Latest Updates
-
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ
21 September Horoscope: ಸೆಪ್ಟೆಂಬರ್ 21ರ ಗ್ರಹಣ ದಿನ ಯಾರಿಗೆ ಶುಭ ಯಾರಿಗೆ ಅಶುಭ!
ವೈದಿಕ ಶಾಸ್ತ್ರದ ಪ್ರಕಾರ ಸೆಪ್ಟೆಂಬರ್ 21ರಂದು (21 September Horoscope) ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯವರಿಗೆ ಈ ಗ್ರಹಣದ ದಿನದಂದು ಶುಭಫಲ. ನಿಮ್ಮ ಅನೇಕ ಕೆಲಸಗಳಲ್ಲಿ ಶುಭವಾಗಲಿದೆ. ಆದ್ರೆ ನಿತ್ಯದ ಕೆಲಸಗಳಲ್ಲಿ ಸಣ್ಣ ಪುಟ್ಟ ಅಡೆತಡೆ ನೋಡಬಹುದು. ಹಾಗೆ ನಿಮ್ಮಿಂದಾಗಿ ಇತರರಿಗೆ ಸಹಾಯವಾಗಲಿದೆ.
ವೃಷಭ ರಾಶಿ
ವೃಷಭ ರಾಶಿಯ ಜನರಲ್ಲಿ ಇಂದು ಸಾಮಾನ್ಯ ದಿನವಾಗಿರಲಿದೆ. ನಿಮ್ಮ ಕೆಲವು ಕೆಲಸಗಳಲ್ಲಿ ಅಡ್ಡಿ ಎದುರಾಗಬಹುದು. ಗೃಹಿಣಿಯರಲ್ಲಿ ಶ್ರಮದಾಯಕ ದಿನವಾಗಬಹುದು. ಓಡಾಟದಲ್ಲಿ ಕಳೆಯಬಹುದು. ಮನೆಗಾಗಿ ಖರ್ಚು ಮಾಡಬಹುದು.

ಮಿಥುನ ರಾಶಿ
ಮಿಥುನ ರಾಶಿಯ ಜನರಿಗೆ ಮಿಶ್ರ ಫಲದ ದಿನ. ನಿಮ್ಮ ದಿನದ ಆರಂಭದಲ್ಲಿ ಸಂತಸ ಇರಲಿದೆ. ದಿನದ ಅಂತ್ಯವು ಗೊಂದಲದ ವಿಚಾರ ಕಾಡಬಹುದು. ರಾತ್ರಿ ಪ್ರಯಾಣ ಮಾಡುವುದನ್ನು ತಪ್ಪಿಸುವುದು ಉತ್ತಮ. ಆಹಾರ ಸಂಬಂಧಿ ಖರ್ಚು ಇರಲಿದೆ.
ಕರ್ಕ ರಾಶಿ
ಕರ್ಕ ರಾಶಿಯ ಜನರಿಗೆ ಸಮಸ್ಯೆಗಳು ಎದುರಾಗಬಹುದು. ನಿಮ್ಮ ಹಣಕಾಸು ವಿಚಾರವಾಗಿ ಎಚ್ಚರಿಕೆಯಿಂದ ಇರುವುದು ಉತ್ತಮ. ವ್ಯಾಪಾರಿಗಳು ನಷ್ಟ ಅನುಭವಿಸಬಹುದು. ಹಲವು ಕಾರಣದಿಂದಾಗಿ ಪ್ರಯಾಣ ಮಾಡಬೇಕಾಗಿ ಬರಬಹುದು. ಆಪ್ತರಿಂದ ಹಣಕಾಸಿನ ಸಮಸ್ಯೆ ಬರಬಹುದು.
ಸಿಂಹ ರಾಶಿ
ಸಿಂಹ ರಾಶಿಯ ಜನರಿಗೆ ಪ್ರಯೋಜನಗಳ ಪಡೆಯಬಹುದು. ಹಲವರಿಗೆ ಈ ದಿನ ಆಧ್ಯಾತ್ಮಿಕವಾಗಿ ಉತ್ತಮ ದಿನವಾಗಲಿದೆ. ಯಾರ ಬಳಿಯೂ ಸಾಲ ಮಾಡುವ ಕಾರ್ಯಕ್ಕೆ ಇಂದು ಮುಂದಾಗಬೇಡಿ. ಆಪ್ತರೊಬ್ಬರಿಂದ ಹಣದ ಸಹಾಯ ಬರಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ. ದಾಂಪತ್ಯ ವಿಚಾರದಲ್ಲಿ ಮನಸ್ತಾಪ ಬರಬಹುದು. ದಿನದ ಅಂತ್ಯದಲ್ಲಿ ಸವಾಲು ಎದುರಾಗುವ ಸಾಧ್ಯತೆ ಅಧಿಕವಾಗುತ್ತಿದೆ.
ತುಲಾ ರಾಶಿ
ತುಲಾ ರಾಶಿಯವರಿಗೆ ಈ ದಿನವು ದೊಡ್ಡ ಲಾಭಕ್ಕೆ ಕಾರಣವಾಗಬಹುದು. ನಿಮ್ಮ ದೈನಂದಿನ ಕೆಲಸಗಳು ತಡವಾಗಬಹುದು. ಆದ್ರೆ ನಿಮ್ಮ ಆರ್ಥಿಕ ಪರಿಸ್ಥಿತಿ ಹಿಂದೆಂದಿಗಿಂತಲೂ ಸುಧಾರಿಸಲಿದೆ.
ವೃಶ್ಚಿಕ ರಾಶಿ
ನಿಮಗಿಂದು ಮಿಶ್ರ ಫಲದ ದಿನ, ದಿನದ ಆರಂಭ ಉತ್ತಮವಾಗಿದ್ದರು ಅಂತ್ಯದಲ್ಲಿ ಸವಾಲುಗಳಿವೆ. ಮನೆಯ ವಾತಾವರಣದಲ್ಲಿ ಅಶಾಂತಿ ಇರಲಿದೆ. ಪ್ರಯಾಣ ತಪ್ಪಿಸುವುದು ಉತ್ತಮಾಗಲಿದೆ. ಗರ್ಭಿಣಿಯರು ಎಚ್ಚರಿಕೆ ವಹಿಸಿ.
ಧನು ರಾಶಿ
ಧನು ರಾಶಿಯ ಜನರಿಗೆ ಇಂದು ಉತ್ತಮ ದಿನ. ನಿಮ್ಮ ಮನೆಯಲ್ಲಿನ ಹಣಕಾಸು ಪರಿಸ್ಥಿತಿ ಸುಧಾರಿಸಲಿದೆ. ಅಪಾಯಕಾರಿ ಕೆಲಸದಲ್ಲಿ ತೊಡಗುವವರು, ವಾಹನ ಚಾಲನೆ ಮಾಡುವವರು ಇಂದು ಎಚ್ಚರಿಕೆಯಿಂದ ಇರಿ. ತಂದೆ ತಾಯಿ ಆರೋಗ್ಯದ ಕಡೆ ಗಮನವಿರಲಿ.
ಮಕರ ರಾಶಿ
ನೀವಿಂದು ಪ್ರಯಾಣ ಮಾಡಬೇಕಾಗಲಿದೆ. ಹಣಕಾಸು, ವ್ಯವಹಾರಗಳಲ್ಲಿ ಹಿನ್ನಡೆ ನೋಡುವಿರಿ. ಅದೃಷ್ಟ ನಿಮ್ಮಿಂದ ದೂರಾಗಬಹುದು. ಗೃಹಿಣಿಯರಲ್ಲಿ ಅನಾರೋಗ್ಯ ಸಂಬಂಧವಾಗಿ ಖರ್ಚು ಇರಲಿದೆ. ಆಪ್ತರಿಂದ ಕಹಿ ಸುದ್ದಿ ಬರಬಹುದು.
ಕುಂಭ ರಾಶಿ
ಕುಂಭ ರಾಶಿಯವರಿಗೆ ಅನುಕೂಲಕರ ದಿನ. ಯಾರಿಗೂ ಇಂದು ಸಾಲ ನೀಡಲು ಮುಂದಾಗಬೇಡಿ. ಹಳೆಯ ಅನಾರೋಗ್ಯ ಸಮಸ್ಯೆಯೊಂದಕ್ಕೆ ಪರಿಹಾರ ಪಡೆಯುವ ಸಂಭವವಿದೆ. ಮಹಿಳೆಯರು ವಾಹನ ಸಲಾಯಿಸುವಾಗ ಎಚ್ಚರಿಕೆ ಇಡಿ.
ಮೀನ ರಾಶಿ
ಮೀನ ರಾಶಿಯ ಜನರಲ್ಲಿ ಇಂದು ದೊಡ್ಡ ಮಟ್ಟದ ಲಾಭವಿದೆ. ನಿಮ್ಮ ಹಣಕಾಸು ವಿಚಾರಗಳು ಸುಧಾರಿಸಲಿದೆ. ಅನಿರೀಕ್ಷಿತ ಲಾಭ ನೋಡಬಹುದು. ಆರೋಗ್ಯ ಲಾಭವಿದೆ. ನಿಮ್ಮ ಕೆಲಸಗಳು ನೀವು ಅಂದುಕೊಂಡಂತೆ ನಡೆಯಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications











