Latest Updates
-
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ?
29 September Horoscope: ಸೆಪ್ಟೆಂಬರ್ 29ರಂದು ಶ್ರಮ, ಖರ್ಚು ಹೆಚ್ಚು!
ವೈದಿಕ ಶಾಸ್ತ್ರದ ಪ್ರಕಾರ ಸೆಪ್ಟೆಂಬರ್ 29 (29 September Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯವರಲ್ಲಿ ಇಂದು ದೊಡ್ಡ ಸವಾಲುಗಳು ಎದುರಾಗಬಹುದು. ನಿಮ್ಮ ಹಲವು ಕೆಲಸಗಳಲ್ಲಿ ಲಾಭವಿದೆ. ಮನೆಯ ವಾತಾವರಣದಲ್ಲಿ ಹಣಕಾಸು ಸಂಬಂಧ ಒತ್ತಡ ಇರಲಿದೆ. ಯಾರಿಗಾದರು ಹಣ ನೀಡಬೇಕಾದರೆ ಎಚ್ಚರಿಕೆಯಿಂದ ಇರುವುದು ಉತ್ತಮ.
ವೃಷಭ ರಾಶಿ
ವೃಷಭ ರಾಶಿಯ ಜನರು ಇಂದು ಮಿಶ್ರ ಫಲ ನೋಡಬಹುದು. ನಿಮ್ಮ ಕೆಲಸಗಳಲ್ಲಿ ಇಂದು ಸಣ್ಣ ಪುಟ್ಟ ಅಡೆತಡೆಗಳು ನೋಡಬಹುದು. ಹಲವರಿಗೆ ಹಣಕಾಸಿನ ಸಮಸ್ಯೆಗಳು ಎದುರಾಗಬಹುದು. ದೂರವಾಣಿ ಕರೆಯೊಂದರಿಂದ ಚಿಂತೆ ಕಾಡುವ ಸಂಭವವಿದೆ.

ಮಿಥುನ ರಾಶಿ
ಮಿಥುನ ರಾಶಿಯ ಜನರು ಇಂದು ಸಮಸ್ಯೆಗಳ ಎದುರಿಸುವ ಸಮಯ. ನಿಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಅರ್ಧದಲ್ಲಿಯೇ ನಿಲ್ಲಿಸಬೇಕಾಗಬಹುದು. ಶ್ರಮದಾಯಕ ಕೆಲಸಗಳಲ್ಲಿ ಭಾಗಿಯಾಗಬಹುದು. ಕೆಲವೊಂದು ಆರೋಪ ನಿಮ್ಮ ಮೇಲೆ ಬರಬಹುದು.
ಕರ್ಕ ರಾಶಿ
ಕರ್ಕ ರಾಶಿಯ ಜನರಿಗೆ ಮಿಶ್ರಫಲದ ದಿನ. ದಿನದ ಆರಂಭದಲ್ಲಿ ದೊಡ್ಡ ಸವಾಲು ಎದುರಾಗಬಹುದು. ಮಹಿಳೆಯರು ವಾಹನ ಚಲಾಯಿಸುವಾಗ ಎಚ್ಚರಿಕೆ ವಹಿಸಿ. ಅನೇಕರಲ್ಲಿ ಸಾಲ ಹೆಚ್ಚಾಗುವ ಸಮಯವಿದು.
ಸಿಂಹ ರಾಶಿ
ಸಿಂಹ ರಾಶಿಯ ಜನರಿಗೆ ಇಂದು ಆರ್ಥಿಕವಾಗಿ ಬಲವಾಗುವ ದಿನ. ನಿಮ್ಮ ದೊಡ್ಡ ಖರ್ಚುಗಳು ನಿವಾರಣೆಯಾಗುವ ದಿನ. ಪ್ರಯಾಣಗಳಲ್ಲಿ ಸುಖವಿದೆ. ನಿಮ್ಮ ಹಣಕಾಸು ವ್ಯವಹಾರಗಳಲ್ಲಿ ಉತ್ತಮ ದಿನ ಮನೆಗಾಗಿ ವಸ್ತುವೊಂದನ್ನು ನೀವು ಖರೀದಿಸಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರು ಇಂದು ಪ್ರಯಾಣದಲ್ಲಿ ತೊಡಗಬಹುದು. ನಿಮ್ಮ ಹಲವು ಪ್ರಯತ್ನಗಳಲ್ಲಿ ಇಂದು ಯಶಸ್ಸು ಪಡೆಯುವ ದಿನ. ಆಪ್ತರಿಂದ ಬರಬೇಕಿದ್ದ ಹಣ ನಿಮ್ಮ ಕೈ ಸೇರಬಹುದು. ಅನೇಕರಲ್ಲಿ ದೊಡ್ಡ ಮಟ್ಟದ ಲಾಭಿವಿದೆ.
ತುಲಾ ರಾಶಿ
ತುಲಾ ರಾಶಿಯ ಜನರಲ್ಲಿ ಸವಾಲುಗಳು ಎದುರಾಗಬಹುದು. ನಿಮ್ಮ ಹಣಕಾಸಿಗೆ ಸಂಬಂಧಿಸಿದ ನಿರ್ಧಾರವು ನಿಮಗೆ ಸಮಸ್ಯೆ ತರಬಹುದು. ಬ್ಯಾಂಕಿಂಗ್ ವ್ಯವಹಾರಗಳಲ್ಲಿ ಚಿಂತೆ ಇದೆ. ಮನೆಯ ನವೀಕರಣ ಸಂಬಂಧವಾಗಿ ಆಲೋಚಿಸಬಹುದು. ಸರ್ಕಾರಿ ನೌಕರರಿಗೆ ಇಂದು ಶ್ರಮದಾಯಕ ದಿನ.
ವೃಶ್ಚಿಕ ರಾಶಿ
ನಿಮಗಿಂದು ಮಿಶ್ರಫಲದಿಂದ ತುಂಬಿದ ದಿನ. ದಿನದ ಆರಂಭವು ಚೆನ್ನಾಗಿರಲಿದೆ. ಆದ್ರೆ ದಿನದ ಅಂತ್ಯದಲ್ಲಿ ಸಮಸ್ಯೆಗಳು ಬರಬಹುದು. ಗೃಹಿಣಿಯರಲ್ಲಿ ಅನಾರೋಗ್ಯ ಕಾಡಬಹುದು. ಕೆಲಸದ ಕಾರಣಕ್ಕೆ ನೀವು ಕೈಗೊಳ್ಳುವ ಪ್ರಯಾಣಗಳಿಂದ ಇಂದು ನಿರೀಕ್ಷಿತ ಫಲ ಸಿಗದೆ ಇರಬಹುದು.
ಧನು ರಾಶಿ
ಧನು ರಾಶಿಯ ಜನರಲ್ಲಿ ಇಂದು ಅನುಕೂಲಕರ ದಿನ. ವ್ಯಾಪಾರಿ ವಲಯವು ಲಾಭ ನೋಡಲಿದೆ. ಹೊಸ ಆರಂಭಗಳು ಉಂಟಾಗಬಹುದು. ಅವಿವಾಹಿತರಲ್ಲಿ ಖರ್ಚಿನ ದಿನ. ಪಡೆದ ಹಣ ಮರಳಿಸುವಂತೆ ಒತ್ತಡಗಳು ಬರಬಹುದು. ವಾಹನ ಸಂಬಂಧಿ ಖರ್ಚು ಹೆಚ್ಚಾಗಲಿದೆ.
ಮಕರ ರಾಶಿ
ಮಕರ ರಾಶಿಯ ಜನರಿಗೆ ಇಂದು ಸಮಸ್ಯೆಗಳಿವೆ. ನೀವು ಬಯಸಿದಂತಹ ಹಣಕಾಸು ಸ್ಥಿರತೆ ಸಿಗದೆ ಇರಬಹುದು. ದೂರ ಸಂಬಂಧಿಕರ ವಿಚಾರದಲ್ಲಿ ಚಿಂತೆ ಕಾಡಬಹುದು. ಯಾರಿಂದಾದರು ಹಣ ಬಯಸಿದ್ದರೆ ಈ ಸಮಯದಲ್ಲಿ ಕೈಗೂಡುವುದು ಕಷ್ಟವಾಗಬಹುದು.
ಕುಂಭ ರಾಶಿ
ಕುಂಭ ರಾಶಿಯ ಜನರಿಗೆ ಉತ್ತಮ ದಿನ ಎನ್ನಬಹುದು. ನಿಮ್ಮ ಕೆಲಸಗಳನ್ನು ಶ್ರದ್ಧೆಯಿಂದ ಪುರ್ಣ ಮಾಡಿ. ಪ್ರಯಾಣಗಳ ಮಾಡುವಾಗ ಎಚ್ಚರಿಕೆಯಿಂದಿರಿ. ಯಾವುದೇ ವಿಚಾರದಲ್ಲಾಗಲಿ ತರಾತುರಿಯ ನಿರ್ಧಾರ ಕೈಗೊಳ್ಳಬೇಡಿ.
ಮೀನ ರಾಶಿ
ಮೀನ ರಾಶಿಯ ಜನರಲ್ಲಿ ಇಂದು ಅತ್ಯಂತ ಪ್ರಯಾಸದಾಯಕ ದಿನ. ಕೆಲಗಳಲ್ಲಿ ಚಿಂತೆ, ಒತ್ತಡ ಬರಬಹುದು. ಅಗತ್ಯ ಕೆಲಸವೊಂದಕ್ಕೆ ನಿಮ್ಮಲ್ಲಿ ಹಣಕಾಸಿನ ಕೊರತೆ ಎದುರಾಗಬಹುದು. ಆಪ್ತರಿಂದ ಸಹಕಾರ ಪಡೆಯುತ್ತೀರಿ. ಮನೆಯಲ್ಲಿನ ವಸ್ತುವೊಂದು ದುರಸ್ತಿಯಾಗಬಹುದು.



Click it and Unblock the Notifications











