Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
25 September Horoscope: ಸೆಪ್ಟೆಂಬರ್ 25ರಂದು ಯಾರಿಗೆಲ್ಲಾ ಅಚ್ಚರಿ ತರುವ ದಿನ!
ವೈದಿಕ ಶಾಸ್ತ್ರದ ಪ್ರಕಾರ ಸೆಪ್ಟೆಂಬರ್ 25 (25 September Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ನಿಮಗಿಂದು ಉತ್ತಮ ಫಲಿತಾಂಶ ಬರುವ ದಿನ, ನಿಮ್ಮ ಹಲವು ಕೆಲಸಗಳ ಹಲವು ದಿನಗಳ ಅಡ್ಡಿಯಾಗಿ ಅರ್ಧಕ್ಕೆ ನಿಂತಿದ್ದರೆ ಈ ದಿನ ಮುಗಿಸಬಹುದು. ಹಲವರು ಇಂದು ಪ್ರಯಾಣ ಮಾಡುತ್ತೀರಿ. ಗೃಹಿಣಿಯರಲ್ಲಿ ಖರ್ಚಿನ ದಿನ.
ವೃಷಭ ರಾಶಿ
ಇಂದು ನಿಮಗೆ ಉತ್ತಮ ದಿನ, ನಿಮ್ಮ ಕನಸೊಂದನ್ನು ನನಸಾಗಿಸಿಕೊಳ್ಳಲು ಒಂದು ಹೆಜ್ಜೆ ಮುಂದಿಡಬಹುದು. ಆಪ್ತರೊಬ್ಬರ ಭೇಟಿಯಿಂದ ನಿಮಗೆ ಸಂತಸ ಇರಲಿದೆ. ಸಮಸ್ಯೆಗಳ ಪರಿಹಾರಕ್ಕಾಗಿ ಹೊಸ ಮಾರ್ಗ ಕಂಡುಕೊಳ್ಳುತ್ತೀರಿ.

ಮಿಥುನ ರಾಶಿ
ಮಿಥುನ ರಾಶಿಯ ಜನರಿಗೆ ಇಂದು ಅನುಕೂಲಕರ ದಿನ. ನಿಮ್ಮ ದೈನಂದಿನ ಕೆಲಸಗಳಲ್ಲಿ ಶುಭವಿದೆ. ಸಮಾರಂಭ, ಕಾರ್ಯಕ್ರಮಗಳಲ್ಲಿ ಭಾಗಿಯಾಗಬಹುದು. ಅನಾರೋಗ್ಯ ಸಮಸ್ಯೆಯೊಂದು ನಿವಾರಣೆಯಾಗಲಿದೆ.
ಕರ್ಕ ರಾಶಿ
ಕರ್ಕ ರಾಶಿಯ ಜನರ ಗೃಹಿಣಿಯರಿಗೆ ದಿಢೀರ್ ಧನಲಾಭವಿದೆ. ಅಪಾಯಕಾರಿ ಕೆಲಸ ಮಾಡುವವರು ಎಚ್ಚರಿಕೆಯಿಂದ ಇರುವುದು ಉತ್ತಮ. ವಾಹನ ಖರೀದಿಯ ಆಲೋಚನೆಯಲ್ಲಿದ್ದವರು ಹಣಕಾಸು ಒಗ್ಗೂಡಿಸಬಹುದು.
ಸಿಂಹ ರಾಶಿ
ಸಿಂಹ ರಾಶಿಯ ಜನರಲ್ಲಿ ಇಂದು ಉತ್ತಮ ದಿನ. ನಿಮ್ಮ ಹಲವು ಕೆಲಸಗಳಲ್ಲಿ ಲಾಭದಾಯಕ ಫಲಿತಾಂಶ ನೋಡುವಿರಿ. ನೀವು ಹೊಸದಾಗಿ ಆರಂಭಿಸಿದ್ದ ಆಲೋಚನೆಗಳಿಗೆ ಮತ್ತೆ ಮರುಜೀವ ನೀಡಬಹುದು. ದಾಂಪತ್ಯದಲ್ಲಿ ಸುಖವಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಮನೆಯಲ್ಲಿ ಜವಾಬ್ದಾರಿ ಹೆಚ್ಚಾಗಲಿದೆ. ಸಾಲ ಮರುಪಾವತಿಗೆ ಬೇಡಿಕೆ ಬರಬಹುದು. ನಿಮ್ಮ ಹಣಕಾಸು ವ್ಯವಹಾರದಲ್ಲಿ ಎಚ್ಚರಿಕೆ ವಹಿಸಿ. ಅನೇಕರು ಪ್ರಯಾಣ ಮಾಡಬೇಕಾಗಿ ಬರಬಹುದು. ಮಕ್ಕಳ ಕುರಿತ ಚಿಂತೆಯೊಂದು ಕಾಡಬಹುದು.
ತುಲಾ ರಾಶಿ
ತುಲಾ ರಾಶಿಯ ಜನರಲ್ಲಿ ಇಂದು ಉತ್ತಮ ಫಲಿತಾಂಶ ದಿನ, ಹೀಗಾಗಿ ನೀವು ಯಾವುದೇ ಕೆಲಸವನ್ನಾದರು ನಿರ್ಭೀತಿಯಿಂದ ಮಾಡಿ ಮುಗಿಸಬಹುದು. ವಾಹನ ಸವಾರರು ಎಚ್ಚರಿಕೆ ಇಡಿ. ನೀವಿಂದು ಹಲವು ಕೆಲಸವನ್ನು ಒಟ್ಟಿಗೆ ಮಾಡಿ ಮುಗಿಸಬೇಕಾಗಬಹುದು, ಇದು ಆಯಾಸ ತರಬಹುದು.
