Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ವಾರ ಭವಿಷ್ಯ: ಸೆಪ್ಟೆಂಬರ್ 8-14 ರವರೆಗೆ ಈ 5 ರಾಶಿಯವರು ಸ್ವಲ್ಪ ಜಾಗ್ರತೆ
ವಾರದ ರಾಶಿಫಲ ಪ್ರಕಾರ ಈ ವಾರ ಈ 5 ರಾಶಿಗಳು ಕೆಲ ಸಮಸ್ಯೆಗಳನ್ನು ಎದುರಿಸಬಹುದು ಹಾಗಾಗಿ ಈ ವಾರ ಈ 5 ರಾಶಿಯವರು ಜಾಗ್ರತೆವಹಿಸಿ:

ವೃಷಭ ರಾಶಿ
ಈ ವಾರ ನಿವು ಜಾಗ್ರತೆವಹಿಸಬೇಕು, ಕೆಲಸಕ್ಕೆ ಸಂಬಂಧಿಸಿದ ಕೆಲ ಸಮಸ್ಯೆಗಳಿರಬಹುದು. ಆರ್ಥಿಕವಾಗಿ ಈ ಅವಧಿಯಲ್ಲಿ ಜಾಗ್ರತೆವಹಿಸಬೇಕು. ಲಾಭಕ್ಕಾಗಿ ನೀವು ಅಡ್ಡದಾರಿ ಹಿಡಿಯಬೇಡಿ. ಆರೋಗ್ಯದ ಬಗ್ಗೆ ಹೇಳುವುದಾದರೆ ನೀವು ಅಹಾರಕ್ರಮದ ಕಡೆಗೆ ಗಮನಹರಿಸದಿದ್ದರೆ ಸಮಸ್ಯೆ ಎದುರಿಸಬೇಕಾಗುತ್ತದೆ.
ಅದೃಷ್ಟದ ಬಣ್ಣ ಹಳದಿ
ಅದೃಷ್ಟದ ಸಂಖ್ಯೆ 16
ಶುಭ ದಿನ: ಗುರುವಾರ
ಕರ್ಕ ರಾಶಿ
ಕರ್ಕ ರಾಶಿಯವರಿಗೆ ಈ ವಾರ ಸವಾಲಿನಿಂದ ಕೂಡಿರಲಿದೆ, ನೀವು ವೈಯಕ್ತಿಕ -ವೃತ್ತಿಪರ ಜೀವನದಲ್ಲಿ ನೀವು ಸಹನೆಯಿಂದಿರಬೇಕು, ಇಲ್ಲದಿದ್ದರೆ ದೊಡ್ಡ ಸಮಸ್ಯೆ ಉಂಟಾಗುವುದು. ಕೆಲಸದಲ್ಲಿ ನಿರ್ಲಕ್ಷ್ಯ ತೋರಿಸಿದರೆ ದೊಡ್ಡ ನಷ್ಟ ಅನುಭವಿಸಬೇಕಾಗುತ್ತದೆ. ಆರ್ಥಿಕವಾಗಿ ಈ ಅವಧಿ ಉತ್ತಮವಾಗಿರುವುದಿಲ್ಲ, ಈ ಅವಧಿಯಲ್ಲಿ ಖರ್ಚು ಹೆಚ್ಚು ಬರಲಿದೆ. ಅಲ್ಲದೆ ಮನೆಯ ವಾತಾವರಣ ಕೂಡ ಅಷ್ಟು ಚೆನ್ನಾಗಿರಲ್ಲ, ನಿಮ್ಮ ಹಾಗೂ ಸಂಗಾತಿ ನಡುವೆ ಕೆಲ ಭಿನ್ನಾಭಿಪ್ರಾಯಗಳಿರಬಹುದು. ಸಹೋದರರ ಜೊತೆ ಕೂಡ ಕೆಲ ಭಿನ್ನಾಭಿಪ್ರಾಯಗಳು ಬರಬಹುದು. ಇನ್ನು ಆರೋಗ್ಯ ಸಮಸ್ಯೆಯಿದ್ದರೆ ತುಂಬಾನೇ ಜಾಗ್ರತೆವಹಿಸಬೇಕು.
ಅದೃಷ್ಟದ ಬಣ್ಣ ಕೆನೆ
ಅದೃಷ್ಟದ ಸಂಖ್ಯೆ 5
ಶುಭ ದಿನ: ಶುಕ್ರವಾರ
ಸಿಂಹ ರಾಶಿ
ಈ ಅವಧಿಯಲ್ಲಿ ಕೆಲಸ-ಕಾರ್ಯಗಳಲ್ಲಿ ಅಡೆತಡೆ ಉಂಟಾಗುವುದು. ನೀವು ಕೆಲಸದ ಬಗ್ಗೆ ತುಂಬಾನೇ ಗಮನಹರಿಸಬೇಕು, ಅಲ್ಲದೆ ಸಂಗಾತಿಯ ಜೊತೆ ಭಿನ್ನಾಭಿಪ್ರಾಯ ತಪ್ಪಿಸಬೇಕು, ನಿಮ್ಮ ನಡುವೆ ಏನೇ ಸಮಸ್ಯೆ ಬಂದರು ತಾಳ್ಮೆಯಿಂದ ಬಗೆಹರಿಸಲು ಪ್ರಯತ್ನಿಸಿ. ಈ ವಾರದ ಕೊನೆಯಲ್ಲಿ ಖರ್ಚು ಹೆಚ್ಚು ಬರಲಿದೆ. ಖರ್ಚು ನಿಯಂತ್ರಿಸಿದರೆ ಒಳ್ಳೆಯದು.
ಅದೃಷ್ಟದ ಬಣ್ಣ ನೀಲಿ
ಅದೃಷ್ಟದ ಸಂಖ್ಯೆ 28
ಶುಭ ದಿನ: ಸೋಮವಾರ
ವೃಶ್ಚಿಕ ರಾಶಿ
ಈ ವಾರ ಕೆಲಸದ ಒತ್ತಡ ಅಧಿಕವಿರಲಿದೆ. ಈ ಅವಧಿಯಲ್ಲಿ ಆರ್ಥಿಕವಾಗಿ ನಿಮಗೆ ಒಳ್ಳೆಯದಲ್ಲ, ವ್ಯಾಪಾರಿಗಳು ಹಣದ ತೊಂದರೆಯನ್ನು ಎದುರಿಸಬಹುದು. ಪ್ರಮುಖ ಕೆಲಸ ಕಾರ್ಯಗಳಲ್ಲಿ ಅಡೆತಡೆ ಉಂಟಾಗಬಹುದು. ನೀವು ಅನಗ್ಯತ ಖರ್ಚಿಗೆ ಕಡಿವಾಣ ಹಾಕಿದರೆ ಒಳ್ಳೆಯದು. ಇನ್ನು ಆರೋಗ್ಯದ ಬಗ್ಗೆ ಕೂಡ ಅಧಿಕ ಗಮನಹರಿಸಬೇಕು.
ಅದೃಷ್ಟದ ಬಣ್ಣ ಹಳದಿ
ಅದೃಷ್ಟದ ಸಂಖ್ಯೆ 10
ಶುಭ ದಿನ: ಬುಧವಾರ
ಮಕರ ರಾಶಿ
ಈ ವಾರ ಅಧಿಕ ಸವಾಲುಗಳನ್ನು ಎದುರಿಸಬೇಕಾಗಬಹುದು. ಈ ಸಮಯದಲ್ಲಿ ನೀವು ಅನಗತ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ವ್ಯಾಪಾರಿಗಳು ಭಾರೀ ನಷ್ಟ ಅನುಭವಿಸುವ ಸಾಧ್ಯತೆ ಇದೆ. ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಈ ಸಮಯ ಉತ್ತಮವಲ್ಲ. ಹಣದ ಸಮಸ್ಯೆ ಇರಲ್ಲ, ಆದರೆ ನೀವು ಖರ್ಚು ನಿಯಂತ್ರಿಸದಿದ್ದರೆ ಕಷ್ಟ, ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು.
ಅದೃಷ್ಟದ ಬಣ್ಣ ಕೆಂಪು
ಅದೃಷ್ಟದ ಸಂಖ್ಯೆ 32
ಶುಭ ದಿನ: ಮಂಗಳವಾರ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
