Latest Updates
-
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ?
ಷಡಷ್ಟಕ ಯೋಗ 2025: ಈ ಮೂರು ರಾಶಿಯವರಲ್ಲಿ ಕೆಡುಕು ತರುವ ಯೋಗವಿದು..!
ಗ್ರಹಗಳು ತಮ್ಮ ಸ್ಥಾನ ಬದಲಾವಣೆ ಮಾಡುವುದರಿಂದ ಹಲವು ರೀತಿಯ ಯೋಗಗಳು ರುಪುಗೊಳ್ಳುತ್ತವೆ. ಹಾಗೆ ಶುಭ ಹಾಗೂ ಅಶುಭವೂ ಉಂಟಾಗುತ್ತದೆ. ಗ್ರಹಗಳ ಅಧಿಪತಿ ಎಂದು ಪರಿಗಣಿಸಲಾಗಿರುವ ಸೂರ್ಯನು ನಿಯಮಿತವಾಗಿ ತನ್ನ ದಿಕ್ಕು, ರಾಶಿ, ಮನೆ ಬದಲಿಸುತ್ತಾನೆ. ಇದು ಎಲ್ಲಾ ರಾಶಿಯವರ ಮೇಲೆಯೂ ಪ್ರಭಾವ ಬೀರುತ್ತದೆ. ಈ ಬಾರಿ ಸೂರ್ಯನ ಚಲನೆಯು ಎಲ್ಲಾ ರಾಶಿಯವರ ಮೇಲೆಯೂ ಪರಿಣಾಮ ಬೀರುತ್ತಿದೆ.
ಈಗ ಸೂರ್ಯನು ತನ್ನ ಪುತ್ರ ಶನಿಯ ರಾಶಿಯಾದ ಮಕರ ರಾಶಿಯನ್ನು ಪ್ರವೇಶಿಸಿದೆ. ಅದೇ ಸಮಯದಲ್ಲಿ ಮಂಗಳ ಗ್ರಹವು ಹಾಗೂ ಬುಧನು ಮಿಥುನ ರಾಶಿಯನ್ನು ಪ್ರವೇಶಿಸಿದೆ. ಹೀಗಾಗಿ ಸೂರ್ಯ ಮತ್ತು ಮಂಗಳ, ಗುರು ಗ್ರಹಗಳ ಸ್ಥಾನದಿಂದಾಗಿ ಷಡಷ್ಠಕ ಯೋಗವು ರೂಪುಗೊಂಡಿದೆ. ಈ ಷಡಷ್ಟಕ ಯೋಗವು ಹಲವು ರಾಶಿಯವರಿಗೆ ಲಾಭದಾಯಕವಾಗಿದ್ದರೆ ಮತ್ತೆ ಕೆಲವು ರಾಶಿಯವರಲ್ಲಿ ಕೆಡುಕು ಉಂಟು ಮಾಡುತ್ತಿದೆ.

ಹಾಗಾದ್ರೆ ಯಾವೆಲ್ಲಾ ರಾಶಿಯವರಿಗೆ ಈ ಷಡಷ್ಟಕ ಯೋಗವು ಕೆಡುಕು ಉಂಟು ಮಾಡುತ್ತಿದೆ. ಹಾಗಾದ್ರೆ ಈ ಗ್ರಹಗಳ ಚಲನೆಯಲ್ಲಿ ಬದಲಾವಣೆಯಾಗುತ್ತಿರುವುದರಿಂದ ಯಾವೆಲ್ಲಾ ರಾಸಿಯವರಿಗೆ ಕೆಡುಕು ತರುತ್ತಿದೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಧನು ರಾಶಿ
ಸೂರ್ಯ ಮತ್ತು ಮಂಗಳ ಗ್ರಹಗಳಿಂದ ಉಂಟಾಗುವ ಷಡಷ್ಟಕ ಯೋಗದಿಂದಾಗಿ, ಧನು ರಾಶಿಯ ಜನರು ವಿವಿಧ ಆರೋಗ್ಯ ಸಮಸ್ಯೆಗಳ ಎದುರಿಸಬೇಕಾಗಬಹುದು. ಕೆಲಸದಲ್ಲಿ ನಿಮಗೆ ಇದ್ದಕ್ಕಿದ್ದಂತೆ. ಸಮಸ್ಯೆಗಳು ಎದುರಾಗಬಹುದು. ಕೆಲಸಗಳಲ್ಲಿ ಅಡೆತಡೆಗಳು ಸಂಭವಿಸಬಹುದು, ಹಣಕಾಸು ವಿಚಾರದಲ್ಲಿ ಕೈ ಕಟ್ಟಿದ ವಾತಾವರಣ ಇರಬಹುದು. ಹಾಗೆ ಹೂಡಿಕೆ ವ್ಯಾಪಾರ, ಉಳಿತಾಯದಂತಹ ವಿಚಾರಗಳಲ್ಲಿ ನಿಮ್ಮ ಪರವಾದ ಅಥವಾ ನಿಮ್ಮ ಬಯಕೆಯಂತಹ ಫಲಿತಾಂಶ ನಿರೀಕ್ಷೆ ಮಾಡಬೇಡಿ. ಕೆಲಸದ ಒತ್ತಡದಿಂದ ನಿಮಗೆ ಅಶಾಂತಿ ಮೂಡಬಹುದು, ಇದು ಕುಟುಂಬಸ್ಥರ ನಡುವಿನ ಮನಸ್ಥಾಪ ಹೆಚ್ಚಾಗಲು ಕಾರಣವಾಗಲಿದೆ.
ಕರ್ಕ ರಾಶಿ
ಕರ್ಕ ರಾಶಿಯವರಲ್ಲಿ ಈ ಸೂರ್ಯ, ಮಂಗಳ, ಗುರು ಗ್ರಹದ ಚಲನೆಯಿಂದಾಗಿ ನಿಮ್ಮಲ್ಲಿ ಅನೇಕ ಸಮಸ್ಯೆಗಳು ಎದುರಾಗಬಹುದು. ಕೆಲಸದಲ್ಲಿ ಎಚ್ಚರಿಕೆಯಿಂದ ಇರುವುದು ಒಳಿತು. ನಿಮ್ಮ ನಡುವಿನ ಸಂಬಂಧಗಳು ಹದ ಗೆಡಬಹುದು. ನಿಮ್ಮ ಮಾತಿನಿಂದ ಆಗಿ ಒಂದಿಷ್ಟು ಸಮಸ್ಯೆಗಳು ಎದುರಾಗಬಹುದು. ಹಣಕಾಸು ವಿಚಾರದಲ್ಲಿ ನಿಮ್ಮಿಂದ ಸಾಲ ಮಾಡಬೇಕಾದ ಪರಿಸ್ಥಿತಿ ಬರಬಹುದು.
ಕನ್ಯಾ ರಾಶಿ
ಸೂರ್ಯ ಮತ್ತು ಮಂಗಳ ಗ್ರಹಗಳಿಂದ ಉಂಟಾಗುವ ಷಡಷ್ಟಕ ಯೋಗವು ಕನ್ಯಾ ರಾಶಿಯವರ ಮೇಲೆ ಋಣಾತ್ಮಕ ಪರಿಣಾಮಕ್ಕೆ ಕಾರಣವಾಗುತ್ತಿದೆ. ನಿಮ್ಮಲ್ಲಿ ಆತ್ಮವಿಶ್ವಾಸದ ಕೊರತೆ ಕಾಡಬಹುದು. ಆಸ್ತಿ ವ್ಯವಹಾರ, ಕಚೇರಿ ಕೆಲಸಗಳು ತಡವಾಗಬಹುದು. ನಿಮ್ಮ ಭವಿಷ್ಯದ ದೃಷ್ಟಿಯಲ್ಲಿ ನೀವು ತೆಗೆದುಕೊಳ್ಳುವ ಕೆಲವು ನಿರ್ಧಾರಗಳು ನಿಮಗೆ ಸಮಸ್ಯೆ ತರಬಹುದು. ಅದರಲ್ಲೂ ನಿಮ್ಮ ಬಹುದೊಡ್ಡ ನಿರ್ಧಾರವು ಕೆಡುಕು ತರಬಹುದು. ನಿಮ್ಮ ಮುಂದಿನ ಹಲವು ಬಯಕೆಗಳು, ಬೇಡಿಕೆಗಳು ಮುಂದೂಡಬೇಕಾಗುತ್ತದೆ. ವಾಹನ ಮಾಲಿಕರು ಎಚ್ಚರಿಕೆ ವಹಿಸಬೇಕಾಗುತ್ತದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕನ್ನಡ ಬೋಲ್ಡ್ ಸ್ಕೈ ಪರಿಶೀಲಿಸಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











