ಸೆಪ್ಟೆಂಬರ್ ಮಾಸ ಭವಿಷ್ಯ ಪ್ರಕಾರ ಈ ರಾಶಿಗಳು ಜಾಗ್ರತೆವಹಿಸಿದರೆ ಒಳ್ಳೆಯದು

ಸೆಪ್ಟೆಂಬರ್ ಮಾಸದ ಭವಿಷ್ಯ ಪ್ರಕಾರ ಈ ರಾಶಿಯವರು ಈ ಅವಧಿಯಲ್ಲಿ ಜಾಗ್ರತೆವಹಿಸಿ:

ಮೇಷ ರಾಶಿ

ಸೆಪ್ಟೆಂಬ್‌ ಮಾಸ ಮೇಷ ರಾಶಿಯವರಿಗೆ ಮಿಶ್ರಫಲ, ನೀವು ಅನಗ್ಯತ ಚಿಂತನೆಗಳಿಂದ ಹೊರಬರಲು ಪ್ರಯತ್ನಿಸದಿದ್ದರೆ ಕಷ್ಟ, ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ತುಂಬಾ ತಲೆಕೆಡಿಸಿಕೊಳ್ಳಬೇಡಿ, ಸೂಕ್ತ ಸಮಯ ಬಂದಾಗ ಎಲ್ಲವೂ ಸರಿಯಾಗಲಿದೆ. ಪ್ರೇಮ ಜೀವನದಲ್ಲಿ ಕೆಲವು ಏರಿಳಿತಗಳಿರಬಹುದು. ನಿಮ್ಮ ಸಂಬಂಧಕ್ಕೆ ಪ್ರಾಮುಖ್ಯತೆ ನೀಡಿ, ಇಲ್ಲದಿದದ್ದರೆ ನಿಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಬರಬಹುದು. ಕೆಲಸ ಕಾರ್ಯಗಳಿಗೆ ಅಧಿಕ ಓಡಾಟ ಇರಲಿದೆ, ಆರೋಗ್ಯದ ಬಗ್ಗೆ ವಿಶೇಷ ಗಮನ ನೀಡಿದರೆ ಒಳ್ಳೆಯದು. ಆರ್ಥಿಕ ನಿರ್ಧಾರಗಳನ್ನು ಆಲೋಚಿಸಿ ತೆಗೆದುಕೊಳ್ಳಿ, ಮಿತಿ ಮೀಡಿ ಖರ್ಚು ಮಾಡಲು ಹೋಗಬೇಡಿ.

September Month Horoscope

ಈ ಸಂಖ್ಯೆಗಳು, ದಿನಗಳು, ಬಣ್ಣಗಳು ನಿಮಗೆ ಶುಭವಾಗಿವೆ
ಅದೃಷ್ಟದ ಸಂಖ್ಯೆಗಳು: 11, 25, 39, 45, 50
ಶುಭ ದಿನಗಳು: ಗುರುವಾರ, ಭಾನುವಾರ, ಮಂಗಳವಾರ, ಬುಧವಾರ
ಶುಭ ಬಣ್ಣಗಳು: ನೀಲಿ, ಕಡು ಕೆಂಪು, ಕಂದು, ಬಿಳಿ

ಸಿಂಹ ರಾಶಿ

ಕೆಲಸದ ಸ್ಥಳದಲ್ಲಿ ಸವಾಲುಗಳು ಉಳಿಯುತ್ತವೆ. ಕೆಲಸದ ಕಡೆಗೆ ತುಂಬಾನೇ ಗಮನಹರಿಸಬೇಕು. ಉದ್ಯಮಿಗಳು ಎಚ್ಚರಿಕೆಯಿಂದ ಯೋಚಿಸಿ ತಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಆರ್ಥಿಕ ನಷ್ಟ ಉಂಟಾಗುವುದು. ಪ್ರೇಮ ಜೀವನವಾಗಲಿ ಅಥವಾ ವೈವಾಹಿಕ ಜೀವನವಾಗಲಿ, ನಿಮ್ಮ ಸಂಬಂಧ ಚೆನ್ನಾಗಿರಬೇಕೆಂದರೆ ನೀವು ಹೆಚ್ಚಿನ ಪ್ರಯತ್ನ ಹಾಕಬೇಕಾಗುತ್ತದೆ. ನಿಮ್ಮ ನಡುವೆ ಏನೇ ಸಮಸ್ಯೆವಿರಲಿ ಕೂತು ಬಗೆಹರಿಸುವುದು ಒಳ್ಳೆಯದು. ಆದಾಯವನ್ನು ಗಮನದಲ್ಲಿಟ್ಟುಕೊಂಡು ಖರ್ಚು ಮಾಡಿದರೆ ದೊಡ್ಡ ಸಮಸ್ಯೆ ಇರುವುದಿಲ್ಲ. ಉಳಿತಾಯದ ಕಡೆಗೂ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ. ಆರೋಗ್ಯವನ್ನು ನಿರ್ಲಕ್ಷ್ಯ ಮಾಡಬೇಡಿ.

ಈ ಸಂಖ್ಯೆಗಳು, ದಿನಗಳು, ಬಣ್ಣಗಳು ನಿಮಗೆ ಶುಭವಾಗಿವೆ
ಅದೃಷ್ಟದ ಸಂಖ್ಯೆಗಳು: 7, 10, 19, 21, 33, 40, 55
ಶುಭ ದಿನಗಳು: ಗುರುವಾರ, ಶುಕ್ರವಾರ, ಸೋಮವಾರ, ಬುಧವಾರ
ಶುಭ ಬಣ್ಣಗಳು: ಕೆಂಪು, ಕಡು ಹಸಿರು, ನೀಲಿ, ಕೇಸರಿ

ಕನ್ಯಾ ರಾಶಿ

ವೃತ್ತಿಪರ ಜೀವನದಲ್ಲಿ ಯಾವುದೇ ಮಹತ್ವದ ಬದಲಾವಣೆಳು ಕಂಡು ಬರುವುದಿಲ್ಲ ನೀವು ಬಯಸಿದ ಫಲ ಸಿಗದೆ ನಿರಾಸೆ ಉಂಟಾಗಬಹುದು, ಆದರೆ ನೀವು ನಿರಾಶೆಗೊಳ್ಳುವ ಅಗತ್ಯವಿಲ್ಲ. ನಿಮ್ಮ ಪ್ರಯತ್ನಗಳನ್ನು ನೀವು ಮುಂದುವರಿಸಬೇಕು, ಶೀಘ್ರದಲ್ಲೇ ವಿಷಯಗಳು ನಿಮ್ಮ ಪರವಾಗಿ ತಿರುಗುತ್ತವೆ. ನಿಮ್ಮ ಪ್ರಸ್ತುತ ಕಾರ್ಯಗಳಿಗೆ ನೀವು ಹೆಚ್ಚು ಗಮನ ಹರಿಸಬೇಕು. ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದರೆ ಈ ಅವಧಿಯಲ್ಲಿ ಅಡೆತಡೆಗಳು ಇರಲಿದೆ. ಸಾಲ ಮಾಡಿದ್ದರೆ ಮರುಪಾವತಿಗೆ ಒತ್ತಾಯ ಇರಲಿದೆ. ಮಇನ್ನೂ ಆರೋಗ್ಯದಲ್ಲಿಯೂ ಏರಳಿತಗಳಿರಬಹುದು.

ಈ ಸಂಖ್ಯೆಗಳು, ದಿನಗಳು, ಬಣ್ಣಗಳು ನಿಮಗೆ ಶುಭವಾಗಿವೆ
ಅದೃಷ್ಟದ ಸಂಖ್ಯೆಗಳು: 1, 15, 22, 35, 40, 57
ಶುಭ ದಿನಗಳು: ಮಂಗಳವಾರ, ಗುರುವಾರ, ಸೋಮವಾರ, ಬುಧವಾರ
ಶುಭ ಬಣ್ಣಗಳು: ಹಳದಿ, ಕೆಂಪು, ಕೆಂಗಂದು, ಬಿಳಿ


ತುಲಾ ರಾಶಿ

ಈ ಅವಧಿಯಲ್ಲಿ ಗೊಂದಲ ಅಧಿಕವಿರಲಿದೆ, ಕೆಲವೊಂದು ವಿಷಯವನ್ನು ನಿಮ್ಮನ್ನು ತುಂಬಾನೇ ಕಾಡಬಹುದು, ಇದರಿಂದ ಕೆಲಸದ ಮೇಲೆ ಕೂಡ ಗಮನಹರಿಸಲು ಸಾಧ್ಯವಾಗಲ್ಲ, ಅಲ್ಲದೆ ಒಮದರ ಹಿಂದೆ ಮತ್ತೊಂದು ಎಂಬಂತೆ ಸಮಸ್ಯೆಗಳು ಎದುರಾಗಬಹುದು. ನೀವು ಖರ್ಚಿನ ಕಡೆಗೆ ಕುಡ ಗಮನಹರಿಸುವುದು ಒಳ್ಳೆಯದು. ಸಂಗಾತಿ ಜೊತೆಗೆ, ಆಪ್ತರ ಜೊತೆಗೆ ಕೋಪದಿಂದ ವರ್ತಿಸಬೇಡಿ.
ಈ ಸಂಖ್ಯೆಗಳು, ದಿನಗಳು, ಬಣ್ಣಗಳು ನಿಮಗೆ ಶುಭವಾಗಿವೆ
ಅದೃಷ್ಟದ ಸಂಖ್ಯೆಗಳು: 6, 14, 29, 33, 40, 56
ಶುಭ ದಿನಗಳು: ಭಾನುವಾರ, ಮಂಗಳವಾರ, ಗುರುವಾರ, ಸೋಮವಾರ
ಶುಭ ಬಣ್ಣಗಳು: ಬಿಳಿ, ಕಂದು, ಹಳದಿ, ಕೆನೆ


ಮಕರ ರಾಶಿ

ಸಂಬಂಧಗಳ ವಿಷಯದಲ್ಲಿ ಈ ತಿಂಗಳು ನಿಮಗೆ ಏರಿಳಿತಗಳಿಂದ ಕೂಡಿರಲಿದೆ. ಕುಟುಂಬದ ಸದಸ್ಯರ ನಡವಳಿಕೆಯು ನಿಮಗೆ ಒತ್ತಡವನ್ನು ಉಂಟುಮಾಡಬಹುದು, ಆದರೆ ನೀವು ಬಹಳ ಬುದ್ಧಿವಂತಿಕೆಯಿಂದ ವರ್ತಿಸಬೇಕಾಗುತ್ತದೆ. ವೃತ್ತಿ ಜೀವನದಲ್ಲಿ ನೀವು ಪ್ರತಿಕೂಲ ಸಂದರ್ಭಗಳನ್ನು ಎದುರಿಸಬೇಕಾಗಬಹುದು. ಈ ಅವಧಿಯಲ್ಲಿ ಯಾವುದೇ ಹಣಕಾಸಿನ ವಹಿವಾಟು ಮಾಡಬೇಡಿ. ಸಾಲ ತೆಗೆದುಕೊಳ್ಳಬೇಡಿ.
ಈ ಸಂಖ್ಯೆಗಳು, ದಿನಗಳು, ಬಣ್ಣಗಳು ನಿಮಗೆ ಶುಭವಾಗಿವೆ
ಅದೃಷ್ಟದ ಸಂಖ್ಯೆಗಳು: 6, 18, 24, 36, 44, 54
ಶುಭ ದಿನಗಳು: ಸೋಮವಾರ, ಗುರುವಾರ, ಮಂಗಳವಾರ, ಶನಿವಾರ
ಶುಭ ಬಣ್ಣಗಳು: ಕೆನೆ, ನೇರಳೆ, ಕೆಂಪು, ಕೇಸರಿ

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

September Month Horoscope : UnLucky Zodiac Signs Of This Month

September Month Horoscope: these zodiac need to be careful
X
Desktop Bottom Promotion