ವೃಶ್ಚಿಕ ರಾಶಿ
ನಿಮಗಿಂದು ಸಮಸ್ಯೆಗಳಿವೆ. ಅನಾರೋಗ್ಯ ಸಮಸ್ಯೆಯಿಂದಾಗಿ ಕೆಲಸಗಳಲ್ಲಿ ಹಿನ್ನಡೆ ಅನುಭವಿಸುವಿರಿ. ಹಣಕಾಸಿನ ವಿಚಾರವಾಗಿಯೂ ಒತ್ತಡ ಇರಲಿದೆ. ಬಹುಕಾಲದ ಅನಾರೋಗ್ಯ ಸಮಸ್ಯೆ ಆಗಿರುವುದು ನಿಮ್ಮ ನೆಮ್ಮದಿ ಕೆಡಿಸಬಹುದು. ದಿನದ ಅಂತ್ಯದಲ್ಲಿ ಪ್ರಯಾಣ ಮಾಡಬಹುದು.
ಧನು ರಾಶಿ
ನೀವು ರಾತ್ರಿ ಸಂಚಾರದಿಂದ ದೂರ ಉಳಿಯುವುದು ಉತ್ತಮ. ನಿಮ್ಮ ಹಣಕಾಸು ಪರಿಸ್ಥಿತಿ ಸುಗಮವಾಗಿರಲಿದೆ. ಆಪ್ತರೊಬ್ಬರಿಂದ ನಿಮಗೆ ಹಣಕಾಸಿನ ನೆರವು ಸಾಧ್ಯವಿದೆ. ಮನೆಗಾಗಿ ನೀವು ವಸ್ತು ಖರೀದಿಗೆ ಮುಂದಾಗಬಹುದು. ಬಹುತೇಕರಲ್ಲಿ ಈ ದಿನ ಪಂಚೇಂದ್ರಿಯ ಸಂಬಂಧಿ ಸಣ್ಣಪುಟ್ಟ ಸಮಸ್ಯೆಗಳಯ ಎದುರಾಗಬಹುದು.
ಮಕರ ರಾಶಿ
ಮಕರ ರಾಶಿಯವರಿಗೆ ಮಿಶ್ರ ಫಲದ ದಿನ. ನಿಮ್ಮ ಕೆಲಸಗಳ ಕಾರಣಕ್ಕೆ ಪ್ರಯಾಣ ಮಾಡಬೇಕಾಗಬಹುದು. ಸ್ವಂತ ಉದ್ಯೋಗದಲ್ಲಿರುವವರಿಗೆ ಉತ್ತಮ ಲಾಭದ ದಿನ. ಖರ್ಚುಗಳಿಗೆ ಕಡಿವಾಣ ಹಾಕುವುದು ಉತ್ತಮ. ಯಾರೊಂದಿಗಾದರು ಮನಸ್ತಾಪವಿದ್ದರೆ ಬಗೆಹರಿಸಿಕೊಳ್ಳಿ.
ಕುಂಭ ರಾಶಿ
ಕುಂಭ ರಾಶಿಯ ಜನರಿಗೆ ಇಂದು ಅನುಕೂಲಕರ ದಿನ. ನಿಮ್ಮಿಂದಾಗಿ ಆಪ್ತರೊಬ್ಬರ ಹಣಕಾಸು ಸಮಸ್ಯೆಗೆ ಪರಿಹಾರ ಸಿಗಬಹುದು. ದಿನದ ಆರಂಭದಲ್ಲಿ ಖರ್ಚು ಹೆಚ್ಚಾಗಬಹುದು. ಕುಟುಂಬಸ್ಥರಿಂದ ನಿಮ್ಮ ಕೆಲಸಕ್ಕೆ ಬೆಂಬಲ ಸಿಗಬಹುದು. ಗೃಹಿಣಿಯರು ಪ್ರಯಾಣ ಮಾಡಬಹುದು.
ಮೀನ ರಾಶಿ
ಮೀನ ರಾಶಿಯ ಜನರಿಗೆ ಇಂದು ಬಹಳ ಅನುಕೂಲಕರ ದಿನ. ನಿಮ್ಮ ಮನೆಗೆ ಅತಿಥಿಯೊಬ್ಬರ ಆಗಮನ ಆಗಬಹುದು, ಹೊಸ ವಸ್ತುವೊಂದನ್ನು ನೀವು ಮನೆಗೆ ತರಬಹುದು. ಸಂತೋಷದ ವಾತಾವರಣ ಇರಲಿದೆ. ಪ್ರಯಾಣಗಳಲ್ಲಿ ಸುಖವಿದೆ. ನಿಮಗೆ ಯಾರಿಂದಾದರು ಹಣ ಬರುವುದು ಬಾಕಿ ಉಳಿದಿದ್ದರೆ ಈ ದಿನ ನಿಮ್ಮ ಕೈ ಸೇರುವ ಸಾಧ್ಯತೆ ಇದೆ.



Click it and Unblock the Notifications