Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
28 September Horoscope: ಸೆಪ್ಟೆಂಬರ್ 28ರಂದು ಯಾರಿಗೆ ಧನಲಾಭ?
ವೈದಿಕ ಶಾಸ್ತ್ರದ ಪ್ರಕಾರ ಸೆಪ್ಟೆಂಬರ್ 28 (28 September Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿ ಜನರಿಗೆ ಇಂದು ಬಹಳ ಅನುಕೂಲಕರ ದಿನ. ನಿಮ್ಮ ಹಲವು ಕೆಲಸಗಳಲ್ಲಿ ಇಂದು ಧನಾತ್ಮಕ ಲಾಭವಿದೆ. ಹಲವರು ಇಂದು ಪ್ರಯಾಣ ಮಾಡಿಕೊಳ್ಳಬಹುದು. ಆಪ್ತರೊಬ್ಬರಿಂದ ನಿಮಗೆ ಹಣಕಾಸಿನ ನೆರವು ಇರಲಿದೆ. ಅನೇಕರಿಗೆ ಸಮಸ್ಯೆಗಳು ಪರಿಹಾರವಾಗುವ ದಿನ.
ವೃಷಭ ರಾಶಿ
ವೃಷಭ ರಾಶಿಯ ಜನರಿಗೆ ಇಂದು ಬಹಳ ಅನುಕೂಲಕರ ದಿನ. ನಿಮ್ಮ ಹಲವು ದಿನಗಳಿಂದ ಬಾಕಿ ಉಳಿದಿದ್ದ ಕೆಲಸಗಳ ಪೂರ್ಣ ಮಾಡಬಹುದು. ಆಪ್ತರೊಬ್ಬರು ನಿಮ್ಮಿಂದ ಹಣ ಪಡೆಯುವ ಸಲುವಾಗಿ ಭೇಟಿಯಾಗಬಹುದು.

ಮಿಥುನ ರಾಶಿ
ನೀವುಂದು ಪ್ರಯಾಣಗಳ ಮಾಡುವ ಸಮಯ. ನಿಮ್ಮ ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆಯಲಿದೆ. ನಿಮ್ಮ ಹಲವು ಕೆಲಸಗಳು ನೀವು ಅಂದುಕೊಂಡಂತೆ ನಡೆಯಲಿದೆ. ಆಪ್ತರೊಬ್ಬರಿಗೆ ನೀಡಿದ ಹಣ ಮರಳಿ ಕೈ ಸೇರಬಹುದು.
ಕರ್ಕ ರಾಶಿ
ಕರ್ಕ ರಾಶಿಯ ಜನರು ಇಂದು ಮಿಶ್ರ ಫಲ ನೋಡುವಿರಿ. ಬಹಳ ಸಮಯದಿಂದ ಪೂರ್ಣವಾಗದೆ ನಿಲ್ಲಿಸಿರುವ ಕೆಲಸ ಮುಂದುವರೆಸುವಿರಿ. ಸವಾಲುಗಳಿಂದ ತುಂಬಿದ ದಿನವಾಗಿ ನೋಡಬಹುದು. ಹಾಗೆ ಅನೇಕರಲ್ಲಿ ಇಂದು ಪ್ರಯಾಣದ ದಿನ.
ಸಿಂಹ ರಾಶಿ
ಸಿಂಹ ರಾಶಿಯವರಲ್ಲಿ ಇಂದು ಸವಾಲುಗಳಿಂದ ತುಂಬಿದ ದಿನವಾಗಿರಲಿದೆ. ನಿಮ್ಮ ಹಣಕಾಸು ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಆಪ್ತರೊಬ್ಬರಿಂದ ನಿಮಗೆ ಹಣಕಾಸು ವಿಚಾರಣೆ ಬರಬಹುದು. ಆಹಾರ ಸಂಬಂಧಿ ಖರ್ಚು ಇರಲಿದೆ. ಪ್ರಯಾಣ ಮಾಡುವಾಗ ಎಚ್ಚರ ವಹಿಸಿ.
ಕನ್ಯಾ ರಾಶಿ
ಕನ್ಯಾ ರಾಶಿಯವರು ಕೆಲಸದ ವಿಚಾರವಾಗಿ ಪ್ರಯಾಣ ಮಾಡಬೇಕಾಗುತ್ತದೆ. ಆಪ್ತರೊಬ್ಬರಿಗೆ ನಿಮ್ಮಿಂದಾಗಿ ಹಣಕಾಸಿನ ನೆರವು ನೀಡಬೇಕಾಗುತ್ತದೆ. ಪ್ರಯಾಣ ಮಾಡುವಿರಿ. ಮನೆಯ ವಾತಾವರಣ ಶಾಂತವಾಗಿರಲಿದೆ.
ತುಲಾ ರಾಶಿ
ತುಲಾ ರಾಶಿಯ ಜನರಲ್ಲಿ ಇಂದು ಮಿಶ್ರ ಫಲ. ಆದ್ರೆ ಗೃಹಿಣಿಯರಲ್ಲಿ ಮನೆಯೊಳಗಿನ ಸಮಸ್ಯೆಗಳು ಹೆಚ್ಚಾಗಬಹುದು. ಸಭಾ ಸಮಾರಂಭದಲ್ಲಿ ನೀವಿಂದು ಭಾಗಿಯಾಗಬಹುದು. ದಿನದ ಅಂತ್ಯದಲ್ಲಿ ದುಂದು ವೆಚ್ಚಕ್ಕೆ ನೀವು ಒಳಗಾಗಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಇಂದು ಉತ್ತಮ ದಿನ. ಗೃಹಿಣಿಯರಲ್ಲಿ ಧನಲಾಭದ ನಿರೀಕ್ಷೆ ಇದೆ. ನಿಮ್ಮ ಹಲವು ಕೆಲಸಗಳಲ್ಲಿ ಶುಭವಿದೆ. ಮನೆಯ ಹಿರಿಯರೊಬ್ಬರ ಆರೋಗ್ಯದಲ್ಲಿ ಏರುಪೇರಾಗುವ ಸಂಭವವಿದೆ.
ಧನು ರಾಶಿ
ಧನು ರಾಶಿಯ ಜನರಲ್ಲಿ ಇಂದು ಅನುಕೂಲಗಳ ನೋಡಬಹುದು. ಪ್ರಯಾಣಗಳಲ್ಲಿ ಶುಭವಿದೆ. ಅನೇಕರಿಗೆ ಇಂದು ಸಮಸ್ಯೆಗಳಿದ್ದರೂ ದಿನದ ಅಂತ್ಯದಲ್ಲಿ ಶಾಂತತೆ ಇರಲಿದೆ. ವಾಹನ ಸಂಬಂಧಿ ಖರ್ಚು ಇರಲಿದೆ. ಅನೇಕರಿಗೆ ದೂರ ಪ್ರಯಾಣಗಳ ಮಾಡುವಾಗ ಸಮಸ್ಯೆಗಳು ಎದುರಾಗಬಹುದು.
ಮಕರ ರಾಶಿ
ಮಕರ ರಾಶಿಯ ಜನರಲ್ಲಿ ಇಂದು ಅನೇಕ ರೀತಿಯ ಸವಾಲುಗಳು ಎದುರಾಗಬಹುದು. ಆಪ್ತರೊಬ್ಬರಿಗೆ ಹಣಕಾಸಿನ ನೆರವು ನೀಡಬೇಕಾಗಬಹುದು. ಸಾಲದ ಪ್ರಮಾಣ ಕಡಿಮೆಯಾಗುವ ನಿರೀಕ್ಷೆ ಇದೆ. ದೊಡ್ಡ ಕೆಲಸಗಳಲ್ಲಿ ನಿಮಗೆ ಸವಾಲುಗಳು ಇರಬಹುದು.
ಕುಂಭ ರಾಶಿ
ನಿಮಗಿಂದು ಶ್ರಮದಾಯಕ ದಿನ ಎನ್ನಬಹುದು. ಕುಟುಂಬಸ್ಥರ ಜೊತೆ ಪ್ರಯಾಣ ಮಾಡಬಹುದು. ವಾಹನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಸ್ನೇಹಿತರೊಬ್ಬರ ಭೇಟಿಯಾಗುತ್ತೀರಿ. ನಿಮ್ಮ ಬಹುದಿನದ ವಿಚಾರವೊಂದರಲ್ಲಿ ಶುಭವಿದೆ. ಮನೆಯಲ್ಲಿ ಶಾಂತತೆ ಇರಲಿದೆ. ಸಾಲ ಮಾಡಲು ಮುಂದಾಗದೆ ಇರುವುದು ಉತ್ತಮ.
ಮೀನ ರಾಶಿ
ಮೀನ ರಾಶಿಯ ಜನರಲ್ಲಿ ಇಂದು ಉತ್ತಮ ದಿನ. ಗೃಹಿಣಿಯರ ಆರೋಗ್ಯದಲ್ಲಿ ಸುಧಾರಣೆಯಾಗಲಿದೆ. ದೇವಾಲಯ ಭೇಟಿಯ ಸಾಧ್ಯತೆ ಇದೆ. ವ್ಯಾಪಾರಿಗಳಿಗೆ ಸಾಮಾನ್ಯ ದಿನವಾಗಿರಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications