Latest Updates
-
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ!
ಶನಿ ಅಸ್ತ 2025: 138 ದಿನ ಈ 4 ರಾಶಿಯವರು ಸ್ವಲ್ಪ ಜಾಗ್ರತೆವಹಿಸಬೇಕು
ಶನಿಯನ್ನು ಕರ್ಮದ ದೇವರು ಎಂದು ಕರೆಯಲಾಗುವುದು, ಇದೀಗ ಶನಿಯು ಕುಂಭ ರಾಶಿಯಲ್ಲಿದೆ, ಮಾರ್ಚ್ ತಿಂಗಳಿನಲ್ಲಿ ಶನಿಯು ಮೀನ ರಾಶಿಗೆ ಸಂಚರಿಲಿಸಲಿದೆ. ಮಾರ್ಚ್ 29ಕ್ಕೆ ಶನಿಯು ರಾಶಿ ಬದಲಾವಣೆ ಮಾಡುತ್ತಿದೆ, ಆದರೆ ಅದಕ್ಕೂ ಮೊದಲು ಶನಿಯು ಫೆಬ್ರವರಿ 23ರಂದು ಅಸ್ತವಾಗಲಿದೆ.
ಶನಿಯು ಅಸ್ತವಾದಾಗ ಕೆಲವು ರಾಶಿಗಳು ಹೆಚ್ಚು ಜಾಗ್ರತೆವಹಿಸಬೇಕಾಗುತ್ತದೆ. ಏಕೆಂದರೆ ಶನಿಯು ಅಸ್ತವಾದಾಗ ವೃತ್ತಿ ಬದುಕಿನಲ್ಲಿ, ವೈಯಕ್ತಿಕ ಬದುಕಿನಲ್ಲಿ ಹಲವು ಸಮಸ್ಯೆ ಎದುರಿಸಬೇಕಾಗುತ್ತದೆ, ಹಾಗಾಗಿ 138 ದಿನಗಳವರೆಗೆ ಈ ರಾಶಿಯವರು ಸ್ವಲ್ಪ ಜಾಗ್ರತೆವಹಿಸಿ.
ಶನಿಯು ನವೆಂಬರ್ 28ಕ್ಕೆ ಮಾರ್ಗಿಯಾಗಲಿದೆ, ಅಷ್ಟು ದಿನ ಜಾಗ್ರತೆವಹಿಸಿ, ಶನಿಗೆ ಸಂಬಂಧಿಸಿದ ಪರಿಹಾರ ಮಾಡಿಸಿ, ಇವು ಶನಿಯ ಕೆಟ್ಟ ಪ್ರಭಾವ ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ.

ಮೇಷ ರಾಶಿ
ಮೇಷ ರಾಶಿಯಲ್ಲಿ 11ನೇ ಮನೆಯಲ್ಲಿ ಅಸ್ತವಾಗಲಿದೆ, ಶನಿಯು ಅಸ್ತವಾದಾಗ ಸ್ವಲ್ಪ ತೊಂದರೆಗಳನ್ನು ಎದುರಿಸಬೇಕಾಗುತ್ತದೆ, ಕೆಲವೊಂದು ಅಡೆತಡೆಗಳನ್ನು ಎದುರಿಸಬಹುದು. ಈ ಅವಧಿಯಲ್ಲಿ ಕೆಲ ಸವಾಲುಗಳು ಎದುರಾಗಬಹುದು.
ವೃಷಭ ರಾಶಿ
ವೃಷಭ ರಾಶಿಯಲ್ಲಿ 10ನೇ ಮನೆಯಲ್ಲಿ ಶನಿ ಅಸ್ತವಾಗುತ್ತಿದೆ, ಈ ಅವಧಿಯಲ್ಲಿ ವೃತ್ತಿ ಬದುಕಿನಲ್ಲಿ ಸವಾಲುಗಳು ಎದುರಾಗಬಹುದು, ವೃತ್ತಿ ಬದುಕಿನಲ್ಲಿ ಅಸ್ಥಿರತೆ ಇರಬಹುದು, ಹಣದ ಖರ್ಚು ಹೆಚ್ಚಿರಲಿದೆ, ಆರೋಗ್ಯದ ಕಡೆಗೆ ಗಮನಹರಿಸಿ.
ತುಲಾ ರಾಶಿ
ಶನಿಯು ನಿಮ್ಮ 5ನೇ ಮನೆಯಲ್ಲಿ ಅಸ್ಥವಾಗುತ್ತಿದೆ, ಹಣಕ್ಕೆ ಸಂಬಂಧಿಸಿದ ಸಮಸ್ಯೆ ಎದುರಾಗಬಹುದು, ವ್ಯಾಪಾರಿಗಳು ಕೆಲವು ಅಡೆತಡೆ ಎದುರಿಸಬಹುದು, ಸಂಬಂಧದಲ್ಲಿ ಕೆಲ ಭಿನ್ನಾಭಿಪ್ರಾಯವಿರಬಹುದು.
ಮಕರ ರಾಶಿ
ಮಕರ ರಾಶಿಯಲ್ಲಿ 2ನೇ ಮನೆಯಲ್ಲಿ ಅಸ್ತವಾಗುತ್ತದೆ, ಮನೆಯಲ್ಲಿ ಕೆಲ ಸಮಸ್ಯೆಗಳು ಎದುರಾಗಬಹುದು, ಕೆಲಸ ಕಾರ್ಯಗಳಲ್ಲಿ ಅಡೆತಡೆ ಎದುರಾಗಬಹುದು, ಕೆಲಸದಲ್ಲಿ ಹೆಚ್ಚು ಒತ್ತಡ ಹೆಚ್ಚಿರಲಿದೆ. ವ್ಯಾಪಾರಸ್ಥರು ಈ ಅವಧಿಯಲ್ಲಿ ಸವಾಲುಗಳನ್ನು ಎದುರಿಸಬೇಕಾಗುತ್ತದೆ, ನಿಮ್ಮ ಹಾಗೂ ಸಂಗಾತಿ ನಡುವೆ ಕೆಲ ಭಿನ್ನಾಭಿಪ್ರಾಯವಿರಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯಲ್ಲಿ ನಾಲ್ಕನೇ ಮನೆಯಲ್ಲಿ ಶನಿಯು ಅಸ್ತವಾಗುfತದೆ, ಈ ಅವಧಿಯಲ್ಲಿ ಆರ್ಥಿಕ ಸಮಸ್ಯೆ ಎದುರಾಗಬಹುದು, ಕೆಲಸದ ಜಾಗದಲ್ಲಿ ಸವಾಲುಗಳು ಎದುರಾಗಬಹುದು, ಕೆಲಸದಲ್ಲಿನ ಒತ್ತಡದಿಂದಾಗಿ ಕೆಲಸ ಬಿಡಲು ಕೂಡ ಆಲೋಚಿಸಬಹುದು.
ಏನು ಪರಿಹಾರ ಒಳ್ಳೆಯದು?
- ಮಂಗಳವಾರ ಆಂಜನೇಯ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸಿ, ಶನಿವಾರ ಶನಿ ದೇವಾಲಯಕ್ಕೆ ಹೋಗಿಎಳ್ಳೆಣ್ಣೆ ಅರ್ಪಿಸಿ
- ಶನಿಯು ಕರ್ಮದ ಫಲ ನೀಡುವ ದೇವರು, ಹಾಗಾಗಿ ನಿಮ್ಮ ಶಕ್ತಿಗೆ ತಕ್ಕಂತೆ ದಾನವನ್ನು ಮಾಡಿ, ಶನಿವಾರ ಕಪ್ಪು ಎಳ್ಳು ಜೊತೆಗೆ ಆಹಾರವನ್ನು ದಾನ ಮಾಡಿ.
- ಕಪ್ಪು ವಸ್ತ್ರ ದಾನ ಮಾಡಿ
- ಶನಿವಾರ ಕಪ್ಪು ನಾಯಿಗೆ ಆಹಾರ ಹಾಕಿ
- ಶನಿ ಮಂತ್ರಗಳನ್ನು ಪಠಿಸಿ
- ಹನುಮಾನ್ ಮಂತ್ರಗಳನ್ನು ಪಠಿಸಿ.
2025ರಲ್ಲಿ ಶನಿ ಸಂಚಾರ
ಶನಿಯು ಮಾರ್ಚ್ 29ಕ್ಕೆ ಮೀನ ರಾಶಿಗೆ ಸಂಚರಿಲಿದೆ
ಜೂನ್ 3, 2027ರವರೆಗೆ ಅಂದರೆ ಇನ್ನುಎರಡೂವರೆ ವರ್ಷ ಶನಿಯು ಮೀನ ರಾಶಿಯಲ್ಲಿರಲಿದೆ
ಶನಿಯು ರಾಶಿ ಬದಲಾವಣೆ ಮಾಡಿದಾಗ ಅದರ ಪ್ರಭಾವ ಪ್ರತಿಯೊಂದು ರಾಶಿ ಮೇಲೆ ಇರಲಿದೆ.
ಶನಿ ಮಾರ್ಗಿಯಾಗಿ ಚಲಿಸಲಾರಭಿಸಿದಾಗ ಶನಿ ಅಸ್ತವಾಗಿದ್ದ ತೊಂದರೆ ಅನುಭವಿಸಿದ್ದ ರಾಶಿಗಳು ಉತ್ತಮ ಪ್ರಯೋಜನ ಪಡೆಯಲು ಸಾಧ್ಯವಾಗುವುದು, ವೃತ್ತಿ ಬದುಕು ಹಾಗೂ ವೈಯಕ್ತಿಕ ಬದುಕಿನಲ್ಲಿ ಧನಾತ್ಮಕ ಬದಲಾವಣೆ ಕಂಡು ಬರಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications