Latest Updates
-
ಬಿಸಿಲಿನಲ್ಲಿ ಮದುವೆ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ 5 ಬದಲಾವಣೆಗಳನ್ನು ಮರೆಯಬೇಡಿ! -
ದೆಹಲಿ ಧೂಳಿನ ಬಿರುಗಾಳಿ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 500 ರೂಪಾಯಿಯ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಬದಲಾವಣೆ ನಿಮ್ಮನ್ನು ಹೀಟ್ಸ್ಟ್ರೋಕ್ನಿಂದ ರಕ್ಷಿಸುತ್ತದೆ! -
ರೆಡ್ ಕಾರ್ಪೆಟ್ನಿಂದ ನಿಮ್ಮ ವಾರ್ಡ್ರೋಬ್ಗೆ: ಕಾನ್ 2026ರ ಈ ಫ್ಯಾಷನ್ ಟ್ರೆಂಡ್ಸ್ ಈಗ ಸಿಕ್ಕಾಪಟ್ಟೆ ವೈರಲ್! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲ ಬೇಗೆಯಲ್ಲಿ ಮದುವೆ ಸಂಭ್ರಮ ಹಾಳಾಗದಿರಲಿ: ಅತಿಥಿಗಳ ಆರೋಗ್ಯ ಕಾಪಾಡಲು ಇಲ್ಲಿವೆ ಸೀಕ್ರೆಟ್ ಟಿಪ್ಸ್! -
ಬಿಸಿಗಾಳಿಯ ಆರ್ಭಟ: ಮನೆಯನ್ನು ತಂಪಾಗಿಡಲು ಮತ್ತು ಆರೋಗ್ಯ ಕಾಪಾಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ರೆಡ್ ಅಲರ್ಟ್: ಆಯುಷ್ ಸಚಿವಾಲಯದ ಈ ಸಿಂಪಲ್ ಟಿಪ್ಸ್ ಪಾಲಿಸಿದರೆ ಸಾಕು, ದೇಹ ತಂಪಾಗಿರುತ್ತೆ! -
ಬಿಸಿಲಿನ ಬೇಗೆಯಿಂದ ತತ್ತರಿಸಿದ ಕರ್ನಾಟಕ: ಮನೆಯಲ್ಲೇ ತಂಪಾಗಿರಲು ನೀವು ಮಾಡಬೇಕಾದ ಆ 5 ಬದಲಾವಣೆಗಳೇನು? -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ!
2025ರಲ್ಲಿ ಗುರು ಮತ್ತು ಶನಿ ಸಂಚಾರ: ಈ ರಾಶಿಗಳು ಆರ್ಥಿಕ ಬೆಳವಣಿಗೆ ಕಾಣುವಿರಿ
ವರ್ಷ ಫಲವನ್ನು ಗ್ರಹಗ ಸ್ಥಾನ ನೋಡಿ ಹೇಳಲಾಗುವುದು, ಇನ್ನೇನು ಕೆಲವೇ ದಿನಗಳಲ್ಲಿ 2024ಕ್ಕೆ ಗುಡ್‌ಬೈ ಹೇಳಿ 2025ಕ್ಕೆ ಹಲೋ ಹೇಳಲಿದ್ದೇವೆ. ಪ್ರತಿವರ್ಷವೂ ಹೊಸ ವರ್ಷವೆಂದರೆ ನಮ್ಮಲ್ಲಿ ಸಾಕಷ್ಟು ನಿರೀಕ್ಷೆಗಳು ಇರುತ್ತದೆ.
ಜ್ಯೋತಿಷ್ಯವು ಗ್ರಹಗತಿಗಳ ಸ್ಥಾನ ಉತ್ತಮವಾಗಿದ್ದರೆ ಆ ವರ್ಷ ಅದ್ಭುತವಾಗಿರುತ್ತದೆ ಎಂದು ಹೇಳುತ್ತದೆ. ಗ್ರಹಗಳಲ್ಲಿ ಶನಿ ಹಾಗೂ ಗುರುವಿನ ಪ್ರಭಾವ ತುಂಬಾನೇ ಮುಖ್ಯವಾದದ್ದು. ಏಕೆಂದರೆ ಇವುಗಳ ಪ್ರಭಾವ ದೀರ್ಘವಾಗಿರುತ್ತದೆ. ಗುರುವು ಪ್ರತಿ 13 ತಿಂಗಳಿಗೆ ರಾಶಿ ಬದಲಾವಣೆ ಮಾಡಿದರೆ ಶನಿಯು ಎರಡೂವರೆ ವರ್ಷಕ್ಕೊಮ್ಮೆ ಸ್ಥಾನ ಬದಲಾವಣೆ ಮಾಡಲಿದೆ. ಈ ಎರಡೂ ಗ್ರಹಗಳ ಸಂಚಾರ 2025ರಲ್ಲಿ ಇರಲಿದೆ.\
ಈ ಪ್ರಮುಖ ಗ್ರಹಗಳ ಸಂಚಾರದಿಂದಾಗಿ ಈ ರಾಶಿಯವರ ಸಂಪತ್ತು ಹೆಚ್ಚಾಗಲಿದೆ
ಮೇಷ ರಾಶಿ
ಮೇಷ ರಾಶಿಯವರಿಗೆ 2025ನೇ ವರ್ಷ ಅದ್ಭುತವಾಗಿರಲಿದೆ. ಗುರು ಮತ್ತು ಶನಿಯ ರಾಶಿ ಬದಲಾವಣೆ ನಿಮ್ಮ ರಾಶಿಯ ಮೇಲೆ ತುಂಬಾನೇ ಉತ್ತಮ ಪ್ರಭಾವ ಬೀರಲಿದೆ. 2025ರಲ್ಲಿ ನೀವು ವ್ಯವಹಾರದಲ್ಲಿ ಉತ್ತಮ ಪ್ರಯೋಜನ ಪಡೆಯುತ್ತೀರಿ. ಹೊಸ ವ್ಯಾಪಾರ ಪ್ರಾರಂಭಿಸಿದ್ದರೆ ಅದರಲ್ಲಿಯೂ ಉತ್ತಮ ಪ್ರಯೋಜನ ಪಡೆಯುವಿರಿ.
ವಿದೇಶಕ್ಕೆ ಹೋಗಲು ಪ್ರಯತ್ನಿಸುತ್ತಿದ್ದರೆ ಈ ಸಮಯದಲ್ಲಿ ನಿಮ್ಮಾಸೆ ಈಡೇರಲಿದೆ, ನೀವು ಬಯಸಿದ ಕೆಲಸ ಪಡೆಯುವಲ್ಲಿ ಯಶಸ್ವಿಯಾಗುತ್ತೀರಿ, ವೃತ್ತಿ ಬದುಕಿನಲ್ಲಿ ಹೊಸ ಎತ್ತರ ತಲುಪಲು ಸಾಧ್ಯವಾಗುವುದು. ಗುರುವಿನ ಸ್ಥಾನ ಬಲವಾಗಿರುವುದರಿಂದ ಕೆಲಸ ಕಾರ್ಯಗಳಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ.
2025ನೇ ವರ್ಷ ಆರ್ಥಿಕವಾಗಿ ಕೂಡ ತುಂಬಾನೇ ಪ್ರಯೋಜನಕಾರಿಯಾಗಿರಲಿದೆ. ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಮತ್ತಷ್ಟು ಪ್ರಯೋಜನ ಕಾಣುವಿರಿ. ಹೂಡಿಕೆಯಿಂದ ಲಾಭ ಗಳಿಸಲು ಸಾಧ್ಯವಾಗುವುದು. ಹೊಸ ವ್ಯಾಪಾರ ಯೋಜನೆ ನಿಮ್ಮಲ್ಲಿದ್ದರೆ ಅದನ್ನು ಪ್ರಾರಂಭಿಸಲು 2025ನೇ ವರ್ಷ ಅನುಕೂಲಕರವಾಗಿದೆ.
ಕುಟುಂಬ ಜೀವನದ ದೃಷ್ಟಿಯಿಂದಲೂ ಈ ಅವಧಿ ನಿಮಗೆ ತುಂಬಾನೇ ಪ್ರಯೋಜನಕಾರಿಯಾಗಿದೆ. ಅವಾಹಿತರು ಮದುವೆ ಸಂಬಂಧ ನೋಡುತ್ತಿದ್ದರೆ ಮದುವೆಯಾಗಲಿದೆ, ಕುಟುಂಬ ಜೀವನ ತುಂಬಾ ಚೆನ್ನಾಗಿರಲಿದೆ.
ಸಿಂಹ ರಾಶಿ
ಹೊಸ ವರ್ಷವು ನಿಮಗೆ ತುಂಬಾನೇ ಪ್ರಯೋಜನಕಾರಿಯಾಗಿರಲಿfರ. ಮೀನ ರಾಶಿಯಲ್ಲಿ ಶನಿ ಸಂಚಾರ, ಮಿಥುನ ರಾಶಿಯಲ್ಲಿ ಗುರುವಿನ ಸಂಚಾರದಿಂದ ನೀವು ತುಂಬಾನೇ ಒಳ್ಳೆಯ ಪ್ರಯೋಜನ ಪಡೆಯುತ್ತೀರಿ. ವೃತ್ತಿ ಬದುಕು ತುಂಬಾ ಚೆನ್ನಾಗಿರಲಿದೆ.
ಈ ವರ್ಷ ನಿಮ್ಮ ಆರ್ಥಿಕ ಸ್ಥಿತಿ ಚೆನ್ನಾಗಿರುವುದರಿಂದ ಮನೆ ಕಟ್ಟುವುದು ಅಥವಾ ಗಾಡಿ ಖರೀದಿಸುವುದು ಈ ಬಗೆಯ ಆಸೆ ಈಡೇರಲಿದೆ. ನಿಮ್ಮ ಆರ್ಥಿಕ ಸ್ಥಾನಮಾನ ಹೆಚ್ಚಾಗಲಿದೆ. ಹಣವನ್ನು ಉಳಿತಾಯ ಮಾಡಲು ಸಾಧ್ಯವಾಗುವುದು.
ವ್ಯಾಪಾರಿಗಳಿಗೆ ಈ ವರ್ಷ ಅನುಕೂಲಕರವಾಗಿರಲಿದೆ, ನೀವು ನಿಮ್ಮ ಉದ್ಯಮದಲ್ಲಿ ಲಾಭ ಗಳಿಸಲು ಸಾಧ್ಯವಾಗುವುದು. ಕೆಲಸದಲ್ಲಿ ಬಡ್ತಿ ಸಿಗಲಿದೆ.
ತುಲಾ ರಾಶಿ
ಗುರು ಮತ್ತು ಶನಿಯ ಸ್ಥಾನ ಮಿಥುನ ರಾಶಿಯವರಿಗೆ ತುಂಬಾನೇ ಅನುಕೂಲಕರವಾಗಿರಲಿದೆ, ಹೊಸ ವರ್ಷವು ನಿಮಗೆ ಎಲ್ಲಾ ರೀತಿಯಿಂದಲೂ ಒಳ್ಳೆಯದಿದೆ. ವೃತ್ತಿ ಬದುಕಿನಲ್ಲಿ ಬಡ್ತಿ ಸಿಗಲಿದೆ, ವ್ಯಾಪಾರಿಗಳು ಒಳ್ಳೆಯ ಲಾಭ ಗಳಿಸಲು ಸಾಧ್ಯವಾಗುವುದು. ಹೀಗಾಗಿ ನಿಮ್ಮ ಆರ್ಥಿಕ ಸ್ಥಿತಿ ತುಂಬಾ ಚೆನ್ನಾಗಿರಲಿದೆ.
ವೃತ್ತಿ ಜೀವನದ ದೃಷ್ಟಿಯಿಂದ ಇಡೀ ವಾರ ನಿಮಗೆ ತುಂಬಾನೇ ಅನುಕೂಲಕರವಾಗಿರಲಿದೆ, ವೃತ್ತಿ ಬದುಕಿನಲ್ಲಿ ನಿಮ್ಮ ಪ್ರಯತ್ನಕ್ಕೆ ತಕ್ಕ ಫಲ ಸಿಗುವುದರಿಂದ ಖುಷಿಯಾಗಿರುತ್ತೀರಿ. ಹಣವನ್ನು ಉಳಿತಾಯ ಮಾಡಲು ಸಾಧ್ಯವಾಗುವುದು. ಹಣಕಾಸು ಚೆನ್ನಾಗಿ ಇರುವುದರಿಂದ ನಿಮ್ಮ ಸೌಕರ್ಯಗಳು ಕೂಡ ಹೆಚ್ಚಾಗಲಿದೆ.
ವೃಶ್ಚಿಕ ರಾಶಿ
ಗುರು ಮತ್ತು ಶನಿಯ ಪ್ರಭಾವ ಮಾರ್ಚ್‌ನಿಂದ ವೃಶ್ಚಿಕ ರಾಶಿಯವರಿಗೆ ತುಂಬಾನೇ ಪ್ರಯೋಜನಕಾರಿಯಾಗಿರಲಿದೆ. ಇಡೀ ವರ್ಷ ನಿಮಗೆ ಧನಾತ್ಮಕವಾಗಿರಲಿದೆ. ವೃತ್ತಿ ಬದುಕು ತುಂಬಾ ಚೆನ್ನಾಗಿರಲಿದೆ, ವ್ಯಾಪಾರಿಗಳು ಉತ್ತಮ ಲಾಭ ಪಡೆಯುತ್ತೀರಿ.
ನೀವು ಏನಾದರು ಹೊಸ ವ್ಯವಹಾರ ಮಾಡುವ ಪ್ಲ್ಯಾನ್‌ನಲ್ಲಿದ್ದರೆ ಅದರಲ್ಲಿ ಯಶಸ್ಸು ಪಡೆಯುತ್ತೀರಿ. ಆರ್ಥಿಕವಾಗಿ ಚೆನ್ನಾಗಿರುವುದರಿಂದ ನಿಮ್ಮ ಸೌಕರ್ಯಗಳು ಹೆಚ್ಚಾಗುವುದು, ವ್ಯಾಪಾರಿಗಳು ಅದೃಷ್ಟದ ಬೆಂಬಲ ಪಡೆಯುತ್ತಾರೆ. ಆಸ್ತಿ ಖರೀದಿಸಬೇಕು ಅಥವಾ ಹಣ ಖರೀದಿಸಬೇಕೆಂಬ ಬಹು ಸಮಯದ ಆಸೆ ಈಡೇರಲಿದೆ.
ಮಕರ ರಾಶಿ
ಮಕರ ರಾಶಿಯವರಿಗೆ 2025ನೇ ವರ್ಷದಲ್ಲಿ ಶನಿ ಸಾಡೇಸಾತಿ ಮುಗಿಯುವುದರಿಂದ ನಿಮಗೆ ವೃತ್ತಿ ಬದುಕಿನಲ್ಲಿ ಅನೇಕ ಹೊಸ ಅವಕಾಶಗಳು ದೊರೆಯಲಿದೆ, ವ್ಯಾಪಾರದಲ್ಲಿ ಲಾಭ ಗಳಿಸಲು ಸಾಧ್ಯವಾಗುವುದು. ಹಣಕಾಸಿನ ವಿಷಯದಲ್ಲಿ ಅದೃಷ್ಟದ ಬೆಂಬಲ ಸಿಗುವುದರಿಂದ ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಪ್ರಯೋಜನ ಪಡೆಯುತ್ತೀರಿ.
ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ, ನೀವು ಆರ್ಥಿಕ ಪ್ರಯೋಜನ ಪಡೆಯುತ್ತೀರಿ, ನಿಮ್ಮ ಸೌಕರ್ಯಗಳು ಹೆಚ್ಚಾಗಲಿದೆ. ಪ್ರತಿಯೊಂದು ಹೆಜ್ಜೆಯಲ್ಲಿಯೂ ಯಶಸ್ಸು ಸಿಗಲಿದೆ, ಹೀಗಾಗಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ.
ಮೀನ ರಾಶಿ
ಮೀನ ರಾಶಿಯಲ್ಲಿ ಗುರು ಮತ್ತು ಶನಿಯ ಪ್ರಭಾವದಿಂದ ಆರ್ಥಿಕ ಪ್ರಯೋಜನಪಡೆಯುತ್ತೀರಿ. ವೃತ್ತಿ ಬದುಕಿನಲ್ಲಿ ಪ್ರಗತಿ ಹೊಂದುತ್ತೀರಿ, ಉದ್ಯೋಗದಲ್ಲಿ ಉತ್ತಮ ಅವಕಾಶಗಳು ದೊರೆಯಲಿದೆ. ವ್ಯಾಪಾರಿಗಳು ಲಾಭ ಗಳಿಸುತ್ತೀರಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications