Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಶನಿ ಅಮಾವಾಸ್ಯೆಯಲ್ಲಿ ಷಡಷ್ಟಕ ಯೋಗ: ಆರ್ಥಿಕ, ಕೌಟುಂಬಿಕ ವಿಚಾರದಲ್ಲಿ ಕಾದಿದೆ ಆಪತ್ತು!
ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿಯೊಂದು ಗ್ರಹವನ್ನು ಬಹಳ ಪ್ರಮುಖ ವಿದ್ಯಮಾನ ಎಂದು ಪರಿಗಣಿಸಲಾಗಿದೆ. ಹಾಗೆ ಎಲ್ಲಾ ಗ್ರಹಗಳ ಚಲನೆಗೂ ಪ್ರಾಮುಖ್ಯತೆ ನೀಡಲಾಗುತ್ತದೆ. ಅದ್ರಲ್ಲೂ ಶನಿ ಗ್ರಹವನ್ನು ವೈದಿಕ ಶಾಸ್ತ್ರದಲ್ಲಿ ಬಹಳ ಮುಖ್ಯ ಎಂದು ಹೇಳಲಾಗಿದೆ. ಈಗ ಶನಿಯ ಚಲನೆಯಿಂದ ಅಪರೂಪದ ಯೋಗ ಕೂಡ ಉಂಟಾಗುತ್ತಿದೆ.
ಆಗಸ್ಟ್ 23ರಂದು ಶನಿಯ ಚಲನೆಯಿಂದಾಗಿ ಷಡಷ್ಟಕ ಯೋಗ ರೂಪುಗೊಳ್ಳಲಿದೆ. ಸೂರ್ಯ ಹಾಗೂ ಶನಿಯ ಸಂಯೋಗವು ಈ ಅಪರೂಪದ ಹಾಗೆ ಪ್ರಭಾವಶಾಲಿ ಯೋಗಕ್ಕೆ ಕಾರಣವಾಗುತ್ತದೆ. ಶನಿ ಅಮಾವಾಸ್ಯೆಯ ದಿನದಂದು ಸೂರ್ಯ ಹಾಗೂ ಶನಿಯ ಸಂಯೋಗವಾಗಲಿದೆ. ಸೂರ್ಯ ಸಿಂಹ ರಾಶಿಯಲ್ಲಿ ಕುಳಿತಿದ್ದಾನೆ ಮತ್ತು ಮುಂಬರುವ ದಿನಗಳಲ್ಲಿ ಅವನ ಸ್ಥಾನವು ಒಂದು ಪ್ರಮುಖ ಯೋಗವನ್ನು ಸೃಷ್ಟಿಸುತ್ತದೆ. ಶನಿ-ಸೂರ್ಯನ ಷಡಷ್ಟಕ ಯೋಗದಿಂದ ಯಾರಿಗೆಲ್ಲಾ ಅಪಾಯ ಎಂಬುದನ್ನು ನೋಡೋಣ.

ಈ ಷಡಷ್ಟಕ ಯೋಗವನ್ನು ಅಪಾಯಕಾರಿ ಯೋಗಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಈ ಸ್ಥಿತಿಯಲ್ಲಿ ಶನಿಯು ಸೂರ್ಯನ ಮೇಲೆ ವಕ್ರ ದೃಷ್ಟಿಯನ್ನು ಬೀರಲಿದ್ದಾನೆ. ಜ್ಯೋತಿಷ್ಯದ ಪ್ರಕಾರ ಆಗಸ್ಟ್ 23 ರಂದು ಸಂಜೆ 4:32 ಕ್ಕೆ, ಸೂರ್ಯ ಮತ್ತು ಶನಿ ಪರಸ್ಪರ 150 ಡಿಗ್ರಿಗಳಲ್ಲಿರುತ್ತಾರೆ, ಇದು ಷಡಕ್ಷಕ ಯೋಗವನ್ನು ರೂಪಿಸುತ್ತದೆ. ಎರಡು ಗ್ರಹಗಳು ಪರಸ್ಪರ ಎಂಟನೇ ಮತ್ತು ಆರನೇ ಮನೆಯಲ್ಲಿದ್ದಾಗ ಈ ಅಪರೂಪದ ಯೋಗ ರೂಪುಗೊಳ್ಳಲಿದೆ.
ಮಿಥುನ ರಾಶಿ
ಸೂರ್ಯ ಹಾಗೂ ಶನಿಯ ಕಾರಣದಿಂದಾಗಿ ಉಂಟಾಗಿರುವ ಷಡಾಷ್ಟಕ ಯೋಗದಿಂದಾಗಿ ಈ ಮಿಥುನ ರಾಶಿಯವರಿಗೆ ಸಮಸ್ಯಾತ್ಮಕ ದಿನಗಳಿವೆ. ಪ್ರಯಾಣ ಮಾಡುವಾಗ ಸ್ವಲ್ಪ ಜಾಗರೂಕರಾಗಿರಬೇಕು. ಸ್ನೇಹಿತರು ಅಥವಾ ಕುಟುಂಬ ಸದಸ್ಯರೊಂದಿಗೆ ವಾದ ಉಂಟಾಗಬಹುದು. ಹಣಕಾಸಿನ ವಿಚಾರದಲ್ಲಿ ಆಪ್ತರೊಂದಿಗೆ ಮನಸ್ತಾಪ ಹಾಗೆ ಆರ್ಥಿಕ ಲಾಭಕ್ಕೆ ಕಾರಣವಾಗಿದ್ದ ವಿಚಾರವೊಂದು ಇಲ್ಲವೆ ಆದಾಯದ ಮೂಲವೊಂದು ನಿಮ್ಮ ಕೈ ತಪ್ಪಬಹುದು. ನಿರುದ್ಯೋಗಿಗಳಿಗೆ ಕಠಿಣ ದಿನಗಳು ಎದುರಾಗಲಿವೆ. ಆರೋಗ್ಯದ ವಿಚಾರದಲ್ಲಿ ಕಾಳಜಿ ಇಡಬೇಕಾಗುತ್ತದೆ. ನಿಮ್ಮ ಉದ್ಯೋಗ ಸಂಬಂಧವಾಗಿ ಬಹಳ ಸಮಸ್ಯೆ ಕಾಡಬಹುದು.
ಕರ್ಕ ರಾಶಿ
ಕರ್ಕ ರಾಶಿಯ ಜನರಿಗೆ ಈ ಸಮಯದಲ್ಲಿ ಬಹಳ ಸಮಸ್ಯೆಗಳು ಕಾಡಬಹುದು. ನಿಮ್ಮಲ್ಲಿ ಹಲವು ರೀತಿಯ ಕೌಟುಂಬಿಕ ವಿಚಾರವಾಗಿ ಸಮಸ್ಯೆಗಳು ಎದುರಾಗಬಹುದು. ಮನೆಯಲ್ಲಿ ಅಶಾಂತಿಗೆ ಕಾರಣವಾಗುವಂತಹ ವಿಚಾರಗಳು ನಡೆಯಲಿವೆ. ಹಣಕಾಸಿನ ಖರ್ಚು ಹಿನ್ನಲೆಯಲ್ಲಿ ನೀವು ಖರೀದಿಸಬೇಕೆಂದು ಬಯಸಿದ್ದ ವಸ್ತು ನಿಮ್ಮ ಕೈ ಸೇರದೆ ಇರಬಹುದು. ಇದರಿಂದ ಗೊಂದಲ ಆತಂಕದಂತಹ ಪರಿಸ್ಥಿತಿಯನ್ನು ನೀವು ಎದುರಿಸಬೇಕಾಗಬಹುದು. ಆಪ್ತರೊಬ್ಬರಿಂದ ನೋವು ಅನುಭವಿಸಬಹುದು. ಪ್ರೇಮ ಜೀವನ ಮತ್ತು ವೈವಾಹಿಕ ಜೀವನದಲ್ಲೂ ಕೆಲವು ಸಮಸ್ಯೆಗಳು ಉಂಟಾಗಬಹುದು.
ಮೀನ ರಾಶಿ
ಶನಿ-ಸೂರ್ಯ ಷಡಕ್ಷಕ ಯೋಗವು ಈ ರಾಶಿಯ ಜನರಿಗೆ ತುಂಬಾ ಒಳ್ಳೆಯದಲ್ಲ. ಮೀನ ರಾಶಿಯ ಜನರಿಗೆ ವ್ಯಾಪಾರ, ವ್ಯವಹಾರ ಸಂಬಂಧಿ ಸಮಸ್ಯೆಗಳು ಹೆಚ್ಚಾಗುವ ನಿರೀಕ್ಷೆ ಇದೆ. ಆತ್ಮವಿಶ್ವಾಸದಲ್ಲಿ ಸ್ವಲ್ಪ ಇಳಿಕೆಯಾಗಬಹುದು. ಶತ್ರುಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಬಹುದು. ವ್ಯವಹಾರ ಕ್ಷೇತ್ರದಲ್ಲಿ ನೀವು ಹೆಚ್ಚು ಶ್ರಮಿಸಬೇಕಾಗಬಹುದು. ದೀರ್ಘಕಾಲದ ಅನಾರೋಗ್ಯಕ್ಕೆ ತುತ್ತಾಗಿದ್ದವರಲ್ಲಿ ಮತ್ತೆ ಅನಾರೋಗ್ಯ ಕಾಡಬಹುದು. ಮಕ್ಕಳ ವಿಚಾರವಾಗಿಯೂ ಕಠಿಣ ಸಮಯ ಆಗಿರಬಹುದು. ದುಂದು ವೆಚ್ಚಗಳ ಮಾಡುವುದನ್ನು ತಪ್ಪಿಸುವುದು ಸೂಕ್ತ. ಹಾಗೆ ನಿಮ್ಮ ವಿವಾಹ ಕುರಿತಾದ ವಿಚಾರದಲ್ಲಿ ಅಡೆತಡೆಗಳು ಎದುರಾಗಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಊಹೆಗಳು ಮತ್ತು ಇಂಟರ್ನೆಟ್‌ನಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications











