Latest Updates
-
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ
ಮಾಸ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಸೆಪ್ಟೆಂಬರ್ ಮಾಸ ನಿಮ್ಮ ಜನ್ಮ ಸಂಖ್ಯೆಗೆ ಹೇಗಿರಲಿದೆ?
ಸಂಖ್ಯಾಶಾಸ್ತ್ರ ಪ್ರಕಾರ ಸೆಪ್ಟೆಂಬರ್ ಮಾಸ ನಿಮಗೆ ಹೇಗಿರಲಿದೆ ಎಂದು ಹೇಳಲಾಗಿದೆ, ನಿಮ್ಮ ಜನ್ಮ ಸಂಖ್ಯೆ ನೋಡಿ(ನೀವು ಹುಟ್ಟಿದ ದಿನಾಂಕ ಭವಿಷ್ಯ ಹೇಳಲಾಗಿದೆ ನೋಡಿ:
ಸಂಖ್ಯೆ 1 ( ಹುಟ್ಟಿದ ದಿನಾಂಕ 1, 10,19, 28)
ವೃತ್ತಿ ಜೀವನದ ದೃಷ್ಟಿಯಿಂದ ನೋಡುವುದಾದರೆ ಅಧಿಕ ಸವಾಲುಗಳು ಇರಲಿದೆ, ಈ ತಿಂಗಳು ನಿಮ್ಮ ಕಾರ್ಯಗಳನ್ನು ಪೂರ್ಣಗೊಳಿಸಲು ನೀವು ಹೆಚ್ಚು ಶ್ರಮಿಸಬೇಕಾಗಬಹುದು. ಕೆಲಸವನ್ನು ಬಾಕಿಯುಳಿಸಿಕೊಳ್ಳದೆ ಅದನ್ನು ಸಮಯಕ್ಕೆ ಸರಿಯಾಗಿ ಮಾಡುವುದು ಒಳ್ಳೆಯದು. ಕುಟುಂಬ ಜೀವನದ ದೃಷ್ಟಿಯಿಂದ ನೋಡುವುದಾದರೆ ಈ ಅವಧಿ ಅನುಕೂಲಕರವಾಗಿದೆ. ನಿಮ್ಮ ಒಡಹುಟ್ಟಿದವರ ಜೊತೆಗೆ ಏನಾದರು ಭಿನ್ನಾಬಿಪ್ರಾಯವಿದ್ದರೆ ಬಗೆಹರಿಯಲಿದೆ.

ಸಂಖ್ಯೆ 2 (ಹುಟ್ಟಿದ ದಿನಾಂಕ, 2,11, 20, 29)
ನೀವು ಹೊಸ ಕೆಲಸ ಪ್ರಾರಂಭಿಸಲು ಬಯಸಿದರೆ ಅದಕ್ಕೆ ಈ ಅವಧಿ ಅನುಕೂಲಕರವಾಗಿದೆ. ವೃತ್ತಿ ಬದುಕಿನ ದೃಷ್ಟಿಯಿಂದ ಈ ಮಾಸ ನಿಮಗೆ ಉತ್ತಮವಾಗಿರಲಿದೆ. ಚಿಕ್ಕ ವಿಷಯವನ್ನು ಮನಸ್ಸಿಗೆ ತೆಗದುಕೊಳ್ಳಬಾರದು, ವೈವಶಾಹಿಕ ಜೀವನದಲ್ಲಿ ಭಿನ್ನಾಬಿಪ್ರಾಯ ದೂರ ಮಾಡಲು ಪ್ರಯತ್ನಿಸಿದರೆ ಯಸಸ್ಸು ಸಿಗಲಿದೆ. ಅರ್ಥಿಕವಾಗಿ ಈ ಅವಧಿ ಉತ್ತಮವಾಗಿರಲಿದೆ.
ಸಂಖ್ಯೆ 3 (ಹುಟ್ಟಿದ ದಿನಾಂಕ 3, 12, 21, 30)
ಈ ಮಾಸ ನಿಮಗೆ ಅನುಕೂಲಕರವಾಗಿದೆ. ಕೆಲಸ -ಕಾರ್ಯಗಳು ನಿಮ್ಮ ಯೋಜನೆಯಂತೆಯೇ ನಡೆಯಲಿದೆ. ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ. ಸಂಬಂಧದ ಬಗ್ಗೆ ಹೇಳುವುದಾದರೆ ನೀವು ನಿಮ್ಮ ಆಪ್ತರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದರಿಂದ ಈ ತಿಂಗಳು ನಿಮಗೆ ಉತ್ತಮವಾಗಿರಲಿದೆ. ವೈವಾಹಿಕ ಜೀವನದಲ್ಲಿ ಸಣ್ಣ-ಪುಟ್ಟ ಸಮಸ್ಯೆಗಳು ಬರಬಹುದು, ಆದರೆ ನಿಮ್ಮ ನಡುವಿನ ಬಾಂಧವ್ಯ ಚೆನ್ನಾಗಿಯೇ ಇರುತ್ತದೆ. ಆರ್ಥಿಕ ದೃಷ್ಟಿಯಿಂದಲೂ ಈ ಅವಧಿ ಉತ್ತಮವಾಗಿದೆ.
ಸಂಖ್ಯೆ 4 (ಹುಟ್ಟಿದ ದಿನಾಂಕ 4, 13, 22, 31)
ಈ ಮಾಸ ನಿಮ್ಮ ಸಾಮಾಜಿಕ ಇಮೇಜ್‌ಗೆ ಧಕ್ಕೆಯಾಗದಂತೆ ನೀವು ಜಾಗ್ರತೆವಹಿಸಬೇಕು. ನಿಮ್ಮ ಕೆಲಸದಲ್ಲಿ ಯಾವುದೇ ತೊಂದರೆಯಾಗದಂತೆ ತುಂಬಾನೇ ಗಮನಹರಿಸಬೇಕು. ಇನ್ನು ಸ್ನೇಹಿತರ ಜೊತೆ ಭಿನ್ನಾಭಿಪ್ರಾಯ ಉಂಟಾಗದಂತೆ ನೀವು ಜಾಗ್ರತೆವಹಿಸಿ, ಅಲ್ಲದೆ ನಿಮಗೆ ತೊಂದರೆ ಮಾಡದಂತೆ ಜಾಗ್ರತೆವಹಿಸಿ. ನಿಮ್ಮ ಕೆಲಸದ ಕಡೆಗೆ ಹೆಚ್ಚಿನ ಗಮನ ನೀಡಿದರೆ ನೀವು ಅನುಕೂಲಕರ ಪ್ರಯೊಜನ ಪಡೆಯುತ್ತೀರಿ, ಅರ್ಥಿಕವಾಗಿ ಈ ಅವಧಿ ಸರಾಸರಿಯಾಗಿರಲಿದೆ.
ಸಂಖ್ಯೆ 5 (ಹುಟ್ಟಿದ ದಿನಾಂಕ 5, 14, 23)
ಈ ಮಾಸ ನೀವು ಕೆಲಸ ಕಾರ್ಯದ ಕಡೆಗೆ ಹೆಚ್ಚಿನ ಒತ್ತು ನೀಡಬೇಕು. ಕೆಲ ಗೊಂದಲಗಳು ನಿಮ್ಮನ್ನು ಕಾಡಬಹುದು, ಆದರೆ ಸಮತೋಲಿತ ರೀತಿಯಲ್ಲಿ ವರ್ತಿಸುವಂತೆ ಸಲಹೆ ನೀಡಲಾಗುವುದು. ಕುಟುಂಬ ಜೀವನದ ಬಗ್ಗೆ ಹೇಳುವುದಾದರೆ ನೀವು ಕೋಪವನ್ನು ನಿಯಂತ್ರಿಸಬೇಕು, ಇನ್ನು ಅರ್ಥಿಕವಾಗಿ ಹೇಳುವುದಾದರೆ ಈ ಅವಧಿಯಲ್ಲಿ ನಿಮ್ಮ ಖರ್ಚಿಗೆ ಕಡಿವಾಣ ಹಾಕಿ.
ಸಂಖ್ಯೆ 6 (ಹುಟ್ಟಿದ ದಿನಾಂಕ 6, 15, 25)
ವೃತ್ತಿ ಜೀವನದ ದೃಷ್ಟಿಯಿಂದ ಈ ಅವಧಿ ಅನುಕೂಲಕರವಾಗಿದೆ. ಇನ್ನು ಪ್ರಯಾಣ ಮಾಡುವುದಾದರೆ ನಿವು ಜಾಗ್ರತೆವಹಿಸಬೇಕು.ಆರ್ಥಿಕವಾಗಿ ಈ ಅವಧಿ ಅಷ್ಟೊಂದು ಅನುಕೂಲಕರವಲ್ಲ. ಆದರೆ ಕಷ್ಟಪಟ್ಟು ಕೆಲಸ ಮಾಡಿದರೆ ಬಯಸಿದ ಫಲಿತಾಂಶಗಳನ್ನು ಪಡೆಯುತ್ತೀರಿ.
ಸಂಖ್ಯೆ 7 ( ಹುಟ್ಟಿದ ದಿನಾಂಕ 7, 16. 25)
ಈ ಸೆಪ್ಟೆಂಬರ್ ಮಾಸ ನಿಮಗೆ ಅನುಕೂಲಕರವಾಗಿದೆ. ಮನೆಯ ಅಲಂಕಾರಕ್ಕೆ ಈ ಸಮಯ ಉತ್ತಮವಾಗಿರಲಿದೆ. ಕುಟುಂಬ ಜೀವನದ ಕಡೆಗೆ ತುಂಬಾನೇ ಗಮನಹರಿಸಬೇಕು. ನಿಮ್ಮ ಹಾಗೂ ಸಂಗಾತಿ ನಡುವೆ ಭಿನ್ನಾಭಿಪ್ರಾಯವಿದ್ದರೆ ಅದು ಬಗೆಹರಿಯಲಿದೆ. ಅವಾಹಿತರಿಗೆ ಮದುವೆ ಪ್ರಸ್ತಾಪ ಬರಲಿದೆ. ಹಿರಿಯರ ಮಾತುಗಳನ್ನು ನಿರ್ಲಕ್ಷ್ಯ ಮಾಡಬೇಡಿ.
ಸಂಖ್ಯೆ 8 (ಹುಟ್ಟಿದ ದಿನಾಂಕ 8, 17,26)
ಕೆಲ ನಿರ್ಧಾರಗಳನ್ನು ಆಲೋಚಿಸಿ ತೆಗೆದುಕೊಳ್ಳಬೇಕು. ವೃತ್ತಿ ಬದುಕಿನ ದೃಷ್ಟಿಯಿಂದ ಈ ಅವಧಿ ಉತ್ತಮವಾಗಿರಲಿದೆ. ವೈಯಕ್ತಿಕ ಜೀವನದ ದೃಷ್ಟಿಯಿಂದ ಈ ಅವಧಿ ಉತ್ತಮವಾಗಿರಲಿದೆ. ಸಾಮಾಜಿಕವಾಗಿ ನಿಮ್ಮ ಸ್ಥಾನಮಾನ ಹೆಚ್ಚಾಗಲಿದೆ. ವೈಯಕ್‌ತಿಕ ಜೀವನದಲ್ಲಿ ಸಂತೋಷ, ನೆಮ್ಮದಿ ಇರಲಿದೆ.
ಸಂಖ್ಯೆ 9 (ಸಂಖ್ಯೆ 9, 18, 27)
ಈ ತಿಂಗಳು ನೀವು ಉತ್ತಮ ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಆರ್ಥಿಕವಾಗಿ ಕೂಡ ಈ ಅವದಿ ಉತ್ತಮವಾಗಿದೆ. ನಿಮ್ಮ ವ್ಯವಹಾರದಲ್ಲಿ ನೀವು ಉತ್ತಮ ಬೆಳವಣಿಗೆ ಕಂಡು ಬರುವುದು. ಹೊಸ ಕೆಲಸವನ್ನು ಪ್ರಾರಂಭಿಸಲು ಬಯಸಿದರೆ ನೀವು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ವೈವಾಹಿಕ ಜೀವನ ಚೆನ್ನಾಗಿರಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











