Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
26 September Horoscope: ಸೆಪ್ಟೆಂಬರ್ 26ರಂದು ಶುಭಯೋಗ ಯಾರಿಗೆ?
ವೈದಿಕ ಶಾಸ್ತ್ರದ ಪ್ರಕಾರ ಸೆಪ್ಟೆಂಬರ್ 26 (26 September Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ನವರಾತ್ರಿಯ 5ನೇ ದಿನವಾದ ಇಂದು ಮೇಷ ರಾಶಿಯ ಜನರಲ್ಲಿ ಉತ್ತಮ ಪ್ರತಿಫಲ ನೋಡಬಹುದು. ನಿಮ್ಮ ಹಲವು ಸಮಸ್ಯೆಗಳಿಗೆ ಇಂದು ಪರಿಹಾರ ಪಡೆಯಬಹುದು, ಅದ್ರಲ್ಲೂ ಹಣಕಾಸು ಸಂಬಂಧಿ ವಿಚಾರವಾಗಿ ಇದ್ದ ಚಿಂತೆಯೊಂದು ದೂರಾಗಲಿದೆ. ಪ್ರಯಾಣಗಳಲ್ಲಿ ಸುಖವಿರಲಿದೆ.
ವೃಷಭ ರಾಶಿ
ವೃಷಭ ರಾಶಿಯವರು ಈ ದಿನ ಪ್ರಯಾಣಗಳಲ್ಲಿ ತೊಡಗಬಹುದು, ನಿಮ್ಮ ಹಲವು ಕೆಲಸಗಳಲ್ಲಿ ಲಾಭದಾಯಕ ದಿನ. ಆಪ್ತರೊಬ್ಬರಿಂದ ನಿಮಗೆ ಹಣಕಾಸಿನ ನೆರವು ಸಿಗಲಿದೆ. ದೇವಾಲಯ ಭೇಟಿ ಸಂಭವವಿದೆ.

ಮಿಥುನ ರಾಶಿ
ಮಿಥುನ ರಾಶಿಯ ಜನರಲ್ಲಿ ಇಂದು ಉತ್ತಮ ದಿನವಾಗಿರಲಿದೆ. ಅನೇಕರಲ್ಲಿ ದೊಡ್ಡ ಕೆಲಸಗಳು ಸುಲಭವಾಗಿ ಮುಗಿಯಲಿದೆ. ಹಲವರಲ್ಲಿ ಈ ದಿನ ವ್ಯವಹಾರ ಸಂಬಂಧಿ ಲಾಭದ ದಿನ ಎನ್ನಬಹುದು. ಪ್ರಯಾಣಕ್ಕಾಗಿ ನೀವು ದೊಡ್ಡ ಮೊತ್ತದ ಹಣವನ್ನು ಒಟ್ಟು ಮಾಡಬಹುದು.
ಕರ್ಕ ರಾಶಿ
ಕರ್ಕ ರಾಶಿಯವರಲ್ಲಿ ಇಂದು ಮಿಶ್ರ ಫಲದ ದಿನ. ನೀವು ಅಂದುಕೊಂಡ ಕೆಲಸಗಳಲ್ಲಿ ಬಯಸಿದ ಲಾಭ ಪಡೆಯುವುದು ಕಷ್ಟವಾಗಬಹುದು, ಪ್ರೀತಿ ಪ್ರೇಮ, ದಾಂಪತ್ಯದಲ್ಲಿ ಸಣ್ಣ ಪುಟ್ಟ ಮನಸ್ತಾಪಗು ಎದುರಾಗಬಹುದು. ಹಣಕಾಸು ವ್ಯವಹಾರ ಮಾಡುವಾಗ ಎಚ್ಚರ.
ಸಿಂಹ ರಾಶಿ
ಸಿಂಹ ರಾಶಿಯ ಜನರಲ್ಲಿ ಇಂದು ಉತ್ತಮ ದಿನ, ನಿಮ್ಮ ಎಲ್ಲಾ ಕೆಲಸಗಳು ಅಂದುಕೊಂಡಂತೆ ನಡೆಯಲಿದೆ. ಆದ್ರೆ ಹಣಕಾಸಿನ ಒತ್ತಡ ಇರಬಹುದು. ಸಾಲ ಮರಳಿ ಪಡೆಯುವುದು ಮತ್ತಷ್ಟು ಜಟಿಲವಾಗಬಹುದು. ಆರೋಗ್ಯದಲ್ಲೂ ಏರುಪೇರು ಸಂಭವಿಸಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯವರು ಆಸ್ಪತ್ರೆ ಸಂಬಂಧಿತ ವಿಚಾರಗಳಲ್ಲಿ ಇಂದು ತೊಡಗಬಹುದು. ಮನೆಯಲ್ಲಿ ಶಾಂತಿಯ ವಾತಾವರಣ ಇರಲಿದೆ. ಮುಂಬರುವ ದಿನಗಳಲ್ಲಿ ಮಾಡಬೇಕಾದ ಪ್ರಯಾಣ ಸಂಬಂಧವಾಗಿ ಈ ದಿನ ತಯಾರಿಯಲ್ಲಿ ತೊಡಗಬಹುದು.
ತುಲಾ ರಾಶಿ
ತುಲಾ ರಾಶಿಯ ಜನರಿಗೆ ಇಂದು ಉತ್ತಮವಾಗಿರಲಿದೆ. ನಿಮ್ಮ ಕಚೇರಿಯಲ್ಲಿನ ಕೆಲವು ವೈಯಕ್ತಿಕ ವಿಚಾರಗಳ ಮನಸ್ತಾಪ ಸರಿಯಾಗಲಿದೆ. ವ್ಯಾಪಾರಿಗಳಿಗೆ ಉತ್ತಮ ದಿನ. ಗೃಹಿಣಿಯರು ಆದಾಯ ಸಂಬಂಧವಾಗಿ ಒತ್ತಡ ಎದುರಿಸಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಜನರಲ್ಲಿ ಬಹಳ ಉತ್ತಮ ದಿನ. ನೀವು ಕಟ್ಟಡ ಕಾರ್ಮಿಕರು ಅಥವಾ ರಸ್ತೆ ಬದಿ ಅಂಗಡಿ, ಸ್ವಂತ ವ್ಯವಹಾರ ಮಾಡುವ ಮಂದಿಯಾಗಿದ್ದರೆ ಬಹಳ ಉತ್ತಮವಾದ ದಿನ. ಬ್ಯಾಂಕಿಂಗ್ ವಿಚಾರದಲ್ಲಿ ಧನಾತ್ಮಕ ದಿನ.
ಧನು ರಾಶಿ
ಧನು ರಾಶಿಯ ಜನರಲ್ಲಿ ಇಂದು ಉತ್ತಮ ದಿನ. ವಾಹನ ಸಂಬಂಧವಾಗಿ ಇದ್ದ ಖರ್ಚು ಕಡಿಮೆಯಾಗಲಿದೆ. ಸ್ವಂತ ಉದ್ಯಮಿಗಳಿಗೆ, ಸರ್ಕಾರಿ ನೌಕರರಿಗೆ ಶುಭ ಸುದ್ದಿಯ ದಿನ. ಅವಿವಾಹಿತರಲ್ಲಿ ಖರ್ಚುಗಳು ಇರಬಹುದು.
ಮಕರ ರಾಶಿ
ಮಕರ ರಾಶಿಯ ಜನರಲ್ಲಿ ಇಂದು ಸವಾಲುಗಳ ಎದುರಿಸುವ ದಿನ. ಬಹಳ ದಿನದಿಂದ ಕಾಡುತ್ತಿದ್ದ ಸಮಸ್ಯೆ ನಿವಾರಣೆಯಾಗಲಿದೆ, ಆದ್ರೆ ಅದಕ್ಕಾಗಿ ನೀವು ಖರ್ಚುಗಳ ಮಾಡಬೇಕಾಗಿ ಬರಬಹುದು. ವಾಹನ ಸಚಾರರು ಎಚ್ಚರ ವಹಿಸಬೇಕಿದೆ. ಯಾರೊಂದಿಗೂ ಅನಗತ್ಯ ಚರ್ಚೆಗಳಲ್ಲಿ ತೊಡಗಬೇಡಿ.
ಕುಂಭ ರಾಶಿ
ನಿಮಗಿಂದು ಮಿಶ್ರ ಫಲ ಅನುಭವಿಸುವ ದಿನ. ಯಾರಿಂದಾದರು ಹಣ ಪಡೆಯುವ ನಿಮ್ಮ ಬಯಕೆ ಈ ದಿನ ಪರಿಪೂರ್ಣ ಆಗಬಹುದು. ಯಾರೊಂದಿಗಾದರು ಮನಸ್ತಾಪಗಳಿದ್ದರೆ ಇಂದು ಬಗೆಹರಿಸಿಕೊಳ್ಳುವುದು ಉತ್ತಮ.
ಮೀನ ರಾಶಿ
ಮೀನ ರಾಶಿಯ ಜನರಲ್ಲಿ ಇಂದು ಬಹಳ ಉತ್ತಮ ದಿನ. ನಿಮ್ಮ ಹಲವು ಕೆಲಸಗಳಲ್ಲಿ ಲಾಭವಿದೆ. ಪ್ರಯಾಣಗಳಲ್ಲಿ ಲಾಭವಿದೆ. ಪ್ರಯಾಣಗಳ ಮಾಡುವಾಗ ಎಚ್ಚರಿಕೆ ವಹಿಸಿ. ಯಾರಿಗೂ ಹಣ ನೀಡುವ ಕೆಲಸಕ್ಕೆ ಮುಂದಾಗಬೇಡಿ.



Click it and Unblock the Notifications




