Latest Updates
-
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್
Shadashtak Yog: ಶನಿ-ಬುಧನಿಂದ ಷಡಾಷ್ಟಕ ಯೋಗ, ಅ.5ರಿಂದ ಈ ರಾಶಿಯವರ ಕಷ್ಟದ ದಿನ ದೂರ!
Shadashtak Yog: ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿ ದೇವನನ್ನು ನೀತಿವಂತ ಎಂದು ಕರೆಯಲಾಗುತ್ತದೆ. ಹಾಗೆ ನ್ಯಾಯದ ದೇವರೆಂದು ಸಹ ಹೇಳಲಾಗಿತ್ತದೆ. ಶನಿಯ ಕೃಪೆಯಿಂದ ಪ್ರತಿಯೊಬ್ಬರ ಜೀವನದಲ್ಲು ಮಹತ್ತರ ಬದಲಾವಣೆಗಳ ನೋಡಬಹುದು. ಹಾಗೆ ಶನಿ ಬಹಳ ನಿಧಾನವಾಗಿ ಚಲಿಸುವ ಗ್ರಹ ಆಗಿರೋದ್ರಿಂದ ಯಾರ ಜಾತಕದಲ್ಲಿ ಶನಿ ದೋಷ ಇರಲಿದ್ಯೋ ಅವರು ಎರಡೂವರೆ ವರ್ಷದಿಂದ ಬರೋಬ್ಬರಿ 7 ವರ್ಷಗಳ ಕಾಲ ಆತನ ದೃಷ್ಟಿಗೆ ತುತ್ತಾಗಬಹುದು.
ಅಂತಹ ಶನಿಯು ಪ್ರಸ್ತುತ ಮೀನ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಶನಿ 2027 ರ ವರೆಗೆ ಈ ರಾಶಿಯಲ್ಲಿ ಚಲಿಸಲಿದ್ದಾನೆ. ಹಾಗೆ ಈ ಸಮಯದಲ್ಲಿ ಹಲವು ಗ್ರಹಗಳು ಶನಿಯಿಂದ ಪ್ರಭಾವಕ್ಕೊಳಗಾಗುವುದು ನೋಡಬಹುದು, ಹಾಗೆ ಸಂಯೋಗದ ಸಮಯದಲ್ಲಿ ಹಲವು ರೀತಿಯ ಯೋಗಗಳನ್ನು ಸೃಷ್ಟಿಸುವುದು ಸಹ ನೋಡುತ್ತೇವೆ.

ಹೀಗಿರುವಾಗ ಅಕ್ಟೋಬರ್ 5ರಂದು ಶನಿಯಿಂದಾಗಿ ಷಡಾಷ್ಟಕ ಯೋಗ ರೂಪುಗೊಳ್ಳುವುದು ನೋಡಬಹುದು. ಶನಿ ಹಾಗೂ ಬುಧನ ಸಂಯೋಗದಿಂದಾಗಿ ಈ ಅಪರೂಪದ ಯೋಗ ರೂಪುಗೊಳ್ಳುತ್ತದೆ. ಆದ್ರೆ ಇದು ಮೀನ ರಾಶಿಯ ಭಾಗವಾಗಿ ರೂಪುಗೊಳ್ಳುತ್ತಿರುವುದು ಮತ್ತೂ ವಿಶೇಷವಾಗಿದೆ. ಇದರಂದ ಹಲವರಿಗೆ ಶುಭದಾಯಕ ಎನ್ನಬಹುದು.
ಷಡಾಷ್ಟಕ ಯೋಗದ ಸಮಯದಲ್ಲಿ ಶನಿ ಮತ್ತು ಬುಧ ಪರಸ್ಪರ 150 ಡಿಗ್ರಿಗಳಲ್ಲಿರುತ್ತಾರೆ. ಈ ಯೋಗದ ಸಮಯದಲ್ಲಿ ಬುಧನು ತುಲಾ ರಾಶಿಯಲ್ಲಿರುತ್ತಾನೆ. ಈಗ ಶನಿ ಮತ್ತು ಬುಧರು ರೂಪಿಸಿದ ಷಡಾಷ್ಟಕ ಯೋಗದಿಂದ ಯಾವ ರಾಶಿಯವರಿಗೆ ಅದೃಷ್ಟ ಎಂದು ತಿಳಿದುಕೊಳ್ಳೋಣ.
ಮೇಷ ರಾಶಿ
ಷಡಾಷ್ಟಕ ಯೋಗದಿಂದಾಗಿ ಮೇಷ ರಾಶಿಯವರಿಗೆ ಜೀವನದಲ್ಲಿ ಸಕಾರಾತ್ಮಕ ಲಾಭಗಳು ದೊರೆಯುತ್ತವೆ. ನಿಮ್ಮ ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯಲು ನಿಮಗೆ ಅವಕಾಶ ಸಿಗುತ್ತದೆ. ಅನಗತ್ಯ ಖರ್ಚುಗಳಿಂದ ನಿಮಗೆ ಪರಿಹಾರ ಸಿಗುತ್ತದೆ. ನಿಮ್ಮ ಬಹಳ ಸಮಯದ ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗಲಿದೆ. ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ. ವಿದೇಶದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಫಲಿತಾಂಶಗಳು ಸಿಗುತ್ತವೆ. ದೀರ್ಘಕಾಲದ ಕನಸುಗಳು ನನಸಾಗುತ್ತವೆ. ಬಾಕಿ ಇರುವ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ನಿಮ್ಮ ವಾಹನ ಖರೀದಿಯ ಕನಸಿಗೆ ಮುನ್ನುಡಿ ಬರೆಯಬಹುದು.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ಷಡಾಷ್ಟಕ ಯೋಗದಿಂದಾಗಿ ಅನೇಕ ಪ್ರಯೋಜನಗಳು ಒಲಿದು ಬರಲಿವೆ. ನಿಮ್ಮ ದೀರ್ಘಕಾಲದಂದ ಬಾಕಿ ಉಳಿಸಿಕೊಂಡಿದ್ದ ವಿಚಾರಗಳು ಪೂರ್ಣವಾಗಲಿದೆ. ಕುಟುಂಬ ಜೀವನದಲ್ಲಿ ಸುಖ ನೋಡುವಿರಿ. ತಂದೆ ತಾಯಿಯೊಂದಿಗಿನ ಸಂಬಂಧ ಸುಧಾರಿಸಲಿದೆ. ವೃತ್ತಿ ಸಂಬಂಧಿತ ವಿಚಾರಗಳಲ್ಲಿ ನಿಮಗೆ ಶುಭವಾಗಲಿದೆ, ಅದ್ರಲ್ಲೂ ಬಡ್ತಿ, ವೇತನ ಹೆಚ್ಚಳ ಸಂಭವದಂತಹ ಶುಭ ಸುದ್ದಿಗಳ ಕೇಳುವಿರಿ. ನಿಮ್ಮ ಉಳಿತಾಯಗಳು ದಿಢೀರ್ ಹೆಚ್ಚಾಗಲಿದೆ. ಮನೆಯ ವಾತಾವರಣ ಆಹ್ಲಾದಕರವಾಗಿರಲಿದೆ. ಆಸ್ತಿಗೆ ಸಂಬಂಧಿಸಿದ ವಿಚಾರವಾಗಿ ನಿಮಗೆ ಶುಭವಾಗಲಿದೆ. ಕುಟುಂಬದೊಂದಿಗೆ ಸಮಯ ಕಳೆಯಲು ಸಮಯ ಸಿಗಲಿದೆ. ಮಾನಸಿಕ ಆರೋಗ್ಯದಲ್ಲೂ ಸುಧಾರಣೆ ಇದೆ.
ಮೀನ ರಾಶಿ
ಷಡಾಷ್ಟಕ ಯೋಗದಿಂದಾಗಿ ಮೀನ ರಾಶಿಯವರಿಗೆ ತಮ್ಮ ವೃತ್ತಿಜೀವನದಲ್ಲಿ ಉತ್ತಮ ಫಲಿತಾಂಶಗಳು ಸಿಗುತ್ತವೆ. ಜೀವನದಲ್ಲಿ ನೀವು ಅನೇಕ ಸಕಾರಾತ್ಮಕ ಬದಲಾವಣೆಗಳನ್ನು ನೋಡುತ್ತೀರಿ. ಉದ್ಯಮಿಗಳು ಉತ್ತಮ ಲಾಭವನ್ನು ಪಡೆಯುತ್ತಾರೆ. ಆರ್ಥಿಕವಾಗಿ ನೀವು ಉತ್ತಮರಾಗುತ್ತೀರಿ. ಜೀವನದಲ್ಲಿ ದೊಡ್ಡ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಹಣಕಾಸಿನ ವಿಚಾರದಲ್ಲಿ ಆತುರದ ನಿರ್ಧಾರಗಳ ಮಾಡಬೇಡಿ. ಮನೆ ನವೀಕರಣ, ಅಗತ್ಯ ವಸ್ತುಗಳು, ದುಬಾರಿ ವಸ್ತು ಖರೀದಿಯ ನಿಮ್ಮ ಬಯಕೆ ಈಡೇರಲಿದೆ. ಹಣದ ವಿಚಾರದಲ್ಲಿ ಸುಗಮ ವಿಚಾರಗಳಿವೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications