Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಶನಿ ಇರುವ ಕುಂಭ ರಾಶಿಯಲ್ಲಿ ಶಶ ಯೋಗ: 2025ರವರೆಗೆ ಈ 3 ರಾಶಿಗಳಿಗೆ ಅದೃಷ್ಟ ಬಲ ಹೆಚ್ಚಿದೆ
30 ವರ್ಷಗಳ ಬಳಿಕ ಶನಿಯು ಕುಂಭ ರಾಶಿಯಲ್ಲಿ ಶಶ ಯೋಗ ಉಂಟು ಮಾಡಲಿದೆ, ಇಷ್ಟು ದಿನ ಶನಿಯು ರಾಹುವಿನ ಆಡಳಿತದಲ್ಲಿರುವ ಶತಾಭಿಷ ನಕ್ಷತ್ರದಲ್ಲಿ ಇದ್ದಿದ್ದರಿಂದ ಈ ಯೋಗ ರೂಪುಗೊಂಡಿರಲಿಲ್ಲ,
ಆದರೆ ಶನಿಯು ಈಗ ಪೂರ್ವ ಬಾದ್ರಪದ ನಕ್ಷತ್ರದಲ್ಲಿ ಇದೆ, ಇದರಿಂದ ಶಶ ಯೋಗ ಉಂಟಾಗಿದೆ. ಕುಂಭದ ಲಗ್ನ ಮನೆಯಲ್ಲಿ ಶನಿ, ಚತುರ್ಥ, ಏಳನೇ ಅಥವಾ ಹತ್ತನೇ ಮನೆಯಲ್ಲಿ ತುಲಾ, ಮಕರ ರಾಶಿಯಲ್ಲಿ ಇದ್ದರೆ ಶಶ ಯೋಗವ ರೂಪುಗೊಳ್ಳುತ್ತದೆ.

ಇದೊಂದು ಅಪರೂಪದ ಯೋಗವಾಗಿದೆ. ಇದು ರಾಜಯೋಗವಾಗಿದೆ, ವೈದಿಕ ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಅವನ ಜಾತಕದಲ್ಲಿ ಶಶ ರಾಜ್ಯಯೋಗವನ್ನು ಹೊಂದಿರುವ ವ್ಯಕ್ತಿ ಸಮಾಜದಲ್ಲಿ ರಾಜನಂತೆ ಬಾಳುತ್ತಾನೆ ಎಂದು ಹೇಳಲಾಗುವುದು. ಈ ಶಶ ಯೋಗದ ಪ್ರಭಾವ ಶನಿ ರಾಶಿ ಬದಲಾವಣೆ ಮಾಡುವವರಿಗೆ ಇರಲಿದೆ, ಶನಿಯು 2025ರಲ್ಲಿ ರಾಶಿ ಬದಲಾವಣೆ ಮಾಡಲಿದೆ.
ಶಶ ಯೋಗ ಈ ಮೂರು ರಾಶಿಯವರಿಗೆ ಒಳ್ಳೆಯದಿದೆ:
ವೃಶ್ಚಿಕ ರಾಶಿ
ಮೂಲ ತ್ರಿಕೋನ ರಾಶಿಯಲ್ಲಿ ಶನಿಯ ಉಪಸ್ಥಿತಿ ಮತ್ತು ಶಶ ರಾಜ್ಯಯೋಗದಿಂದಾಗಿ ನಿಮಗೆ ತುಂಬಾನೇ ಅನುಕೂಲಕರವಾಗಿದೆ. ಈ ಯೋಗದಿಂದಾಗಿ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಬೆಳವಣಿಗೆಯಾಗಲಿದೆ. ನಿಮ್ಮ ಆದಾಯ ಹೆಚ್ಚಾಗುವುದರಿಂದ ಹೂಡಿಕೆ ಹೆಚ್ಚಾಗಲಿದೆ.
ಈ ಯೋಗದ ಬಲದಿಂದಾಗಿ ವೃತ್ತಿ ಬದುಕು ಕೂಡ ಅದ್ಭುತವಾಗಿರಲಿದೆ. ಈ ಸಮಯದಲ್ಲಿ ನಿಮ್ಮ ಸ್ಥಾನದಲ್ಲಿ ಬಡ್ತಿ ಪಡೆಯುತ್ತೀರಿ, ನಿಮ್ಮ ಸಂಬಳ ಹೆಚ್ಚಾಗಲಿದೆ. ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ಒಳ್ಳೆಯ ಬೆಳವಣಿಗೆಯಾಗುವುದರಿಂದ ಧನ ಲಾಭ ಉಂಟಾಗಲಿದೆ.
ಆರೋಗ್ಯ ಚೆನ್ನಾಗಿರಲಿದೆ, ಇದರಿಂದ ನೀವು ಕೆಲಸದ ಕಡೆಗೆ ಸಂಪೂರ್ಣ ಗಮನ ನೀಡಲು ಸಾಧ್ಯವಾಗುವುದು. ಕೌಟುಂಬಿಕ ಜೀವನ ಚೆನ್ನಾಗಿರಲಿದೆ, ನಿಮ್ಮ ಹಾಗೂ ಸಂಗಾತಿಯ ನಡುವೆ ಒಳ್ಳೆಯ ಬಾಂಧವ್ಯ ಇರಲಿದೆ. ನಿಮ್ಮಿಬ್ಬರ ನಡುವೆ ಪ್ರೀತಿ, ಹೊಂದಾಣಿಕೆ ಹೆಚ್ಚಾಗಲಿದೆ.
ಇನ್ನು ನ್ಯಾಯಾಲಯದಲ್ಲಿ ಪ್ರಕರಣವಿದ್ದರೆ ಈ ಸಮಯದಲ್ಲಿ ತೀರ್ಪು ನಿಮ್ಮ ಪರವಾಗಿ ಬರಲಿದೆ.
ಮಕರ ರಾಶಿ
ಮಕರ ರಾಶಿಯವರಿಗೆ ಶಶ ಯೋಗ ಇರುವುದರಿಂದ ಅದೃಷ್ಟದ ಸಂಪೂರ್ಣ ಬೆಂಬಲ ನಿಮಗಿರಲಿದೆ. ಕೆಲಸದಲ್ಲಿ ಯಶಸ್ಸು ಸಿಗಲಿದೆ. ಈ ಸಮಯದಲ್ಲಿ ನೀವು ಊಹಿಸಿದಂತೆ ಕೆಲಸ ನಡೆಯುವುದರಿಂದ ಕೆಲಸದಲ್ಲಿ ಯಶಸ್ವಿಯಾಗುತ್ತೀರಿ, ನಿಮ್ಮ ಸಂಪಾದನೆ ಹೆಚ್ಚಾಗಲಿದೆ.
ಇನ್ನು ನೀವು ತುಂಬಾ ಸಮಯದಿಂದ ವಾಹನ, ಆಸ್ತಿ, ಭೂಮಿ ಹೀಗೆ ನಿಮ್ಮ ಸೌಕರ್ಯ ಹೆಚ್ಚಿಸುವ ವಸ್ತುಗಳ ಖರೀದಿಗೆ ಬಯಸುತ್ತಿದ್ದರೆ ಈ ಸಮಯದಲ್ಲಿ ಸಾಧ್ಯವಾಗುವುದು. ವೃತ್ತಿ ಬದುಕಿನಲ್ಲಿ ಪ್ರಗತಿ ಕಂಡು ಬರುವುದು, ಬಡ್ತಿ ದೊರೆಯಲಿದೆ, ವ್ಯಾಪಾರಸ್ಥರ ವಹಿವಾಟು ಹೆಚ್ಚಾಗಲಿದೆ.
ಕುಟುಂಬ ಜೀವನದ ಬಗ್ಗೆ ನೋಡುವುದಾದರೆ ಸಮೃದ್ಧಿ ಮಾತ್ರವಲ್ಲ ಸಮತೋಷ ಕೂಡ ಹೆಚ್ಚಾಗಲಿದೆ. ಚೆನ್ನಾಗಿರಲಿದೆ, ಪ್ರೇಮಿಗಳು ವಿವಾಹದ ಬಗ್ಗೆ ಆಲೋಚಿಸಬಹುದು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದರೆ ಲಾಭ ಗಳಿಸುತ್ತೀರಿ. ಆರೋಗ್ಯ ಚೆನ್ನಾಗಿರಲಿದೆ.
ಕುಂಭ ರಾಶಿ
30 ವರ್ಷಗಳ ನಂತರ, ಕುಂಭ ರಾಶಿಯಲ್ಲಿ ಶನಿಯ ಉಪಸ್ಥಿತಿಯಿಂದಾಗಿ ಶಶ ರಾಜಯೋಗ ಉಂಟಾಗಿದೆ. 2025 ರ ವೇಳೆಗೆ ಶನಿಯ ರಾಶಿ ಬದಲಾವಣೆಯಿಂದಾಗಿ, ಈ ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ನಿಮಗೆ ಸಿಗಲಿದೆ. ಉನ್ನತ ಶಿಕ್ಷಣ ವಿದೇಶದಲ್ಲಿ ಪಡೆಯಲು ಬಯಸುತ್ತಿದ್ದರೆ ನಿಮ್ಮ ಆಸೆ ನೆರವೇರಲಿದೆ. ಈ ಸಾಗಣೆಯು ನಿಮ್ಮ ವೃತ್ತಿಜೀವನದಲ್ಲಿ ಬದಲಾವಣೆಗಳನ್ನು ತರಬಹುದು. ನಿಮ್ಮ ಸಂಬಳ, ಕೆಲಸದಲ್ಲಿ ನಿಮ್ಮ ಸ್ಥಾನ ಹೆಚ್ಚಾಗಲಿದೆ. ಸಮಾಜದಲ್ಲಿಯೂ ನಿಮ್ಮ ಸ್ಥಾನ ಮಾನ ಹೆಚ್ಚಾಗಲಿದೆ.
ನೀವು ಅಪಾರ ಆರ್ಥಿಕ ಲಾಭ ಪಡೆಯುತ್ತೀರಿ. ನ್ಯಾಯಾಲಯದ ಪ್ರಕರಣಗಳಿಂದ ಮುಕ್ತಿ ಪಡೆಯಬಹುದು. ವಿದೇಶದಲ್ಲಿ ವ್ಯಾಪಾರ ಮಾಡುವವರು ಒಳ್ಳೆಯ ಲಾಭ ಗಳಿಸುತ್ತಾರೆ, ಆರೋಗ್ಯ ಕೂಡ ಚೆನ್ನಾಗಿರಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications