ಸೂರ್ಯ-ಗುರು ಸಂಯೋಗದಿಂದ ಷಡಾಷ್ಟಕ ಯೋಗ: ಈ ರಾಶಿಯವರಿಗೆ ವೈಯಕ್ತಿಕ ಲಾಭ!!

ಹೊಸ ವರ್ಷ ಆಚರಣೆಗೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಹಾಗೆ ಈ ವರ್ಷದಲ್ಲಿ ಹಲವು ರೀತಿಯ ಗ್ರಹಗತಿಗಳ ಬದಲಾವಣೆ ನೋಡಬಹುದಾಗಿದೆ. ಹಾಗೆ ಹಲವು ಯೋಗಗಳ ಕಾರಣದಿಂದಾಗಿ 2025ರಲ್ಲಿ ಹಲವು ಲಾಭದಾಯಕ ವಿಚಾರಗಳು ನಿಮಗೆ ಉಂಟಾಗಲಿದೆ. ಅದರಲ್ಲೂ ಮುಂದಿನ ವರ್ಷದಲ್ಲಿ ಸೂರ್ಯ ಹಾಗೂ ಗುರುವಿನ ಸಂಯೋಗವು ಹಲವು ಯೋಗಕ್ಕೆ ಕಾರಣವಾಗಲಿದೆ.

ಸೂರ್ಯ ಹಾಗೂ ಗುರು ಗ್ರಹಗಳ ಸಂಯೋಗವು ಹೊಸದಾಗಿ ಷಡಾಷ್ಟಕ ಯೋಗವನ್ನು ರೂಪಿಸಲು ಕಾರಣವಾಗುತ್ತಿದೆ. ಮುಂದಿ ವರ್ಷದ ಆರಂಭದಲ್ಲಿ ಜನವರಿ 3ರಂದು ಈ ಯೋಗ ರೂಪುಗೊಳ್ಳುತ್ತಿದೆ. ಇದರಿಂದ ಹಲವು ರೀತಿಯ ಲಾಭಗಳು ಉಂಟಾಗುತ್ತದೆ. ಷಡಾಷ್ಟಕ ಯೋಗವು ಮೂರು ರಾಶಿಗಳಿಗೆ ಇನ್ನಿಲ್ಲದ ಲಾಭವನ್ನು ತರುತ್ತಿವೆ.

Shadashtak Yoga From Sun-Jupiter Conjunction This Will Leads To Bring Luck For These Signs

ಹಾಗಾದ್ರೆ ಈ ಷಡಾಷ್ಟಕ ಯೋಗದಿಂದ ಯಾವ ರಾಶಿಯವರಿಗೆ ಲಾಭವಾಗುತ್ತಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಹಾಗೆ ಈ ಷಡಾಷ್ಟಕ ಯೋಗ ಎಂದರೆ ಏನು ಎಂಬುದನ್ನು ತಿಳಿಯೋಣ.

ಎರಡು ಪ್ರಮುಖ ಗ್ರಹಗಳಾದ ಸೂರ್ಯ ಮತ್ತು ಗುರುಗಳು ಆರು ಮತ್ತು ಎಂಟನೇ ಮನೆಗಳಲ್ಲಿ ನೆಲೆಗೊಂಡಾಗ ಷಡಾಷ್ಟಕ ಯೋಗವು ರಚನೆಯಾಗುತ್ತದೆ. ಸೂರ್ಯನು ಶಕ್ತಿ, ಸಾಮರ್ಥ್ಯ, ಚೈತನ್ಯವನ್ನು ಪ್ರತಿನಿಧಿಸುತ್ತಾನೆ, ಹಾಗೆ ಗುರು ಬುದ್ಧಿವಂತಿಕೆ, ಸಮೃದ್ಧಿ ಮತ್ತು ಬೆಳವಣಿಗೆಯ ಗ್ರಹ ಎಂದು ಪರಿಗಣಿಸಲಾಗಿದೆ.

ಈ ಎರಡು ಗ್ರಹಗಳ ಸಂಯೋಗವು ಹಲವು ರಾಶಿಗಳಿಗೆ ಅನಾನುಕೂಲ ತರಬಹುದು, ಹಾಗೆ ಹಲವು ರಾಶಿಯವರಲ್ಲಿ ಲಾಭದಾಯಕ ಬೆಳವಣಿಗೆ ನಾವು ನೋಡಬಹುದು. ಈ ಷಡಾಷ್ಟಕ ಯೋಗವು ಜನವರಿಯಲ್ಲಿ ಸಂಭವಿಸುತ್ತಿರುವುದರಿಂದ ಯಾವ ರಾಶಿಯವರಿಗೆ ಪ್ರಗತಿಯ ಸಂಕೇತವಾಗಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಮೇಷ ರಾಶಿ

ಮೇಷ ರಾಶಿಯ ಜನರು ಈ ಅವಧಿಯಲ್ಲಿ ಧನಾತ್ಮಕ ಬದಲಾವಣೆಗಳ ನೋಡಲಿದ್ದಾರೆ. ಹೊಸ ವೃತ್ತಿ, ಹೊಸ ವ್ಯಾಪಾರ, ಹೊಸ ವ್ಯವಹಾರಗಳು ನಿಮ್ಮ ಆದಾಯದ ಹೆಚ್ಚಳಕ್ಕೆ ಕಾರಣವಾಗಲಿದೆ. ಆರ್ಥಿಕ ಲಾಭಗಳು, ಹಣಕಾಸಿನ ಪ್ರಗತಿಗೆ ಈ ಷಡಾಷ್ಟಕ ಯೋಗ ಸಹಕಾರಿಯಾಗಲಿದೆ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ, ಹೀಗಾಗಿ ನಿಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಿ ನೋಡಿ, ಅದರಿಂದ ನಿಮಗೆ ಉತ್ತಮ ಫಲಿತಾಂಶವೇ ದೊರೆಯಲಿದೆ. ನಿಮ್ಮ ಸುತ್ತಲಿನ ಸಂಬಂಧಗಳಲ್ಲಿ ಸಾಮರಸ್ಯ ಹೆಚ್ಚಾಗುತ್ತದೆ. ಕುಟುಂಬದೊಂದಿಗಿನ ನಿಮ್ಮ ಒಡನಾಟ, ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ. ನಿಮಗೆ ಒಲಿದು ಬರುವ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ. ಕನಸುಗಳ ಈಡೇರಿಸಿಕೊಳ್ಳಲು ನೀವು ನಡೆಸುವ ಕೆಲಸವು ಪರಿಪೂರ್ಣ ಫಲಿತಾಂಶಕ್ಕೆ ಕಾರಣವಾಗುತ್ತದೆ.

ಸಿಂಹ ರಾಶಿ

ಸೂರ್ಯನ ಆಳ್ವಿಕೆಯ ಸಿಂಹ ರಾಶಿಯವರಿಗೆ ಈ ಯೋಗದಿಂದ ಸ್ವಾಭಾವಿಕವಾಗಿ ಲಾಭವಾಗುತ್ತದೆ. ಈ ಯೋಗದಿಂದ ಹೆಚ್ಚಿನ ಮನ್ನಣೆ, ನಾಯಕತ್ವದ ಜವಾಬ್ದಾರಿಗಳು ಮತ್ತು ಅವರ ವೃತ್ತಿಜೀವನದಲ್ಲಿ ಯಶಸ್ಸನ್ನು ತರುತ್ತದೆ. ಆರ್ಥಿಕ ಪ್ರಗತಿಗಳಿಂದ ಹಿಡಿದು ಆರೋಗ್ಯಕರ ಲಾಭಗಳನ್ನು ನೀವು ನೋಡಬಹುದು. ವೈಯಕ್ತಿಕವಾಗಿ ನಿಮ್ಮಲ್ಲಿ ಹಲವು ಸಮಸ್ಯೆ ಎದುರಾದರು ಹಲವರ ಸಹಕಾರದಿಂದಾಗಿ ಪರಿಹಾರ ಮಾರ್ಗ ಸಿಗಲಿದೆ. ದೂರ ಪ್ರಯಾಣಗಳು, ಪ್ರವಾಸ, ಹೊಸ ಸ್ಥಳ ಅನ್ವೇಷಣೆಗೆ ನೀವು ಒಳ‍ಗಾಗಲಿದ್ದೀರಿ.

ಧನು ರಾಶಿ

ಗುರುವಿನ ಆಳ್ವಿಕೆಯ ಧನು ರಾಶಿಯವರಿಗೆ ಷಡಾಷ್ಟಕ ಯೋಗದಿಂದ ಹೆಚ್ಚಿನ ಲಾಭಗಳು ಸಿಗುತ್ತವೆ. ಈ ಯೋಗದಿಂದಾಗಿ ವ್ಯಾಪಾರ, ವ್ಯವಹಾರದಲ್ಲಿ ಧನಾತ್ಮಕ ಲಾಭವಾಗಲಿದೆ. ಹಣದ ಹೂಡಿಕೆಗಳು ನಿಮಗೆ ಲಾಭದಾಯಕವಾಗಿ ಪರಿಣಮಿಸಲಿದೆ. ಹಿರಿಯರು ಅಥವಾ ಮಕ್ಕಳ ಭವಿಷ್ಯದ ದೃಷ್ಟಿಯಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರಗಳು ಮತ್ತಷ್ಟು ಬೆಂಬಲ ಪಡೆದುಕೊಳ್ಳಲಿದೆ. ಕುಟುಂಬಸ್ಥರ ಕಡೆಯಿಂದ ನಿಮಗೆ ಎಲ್ಲಾ ಕೆಲಸದಲ್ಲೂ ಸಹಕಾರ ಸಿಗಲಿದೆ.

(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯನ್ನು ಖಾತರಿಪಡಿಸಲಾಗಿಲ್ಲ. ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕನ್ನಡ ಬೋಲ್ಡ್ ಸ್ಕೈ ಖಚಿತಪಡಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Shadashtak Yoga From Sun-Jupiter Conjunction: This Will Leads To Bring Luck For These Signs

The conjunction of two planets can bring inconvenience to many zodiac signs, while we can see beneficial growth in many zodiac signs. This Shadashtak Yoga is occurring in January.
Story first published: Friday, December 27, 2024, 14:35 [IST]
X
Desktop Bottom Promotion