Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
12 ರಾಶಿಗಳ ಸೆಪ್ಟೆಂಬರ್ ಮಾಸದ ಆರ್ಥಿಕ ಭವಿಷ್ಯ: ನಿಮಗೆ ಹಣದ ವಿಷಯದಲ್ಲಿ ಹೇಗಿದೆ?
ಸೆಪ್ಟೆಂಬರ್ ಮಾಸದ ಭವಿಷ್ಯದ ಪ್ರಕಾರ 12 ರಾಶಿಗಳ ಆರ್ಥಿಕ ಭವಿಷ್ಯ ಹೇಗಿದೆ?
ಮೇಷ ರಾಶಿ
ಮೇಷ ರಾಶಿಯವರು ಆರ್ಥಿಕವಾಗಿ ಮಿಶ್ರಫಲ. ಹಣದ ಬಗ್ಗೆ ಹೆಚ್ಚು ಚಿಂತೆ ಮಾಡಬೇಡಿ, ಹಣಕ್ಕೆ ಸಂಬಂಧಿಸಿದ ಸಮಸ್ಯೆ ಬಗೆಹರಿಯಲಿದೆ. ವ್ಯಾಪಾರಿಗಳು ಈ ಮಾಸ ಹೆಚ್ಚು ಶ್ರಮ ಹಾಕಿದರೆ ಲಶಾಭ ಗಳಿಸಲು ಸಾಧ್ಯವಾಗುವುದು, ನೀವು ಉಳಿತಾಯದ ಕಡಗೆ ಹೆಚ್ಚಿನ ಗಮನಹರಿಸಿದರೆ ಒಳ್ಳೆಯದು.
ವೃಷಭ ರಾಶಿ
ಹಣದ ಸಮಸ್ಯೆ ನಿಮ್ಮನ್ನು ಕಾಡಬಹುದು, ಆದರೆ ನಕಾರಾತ್ಮಕತೆಯು ನಿಮ್ಮನ್ನು ಮೀರಿಸಲು ಬಿಡಬೇಡಿ, ನಿಮ್ಮ ಗುರಿಯ ಮೇಲೆ ಗಮನ ಕೇಂದ್ರೀಕರಿಸಿ, ನೀವು ಹಣಕ್ಕೆ ಸಂಬಂಧಿಸಿದಂತೆ ಹೆಚ್ಚು ಚಿಂತೆ ಮಾಡಲು ಹೋಗಬೇಡಿ, ಸೂಕ್ತ ಸಮಯ ಬಂದಾಗ ಎಲ್ಲವೂ ಬಗೆಹರಿಯಲಿದೆ.

ವೃಷಭ ರಾಶಿ
ಆರ್ಥಿಕವಾಗಿ ಈ ಅವಧಿ ಉತ್ತಮವಾಗಿದೆ. ವಿದೇಶಕ್ಕೆ ಹೋಗಲು ಬಯಸುತ್ತಿದ್ದರೆ ಈ ಅವಧಿಯಲ್ಲಿ ಉತ್ತಮ ಫಲಿತಾಂಶ ಪಡೆಯುತ್ತೀರಿ. ಉದ್ಯಮಿಗಳು ದೊಡ್ಡ ಆರ್ಥಿಕ ಲಾಭವನ್ನು ಪಡೆಯುತ್ತಾರೆ. ಉದ್ಯೋಗಿಗಳಿಗೆ ಈ ಮಾಸ ಆರ್ಥಿಕವಾಗಿ ಉತ್ತಮವಾಗಿರಲಿದೆ.
ಮಿಥುನ ರಾಶಿ
ಈ ಅವಧಿಯಲ್ಲಿ ನೀವು ಹಣದ ಬಗ್ಗೆ ಹೆಚ್ಚು ಜಾಗ್ರತೆವಹಿಸಿ. ಈ ಅವಧಿಯಲ್ಲಿ ವ್ಯಾಪಾರಸ್ಥರು ಕಾನೂನು ವಿಷಯಗಳಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಬೇಗನೆ ಲಾಭ ಗಳಿಸಲು ಅಡ್ಡ ಮಾರ್ಗ ಹಿಡಿದರೆ ತುಂಬಾನೇ ಸಮಸ್ಯೆ ಎದುರಿಸಬೇಕಾಗುತ್ತದೆ. ಈ ಮಾಸ ನಿಮ್ಮ ಬಜೆಟ್ ಮೀರಿ ಖರ್ಚು ಮಾಡಲು ಹೋಗಬೇಡಿ.
ಕರ್ಕ ರಾಶಿ
ಆರ್ಥಿಕವಾಗಿ ಈ ಅವಧಿ ಉತ್ತಮವಾಗಿದೆ. ಉದ್ಯೋಗಸ್ಥರಿಗೆ ಬಡ್ತಿ ದೊರೆಯಬಹುದು, ಇದರಿಂದ ಆರ್ಥಿಕ ಸ್ಥಿತಿ ಮತ್ತಷ್ಟು ಉತ್ತಮವಾಗಿರಲಿದೆ. ಉದ್ಯಮಿಗಳ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯ ಸಾಧ್ಯತೆಯಾಗಲಿದೆ.
ಸಿಂಹ ರಾಶಿ
ಆರ್ಥಿಕವಾಗಿ ಈ ಅವಧಿ ಅಷ್ಟೊಂದು ಉತ್ತಮವಲ್ಲ, ನೀವು ಬಜೆಟ್ ಮೀರಿ ಖರ್ಚು ಮಾಡಲು ಹೋಗಬೇಡಿ. ವ್ಯಾಪಾರಿಗಳು ಹಣದ ಹೂಡಿಕೆ ಮಾಡುವುದಾದರೆ ಸ್ವಲ್ಪ ಸಮಯ ಕಾಯುವುದು ಒಳ್ಳೆಯದು.
ಕನ್ಯಾ ರಾಶಿ
ಹಣಕಾಸಿನ ಪರಿಸ್ಥಿತಿಯು ಉತ್ತಮವಾಗಿರುತ್ತದೆ, ನೀವು ಯಾವುದೇ ಸಾಲ ಮಾಡಿದ್ದರೆ ಅದನ್ನು ಬೇಗನೆ ಮರು ಪಾವತಿ ಮಾಡುವುದು ಒಳ್ಳೆಯದು. ಇಲ್ಲದಿದ್ದರೆ ಮುಂದೆ ಆ ಸಾಲ ನಿಮ್ಮ ಮೇಲೆ ತುಂಬಾ ಒತ್ತಡ ಹಾಕಬಹುದು.
ತುಲಾ ರಾಶಿ
ಹಣದ ವಿಷಯದಲ್ಲಿ ಈ ತಿಂಗಳು ನಿಮಗೆ ಸರಾಸರಿಯಾಗಿರುತ್ತದೆ. ನಿಮ್ಮ ಆದಾಯ ಮತ್ತು ವೆಚ್ಚಗಳ ನಡುವೆ ಸಮತೋಲನವನ್ನು ಕಾಪಾಡಿಕೊಂಡರೆ ಈ ಮಾಸ ಯಾವುದೇ ದೊಡ್ಡ ಸಮಸ್ಯೆ ಇರಲ್ಲ.
ವೃಶ್ಚಿಕ ರಾಶಿ
ಆರ್ಥಿಕ ಪರಿಸ್ಥಿತಿ ಬಲಗೊಳ್ಳಲಿದೆ. ಹಠಾತ್ ಆರ್ಥಿಕ ಲಾಭ ಉಂಟಾಗಬಹುದು. ಹಳೆಯ ಸಾಲ ಮರು ಪಾವತಿ ಮಾಡಲು ಸಾಧ್ಯವಾಗುವುದು. ವ್ಯಾಪಾರಿಗಳು ಈ ಅವಧಿಯಲ್ಲಿ ಉತ್ತಮ ಲಾಭ ಗಳಿಸುತ್ತೀರಿ.
ಧನು ರಾಶಿ
ಆರ್ಥಿಕವಾಗಿ ಈ ಅವಧಿ ತುಂಬಾ ಚೆನ್ನಾಗಿರಲಿದೆ, ಹಾಗಾಗಿ ತುಂಬಾನೇ ಖರ್ಚು ಮಾಡುತ್ತೀರಿ, ದೀರ್ಘ ಪ್ರಯಾಣ ಮಾಡಬಹುದು, ಶಾಪಿಂಗ್ ಅಂತ ಹಣ ಖರ್ಚು ಮಾಡುವಿರಿ. ಆರ್ಥಿಕವಾಗಿ ಈ ಅವಧಿ ಉತ್ತಮವಾಗಿರಲಿದೆ.
ಮಕರ ರಾಶಿ
ನಿಮ್ಮ ಆರ್ಥಿಕ ಸ್ಥಿತಿಯು ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ, ಈ ಅವಧಿಯಲ್ಲಿ ಯಾವುದೇ ಹಣಕಾಸಿನ ವಹಿವಾಟು ಮಾಡಬೇಡಿ. ಸಾಲ ಕೊಡುವುದಾಗಲಿ ಅಥವಾ ಪಡೆಯುವುದಾಗಲಿ ಮಾಡಬೇಡಿ.
ಕುಂಭ ರಾಶಿ
ಹಣಕಾಸಿನ ವಿಷಯಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಆದಾಯವನ್ನು ಹೆಚ್ಚಿಸುವ ಪ್ರಯತ್ನಗಳು ಯಶಸ್ವಿಯಾಗಬಹುದು. ಆಸ್ತಿಗೆ ಸಂಬಂಧಿಸಿದ ಯಾವುದೇ ವಿಷಯವು ನ್ಯಾಯಾಲಯದಲ್ಲಿ ನಡೆಯುತ್ತಿದ್ದರೆ ಅದರ ತೀರ್ಪು ಕೂಡ ನಿಮ್ಮ ಪರವಾಗಿ ಬರಲಿದೆ.
ಮೀನ ರಾಶಿ
ಹಣಕಾಸಿನ ವಿಷಯಗಳಲ್ಲಿ, ತರಾತುರಿಯಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಡಿ, ಇಲ್ಲದಿದ್ದರೆ ನೀವು ಲಾಭದ ಬದಲು ನಷ್ಟಕ್ಕೆ ಒಳಗಾಗಬಹುದು. ವ್ಯಾಪಾರಿಗಳು ಹೆಚ್ಚಿನ ಜಾಗ್ರತೆವಹಿಸಬೇಕು, ಈ ಅವಧಿಯಲ್ಲಿ ಯಾವುದೇ ಹೂಡಿಕೆ ಮಾಡದಿದ್ದರೆ ಒಳ್ಳೆಯದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications