ಪ್ರೀತಿ ಭವಿಷ್ಯ: ಈ ವಾರದ ಭವಿಷ್ಯ ಪ್ರಕಾರ ವಿವಾಹಿತರಿಗೆ, ಪ್ರೇಮಿಗಳಿಗೆ ಈ ವಾರ ಹೇಗಿರಲಿದೆ?

ಈ ವಾರದ ಭವಿಷ್ಯ ಪ್ರಕಾರ ಈ ವಾರ ನಿಮ್ಮ ಪ್ರೀತಿ ಜೀವನ ಹೇಗಿರಲಿದೆ? ವಿವಾಹಿತರಿಗೆ ಶುಭವೇ, ಪ್ರೇಮಿಗಳಿಗೆ ಹೇಗಿರಲಿದೆ? ಅವಾಹಿತರಿಗೆ ಮದುವೆ ಸಂಬಂಧ ಬರುವುದೇ ಎಂದು ನೋಡೋಣ ಬನ್ನಿ:

September 8-14 Love Horoscope

ಮೇಷ ರಾಶಿ

ಸಂಬಂಧದ ವಿಷಯಲ್ಲಿ ನೋಡುವುದಾದರೆ ಮೇಷ ರಾಶಿಯವರ ಪ್ರೀತಿ ಜೀವನ ಚೆನ್ನಾಗಿರಲಿದೆ. ಪ್ರೇಮಿಗಳಿಗೆ ಈ ವಾರ ವಿಶೇಷವಾಗಿರಲಿದೆ. ನಿಮ್ಮ ಹಾಗೂ ಸಂಗಾತಿಯ ನಡುವೆ ಭಿನ್ನಾಭಿಪ್ರಾಯವಿದ್ದರೆ ಅದು ಬಗೆಹರಿಯಲಿದೆ.

ವೃಷಭ ರಾಶಿ

ಸಂಬಂಧದಲ್ಲಿ ಕೆಲವು ಭಿನ್ನಾಭಿಪ್ರಾಯಗಳಿರಬಹುದು, ಕೆಲವು ವಿವಾದತ್ಮಕ ವಿಷಯಗಳ ಬಗ್ಗೆ ಚರ್ಚೆ ಮಾಡಬೇಡಿ. ಪ್ರೇಮಿಗಳ ನಡುವೆ ಕೆಲ ಭಿನ್ನಾಭಿಪ್ರಾಯಗಳಿರಬಹುದು, ನಿಮ್ಮ ಮದುವೆಗೆ ಒಪ್ಪಿಗೆ ಸಿಗುವುದು ಕಷ್ಟವಾಗುವುದು.

ಮಿಥುನ ರಾಶಿ

ನಿಮ್ಮ ಹಾಗೂ ಸಂಗಾತಿ ನಡುವೆ ಏನೇ ಭಿನ್ನಾಭಿಪ್ರಾಯವಿದ್ದರೆ ಅದನ್ನು ಮಾತನಾಡಿ ಬಗೆಹರಿಸಲು ಪ್ರಯತ್ನಿಸಿ. ಕೋಪ ನಿಯಂತ್ರಿಸಿ, ಇಲ್ಲದಿದ್ದರೆ ನಿಮ್ಮ ಸಂಬಂಧ ಮತ್ತಷ್ಟು ಹಾಳಾಗುವುದು.

ಕರ್ಕ ರಾಶಿ

ಸಂಬಂಧದ ಬಗ್ಗೆ ಹೇಳುವುದಾದರೆ ಕುಟುಂಬ ಜೀವನದ್ಲಿ ಕೆಲ ಸಮಸ್ಯೆಗಳಿರಬಹುದು, ಅಲ್ಲದೆ ವೈವಾಹಿಕ ದೃಷ್ಟಿಯಿಂದ ಈ ಅವಧಿ ಉತ್ತಮವಾಗಿರಲಿದೆ. ಪ್ರೇಮಿಗಳ ನಡುವೆ ಭಿನ್ನಾಭಿಪ್ರಾಯಗಳಿರಬಹುದು.

ಸಿಂಹ ರಾಶಿ

ನಿಮ್ಮ ಹಾಗೂ ಸಂಗಾತಿ ನಡುವೆ ಕೆಲ ಭಿನ್ನಾಭಿಪ್ರಾಯಗಳಿರಬಹುದು. ಆದರೆ ನೀವು ನಿಮ್ಮಿಬ್ಬಿರ ನಡುವಿನ ಭಿನ್ನಾಭಿಪ್ರಾಯ ಕಡಿಮೆ ಮಾಡಲು ಪ್ರಯತ್ನಿಸಬೇಕು. ಖರ್ಚು ಅಧಿಕವಿರಲಿದೆ. ಆರ್ಥಿಕ ಸಮಸ್ಯೆಯೂ ನಿಮ್ಮ ಸಂಬಂಧದ ಮೇಲೆ ಪರಿಣಾಮ ಬೀರುವುದು.

ಕನ್ಯಾ ರಾಶಿ

ಸಂಬಂಧದ ದೃಷ್ಟಿಯಿಂದ ಈ ಅವಧಿ ಉತ್ತಮವಾಗಿರಲಿದೆ. ಅವಾಹಿತರಿಗೆ ಮದುವೆ ಸಂಬಂಧ ಬರಬಹುದು, ಪ್ರೇಮಿಗಳಿಗೆ ಈ ಅವಧಿ ಉತ್ತಮವಾಗಿರಲಿದೆ.

ತುಲಾ ರಾಶಿ

ಸಂಬಂಧಗಳ ವಿಷಯದಲ್ಲಿ ಈ ವಾರ ನಿಮಗೆ ಉತ್ತಮವಾಗಿರುತ್ತದೆ. ನೀವು ಕುಟುಂಬ ಜೀವನದ ಕಡೆಗೆ ಹೆಚ್ಚಿನ ಗಮನಹರಿಸಬೇಕು. ಖರ್ಚು ಮಿತಗೊಳಿಸಿದರೆ ಒಳ್ಳೆಯದು. ಇಲ್ಲದಿದ್ದರೆ ಈ ವಿಷಯಕ್ಕೆ ನಿಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯವಿರಬಹುದು.

ವೃಶ್ಚಿಕ ರಾಶಿ

ಸಂಗಾತಿಯ ಜೊತೆ ಭಿನ್ನಾಭಿಪ್ರಾಯವಿದ್ದರೆ ಅದನ್ನು ಬಗೆಹರಿಸಲು ಪ್ರಯತ್ನಿಸಬೇಕು. ನಿಮ್ಮ ನಡುವಿನ ಸಮಸ್ಯೆ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬೇಕು. ಪ್ರೇಮಿಗಳ ನಡುವೆ ಭಿನ್ನಾಭಿಪ್ರಾಯವಿರಬಹುದು.

ಧನು ರಾಶಿ

ಈ ವಾರ ನಿಮಗೆ ಶುಭವಾಗಿದೆ. ನಿಮ್ಮ ಹಾಗೂ ಸಂಗಾತಿಯ ನಡುವಿನ ಸಂಬಂಧ ತುಂಬಾ ಚೆನ್ನಾಗಿರಲಿದೆ. ಪ್ರೇಮಿಗಳು ತಮ್ಮ ಬಂಧವನ್ನು ಗಟ್ಟಿಯಾಗಿಸಲು ಪ್ರಯತ್ನಿಸಬೇಕು.

ಮಕರ ರಾಶಿ

ಅನಗ್ಯತ ವಿವಾದಗಳಲ್ಲಿ ಸಿಲುಕಿ ಹಾಕಿಕೊಳ್ಳದಂತೆ ಜಾಗ್ರತೆವಹಿಸಿ, ನಿಮ್ಮ ಹಾಗೂ ಸಂಗಾತಿ ನಡುವೆ ಭಿನ್ನಾಭಿಪ್ರಾಯವಿದ್ದರೆ ಅದನ್ನು ಬಗೆಹರಿಸಲು ಪ್ರಯತ್ನಿಸಿ. ಪ್ರೇಮಿಗಳ ನಡುವೆ ಕೂಡ ಕೆಲ ಭಿನ್ನಾಭಿಪ್ರಾಯವಿರಬಹುದು. ಇನ್ನು ಅವಾಹಿತರಿಗೆ ಮದುವೆ ಸಂಬಂಧ ಬಂದರೆ ಚೆನ್ನಾಗಿ ವಿಚಾರಿಸಿದ ಬಳಿಕವಷ್ಟೇ ಒಪ್ಪಿಕೊಳ್ಳುವುದು ಒಳ್ಳೆಯದು.

ಕುಂಭ ರಾಶಿ

ಮನೆಯಲ್ಲಿ ಏನಾದರು ಸಮಸ್ಯೆವಿದ್ದರೆ ಅದನ್ನು ಬಗೆಹರಿಸಲು ಪ್ರಯತ್ನಿಸಿದರೆ ಉತ್ತಮ, ಇಲ್ಲದಿದ್ದರೆ ಮನೆಯ ನೆಮ್ಮದಿ ಹಾಳಾಗುವುದು, ನಿಮ್ಮ ಸಂಗಾತಿಯ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ.

ಮೀನ ರಾಶಿ

ಮೀನ ರಾಶಿಯವರಿಗೆ ಈ ಅವಧಿ ಉತ್ತಮವಾಗಿದೆ. ಈ ವಾರ ಕುಟುಂಬ ಜೀವನ ಚೆನ್ನಾಗಿರಲಿದೆ. ವೈವಾಹಿಕ ಬದುಕು ತುಂಬಾ ಚೆನ್ನಾಗಿರಲಿದೆ. ಪ್ರೇಮಿಗಳಿಗೂ ಈ ಅವಧಿ ಉತ್ತಮವಾಗಿರಲಿದೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

September 8-14 Love Horoscope Prediction For 12 Zodiac In Kannada

Here is September 8-14 Love Horoscope Prediction for your zodiac signs, read on.
Story first published: Sunday, September 8, 2024, 18:19 [IST]
X
Desktop Bottom Promotion