23 September Horoscope: ಸೆಪ್ಟೆಂಬರ್ 23ರ ಈ ದಿನ ಯಾರಲ್ಲಿ ಧನಲಾಭ!

ವೈದಿಕ ಶಾಸ್ತ್ರದ ಪ್ರಕಾರ ಸೆಪ್ಟೆಂಬರ್ 23 (23 September Horoscope)ರ ನಿಮ್ಮ ರಾಶಿಫಲ ನೋಡೋಣ:

ಮೇಷ ರಾಶಿ

ಮೇಷ ರಾಶಿಯವರಿಗೆ ಈ ದಿನ ಮಿಶ್ರ ಫಲವಿದೆ. ಹಲವು ದಿನದಿಂದ ಯಾವುದಾದರು ಹಣಕ್ಕಾಗಿ ನೀವು ಕಾಯುತ್ತಿದ್ದರೆ ಅದು ಮತ್ತಷ್ಟು ವಿಳಂಬವಾಗಬಹುದು. ನಿಮ್ಮ ಹಣಕಾಸು ಸಂಬಂಧವಾಗಿ ಉತ್ತಮ ದಿನವಾಗಲಿದೆ. ಆಪ್ತರ ಭೇಟಿಯಾಗುವ ಸಂಭವ.

ವೃಷಭ ರಾಶಿ

ವೃಷಭ ರಾಶಿಯ ಜನರಿಗೆ ಇಂದು ಬಹಳ ಉತ್ತಮ. ನಿಮ್ಮ ಹಲವು ಸಮಸ್ಯೆಗಳಿಗೆ ಪರಿಹಾರ ಪಡೆಯಲು ಮುಂದಾಗುತ್ತೀರಿ. ಹಲವರಿಗೆ ಇಂದು ಉತ್ತಮ ಫಲಿತಾಂಶ ತರುವ ದಿನ. ನಿಮ್ಮ ಆದಾಯ ಮೂಲದಲ್ಲಿ ಬಹಳ ಅನುಕೂಲಕರ ಬದಲಾವಣೆ ನೋಡಬಹುದು.

Here is Horoscope Today 23 September Horoscope Daily Horoscope Prediction For 12 Zodiac signs In kannada

ಮಿಥುನ ರಾಶಿ

ಮಿಥುನ ರಾಶಿಯ ಜನರಿಗೆ ಇಂದು ಉತ್ತಮ ದಿನ. ನಿಮ್ಮ ಅನಾರೋಗ್ಯ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ನಿಮ್ಮ ಕೆಲಸ ಕಾರ್ಯಗಳು ಎಂದಿನಂತೆ ಸಮಸ್ಯೆಗಳಿಲ್ಲದೆ ಮುಗಿಯಲಿದೆ. ಹಲವರಿಗೆ ಉದ್ಯೋಗವಕಾಶಗಳು ಹುಡುಕಿ ಬರಬಹುದು.

ಕರ್ಕ ರಾಶಿ

ಕರ್ಕ ರಾಶಿಯ ಜನರಿಗೆ ಇಂದು ಬಹಳ ಅನುಕೂಲ. ನಿಮ್ಮ ಅನೇಕ ಕೆಲಸ ಕಾರ್ಯಗಳಲ್ಲಿ ಅಡ್ಡಿ ಇದ್ದರೂ ದಿನದ ಅಂತ್ಯದಲ್ಲಿ ಉತ್ತಮ ಫಲತಾಂಶ ನೋಡಲಿದ್ದೀರಿ. ಹಲವರಿಗೆ ಪ್ರಯಾಣ ಮಾಡುವ ದಿನ. ಗೃಹಿಣಿಯರಿಗೆ ಶ್ರಮದಾಯಕ ದಿನವಾಗಲಿದೆ.

ಸಿಂಹ ರಾಶಿ

ಸಿಂಹ ರಾಶಿಯ ಜನರಿಗೆ ಆರ್ಥಿಕವಾಗಿ ಉತ್ತಮ ದಿನ. ನಿಮ್ಮ ಹಲವು ಕೆಲಸಗಳು ನೀವು ಅಂದುಕೊಂಡಂತೆ ನಡೆಯಲಿದೆ. ಆಪ್ತರೊಬ್ಬರಿಗೆ ನಿಮ್ಮಿಂದ ಹಣಕಾಸು ಸಹಾಯ ಇರಲಿದೆ. ಪ್ರವಾಸಗಳಿಗೆ ನೀವು ಸಿದ್ಧತೆ ನಡೆಸಹುದು.

ಕನ್ಯಾ ರಾಶಿ

ಕನ್ಯಾ ರಾಶಿಯ ಜನರಿಗೆ ಇಂದು ಉತ್ತಮ ದಿನ. ನಿಮ್ಮ ಪ್ರಯಾಣಗಳು ಉತ್ತಮವಾಗಿರಲಿದೆ. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡುವುದು ಉತ್ತಮ. ನಿರುದ್ಯೋಗಿಗಳಿಗೆ ಆಪ್ತರಿಂದ ಉತ್ತಮ ಅವಕಾಶ ಬರಬಹುದು.

ತುಲಾ ರಾಶಿ

ತುಲಾ ರಾಶಿಯವರು ಇಂದು ಬಹಳ ಸಮಯ ಪ್ರಯಾಣ ಮಾಡುವುದರಲ್ಲಿ ಕಳೆಯಬಹುದು. ಗೃಹಿಣಿಯರಿಗೆ ಈ ದಿನ ದೊಡ್ಡ ಸವಾಲು ಎದುರಾಗಬಹುದು. ದೇವಾಲಯ ಭೇಟಿಯಲ್ಲಿ ಸುಖವಿದೆ. ಆಪ್ತರ ಭೇಟಿ ನೆಮ್ಮದಿ ತರಲಿದೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯ ಜನರಲ್ಲಿ ಇಂದು ಉತ್ತಮ ದಿನ. ನೀವು ಬಹಳ ಸಮಯದಿಂದ ಬಯಸಿದ್ದ ವಸ್ತುವೊಂದನ್ನು ಖರೀದಿಸಬಹುದು. ನಿಮಗೆ ಬೇಕಿದ್ದ ವಸ್ತುವೊಂದನ್ನು ಪಡೆಯಲು ಸಾಲ ಮಾಡಬಹುದು. ಯಾರನ್ನು ಒಮ್ಮೆಲೆ ನಂಬಲು ಮುಂದಾಗಬೇಡಿ.

ಧನು ರಾಶಿ

ಧನು ರಾಶಿಯ ಜನರಿಗೆ ಮಿಶ್ರ ಫಲದ ದಿನ. ನಿಮ್ಮ ಆದಾಯದಷ್ಟೇ ಇಂದು ಖರ್ಚು ಕೂಡ ಇರಲಿದೆ. ನಿಮ್ಮ ಪ್ರಯಾಣಗಳಲ್ಲಿ ಲಾಭವಿದೆ. ಅನೇಕರಲ್ಲಿ ಹಣಕಾಸು ಕುರಿತಾದ ಒತ್ತಡ ದಿನ. ಗೃಹಿಣಿಯರಲ್ಲಿ ಸಣ್ಣ ಪುಟ್ಟ ಅನಾರೋಗ್ಯ ಕಾಡಬಹುದು.

ಮಕರ ರಾಶಿ

ಮಕರ ರಾಶಿಯ ಜನರಿಗೆ ಇಂದು ಮಿಶ್ರಫಲದ ದಿನ. ದೊಡ್ಡ ವಿಚಾರಗಳಲ್ಲಿ ಆಲೋಚನೆಯ ನಂತರವೇ ನಿರ್ಧಾರ ತೆಗೆದುಕೊಳ್ಳಿ. ಹೊಸ ವ್ಯವಹಾರಗಳಲ್ಲಿ ಮತ್ತಷ್ಟು ಶ್ರಮ ಹಾಕಿ. ಪ್ರೇಮಿಗಳಿಗೆ ಇಂದು ಉತ್ತಮ ದಿನವಾಗಿರಲಿದೆ.

ಕುಂಭ ರಾಶಿ

ಕುಂಭ ರಾಶಿಯ ಜನರಲ್ಲಿ ಇಂದು ಬಹಳ ಉತ್ತಮ ದಿನವಾಗಿ ಕಳೆಯಬಹುದು. ನಿಮ್ಮ ಹಣಕಾಸು ಸ್ಥಿತಿಗಳು ಸುಧಾರಿಸಲಿದೆ. ಆಪ್ತರೊಬ್ಬರಿಂದ ಹಣಕಾಸಿನ ನೆರವು ಪಡೆಯಬಹುದು. ದಿನದ ಆರಂಭದಲ್ಲಿ ಗೊಂದಲಗಳು ಇರಬಹುದು.

ಮೀನ ರಾಶಿ

ಮೀನ ರಾಶಿಯ ಜನರಿಗೆ ಇಂದು ಅನುಕೂಲಕರ ದಿನ. ವ್ಯಾಪಾರಿ, ಸೇವಾ ವಲಯದ ಜನರಿಗೆ ಅಧಿಕ ಲಾಭ ನೋಡಬಹುದು. ಖಾಸಗಿ ಸಂಸ್ಥೆಯ ಜನರಲ್ಲಿ ಇಂದು ಸವಾಲುಗಳು ಎದುರಾಗಬಹುದು. ಸ್ನೇಹಿತರ ಜೊತೆ ಕಾಲ ಕಳೆಯಬಹುದು. ಪಂಚೇಂದ್ರಿಯ ಸಂಬಂಧಿ ಸಮಸ್ಯೆ ಕಾಡಬಹುದು.

English summary

September-23-2025-daily-horoscope-prediction-for-12-zodiac-signs-in-kannada

Here is Horoscope Today, 23 September Horoscope: Daily Horoscope Prediction For 12 Zodiac signs In kannada
Story first published: Tuesday, September 23, 2025, 5:00 [IST]
X
Desktop Bottom Promotion