Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನವೆಂಬರ್ 15 ರಿಂದ ಶನಿ ನೇರ ಚಲನೆ..! ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ..!
ಗ್ರಹಗಳಲ್ಲೇ ಪ್ರಭಾವಶಾಲಿಯಾದ ಶನಿಯು ಉದ್ಯೋಗ ಸ್ಥಾನದ ಅಧಿಪತಿ ಎಂದು ನಂಬಲಾಗಿದೆ. ಹಾಗೆ ಶನಿ ಅತ್ಯಂತ ನಿಧಾನವಾಗಿ ಚಲಿಸುವ ಗ್ರಹವಾಗಿರುವ ಕಾರಣ ಶನಿಯ ಪ್ರಭಾವ ಬಹಳ ಕಾಲದ ವರೆಗೂ ಉಳಿಯುತ್ತದೆ. ಹಾಗೆ ಈ ಮುಂದಿನ ವರ್ಷ ಶನಿಯು ಕುಂಭ ರಾಶಿಯ ಬಿಟ್ಟು ಮೀನ ರಾಶಿಗೆ ತೆರಳಲಿದ್ದಾನೆ. ಹೀಗಾಗಿ ಹಲವು ರಾಶಿಯ ಜನರಿಗೆ ಈ ಕಾಲ ಶುಭವಾಗಲಿದೆ.
ಜ್ಯೋತಿಷ್ಯ ಶಾಸ್ತ್ರಜ್ಞರ ಪ್ರಕಾರ ಮೇಷ, ವೃಷಭ, ಸಿಂಹ, ವೃಶ್ಚಿಕ, ಮಕರ, ಕುಂಭ ರಾಶಿಯವರಿಗೆ ಶನಿಯ ಈ ನೇರ ಚಲನೆಯಿಂದಾಗಿ ಶುಭವಾಗಲಿದೆಯಂತೆ. 2023ರ ಜನವರಿ 17 ರಂದು ಶನಿಯು ಕುಂಭ ರಾಶಿ ಪ್ರವೇಶಿದ್ದ. ಸದ್ಯ ಶನಿಯ ಸಂಚಾರವು ಯಾವೆಲ್ಲಾ ರಾಶಿಗಳಿಗೆ ಶುಭವನ್ನು ತರಲಿದೆ. ಯಾವ ರಾಶಿಯವರಿಗೆ ಇದರಿಂದ ಲಾಭವಾಗಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಹಾಗೆ ನವೆಂಬರ್ 15ರಂದು ಕಾರ್ತಿಕ ಪೂರ್ಣಿಮೆ ಇದ್ದು ಈ ದಿನವನ್ನು ದೇವ ದೀಪಾವಳಿ ಎಂದೂ ಕೂಡ ಕರೆಯುತ್ತಾರೆ. ಈ ದಿನ ದಾನ ಹಾಗೂ ಪವಿತ್ರ ಸ್ನಾನಕ್ಕೆ ಮೀಸಲಿಡಲಾಗಿದೆ. ಇದೇ ದಿನದಂದು ಶನಿ ಗ್ರಹವು ತನ್ನ ಚಲನೆಯನ್ನು ಬದಲಾಯಿಸಲಿದೆ, ನೇರವಾಗಿ ಚಲಿಸಲು ಆರಂಭಿಸಲಿದೆ. ಹೀಗಾಗಿ ಹಲವು ರಾಶಿಗಳಲ್ಲಿ ರಾಜಯೋಗ ಬರಲಿದೆ ಎಂದು ಶಾಸ್ತ್ರ ಹೇಳುತ್ತಿದೆ.
ಮೇಷ ರಾಶಿ
ಮೇಷ ರಾಶಿಯವರಿಗೆ ಶನಿ ಗ್ರಹದ ಈ ನೇರ ಚಲನೆಯು ಲಾಭದಾಯಕವಾಗಿದೆ. ವ್ಯಾಪಾರದಲ್ಲಿ ಪ್ರಗತಿ, ಆರ್ಥಿಕ ಲಾಭ, ಕುಟುಂಬದಲ್ಲಿ ಶಾಂತಿ ಹೀಗೆ ಹತ್ತಾರು ಕಡೆ ನಿಮಗೆ ಲಾಭದಾಯಕವಾಗಿದೆ. ಬಡತನ ಕೊನೆಯಾಗುವ ಕಾರ್ಯ ಸಾಧ್ಯತೆಯ ಅವಕಾಶಗಳಿವೆ. ನಿಮ್ಮ ಜವಾಬ್ದಾರಿ ಕೂಡ ಹೆಚ್ಚಾಗಲಿದೆ. ನಿಮ್ಮ ಆದಾಯದಲ್ಲಿ ಏರಿಕೆಯಾಗಲಿದೆ. ಹಲವು ವರ್ಷದಿಂದ ನೀವಂದುಕೊಂಡಿದ್ದ ಕೆಲಸ ಪೂರ್ಣವಾಗಲಿದೆ.
ವೃಷಭ ರಾಶಿ
ವೃಷಭ ರಾಶಿಯ ಅವಿವಾಹಿತರಿಗೆ ಶುಭ ಸುದ್ದಿ ಕೇಳುವಿರಿ. ದೂರ ಪ್ರಯಾಣದ ಸಾಧ್ಯತೆ ಇದೆ. ನೀವು ಆಸ್ತಿ ಖರೀದಿ, ಮನೆ ಖರೀದಿಯ ಮನಸ್ಸು ಮಾಡಿದ್ದವರಿದ್ದರೆ ಶುಭವಾಗುತ್ತದೆ. ಉದ್ಯೋಸ್ಥರಿಗೆ ಒಳ್ಳೆಯ ದಿನಗಳು ಮುಂದೆ ಕಾದಿವೆ. ಎಲ್ಲಾ ಕೆಲಸದಲ್ಲಿಯೂ ನಿಮಗೆ ಯಶಸ್ಸು ಸಿಗಲಿದೆ. ಕಲಾವಿದರಿಗೆ ಹೆಚ್ಚು ಲಾಭದಾಯಕ ದಿನಗಳು ಕಾದಿವೆ. ನೀವು ಹೂಡಿಕೆ ಮಾಡುವವರಾಗಿದ್ದರೆ ಧನ ಲಾಭದ ನಿರೀಕ್ಷೆ ಇಟ್ಟುಕೊಳ್ಳಬಹುದು.
ಕನ್ಯಾ
ಕನ್ಯಾ ರಾಶಿಯವರಿಗೆ ಅತ್ಯುತ್ತಮ ದಿನಗಳು ಕಾದಿವೆ. ಶನಿಯ ಚಲನೆಯಿಂದಾಗಿ ಕನ್ಯಾ ರಾಶಿಯ ಜನರಲ್ಲಿ ಆರ್ಥಿಕ ಲಾಭ ಹೆಚ್ಚಾಗುತ್ತದೆ. ವಾಹನ ಮಾಲಿಕರಲ್ಲಿ ಲಾಭ ಹೆಚ್ಚುತ್ತದೆ. ಯಾವಾಗಲು ಕೆಲಸದಲ್ಲಿ ತೊಡಗುವಂತೆ ಮಾಡಲಿದೆ. ಶುಭ ಕಾರ್ಯಗಳಿಗೆ ನೀವು ಮುಂದಾಗುತ್ತೀರಿ. ನಿಮ್ಮ ಕೆಲಸಗಳು ನಿಮಗೆ ಲಾಭ ತರಲಿದೆ. ಆರೋಗ್ಯ ಸುಧಾರಣೆ, ಬಾಕಿ ಉಳಿದ ಕೆಲಸಗಳಲ್ಲಿ ಮೇಲುಗೈ ಸಾಧಿಸುವಿರಿ.
ತುಲಾ ರಾಶಿ
ಶನಿಯು ನೇರವಾಗಿ ಕುಂಭ ರಾಶಿಯಲ್ಲಿ ಚಲಿಸುವುದರಿಂದ ತುಲಾ ರಾಶಿಯವರಿಗೆ ಅನುಕೂಲವಾಗುತ್ತದೆ. ವ್ಯಾಪಾರ, ವ್ಯವಹಾರದಲ್ಲಿ ಪ್ರಗತಿ ಕಂಡುಬರಬಹುದು. ಪೋಷಕರು, ಮಡದಿ, ಸಹೋದರ, ಸಹೋದರಿಯರ ಜೊತೆಗಿನ ಸಂಬಂಧ ಮತ್ತಷ್ಟು ಬಲವಾಗುತ್ತದೆ. ಮನೆಗೆ ಹೊಸ ಅತಿಥಿಗಳ ಆಗಮನ, ವಸ್ತುಗಳ ಆಗಮವಾಗಬಹುದು. ನಿಮ್ಮ ಸ್ವಂತ ಅಭಿವೃದ್ಧಿಗೆ ಕೈಗೊಂಡ ಕೆಲಸ ಕೈ ಹಿಡಿಯಲಿದೆ.
ಧನು ರಾಶಿ
ಧನು ರಾಶಿಯವರ ಜೀವನದಲ್ಲಿ ಹೊಸ ಬದಲಾವಣೆಗಳಾಗಬಹುದು. ಪರಸ್ಪರ ಪ್ರೀತಿ ಹೆಚ್ಚಾಗುತ್ತದೆ. ಶನಿಯ ನೇರ ಚಲನೆಯಿಂದಾಗಿ ಆರ್ಥಿಕ ಬಲ ಹೆಚ್ಚಾಗಲಿದೆ. ಹೋಟೆಲ್ ಉದ್ಯಮಿಗಳಲ್ಲಿ ಭಾರೀ ಲಾಭದ ನಿರೀಕ್ಷೆ ಇಟ್ಟುಕೊಳ್ಳಬಹುದು. ಹೊಸ ಆರಂಭಕ್ಕೆ ಅತ್ಯುತ್ತಮ ಸಮಯ ಇದಾಗಿರಲಿದೆ. ಉದ್ಯೋಗ ಬದಲಿಸುವ ನಿಮ್ಮ ಆಲೋಚನೆಗೆ ಪುಷ್ಠಿ ಸಿಗಲಿದೆ.
(ಹಕ್ಕುತ್ಯಾಗ: ಇಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷ್ಯದ ನಂಬಿಕೆಗಳನ್ನು ಆಧರಿಸಿದೆ ಮತ್ತು ಮಾಹಿತಿಗಾಗಿ ಮಾತ್ರ ನೀಡಲಾಗುತ್ತಿದೆ. ಬೋಲ್ಡ್ ಸ್ಕೈ ಕನ್ನಡ ಹಾಗೂ ಲೇಖಕರು ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications