Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
22 September Horoscope: ಸೆಪ್ಟೆಂಬರ್ 22ರ ನವರಾತ್ರಿ ದಿನ ಯಾರಿಗೆ ಶುಭ!
ವೈದಿಕ ಶಾಸ್ತ್ರದ ಪ್ರಕಾರ ಸೆಪ್ಟೆಂಬರ್ 22 (22 September Horoscope)ರ ನವರಾತ್ರಿಯಂದು ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯವರಿಗೆ ನವರಾತ್ರಿ ಈ ಮೊದಲ ದಿನ ಬಹಳ ಉತ್ತಮವಾಗಿರಲಿದೆ, ನಿಮ್ಮ ಹಲವು ಕೆಲಸಗಳಲ್ಲಿ ಲಾಭದಾಯಕ. ಉದ್ಯಮ, ವ್ಯಾಪಾರ ಸಂಬಂಧವಾಗಿ ನಿಮಗೆ ಉತ್ತಮ ದಿನವಾಗಿರಲಿದೆ. ನಿಮ್ಮ ನಿರ್ಧಾರಗಳು ಸರಿಯಾದ ದಿಕ್ಕಿನಲ್ಲಿ ಇರಲಿದೆ.
ವೃಷಭ ರಾಶಿ
ನಿಮಗಿಂದು ಅತ್ಯುತ್ತಮ ಅನುಕೂಲಕಗಳ ತರುವ ದಿನ. ಆರ್ಥಿಕವಾಗಿ ಹಣಕಾಸಿನ ಬೇಡಿಕೆಯೊಂದನ್ನು ಈಡೇರಿಸಿಕೊಳ್ಳಬಹುದು. ಹಲವು ರೀತಿಯಲ್ಲಿ ಅನುಕೂಲಗಳ ತರುವ ದಿನ. ಗೃಹಿಣಿಯರಲ್ಲಿದ್ದ ಹಣಕಾಸು ಸಂಬಂಧಿ ಗೊಂದಲ ನಿವಾರಣೆಯಾಗಲಿದೆ.

ಮಿಥುನ ರಾಶಿ
ಮಿಥುನ ರಾಶಿಯ ಮಂದಿಗೆ ಈ ದಿನ ಬಹಳ ಲಾಭವಿದೆ. ನವರಾತ್ರಿ ಮೊದಲ ದಿನ ನಿಮ್ಮ ಆಸೆಗಳನ್ನು ಈಡೇರಿಸಿಕೊಳ್ಳಬಹುದು. ಉದ್ಯೋಗಿಗಳಲ್ಲಿ ವೇತನ ಸಂಬಂಧಿತ ಶುಭ ಸುದ್ದಿ ಇದೆ. ಕಳೆದುಕೊಂಡಿದ್ದ ವಸ್ತವೊಂದನ್ನು ಮರಳಿ ಪಡೆಯುವ ಸಂಭವವಿದೆ. ಆಪ್ತರೊಬ್ಬರ ಆರೋಗ್ಯ ಸಂಬಂಧ ನಿಮ್ಮಲ್ಲೂ ಸಂತಸ ಇರಲಿದೆ.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ಮಿಶ್ರ ಫಲವಿದೆ. ನವರಾತ್ರಿ ಆರಂಭದ ದಿನವಾದ ಇಂದು ದೊಡ್ಡ ಲಾಭವನ್ನು ನೋಡಬಹುದಾದರು ಅದರಿಂದ ನಿಮಗೆ ತೃಪ್ತಿ ಸಾಧ್ಯತೆ ಕಡಿಮೆ ಇರಲಿದೆ. ವಿವಾಹಿತರಿಗೆ ಸಂತಸದ ದಿನ. ಪ್ರಯಾಣಗಳು ಸುಖಕರವಾಗಿರಲಿದೆ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ನವರಾತ್ರಿಯ ಮೊದಲ ದಿನ ಅನುಕೂಲಗಳ ತರಲಿದೆ. ಆಪ್ತರೊಬ್ಬರನ್ನು ನೀವು ಭೇಟಿಯಾಗುವಿರಿ. ಸರಳ ವಿಚಾರಗಳು ನಿಮ್ಮಲ್ಲಿ ಸಂತಸ ತರಲಿದೆ. ದಿನದ ಅಂತ್ಯದವರೆಗೂ ಖುಷಿಯಲ್ಲಿ ಇರುವಿರಿ. ಉದ್ಯೋಗ ಸಂಬಂಧವಾಗಿ ಒಂದಿಷ್ಟು ಚಿಂತೆಯಿದ್ದರೂ ಅದರಿಂದ ಹೊರಬರುವ ದಾರಿ ಕಂಡುಕೊಳ್ಳುವಿರಿ.
ಕನ್ಯಾ ರಾಶಿ
ನೀವಿಂದು ಪ್ರಯಾಣ ಮಾಡುವಿರಿ. ಹಾಗೆ ದೇವಾಲಯ ಭೇಟಿಯಿಂದಾಗಿ ನಿಮ್ಮಲ್ಲಿ ಶಾಂತಿ ಇರಲಿದೆ. ದಾಂಪತ್ಯದಲ್ಲಿನ ಮನಸ್ತಾಪ ದೂರಾಗಲಿದೆ. ಖರ್ಚು ಹೆಚ್ಚಾಗುವ ದಿನವೂ ಹೌದು. ಯಾರಿಗಾದರು ಹಣ ನೀಡುವುದು ಬಾಕಿ ಇದ್ದರೆ ಮರಳಿಸುವುದು ಉತ್ತಮ.
ತುಲಾ ರಾಶಿ
ತುಲಾ ರಾಶಿಯ ಜನರಿಗೆ ಇಂದು ಮಿಶ್ರಫಲದ ದಿನ. ನಿಮ್ಮ ಆರ್ಥಿಕ ಸಮಸ್ಯೆಯೊಂದು ಚಿಂತೆಯಾಗಿ ನಿಮಗೆ ಕಾಡಬಹುದು. ಪ್ರಯಾಣಗಳಲ್ಲಿ ಸುಖವಿದೆ. ವಾಹನ ಸಂಬಂಧವಾಗಿ ಖರ್ಚು ಇರಲಿದೆ. ದಿನದ ಆರಂಭ ಗೊಂದಲದಲ್ಲಿ ಇರಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಜನರಲ್ಲಿ ಇಂದು ಸವಾಲುಗಳಿವೆ. ಹಣಕಾಸು ವಿಚಾರವಾಗಿ ಎಚ್ಚರ ತಪ್ಪಬೇಡಿ. ಅನಗತ್ಯ ಖರ್ಚುಗಳಿಂದ ದೂರವಿರಿ. ಆಪ್ತರಿಗೆ ಹಣ ನೀಡುವಾಗ ಎಚ್ಚರ. ಆತುರದಲ್ಲಿ ಯಾವ ನಿರ್ಧಾರವನ್ನು ತೆಗೆದುಕೊಳ್ಳಬೇಡಿ.
ಧನು ರಾಶಿ
ಧನು ರಾಶಿಯ ಜನರಲ್ಲಿ ಇಂದು ಉತ್ತಮ ದಿನ. ಮಕ್ಕಳ ಕುರಿತಾದ ಚಿಂತೆಯೊಂದು ದೂರಾಗಲಿದೆ. ವಾಹನದಿಂದ ಲಾಭವಿದೆ. ಉಪಕರಣ ಸಂಬಂಧಿ ವ್ಯಾಪಾರಿಗಳು ಲಾಭ ಮಾಡುವ ದಿನವಿದು. ಮನೆಯ ಹಿರಿಯ ಸದಸ್ಯರ ಆರೋಗ್ಯಕ್ಕೆ ಶ್ರಮ ವಹಿಸಬೇಕಿದೆ. ಪ್ರಯಾಣದಲ್ಲಿ ಎಚ್ಚರ ಇರಲಿ.
ಮಕರ ರಾಶಿ
ಮಕರ ರಾಶಿಯವರು ಇಂದು ಪ್ರಯಾಣಗಳ ಮುಂದೂಡಬೇಕಾಗಿ ಬರಬಹುದು. ಗೃಹಿಣಿಯರಲ್ಲಿ ಒತ್ತಡದ ದಿನವಾಗಲಿದೆ. ಮನೆಯಲ್ಲಿನ ಸಣ್ಣ ಪುಟ್ಟ ಕಿರಿಕಿರಿಗಳು ಇಂದು ನಿಮ್ಮ ನೆಮ್ಮದಿ ಹಾಳು ಮಾಡಬಹುದು. ಮಕ್ಕಳ ಕುರಿತಾಗಿ ಗಮನವಿಡಿ.
ಕುಂಭ ರಾಶಿ
ಕುಂಭ ರಾಶಿಯವರಲ್ಲಿ ಇಂದು ಮಿಶ್ರ ಫಲದ ದಿನ. ನಿಮ್ಮ ಅನೇಕ ಕೆಲಸಗಳನ್ನು ಅರ್ಧಕ್ಕೆ ನಿಲ್ಲಿಸಬೇಕಾಗಿ ಬರಬಹುದು, ಅಥವಾ ಅದರ ಫಲಿತಾಂಶ ಅತೃಪ್ತಿ ತರಬಹುದು. ಮಕ್ಕಳ ಆರೋಗ್ಯದಲ್ಲಿ ಏರುಪೇರು ಸಂಭವ. ರಾತ್ರಿ ಪ್ರಯಾಣಗಳ ತಪ್ಪಿಸುವುದು ಉತ್ತಮ.
ಮೀನ ರಾಶಿ
ಮೀನ ರಾಶಿಯ ಜನರಲ್ಲಿ ಇಂದು ಸಮಸ್ಯೆಗಳು ಬರಬಹುದು. ದಿನದ ಆರಂಭ ಚೆನ್ನಾಗಿದ್ದರೂ ಅಂತ್ಯದಲ್ಲಿ ಸಣ್ಣಪುಟ್ಟ ಸಮಸ್ಯೆ ಎದುರಿಸುತ್ತೀರಿ. ಆರ್ಥಿಕ ವಿಚಾರದಲ್ಲಿ ನೀವು ಅಂದುಕೊಂಡಂತೆ ನಡೆಯದೆ ಇರಬಹುದು.



Click it and Unblock the Notifications










