Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಫೆ.11ಕ್ಕೆ ಕುಂಭದಲ್ಲಿ ಶನಿ ಅಸ್ತಂಗತಿ: ಮಾರ್ಚ್ 29ರವರೆಗೆ ಈ 5 ರಾಶಿಯವರು ಜಾಗ್ರತೆ
ಶನಿಯು ಫೆಬ್ರವರಿ 11ಕ್ಕೆ ಅಸ್ತವಾಗಿದೆ, ಮಾರ್ಚ್ 29ರವರೆಗೆ ಅಸ್ತಂಗತವಾಗಲಿದೆ, ಶನಿ ಅಸ್ತಂಗತವಾದಾಗ ಅದರ ಪ್ರಭಾವ ಕೆಲ ರಾಶಿಗಳಿಗೆ ಅಷ್ಟು ಒಳ್ಳೆಯದಲ್ಲ, ಮಾರ್ಚ್ 29ರವರೆಗೆ ಶನಿಯ ಪ್ರಭಾವ ಬಗ್ಗೆ ಈ 5 ರಾಶಿಯವರು ಜಾಗ್ರತೆ, ಶನಿಗೆ ಪರಿಹಾರ ಮಾಡಿದರೆ ಒಳ್ಳೆಯದು:

ತುಲಾ ರಾಶಿ
ವೃತ್ತಿ ಜೀವನದಲ್ಲಿ ಸಮಸ್ಯೆಗಳು ಎದುರಾಗಬಹುದು, ಉದ್ಯೋಗದಲ್ಲಿ ಅತೃಪ್ತಿ ಕಾಡಬಹುದು. ವ್ಯಾಪಾರಿಗಳಿಗೆ ಲಾಭ ಗಳಿಸಲು ಕಷ್ಟವಾಗಬಹುದು, ನಿಮ್ಮ ವ್ಯಾಪಾರದ ಕಡೆ ತುಂಬಾನೇ ಗಮನಹರಿಸಬೇಕು. ಈ ವಾದಿಯಲ್ಲಿ ಆರೋಗ್ಯದ ಬಗ್ಗೆ ಗಮನಹರಿಸಿ.
ವೃಶ್ಚಿಕ ರಾಶಿ
ಮನೆಯಲ್ಲಿ ಈ ಅವಧಿಯಲ್ಲಿ ಕೆಲ ಸಮಸ್ಯೆಗಳು ಇರಬಹುದು, ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಬೇಕು. ವೃತ್ತಿ ಜೀವನದಲ್ಲಿ ಅತೃಪ್ತಿ ಇರಬಹುದು, ವ್ಯಾಪಾರ ಮಾಡುತ್ತಿದ್ದರೆ, ನೀವು ಹೆಚ್ಚು ಕಳೆದುಕೊಳ್ಳಬಹುದು, ಲಾಭ ಗಳಿಸಲು ಕಷ್ಟವಾಗಬಹುದು, ಆರೋಗ್ಯ ಸಮಸ್ಯೆಗಳು ಕಾಡಬಹುದು.
ಧನು ರಾಶಿ
ಶನಿ ಅಸ್ತಂಗತವಾಗಿರುವ ಈ ಅವಧಿಯಲ್ಲಿ ನಿಮಮ್ ಪ್ರಯತ್ನಗಳಲ್ಲಿ ವಿಳಂಬವನ್ನು ಎದುರಿಸಬಹುದು. ವೃತ್ತಿಪರ ಜೀವನದಲ್ಲಿ ಈ ಅವಧಿ ಕಠಿಣವಾಗಿರುತ್ತದೆ. ಈ ತಿಂಗಳಲ್ಲಿ ನೀವು ಸಹೋದ್ಯೋಗಿಗಳಿಂದ ಅಡೆತಡೆಗಳು ಮತ್ತು ತೊಂದರೆಗಳನ್ನು ಎದುರಿಸಬಹುದು. ಹಣದಲ್ಲಿ ಮಿಶ್ರಫಲ, ಲಾಭ-ನಷ್ಟ ಎರಡೂ ಇದೆ, ಈ ಸಮಯದಲ್ಲಿ ಸಾಲವನ್ನೂ ಕೂಡ ಮಾಡಬೇಕಾಗುವುದು. ಆರೋಗ್ಯದ ದೃಷ್ಟಿಯಿಂದ, ಈ ಅವಧಿಯಲ್ಲಿ ಕೈ, ಕಾಲುಗಳಲ್ಲಿ ನೋವು ಕಾಣಿಸಿಕೊಳ್ಳಬಹುದು.
ಕುಂಭ ರಾಶಿ
ಶನಿ ಅಸ್ತಂಗತವಾಗಿರುವ ಈ ಅವಧಿಯಲ್ಲಿ ನಿಮ್ಮ ಆರೋಗ್ಯದ ಬಗ್ಗೆ ನೀವು ಹೆಚ್ಚು ಕಾಳಜಿ ವಹಿಸಬೇಕಾಗಬಹುದು. ನಿಮ್ಮ ವೃತ್ತಿ ಅಥವಾ ವ್ಯವಹಾರಕ್ಕೆ ಸಂಬಂಧಿಸಿದಂತೆ ನೀವು ಹೆಚ್ಚಿನ ಸವಾಲುಗಳನ್ನು ಎದುರಿಸಬಹುದು. ವ್ಯಾಪಾರಿಗಳಿಗೆ ಹಣ ಗಳಿಸಲು ಕಷ್ಟವಾಗಬಹುದು, ಈ ಅವಧಿಯಲ್ಲಿ ಯಾವುದೇ ಹೊಸ ಹೂಡಿಕೆ ಮಾಡದಿದ್ದರೆ ಒಳ್ಳೆಯದು. ವೈವಾಹಿಕ ಜೀವನದಲ್ಲಿಯೂ ಅಹಂನಿಂದಾಗಿ ಸಮಸ್ಯೆಗಳು ಹೆಚ್ಚಾಗುವುದು.
ಮೀನ ರಾಶಿ
ಈ ಅವಧಿಯಲ್ಲಿ ಲಾಭ ಗಳಿಸಲು ಕಷ್ಟವಾಗುವುದು, ವ್ಯಾಪಾರಿಗಳು ನೀವು ಲಾಭದ ಕೊರತೆಯನ್ನು ಎದುರಿಸಬಹುದು . ಕೆಲಸದಲ್ಲಿ ನೀವು ಎಷ್ಟೇ ಕಷ್ಟ ಪಟ್ಟರೂ ಬಯಸಿದ ಪ್ರತಿಫಲ ಸಿಗುವುದು ಕಷ್ಟ. ಹಣದ ಮುಂಭಾಗದಲ್ಲಿ, ನೀವು ಹಠಾತ್ ರೀತಿಯಲ್ಲಿ ಹಣದ ನಷ್ಟವನ್ನು ಎದುರಿಸಬಹುದು. ಭವಿಷ್ಯದ ಚಿಂತೆ ಕಾಡುವುದು, ನೀವು ವ್ಯಾಪಾರ ಮಾಡುತ್ತಿದ್ದರೆ, ಹೆಚ್ಚು ನಷ್ಟವನ್ನು ಎದುರಿಸಬಹುದು. ಕುಟುಂಬದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರಬಹುದು.
ಈ ಶನಿ ಮಂತ್ರ ಪಠಿಸಿ.
ಓಂ ಪ್ರಾಂ ಪ್ರೀಂ ಪ್ರೌಂ ಸಃ ಶನೈಶ್ಚರಾಯ ನಮಃ ಓಂ ಐಂಗ್ ಹ್ರಿಂಗ್ ಶ್ರೀಂಗ್ ಶಂಗ್ ಶನೈಶ್ಚರಾಯ ನಮಃ ಓಂ ಓಂ ಹಿಂ ಶಂ ಶನಯೇ ನಮಃ ಓಂ ಶಂ ಶನೈಶ್ಚರಾಯ ನಮಃ
ಶನಿ ಏಕಾಶರಿ ಮಂತ್ರ
"ಓಂ ಶಂ ಶನೈಶ್ಚರಾಯ ನಮಃ
ಶನಿ ಗಾಯತ್ರಿ ಮಂತ್ರ
"ಓಂ ಶನೈಶ್ಚರಾಯ ವಿದ್ಮಹೇ ಸೂರ್ಯಪುತ್ರಾಯ ಧೀಮಹೀ ತನ್ನೋ ಮಂದಃ ಪ್ರಚೋದಯಾತ್"
ಸಾಡೇಸಾತಿ ಶನಿ ಮಂತ್ರ "ಶ್ರೀ ನೀಲಾಂಜನ ಸಮಾಭಾಸಂ ರವಿ ಪುತ್ರಂ ಯಮಾಗ್ರಜಂ ಛಾಯಾ ಮಾರ್ತಾಂಡ ಸಂಭೂತಾಂ ತಂ ನಮಾಮಿ ಶನೈಶ್ಚರಂ" "ಓಂ ಶನ್ನೋದೇವಿರಾಭಿಷ್ಟಯ ಆಪೋ ಭವಂತು ಪಿತಯೇ ಶನ್ಯೋರಭಿಸ್ತವಂತು ನಃ, ಓಂ ಶಂ ಶನೈಶ್ಚರಾಯ ನಮಃ"
ಶನಿ ವೈದಿಕ ಮಂತ್ರ "ಓಂ ಶನ್ನೋ ದೇವಿರಭಿಷ್ಟ್ದಾಪೋ ಭವಂತು ಪಿತಯೇ"
ಶನಿದೋಷ ನಿವಾರಣೆಗೆ ಇತರ ಪರಿಹಾರಗಳು
- ಶನಿ ಮಾಲೆ ಧರಿಸಿ
- ಶನಿವಾರ ಕಪ್ಪು ಎಳ್ಳು ದಾನ ಮಾಡಿ * ಶನಿಯ ಉಂಗುರ ಧರಿಸಿ (
- ಹನುಮಾನ್ ಚಾಲೀಸ ಪಠಿಸಿ
- ಶನಿವಾರ ಉಪವಾಸವಿದ್ದು ಶನಿದೇವನನ್ನು ಆರಾಧಿಸಿ
- ಬಡವರಿಗೆ ನಿಮ್ಮಿಂದಾದ ಸಹಾಯ ಮಾಡಿ
- ನೀಲಮಣಿ ಧರಿಸಿ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications



