ್ತಿಯುತ ಮತ್ತು ಶ್ರೀಮಂತರಾಗುತ್ತಾರೆ. ಅಂದರೆ ಕನ್ಯಾ ರಾಶಿಯವರಿಗೆ ಈ ಶನಿ ಮಹಾದಶಾ ಯೋಗದಿಂದ ಆರ್ಥಿಕ ಲಾಭವಾಗಲಿದೆ. ನಿಮ್ಮ ಖ್ಯಾತಿ ಹೆಚ್ಚಾಗಲಿದೆ. ನೀವು ಮುಟ್ಟಿದ್ದೆಲ್ಲಾ ಶುಭವಾಗಿ ಪರಿವರ್ತನೆಯಾಗುವ ಕಾಲವಿದು. ನಿಮ್ಮ ಎಲ್ಲಾ ಬಯಕೆ, ಬೇಡಿಕೆಗಳಿಗೂ ಒಳ್ಳೆಯ ಫಲಿತಾಂಶ ಸಿಗಲಿದೆ. ಹೊಸ ಹೊಸ ಆಯಾಮದಿಂದ ನಿಮಗೆ ಹಣಕಾಸು ಹರಿದುಬರಲಿದೆ.
ತುಲಾ ರಾಶಿ
ಶನಿಯು ತುಲಾ ರಾಶಿಯ 4 ಮತ್ತು 5 ನೇ ಮನೆಯ ಅಧಿಪತಿ ಆಗಿದ್ದಾನೆ. ಶನಿ ಮಹಾದಶಾವು ತುಲಾ ರಾಶಿಯವರಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಈ ಸಮಯದಲ್ಲಿ ತುಲಾ ರಾಶಿಯವರ ಮಹಾತ್ವಾಂಕ್ಷೆಗಳು ನೆರವೇರುತ್ತವೆ. ನಿಮ್ಮ ಎಲ್ಲಾ ಕಾರ್ಯಗಳ ಆಲೋಚನೆಗಳು ಸಕಾರಾತ್ಮಕವಾಗಿ ಬದಲಾಗುತ್ತದೆ. ಹಣಕಾಸಿನ ಪರಿಸ್ಥಿತಿಗಳು ಸುಧಾರಣೆಯಾಗಲಿದೆ. ಮಾನಸಿಕ ನೆಮ್ಮದಿ ನಿಮ್ಮದಾಗಲಿದೆ, ಹಾಗೆ ನಿಮ್ಮ ಗೊಂದಲಗಳಿಗೆ ಸರಿಯಾದ ಉತ್ತರಗಳು ಸಿಗುತ್ತವೆ. ದೊಡ್ಡ ಮಟ್ಟದ ಹಣದ ಉಳಿತಾಯಕ್ಕೆ ನೀವು ಸಾಕ್ಷಿಯಾಗಲಿದ್ದೀರಿ.
ಧನು ರಾಶಿ
ಧನು ರಾಶಿಯ 2 ಮತ್ತು 3 ನೇ ಮನೆಯ ಅಧಿಪತಿ ಶನಿ ಆಗಿದ್ದಾನೆ. ಈ ಶನಿ ಮಹಾದಶಾ ಅವಧಿಯಲ್ಲಿ ಧನು ರಾಶಿಯವರಿಗೆ ಎಲ್ಲಿಲ್ಲದ ಲಾಭ ತರಲಿದೆ. ಹಾಗೆ ನಿಮ್ಮ ಕಠಿಣ ಶ್ರಮಕ್ಕೆ ಪ್ರತಿಫಲವಂತು ಸಿಕ್ಕೇ ಸಿಗುತ್ತದೆ. ನಿಮ್ಮ ಕೌಟುಂಬಿಕ ಜೀವನದಲ್ಲಿ ಸಂತೋಷದ ಕ್ಷಣಗಳಿಗೆ ನೀವು ಸಾಕ್ಷಿಯಾಗಲಿದ್ದೀರಿ. ನಿಮ್ಮ ಎಲ್ಲಾ ಕೆಲಸಗಳಲ್ಲಿ ನಿಮಗೆ ಲಾಭವಾಗುವ ನಿರೀಕ್ಷೆ ಇದೆ. ನಿಮ್ಮ ಬಹುದಿನಗಳ ಬೇಡಿಕೆ, ಬಯಕೆಗಳು ಅತ್ಯುತ್ತಮ ರೀತಿಯಲ್ಲಿ ನಿಮ್ಮ ಕೈ ಸೇರಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯನ್ನು ಖಾತರಿಪಡಿಸಲಾಗಿಲ್ಲ. ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ.)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











