Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಂಗಳನ ಮೇಲೆ ಶನಿಯ ಮೂರನೇ ದೃಷ್ಟಿ: ಈ 4 ರಾಶಿಯವರು ಜುಲೈ 12ರವರೆಗೆ ಜಾಗ್ರತೆ
ನವಗ್ರಹಗಳಲ್ಲಿ ಶೌರ್ಯ, ಕ್ರೋಧ ಗ್ರಹ ಎಂದು ಪರಿಗಣಿಸಿರುವ ಮಂಗಳನು ಜೂನ್ 1ಕ್ಕೆ ಮೇಷ ರಾಶಿಯಲ್ಲಿದೆ. ಮಂಗಳ ಜುಲೈ 12ರವರೆಗೆ ಇದೇ ರಾಶಿಯಲ್ಲಿ ಇರಲಿದೆ. ಶನಿಯು ಕುಂಭ ರಾಶಿಯಲ್ಲಿದೆ.
ಮಂಗಳ ಮೇಷ ರಾಶಿಯಲ್ಲಿರುವಾಗ ಶನಿಯ ಮೂರನೇ ದೃಷ್ಟಿ 3ನೇ ಮನೆಯ ಮೇಲೆ ಇದೆ. ಶನಿಯ ಈ ದೃಷ್ಟಿ ಶುಭವೆಂದು ಪರಿಗಣಿಸುವುದಿಲ್ಲ, ಹಾಗಾಗಿ ಜುಲೈ 12ರವರೆಗೆ ಈ ರಾಶಿಯವರು ಕೆಲ ಸವಾಲುಗಳನ್ನು ಎದುರಿಸಬಹುದು:

ಕರ್ಕ ರಾಶಿ
ನೀವು ಈ ಮಾಸ ಹಲವು ಸವಾಲುಗಳನ್ನು ಎದುರಿಸಿರಬಹುದು, ಅದಕ್ಕೆ ಈ ಗ್ರಹಗಳ ಸ್ಥಾನವೂ ಪ್ರಮುಖ ಕಾರಣವಾಗಿದೆ. ಹೀಗಾಗಿ ಜೀವನದಲ್ಲಿ ಏರಳಿತಗಳಿರಲಿದೆ, ಇದು ಜುಲೈ 12ರವರೆಗೆ ಮುಂದುವರೆಯಲಿದೆ. ಈ ಅವಧಿಯಲ್ಲಿ ವೃತ್ತಿ ಬದುಕಿನಲ್ಲಿ ಹಲವು ಸವಾಲುಗಳನ್ನು ಎದುರಿಸಬೇಕಾಗುವುದು. ಆರ್ಥಿಕವಾಗಿ ಈ ಅವಧಿ ಅಷ್ಟೊಂದು ಅನುಕೂಲಕರವಲ್ಲ, ಈ ಅವಧಿಯಲ್ಲಿ ನಿಮ್ಮ ಪ್ರಯತ್ನಕ್ಕೆ ನಿರೀಕ್ಷೆಗೆ ತಕ್ಕ ಫಲ ಸಿಗಲಿಲ್ಲ, ಹಾಗಂತ ನಿರಾಸೆ ಬೇಡ, ಮಂಗಳ ವೃಷಭ ರಾಶಿಗೆ ಸಂಚರಿಸಿದಾಗ ಈ ಸಮಸ್ಯೆಗಳಿಂದ ಪರಿಹಾರ ಸಿಗಲಿದೆ.
ಈ ಅವಧಿಯಲ್ಲಿ ಆರ್ಥಿಕ ವಿಷಯದ ಬಗ್ಗೆ ಜಾಗ್ರತೆವಹಿಸಬೇಕು. ವೈವಾಹಿಕ,ಕುಟುಂಬ ಜೀವನದಲ್ಲಿ ಅನಗ್ಯತ ಟೆನ್ಷನ್ ಇರಬಹುದು. ಇವುಗಳ ಜೊತೆಗೆ ಆರೋಗ್ಯ ಸಮಸ್ಯೆಗಳು ಕೂಡ ಕಂಡು ಬರುವುದು. ಉದ್ಯೋಗಿಗಳು ಕೆಲಸದ ಜಾಗದಲ್ಲಿ ಯಾವುದೇ ಸಮಸ್ಯೆಗೆ ಸಿಲುಕಿಕೊಳ್ಳದಂತೆ ಜಾಗ್ರತೆವಹಿಸಿ.
ತುಲಾ ರಾಶಿ
ತುಲಾ ರಾಶಿಯವರು ಮಂಗಳನ ಮೇಲೆ ಶನಿಯ ದೃಷ್ಟಿಯಿಂದಾಗಿ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಕುಟುಂಬದಲ್ಲಿ ಜಗಳ, ಭಿನ್ನಾಭಿಪ್ರಾಯ ಈ ಬಗೆಯ ಸಮಸ್ಯೆಗಳು ಕಂಡು ಬರುವುದು. ಆಸ್ತಿ ವಿಷಯಕ್ಕೆ ಮನೆಯವರಲ್ಲಿ ವೈಮನಸ್ಸು ಉಂಟಾಗುವುದು.
ಆರ್ಥಿಕ ದೃಷ್ಟಿಯಿಂದಲೂ ಈ ಅವಧಿ ಷ್ಟೊಂದು ಅನುಕೂಲಕರವಲ್ಲ, ಈ ಅವಧಿಯಲ್ಲಿ ಆರ್ಥಿಕ ನಷ್ಟ ಕೂಡ ಉಂಟಾಗಬಹುದು, ಖರ್ಚುಗಳು ಹೆಚ್ಚಿರಲಿದೆ, ವೃತ್ತಿ ಬದುಕಿನಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಕೆಲವೊಂದು ಬೆಲೆ ಬಾಳುವ ವಸ್ತುಗಳು ಕಳೆದು ಹೋಗಬಹುದು, ಹಾಗಾಗಿ ಜುಲೈ 12ರವರೆಗೆ ಈ ಬಗ್ಗೆ ಜಾಗ್ರತೆವಹಿಸಿ.
ಇನ್ನು ಅವಾಹಿತರಿಗೆ ಮದುವೆ ಸಂಬಂಧ ಬಂದರೆ ಗಡಿಬಿಡಿಯಿಂದ ನಿರ್ಧಾರ ತೆಗೆದುಕೊಳ್ಳಬೇಡಿ, ಇನ್ನೂ ಸ್ವಲ್ಪ ಕಾಯುವುದು ಒಳ್ಳೆಯದು. ಇನ್ನು ಹೂಡಿಕೆಗೂ ಈ ಅವಧಿ ಅಷ್ಟೊಂದು ಅನುಕೂಲಕರವಲ್ಲ.
ವೈವಾಹಿಕ ಜೀವನದಲ್ಲಿ ಉತ್ತಮ ಬಾಂಧವ್ಯ ಕಾಪಾಡಲು ಪ್ರಯತ್ನಿಸಿ. ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಬೇಡ.
ವೃಶ್ಚಿಕ ರಾಶಿ
ಮಂಗಳದಲ್ಲಿ ಶನಿಯ ಅಶುಭ ಪ್ರಭಾವದಿಂದಾಗಿ ವೃಶ್ಚಿಕ ರಾಶಿಯವರು ನಕಾರಾತ್ಮಕ ಪರಿಣಾಮಗಳನ್ನು ಎದುರಿಸಬೇಕಾಗಬಹುದು. ಈ ಸಮಯದಲ್ಲಿ ಬೇರೆ ಕಡೆ ಕೆಲಸ ಹುಡುಕುತ್ತಿದ್ದರೆ ಈ ಅವಧಿ ನಿಮಗೆ ನಿರಾಸೆ ತರಬಹುದು. ಇರುವ ಕೆಲಸದಲ್ಲಿ ಅತ್ಯಧಿಕ ಒತ್ತಡ ಇರಲಿದೆ. ಹೀಗಾಗಿ ಈ ಅವಧಿ ಆಯಾಸದಿಂದ ಕೂಡಿರಲಿದೆ.
ಸ್ವಂತ ವ್ಯವಹಾರ ನಡೆಸುತ್ತಿರುವವರೆಗೂ ಈ ಅವಧಿ ಅಷ್ಟೊಂದು ಅನುಕೂಲಕರವಲ್ಲ, ಈ ಅವಧಿಯಲ್ಲಿ ಆರ್ಥಿಕ ಸವಾಲುಗಳನ್ನು ಎದುರಿಸಬಹುದು. ಜುಲೈ 12ರ ನಂತರ ಧನಾತ್ಮಕ ಬದಲಾವಣೆಯನ್ನು ಕಾಣುತ್ತೀರಿ.
ಈ ಅವಧಿಯಲ್ಲಿ ಕುಟುಂಬದಲ್ಲಿ ಕೆಲ ಸಮಸ್ಯೆಗಳು ಎದುರಾಗಬಹುದು, ಏನೇ ಆಗಲಿ ಎಲ್ಲವನ್ನು ಸಮಧಾನದಿಂದ ಬಗೆಹರಿಸಲು ಪ್ರಯತ್ನಿಸಿ. ಆಸ್ಪತ್ರೆಗೆ ಹೆಚ್ಚು ಹಣ ಖರ್ಚಾಗುವುದು.
ಮಕರ ರಾಶಿ
ಈ ಅವಧಿಯಲ್ಲಿ ಮಕರ ರಾಶಿಯವರು ಉತ್ತಮ ಪ್ರಯೋಜನ ಪಡೆಯಲು ಕಷ್ಟಪಡಬೇಕಾಗುತ್ತದೆ. ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಗತಿಯ ವೇಗವು ನಿಧಾನವಾಗಲಿದೆ. ನೀವು ನಿಮ್ಮ ಸ್ವಂತ ವ್ಯವಹಾರ ಮಾಡುತ್ತಿದ್ದರೆ ವ್ಯವಹಾರದಲ್ಲಿ ಬಹಳ ಜಾಗ್ರತೆವಹಿಸಿ. ಈ ಅವಧಿಯಲ್ಲಿ, ನೀವು ವ್ಯಾಪಾರದಲ್ಲಿ ಏರಳಿತ ಎದುರಿಸಬಹುದು. ಈ ಅವಧಿಯಲ್ಲಿ ಕೆಲಸದ ಒತ್ತಡ ಅಧಿಕವಿರಲಿದೆ.
ಕೌಟುಂಬಿಕ ಜೀವನದಲ್ಲಿ ನಡೆಯುತ್ತಿರುವ ಸಮಸ್ಯೆಗಳು ನಿಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರುವುದು. ಆರೋಗ್ಯ ಸಮಸ್ಯೆಗಳು ಕೂಡ ಹೆಚ್ಚಿರಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications