12 ವರ್ಷದ ಬಳಿಕ ಬುಧನಿಂದ ಷಡಾಷ್ಟಕ ಯೋಗ: ಹೊಸ ವರ್ಷದಲ್ಲಿ ಹೊಸ ಜೀವನ, ಅದೃಷ್ಟದ ಅಧ್ಯಾಯ!

ವೈದಿಕ ಜ್ಯೋತಿಷ್ಯದ ಪ್ರಕಾರ ಗ್ರಹಗಳ ರಾಜಕುಮಾರ ಬುಧವು ಒಂಬತ್ತು ಗ್ರಹಗಳಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ. ಬುಧನು ಬುದ್ದಿವಂತಿಕೆ, ಬೌದ್ಧಿಕ ಸಾಮರ್ಥ್ಯ, ವ್ಯವಹಾರ, ಪ್ರಮುಖ ನಿರ್ಧಾರಗಳ ತೆಗೆದುಕೊಳ್ಳುವಿಕೆ, ಶಿಕ್ಷಣ, ದಾಂಪತ್ಯ ಸಂಬಂಧಿತ ವಿಚಾರಗಳಿಂದ ಪ್ರಮುಖ ವಿದ್ಯಮಾನ ಎಂಬುದಾಗಿ ವಿವರಿಸಲಾಗುತ್ತದೆ. ಬುಧ ವೇಗವಾಗಿ ಚಲಿಸುವ ಗ್ರಹ ಆತ ಸುಮಾರು 15ರಿಂದ 16 ದಿನಗಳ ಕಾಲ ಒಂದೇ ರಾಶಿಯಲ್ಲಿರುತ್ತಾನೆ.

ಹೀಗಾಗಿ ಬುಧನು ಒಂದೇ ವರ್ಷದಲ್ಲಿ ಒಂದು ರಾಶಿಯನ್ನು ಎರಡು ಬಾರಿ ಪ್ರವೇಶಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇನ್ನು ಆತ ಬಹುತೇಕ ಎಲ್ಲಾ ಗ್ರಹಗಳೊಂದಿಗೂ ಸಂಯೋಗವಾಗುತ್ತಾನೆ. ಎಲ್ಲಾ ರಾಶಿಗಳ ಚಲನೆಯ ಜೊತೆಗೆ ಗ್ರಹಗಳು ಹಾಗೂ ನಕ್ಷತ್ರಗಳೊಂದಿಗಿನ ಸಂಚಾರದಿಂದ ಎಲ್ಲಾ ರಾಶಿಗಳ ಜನರಿಗೆ ಆತನ ಪ್ರಭಾವ ಉಂಟಾಗಲಿದೆ.

Shadashtak Yoga With Mercury After 12 Years

ಬುಧವು ಪ್ರಸ್ತುತ ವೃಶ್ಚಿಕ ರಾಶಿಯಲ್ಲಿ ಚಲಿಸುತ್ತಿದ್ದಾನೆ. ಹಾಗೆ ವರ್ಷದ ಕೊನೆಯಲ್ಲಿ ಬುಧನು ಧನು ರಾಶಿಗೆ ಸ್ಥಳಾಂತರವಾಗುತ್ತಾನೆ. ಆದ್ರೆ ಇದೇ ಸಮಯದಲ್ಲಿ ಗುರು ವೃಷ‍ಭ ರಾಶಿಯಲ್ಲಿ ಚಲಿಸುವುದು ಎರಡೂ ಗ್ರಹಗಳ ನಡುವೆ 150 ಡಿಗ್ರಿಯ ಚಲನೆ ನೋಡಬಹುದು. ಇದು ಅಪರೂಪದ ಯೋಗವಾಗಿರುವ ಷಡಾಷ್ಟಕ ಯೋಗಕ್ಕೆ ಕಾರಣವಾಗಲಿದೆ.

ಈ ವಿಶೇಷ ಯೋಗವು ಬರೋಬ್ಬರಿ 12 ವರ್ಷಗಳ ಬಳಿಕ ರೂಪುಗೊಳ್ಳುತ್ತಿದೆ. ಡಿಸೆಂಬರ್ 31 ರಂದು ಸಂಜೆ 6:35 ಕ್ಕೆ, ಬುಧ ಮತ್ತು ಗುರು ಪರಸ್ಪರ 150 ಡಿಗ್ರಿಗಳಲ್ಲಿರುತ್ತವೆ, ಇದು ಷಡಾಷ್ಟಕ ಯೋಗವನ್ನು ಸೃಷ್ಟಿಸುತ್ತದೆ. ಹಾಗಾದ್ರೆ ಈ ಎರಡು ಗ್ರಹಗಳ ಸಂಯೋಗದಿಂದ ಯಾರಿಗೆಲ್ಲಾ ಶುಭದಾಯಕ? ಯಾರಿಗೆ ಲಾಭಕರ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.

ಮಿಥುನ ರಾಶಿ

ಬುಧ-ಗುರು ಷಡಾಷ್ಟಕ ಯೋಗವು ಈ ರಾಶಿಯ ಜನರಲ್ಲಿ ದೊಡ್ಡ ಲಾಭಗಳಿಗೆ ಕಾರಣವಾಗುತ್ತದೆ. ಬುಧ ಏಳನೆ ಮನೆಯಲ್ಲಿ ಹಾಗೂ ಗುರು 12ನೇ ಮನೆಯಲ್ಲಿ ಸಂಚರಿಸುವುದು ನಿಮ್ಮ ಹಲವು ಸಮಸ್ಯೆಗಳನ್ನು ಬಗೆಹರಿಸಲಿವೆ. ಜೀವನದಲ್ಲಿ ಪ್ರಗತಿಗೆ ಹಲವಾರು ಅವಕಾಶಗಳನ್ನು ಸೃಷ್ಟಿಸುತ್ತದೆ. ಹೊಸ ವೃತ್ತಿ ಅವಕಾಶಗಳು ಉದ್ಭವಿಸಬಹುದು. ನೀವು ಕೆಲಸಕ್ಕೆ ಸಂಬಂಧಿಸಿದಂತೆ ಹಲವು ದೂರ ಪ್ರಯಾಣಗಳ ಮಾಡಬಹುದು. ಈ ಪ್ರಯಾಣಗಳು ನಿಮಗೆ ಭವಿಷ್ಯದಲ್ಲಿ ಹೊಸ ಹಾಗೂ ಗಮನಾರ್ಹ ಪ್ರಯೋಜನಗಳ ತರಲಿವೆ. ಪಾಲುದಾರಿಕೆ ವ್ಯವಹಾರಗಳು ದೊಡ್ಡ ಲಾಭಕ್ಕೆ ತಿರುಗುವುದಲ್ಲದೆ ಅದರ ಪ್ರಗತಿಗೆ ದಾರಿ ಸಿಗಲಿದೆ. ನಿಮ್ಮ ಆರ್ಥಿಕ ಪರಿಸ್ಥಿತಿಯೂ ಉತ್ತಮವಾಗಿರುತ್ತದೆ. ನೀವು ಸಂಪತ್ತನ್ನು ಸಂಗ್ರಹಿಸುವಲ್ಲಿ ಮತ್ತು ಭವಿಷ್ಯಕ್ಕಾಗಿ ಉಳಿತಾಯ ಮಾಡುವಲ್ಲಿ ಯಶಸ್ವಿಯಾಗಬಹುದು.

ಕುಂಭ ರಾಶಿ

ಕುಂಭ ರಾಶಿ ಜನರಿಗೆ ಬುಧ ಗುರು ಸಂಯೋಗವು ಅನೇಕ ಆಸೆಗಳು ಮತ್ತು ಗುರಿಗಳು ಈಡೇರಬಹುದು. ನಿಮ್ಮ ಕನಸುಗಳನ್ನು ಈಡೇರಿಸುವಲ್ಲಿ ನೀವು ಯಶಸ್ವಿಯಾಗಬಹುದು. ನಿಮ್ಮ ವೃತ್ತಿಜೀವನದಲ್ಲಿ ಹಠಾತ್ ಲಾಭಗಳು ಸಹ ಸಾಧ್ಯ. ಬಹು ಸಮಯದ ನಿಮ್ಮ ಕಠಿಣ ಕೆಲಸಗಳು ಈ ಸಮಯದಲ್ಲಿ ಫಲಿತಾಂಶ ತರಬಹುದು. ನೀವು ಹೊಸ ವ್ಯವಹಾರವನ್ನು ಸಹ ಪ್ರಾರಂಭಿಸಬಹುದು, ಗಣನೀಯ ಲಾಭಗಳನ್ನು ಗಳಿಸಬಹುದು. ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಹಣ ಗಳಿಸಲು ನೀವು ಅನೇಕ ಅವಕಾಶಗಳನ್ನು ಪಡೆಯಬಹುದು. ನಿಮ್ಮ ದೀರ್ಘಕಾಲದ ಅನಾರೋಗ್ಯ ಸಮಸ್ಯೆಯೊಂದರಿಂದ ಪರಿಹಾರ ಪಡೆಯಬಹುದು.

ಮೇಷ ರಾಶಿ

ಷಡಾಷ್ಟಕ ಯೋಗವು ಮೇಷ ರಾಶಿಯವರಿಗೆ ಅನುಕೂಲಕರವಾಗಿರಬಹುದು. ಹೊಸ ವರ್ಷದ ಆರಂಭದಲ್ಲಿ ನಿಮ್ಮ ಆಸೆಯೊಂದನ್ನು ಈಡೇರಿಸಿಕೊಳ್ಳುವಿರಿ. ಅದ್ರಲ್ಲೂ ನಿಮ್ಮ ಅನೇಕ ಕೆಲಸಗಳಲ್ಲಿ ಇದ್ದಂತಹ ಅಡ್ಡಿಗಳು ಆತಂಕಗಳು ಈ ಸಮಯದಲ್ಲಿ ದೂರಾಗಲಿದೆ. ನಿರುದ್ಯೋಗಿಗಳು ಅಥವಾ ಕೆಲಸ ಬದಲಾಯಿಸುವ ಕನಸು ಕಂಡಿದ್ದ ಮಂದಿಗೆ ಈ ಸಮಯದಲ್ಲಿ ಅನೇಕ ಹೊಸ ಅವಕಾಶಗಳು ಒಲಿದು ಬರಲಿವೆ. ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಬಹು ಸಮಯದ ನಿಮ್ಮ ಖರ್ಚುಗಳು ನಿವಾರಣೆಯಾಗಲಿದೆ. ದಾಂಪತ್ಯ ವಿಚಾರವಾಗಿ ನಿಮ್ಮ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ. ವಿದ್ಯಾರ್ಥಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರು ನಿರೀಕ್ಷೆಗಿಂತ ಉತ್ತಮ ಫಲಿತಾಂಶಗಳನ್ನು ನೋಡುತ್ತಾರೆ.

(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದರ ವಿಶ್ವಾಸಾರ್ಹತೆಗೆ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)

English summary

Shadashtak Yoga With Mercury After 12 Years: List Of Lucky Zodiac Signs

At 6:35 PM on December 31, Mercury and Jupiter will be at 150 degrees to each other, creating Shadashtaka Yoga.
Story first published: Thursday, December 4, 2025, 12:46 [IST]
X
Desktop Bottom Promotion