ಸೆಪ್ಟೆಂಬರ್‌ ಮಾಸದ ಪ್ರೀತಿ ಭವಿಷ್ಯ ಪ್ರಕಾರ ಸಂಗತಿ ಹಾಗೂ ನಿಮ್ಮ ಸಂಬಂಧ ಹೇಗಿರಲಿದೆ?

ಜ್ಯೋತಿಷ್ಯ ಶಾಸ್ತ್ರ ಪ್ರಕಾರ ಸೆಪ್ಟೆಂಬರ್‌ ಮಾಸ ನಿಮ್ಮ ಪ್ರಿತಿ, ವೈವಾಹಿಕ ಜೀವನಕ್ಕೆ ಹೇಗಿರಲಿದೆ?

ಮೇಷ ರಾಶಿ

ಸಂಬಂಧದ ದೃಷ್ಟಿಯಿಂದ ನೋಡುವುದಾದರೆ ಪ್ರೇಮ ಜೀವನದಲ್ಲಿ ಕೆಲವು ಏರಿಳಿತಗಳಿರಬಹುದು. ನೀನಿಮ್ಮ ಸಂಬಂಧಕ್ಕೆ ಪ್ರಾಮುಖ್ಯತೆ ನೀಡಬೇಕು, ಇಲ್ಲದಿದ್ದರೆ ಭನ್ನಾಭಿಪ್ರಾಯ ಹೆಚ್ಚಾಗಬಹುದು. ನಿಮ್ಮ ನಡುವಿನ ಸಮಸ್ಯೆ ಮಾತುಕೆಯ ಮೂಲಕ ಬಗೆಹರಿಸಲು ಪ್ರಯತ್ನಿಸಬೇಕು.

September month Love Horoscope

ವೃಷಭ ರಾಶಿ

ಕೆಲಸದ ಹೊರತಾಗಿ, ನಿಮ್ಮ ಸಂಬಂಧಗಳ ಬಗ್ಗೆಯೂ ನೀವು ಸಂಪೂರ್ಣ ಗಮನ ಹರಿಸುವುದರಿಂದ ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಚೆನ್ನಾಗಿರಲಿದೆ. ನಿಮ್ಮ ನಡುವೆ ಏನಾದರು ಭಿನ್ನಾಬಿಪ್ರಾಯವಿದ್ದರೆ ಎಲ್ಲವೂ ಸರಿಯಾಗಲಿದೆ.

ಮಿಥುನ ರಾಶಿ

ವೈವಾಹಿಕ ಜೀವನದಲ್ಲಿ ಪರಿಸ್ಥಿತಿಗಳು ಸಾಮಾನ್ಯವಾಗಿರುತ್ತವೆ.ನಿಮ್ಮ ಸಂಬಂಧದಲ್ಲಿ ಪ್ರೀತಿ ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳಲು ನೀವು ನಿಮ್ಮ ಸಂಗಾತಿಯ ಭಾವನೆಗಳ್ನು ಅರ್ಥಮಾಡಿಕೊಳ್ಳಬೇಕು, ಆವಗ ನಿಮ್ಮ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲಿದೆ, ಪ್ರೇಮಿಗಳು ಮದುವೆಯ ಬಗ್ಗೆ ಆಲೋಚಿಸಬಹುದು.

ಕರ್ಕ ರಾಶಿ

ನಿಮ್ಮ ಸಂಬಂಧಗಳನ್ನು ಕಾಪಾಡಿಕೊಳ್ಳಲು ನೀವು ನಿಮ್ಮ ಕೈಲಾದಷ್ಟು ಪ್ರಯತ್ನಿ ಪಡಬೇಕು, ನೀವು ಅವಿವಾಹಿತರಾಗಿದ್ದರೆ ಪ್ರೀತಿ ಅಥವಾ ಮದುವೆ ಪ್ರಸ್ತಾಪ ಬರಲಿದೆ, ಒಡಹುಟ್ಟಿದವರೊಂದಿಗಿನ ಸಂಬಂಧದಲ್ಲಿ ಸಹ ಸಾಮರಸ್ಯ ಇರಲಿದೆ.

ಸಿಂಹ ರಾಶಿ

ಅದು ಪ್ರೇಮ ಜೀವನವಾಗಲಿ ಅಥವಾ ವೈವಾಹಿಕ ಜೀವನವಾಗಲಿ, ನಿಮ್ಮ ಸಂಬಂಧದಲ್ಲಿ ಮಾಧುರ್ಯವನ್ನು ಕಾಪಾಡಿಕೊಳ್ಳಲು ನೀವು ಪ್ರಯತ್ನಿಸಬೇಕು, ಹಳೆಯ ಕಹಿಗಳನ್ನು ಮರೆತು ಹೊಸ ಆರಂಭವನ್ನು ಮಾಡಬೇಕು. ನಿಮ್ಮ ನಡುವೆ ಭಿನ್ನಾಭಿಪ್ರಾಯವಿದ್ದರೆ ಕೂತು ಬಗೆಹರಿಸಲು ಪ್ರಯತ್ನಿಸಿ.

ಕನ್ಯಾ ರಾಶಿ

ನಿಮ್ಮ ಮನಸ್ಸಿನಲ್ಲಿ ಹಲವಾರು ರೀತಿಯ ಚಿಂತೆಗಳಿರಬಹುದು. ನಿಮ್ಮ ಪ್ರೀತಿಪಾತ್ರರ ಜೊತೆ ಭಿನ್ನಾಭಿಪ್ರಾಯ ಉಂಟಾಗಬಹುದು. ನೀವು ಕೋಪವನ್ನು ನಿಯಂತ್ರಿಸಬೇಕು, ಸಂಬಂಧದ ಕಡೆಗೆ ಹೆಚ್ಚಿನ ಗಮನಹರಿಸಬೇಕು, ಇಲ್ಲದಿದ್ದರೆ ಕುಟುಂಬದಲ್ಲಿ ಸಮಸ್ಯೆ ಹೆಚ್ಚಗುವುದು.

ತುಲಾ ರಾಶಿ

ಈ ಅವಧಿಯಲ್ಲಿ ನೀವು ಇಷ್ಟಡುತ್ತಿರುವ ವ್ಯಕ್ತಿಯ ವರ್ತನೆ ಮನಸ್ಸಿಗೆ ನೋವುಂಟು ಮಾಡಬಹುದು, ನೀವು ಆದಾಯ ಮತ್ತು ವೆಚ್ಚಗಳ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಬೇಕು, ಇಲ್ಲದಿದ್ದರೆ ಈ ವಿಷಯಕ್ಕೆ ಭಿನ್ನಾಭಿಪ್ರಾಯ ಬರಬಹುದು. ನಿಮ್ಮ ಸಂಗಾತಿಯ ಭಾವನೆಗಳನ್ನು ಗೌರವಿಸಿ.


ವೃಶ್ಚಿಕ ರಾಶಿ

ಕುಟುಂಬ ಜೀವನದಲ್ಲಿ ಶಾಂತಿ ಮತ್ತು ಸಂತೋಷ ಇರುತ್ತದೆ. ಮನೆಯಲ್ಲಿ ಅವಾಹಿತರಿದ್ದರೆ ಅವರಿಗೆ ಮದುವೆ ಪ್ರಸ್ತಾಪ ಬರಬಹುದು. ಪ್ರೀತಿಯಲ್ಲಿದ್ದರೆ ಮದುವೆಯ ತೀರ್ಮಾನ ತೆಗೆದುಕೊಳ್ಳಲು ಈ ಅವಧಿ ಉತ್ತಮವಾಗಿದೆ.

ಧನು ರಾಶಿ

ಮನೆಯಲ್ಲಿ ವಾತಾವರಣ ಸುಧಾರಿಸಲಿದೆ. ನಿಮ್ಮ ಸಂಗಾತಿ ಜೊತೆಗೆ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗುವುದು. ಯಾರನ್ನಾದರೂ ಪ್ರೀತಿಸುತ್ತಿದ್ದರೆ ಪ್ರೀತಿ ಹೇಳಿಕೊಳ್ಳಲು ಈ ಅವಧಿ ಉತ್ತಮವಾಗಿದೆ.

ಮಕರ ರಾಶಿ

ಸಂಬಂಧಗಳ ವಿಷಯದಲ್ಲಿ ಈ ತಿಂಗಳು ನಿಮಗೆ ಏರಿಳಿತಗಳಿಂದ ಕೂಡಿರಬಹುದು. ನಿಮ್ಮ ನಿರ್ಧಾರಗಳನ್ನು ನಿಷ್ಪಕ್ಷಪಾತವಾಗಿ ತೆಗೆದುಕೊಂಡರೆ ಉತ್ತಮ. ಸಂಗಾತಿಯ ಭಾವನೆಗಳನ್ನು ಗೌರವಿಸಬೇಕು.

ಕುಂಭ ರಾಶಿ

ಆಸ್ತಿಗೆ ಸಂಬಂಧಿಸಿದ ಯಾವುದೇ ವಿಷಯವು ನ್ಯಾಯಾಲಯದಲ್ಲಿ ನಡೆಯುತ್ತಿದ್ದರೆ, ಅದರಿಂದ ನಿಮಗೆ ಪರಿಹಾರ ಸಿಗುತ್ತದೆ. ಸಂಗಾತಿಯೊಂದಿಗೆ ಈ ಸಮಯ ಉತ್ತಮವಾಗಿರುತ್ತದೆ. ನಿಮ್ಮ ವೈವಾಹಿಕ ಜೀವನವನ್ನು ನೀವು ಪೂರ್ಣವಾಗಿ ಆನಂದಿಸುವಿರಿ. ಪ್ರೇಮಿಗಳಿಗೆ ವಿಶೇಷವಾಗಿರಲಿದೆ.

ಮೀನ ರಾಶಿ

ಪ್ರೇಮ ಜೀವನದಲ್ಲಿ ಹೊಸ ತಿರುವು ದೊರೆಯಲಿದೆ. ಶೀಘ್ರದಲ್ಲೇ ನೀವು ಮದುವೆಯಾಗಬಹುದು. ನೀವು ಈಗಾಗಲೇ ಮದುವೆಯಾಗಿದ್ದರೆ, ನಿಮ್ಮ ವೈವಾಹಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

Story first published: Friday, August 30, 2024, 22:41 [IST]
X
Desktop Bottom Promotion