Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
500 ವರ್ಷದ ಬಳಿಕ ಶನಿ ನೇರ ಚಲನೆ ಗುರು ಹಿಮ್ಮುಖ ಚಲನೆ: ಇವರಿಗೆಲ್ಲಾ ಕಾದಿದೆ ಜಾಕ್‌ಪಾಟ್! ಅದೃಷ್ಟ ಬದಲು!
ವೈದಿಕ ಜ್ಯೋತಿಷ್ಯದ ಪ್ರಕಾರ ನವೆಂಬರ್ ತಿಂಗಳು ಜ್ಯೋತಿಷ್ಯ ದೃಷ್ಟಿಕೋನದಿಂದ ಬಹಳ ವಿಶೇಷವಾಗಿರುತ್ತದೆ. ಈ ತಿಂಗಳಲ್ಲಿ ಹಲವು ರಾಶಿಗಳಲ್ಲಿನ ಚಲನೆಯನ್ನು ನೋಡಬಹುದು. ಇದು ಹಲವರಿಗೆ ಉತ್ತಮ ಲಾಭಗಳ ತರುವ ಮುನ್ಸೂಚನೆಯಾಗಿರಲಿದೆ. ಈ ನವೆಂಬರ್‌ನಲ್ಲಿ ಹಲವು ಗ್ರಹಗಳ ಸ್ಥಾನಪಲ್ಲಟ ಆಗುವುದು ನೋಡಬಹುದು. ಹಾಗೆ ಶನಿ ಕೂಡ ಈ ನವೆಂಬರ್‌ನಲ್ಲಿ ಚಲಿಸುವುದು ಹಲವು ವಿಶೇಷ ವಿದ್ಯಮಾನಗಳಿಗೆ ಕಾರಣವಾಗಲಿದೆ.
ಶನಿಯು ಮೀನ ರಾಶಿಯಲ್ಲಿ ನೇರವಾಗಿ ಚಲಿಸುತ್ತಾನೆ. ಈ ನಡುವೆ ಗುರುವು ಈ ತಿಂಗಳು ಹಿಮ್ಮುಖವಾಗಿ ಚಲಿಸುತ್ತಾನೆ. ಶನಿಯ ನೇರ ಹಾಗೂ ಗುರುವಿನ ಹಿಮ್ಮುಖ ಚಲನೆಯು ಹಲವರಿಗೆ ಅದೃಷ್ಟ ತರಲಿದೆ. ಗುರು ಅದೃಷ್ಟಕರ ಗೃಹವೆಂದು ಹಾಗೆ ಶನಿ ಕರ್ಮದ ಫಲ ನೀಡುವ ಗ್ರಹವೆಂದು ಪರಿಗಣಿಸಲಾಗಿದೆ.

ಹಾಗಾದ್ರೆ ಶನಿ ನೇರ ಚಲನೆ ಹಾಗೆ ಗುರುವಿನ ಹಿಮ್ಮುಖ ಚಲನೆಯ ಪರಿಣಾಮವಾಗಿ ಯಾರಿಗೆಲ್ಲಾ ಶುಭವಾಗುತ್ತಿದೆ ಅನ್ನೋದನ್ನು ತಿಳಿದುಕೊಳ್ಳೋಣ. ಕರ್ಮ ಮತ್ತು ನ್ಯಾಯದ ಗ್ರಹ ಶನಿದೇವ ಮೀನ ರಾಶಿಯಲ್ಲಿದ್ದಾಗ ನೇರ ಚಲನೆಗೆ ಒಳಗಾಗುತ್ತಾನೆ. ಒಂದೇ ತಿಂಗಳಲ್ಲಿ ಎರಡು ಪ್ರಮುಖ ಗ್ರಹಗಳ ಚಲನೆಯಲ್ಲಿನ ಬದಲಾವಣೆಯು ಕೆಲವು ರಾಶಿ ಜನರಿಗೆ ವಿಶೇಷವಾಗಿ ಪರಿಣಾಮ ಬೀರುತ್ತದೆ, ಸಂಭಾವ್ಯವಾಗಿ ಅದೃಷ್ಟವನ್ನು ಹೆಚ್ಚಿಸುತ್ತದೆ.
ಕುಂಭ ರಾಶಿ
ಶನಿ ಮತ್ತು ಗುರುವಿನ ನೇರ ಮತ್ತು ಹಿಮ್ಮುಖ ಚಲನೆಗಳು ಅನುಕೂಲಕರವೆಂದು ಸಾಬೀತಾಗಲಿದೆ. ಶನಿಯು ಕುಂಭ ರಾಶಿಯ ಎರಡನೇ ಮನೆಯಲ್ಲಿ ಚಲಿಸುತ್ತಿದ್ದರೆ, ಗುರುವು ಆರನೇ ಮನೆಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿದ್ದಾನೆ. ನಿಮ್ಮಲ್ಲಿ ಅನಿರೀಕ್ಷಿತ ಲಾಭಗಳು ಹೆಚ್ಚಾಗಲಿದೆ. ಬಹುದಿನದಿಂದ ಎದುರಿಸಿದ್ದ ಸಮಸ್ಯೆಗಳು ನಿವಾರಣೆಯಾಗುವ ಸಮಯವಿದು. ಉದ್ಯಮಿಗಳು ಆರ್ಥಿಕ ಸವಾಲುಗಳನ್ನು ಎದುರಿಸುವುದಿಲ್ಲ. ಅಪೇಕ್ಷಿತ ವೃತ್ತಿ ಬಡ್ತಿ ಮತ್ತು ಆರ್ಥಿಕ ಲಾಭದ ಸಾಧ್ಯತೆಯಿದೆ. ನೀವು ಹೆಚ್ಚಿದ ಸಂತೋಷ ಮತ್ತು ಸಮೃದ್ಧಿಯನ್ನು ಅನುಭವಿಸುವಿರಿ. ನಿಮ್ಮ ಸಿಲುಕಿರುವ ಹಣ ನಿಮ್ಮ ಕೈ ಸೇರಲಿದೆ.
ಮಿಥುನ ರಾಶಿ
ಗುರುವಿನ ಹಿಮ್ಮುಖ ಚಲನೆ ಮತ್ತು ಶನಿಯ ನೇರ ಚಲನೆ ನಿಮಗೆ ಸಕಾರಾತ್ಮಕವೆಂದು ಸಾಬೀತುಪಡಿಸಬಹುದು. ನೀವು ಹೊಸ ಆಸ್ತಿ ಖರೀದಿಯಲ್ಲಿ ಆಸಕ್ತಿ ಹೊಂದಬಹುದು. ನಿಮ್ಮ ಉದ್ಯೋಗ ಮತ್ತು ವೃತ್ತಿಯಲ್ಲಿ ನೀವು ಬೆಳವಣಿಗೆಯನ್ನು ನೋಡುತ್ತೀರಿ. ಸಾಮಾಜಿಕ ಪ್ರತಿಷ್ಠೆ ಹೆಚ್ಚಾಗುತ್ತದೆ. ಬಡ್ತಿಯ ಸಾಧ್ಯತೆಗಳಿವೆ. ಅದೇ ಸಮಯದಲ್ಲಿ ಕೆಲಸದ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ. ನಿಮ್ಮ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ವ್ಯವಹಾರವು ಪ್ರಗತಿಯಾಗುತ್ತದೆ. ತಂದೆಯೊಂದಿಗಿನ ನಿಮ್ಮ ಸಂಬಂಧವು ಬಲವಾಗಿರುತ್ತದೆ. ಮಕ್ಕಳ ಭವಿಷ್ಯ ಕುರಿತಾದ ದೊಡ್ಡ ನಿರ್ಧಾರ ತೆಗೆದುಕೊಳ್ಳಬಹುದು.
ಮಕರ ರಾಶಿ
ಶನಿಯ ನೇರ ಚಲನೆ ಮತ್ತು ಗುರುವಿನ ಹಿಮ್ಮುಖ ಚಲನೆಯು ಮಕರ ರಾಶಿಯವರಿಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಶನಿಯು ನಿಮ್ಮ ರಾಶಿಯಿಂದ ಮೂರನೇ ಮನೆಯಲ್ಲಿ ಹಿಮ್ಮುಖವಾಗಿದ್ದರೆ, ಗುರುವು ಏಳನೇ ಮನೆಯಲ್ಲಿ ಹಿಮ್ಮುಖವಾಗಿರುತ್ತದೆ. ಈ ಸಮಯದಲ್ಲಿ ನಿಮ್ಮಲ್ಲಿ ಹಲವು ಧನಾತ್ಮಕ ವಿಚಾರಗಳು ನಡೆಯಲಿವೆ. ವೈವಾಹಿಕ ಜೀವನದಲ್ಲಿ ಸಮಸ್ಯೆಗಳ ಎದುರಿಸಿದ್ದರೆ ಈ ಸಮಯದಲ್ಲಿ ನಿವಾರಣೆಯಾಗಲಿದೆ. ದೇಶ ಮತ್ತು ವಿದೇಶ ಪ್ರಯಾಣಿಸುವುದು ಸಹ ಸಾಧ್ಯ. ವಾಹನ ಅಥವಾ ಆಸ್ತಿಯನ್ನು ಸಹ ಖರೀದಿಸಬಹುದು. ಆಧ್ಯಾತ್ಮಿಕ ವಿಚಾರಗಳಲ್ಲಿ ನಿಮಗೆ ಒಲವು ಹೆಚ್ಚಾಗಲಿದೆ. ಆಪ್ತರಿಂದ ಬರಬೇಕಿದ್ದ ಹಣ ನಿಮ್ಮ ಕೈ ಸೇರಬಹುದು. ಉದ್ಯೋಗ ಸಂಬಂಧಿ ಅಡ್ಡಿಯೊಂದು ನಿವಾರಣೆಯಾಗಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದು)



Click it and Unblock the Notifications