Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
27 September Horoscope: ಸೆಪ್ಟೆಂಬರ್ 27ರಂದು ಆರ್ಥಿಕ ಪ್ರಗತಿ, ವ್ಯಾಪಾರ ವೃದ್ಧಿ
ವೈದಿಕ ಶಾಸ್ತ್ರದ ಪ್ರಕಾರ ಸೆಪ್ಟೆಂಬರ್ 27 (27 September Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಜನರು ಇಂದು ಬಹಳ ಉತ್ತಮ ದಿನವಾಗುತ್ತಿದೆ. ನಿಮ್ಮ ಹಲವು ಕೆಲಸಗಳಲ್ಲಿ ನಿಮಗೆ ಅನುಕೂಲಕರ ದಿನ. ಅನೇಕರಿಗೆ ಇಂದು ಹಣಕಾಸಿನ ವಿಚಾರವಾಗಿ ನೀವು ಅಂದುಕೊಂಡಂತಹ ದಿನವಾಗುತ್ತಿದೆ. ವಿವಾಹ ಸಂಬಂಧಿ ಶುಭ ಸುದ್ದಿ ಬರಬಹುದು.
ವೃಷಭ ರಾಶಿ
ವೃಷಭ ರಾಶಿಯ ಜನರಿಗೆ ಇಂದು ಮಿಶ್ರ ಫಲವಿದೆ. ಮಹಿಳೆಯರು ವಾಹನ ಚಲಾಯಿಸುವಾಗ ಎಚ್ಚರಿಕೆ ಇಡಿ. ನಿಮ್ಮಲ್ಲಿ ಆರ್ಥಿಕ ಸಮಸ್ಯೆಗಳಿದ್ದರೆ ಮೂರನೆ ವ್ಯಕ್ತಿಯ ಸಲಹೆಯೊಂದನ್ನು ಅನುಸರಿಸುವುದು ಉತ್ತಮ.

ಮಿಥುನ ರಾಶಿ
ಮಿಥುನ ರಾಶಿಯ ಜನರಲ್ಲಿ ಇಂದು ಉತ್ತಮ ಫಲಿತಾಂಶ ನೋಡುವ ದಿನ. ಆಪ್ತರಿಗೆ ನಿಮ್ಮಿಂದಾಗಿ ಸಹಾಯವಾಗುವ ನಿರೀಕ್ಷೆ ಇದೆ. ಪ್ರಯಾಣ ಮಾಡುವಿರಿ. ಪಂಚೇಂದ್ರಿಯ ಸಂಬಂಧಿ ಸಮಸ್ಯೆ ಇರಬಹುದು. ಕಠಿಣ ಕೆಲಸಗಳನ್ನು ಸುಲಭವಾಗಿ ಮಾಡಿ ಮುಗಿಸುವಿರಿ.
ಕರ್ಕ ರಾಶಿ
ಕರ್ಕ ರಾಶಿಯ ಜನರಿಗೆ ಇಂದು ಅನುಕೂಲಕರ ದಿನ. ಆಪ್ತರಿಂದ ಹಣಕಾಸಿನ ನೆರವು ಸಿಗಬಹುದು. ಅನೇಕರಲ್ಲಿ ಉದರ ಸಂಬಂಧಿ ಸಮಸ್ಯೆ ಕಾಡಬಹುದು. ದಿನದ ಅಂತ್ಯದಲ್ಲಿ ಖರ್ಚು ಹೆಚ್ಚಾಗಬಹುದು.
ಸಿಂಹ ರಾಶಿ
ಸಿಂಹ ರಾಶಿಯ ಜನರಿಗೆ ಮಿಶ್ರ ಫಲವಿದೆ. ಆಪ್ತರೊಬ್ಬರಿಂದ ನಿಮಗೆ ದೊಡ್ಡ ಕೆಲಸ ಬರಬಹುದು. ವಾಹನ ಸವಾರರು ಲಾಭ ಮಾಡಬಹುದು. ವ್ಯಾಪಾರಿಗಳು ಬುದ್ದಿವಂತಿಕೆಯಿಂದ ವ್ಯವಹಾರ ಮಾಡಬೇಕಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರಲ್ಲಿ ಇಷ್ಟು ದಿನದಿಂದ ಕಾಡುತ್ತಿದ್ದ ಕೌಟುಂಬಿಕ ಸಮಸ್ಯೆಯೊಂದು ಬಗೆಹರಿಯಲಿದೆ. ದಾಂಪತ್ಯ ವಿಚಾರದಲ್ಲಿ ನಿಮಗೆ ಸುಖವಿದೆ. ಮನೆಯಲ್ಲಿ ಶಾಂತಿಯ ವಾತಾವರಣ ಇರಲಿದೆ. ಸಮಸ್ಯೆಗಳಿಂದ ಅಪಸ್ವರ ಕಾಡಬಹುದು. ಕುಟುಂಬಸ್ಥರ ಎದುರು ಹಾಕಿಕೊಳ್ಳಬೇಡಿ.
ತುಲಾ ರಾಶಿ
ತುಲಾ ರಾಶಿ ಜನರಿಗೆ ಇಂದು ಉತ್ತಮ ದಿನ. ನಿಮ್ಮ ಅನೇಕ ಕೆಲಗಳಲ್ಲಿ ಶುಭವಿದೆ. ಪ್ರಯಾಣಗಳಲ್ಲಿ ತೊಡಗಬಹುದು. ಗೃಹಿಣಿಯರು ಹಣಕಾಸು ಸಂಬಂಧವಾಗಿ ಲಾಭ ನೋಡಬಹುದು. ಮಕ್ಕಳ ಕುರಿತಾದ ಚಿಂತೆಯೊಂದು ದೂರಾಗಲಿದೆ. ಉಳಿತಾಯದ ಕಡೆ ಗಮನ ಹರಿಸುವಿರಿ.
ವೃಶ್ಚಿಕ ರಾಶಿ
ನಿಮಗಿಂದು ಬಹಳ ಶ್ರಮದಾಯಕ ಹಾಗೆ ಓಡಾಟದ ದಿನವಾಗುತ್ತಿದೆ. ಮನೆಯ ಸದಸ್ಯರೊಬ್ಬರ ಕೆಲಸ ಸಂಬಂಧವಾಗಿ ನೀವು ಪ್ರಯಾಣ ಮಾಡುವಿರಿ. ಸಾಲ ಮರುಪಾವತಿ ಸಂಬಂಧವಾಗಿ ಒತ್ತಡಗಳು ಎದುರಾಗಬಹುದು. ಮನೆಯಲ್ಲಿ ಶಾಂತಿ ಇರಲಿದೆ.
ಧನು ರಾಶಿ
ಧನು ರಾಶಿಯ ಜನರಿಗೆ ಇಂದು ಮಿಶ್ರ ಫಲ. ನಿಮ್ಮ ದಿಢೀರ್ ಪ್ರಯಾಣಗಳು ಖರ್ಚುಗಳಿಗೆ ಕಾರಣವಾಗಬಹುದು. ಹಣಕಾಸಿನ ವಿಚಾರವಾಗಿ ಎಚ್ಚರಿಕೆಯ ಹೆಜ್ಜೆ ಇಡಿ. ವ್ಯವಹಾರಗಳನ್ನು ಮಾಡುವಾಗ ಎಚ್ಚರವಿರಲಿ. ತಂದೆ ತಾಯಿಯ ಮಾತನ್ನು ನಿರ್ಲಕ್ಷಿಸುವುದು ಬೇಡ.
ಮಕರ ರಾಶಿ
ಮಕರ ರಾಶಿಯ ಜನರಲ್ಲಿ ಇಂದು ಉತ್ತಮ ಲಾಭವಿದೆ. ಆಪ್ತರೊಬ್ಬರಿಗೆ ನಿಮ್ಮ ಸಹಾಯ ಬೇಕಾಗಬಹುದು. ಗೃಹಿಣಿಯರಲ್ಲಿ ಸಣ್ಣ ಪುಟ್ಟ ಅನಾರೋಗ್ಯ ಇರಬಹುದು. ಮನೆಯ ವಿಚಾರದಲ್ಲಿ ಚಿಂತೆ ಇರಲಿದೆ. ರಾತ್ರಿ ಪ್ರಯಾಣಗಳ ತಪ್ಪಿಸುವುದು ಬಹಳ ಉಪಕಾರಿ.
ಕುಂಭ ರಾಶಿ
ಇಂದು ನಿಮ್ಮಲ್ಲಿ ದೊಡ್ಡ ಪ್ರಗತಿ ಸಾಧ್ಯವಿದೆ. ವ್ಯಾಪಾರಿಗಳು ಲಾಭ ನೋಡಬಹುದು. ಬಹಳ ದಿನಗಳಿಂದ ಆರ್ಧಕ್ಕೆ ನಿಲ್ಲಿಸಿರುವ ಕೆಲಸವನ್ನು ಪೂರ್ಣ ಮಾಡಲು ಸೂಕ್ತ ದಿನ. ಖರ್ಚು ಹೆಚ್ಚಾಗಬಹುದು. ದಿನಗೂಲಿ ನೌಕರರಿಗೆ ಶ್ರಮದಾಯಕ ದಿನ.
ಮೀನ ರಾಶಿ
ಮೀನ ರಾಶಿಯ ಜನರಲ್ಲಿ ಇಂದು ಚಿಂತೆಗಳಿಂದ ಮುಳುಗುವ ದಿನ. ನಿಮ್ಮ ಅನೇಕ ಕೆಲಸಗಳಲ್ಲಿ ಪ್ರಮಾಣಿಕವಾಗಿದ್ದರೂ ಹಲವು ಬಗೆಯ ಆರೋಪ ಎದುರಿಸಬಹುದು. ಹಣಕಾಸಿನ ವಿಚಾರದಲ್ಲಿ ನಿರ್ಲಕ್ಷ ಮಾಡಬೇಡಿ. ತರಾತುರಿಯಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ.



Click it and Unblock the Notifications
