Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
Dina Bhavishya: ಸೆಪ್ಟೆಂಬರ್ 18ರ ಈ ದಿನ ಯಾರಿಗೆ ಶುಭಕರ?
ವೈದಿಕ ಶಾಸ್ತ್ರದ ಪ್ರಕಾರ ಸೆಪ್ಟೆಂಬರ್ 18ರಂದು ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಜನರಿಗೆ ಇಂದು ಅನುಕೂಲಕರ ದಿನ. ನಿಮ್ಮ ಹಲವು ದೈನಂದಿನ ಕೆಲಸಗಳಲ್ಲಿ ಯಶಸ್ಸು ಇರಲಿದೆ. ನಿಮ್ಮ ಹಣ ಯಾರ ಕೈಲಾದರು ಸಿಲುಕಿದ್ದರೆ ಇಂದು ಮರಳಿ ಬಿಡಬಹುದು. ನೀವು ಅದನ್ನು ಮರಳಿ ಪಡೆಯಬಹುದು. ನೀವು ಸ್ನೇಹಿತರಿಗೆ ಸಹಾಯ ಮಾಡಲು ಮುಂದೆ ಬರುತ್ತೀರಿ ಮತ್ತು ನಿಮ್ಮ ಉತ್ತಮ ಸಂಬಂಧದಿಂದ ಸಂತಸದ ವಾತಾವರಣ ಇರಲಿದೆ.
ವೃಷಭ ರಾಶಿ
ವೃಷಭ ರಾಶಿಯ ಜನರ ವ್ಯವಹಾರದಲ್ಲಿ ಇಂದು ಹೊಸ ಪ್ರಯೋಗಗಳ ಮಾಡಬಹುದು. ನಿಮ್ಮ ಜವಾಬ್ದಾರಿ ಹೆಚ್ಚಾಗಬಹುದು. ಸಮಯದೊಳಗೆ ನಿಮ್ಮ ಕೆಲಸಗಳ ಮುಗಿಸುವುದು ಉತ್ತಮ. ಕಚೇರಿ ಸಂಬಂಧಿತ ಕೆಲಸಗಳಲ್ಲಿ ಶುಭವಾಗಲಿದೆ. ಬ್ಯಾಂಕಿಂಗ್ ಸಂಬಂಧಿ ವಿಚಾರದಲ್ಲಿ ಉತ್ತಮ ದಿನ.

ಮಿಥುನ ರಾಶಿ
ಇಂದು ನೀವು ದೀರ್ಘಕಾಲದಿಂದ ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಲು ಮತ್ತು ನಿಮ್ಮ ಆದಾಯ ಹೆಚ್ಚಿಸುವ ಕೆಲಸ ಮಾಡಲಿದ್ದೀರಿ. ಆಪ್ತರೊಬ್ಬರ ಭೇಟಿಯಾಗುತ್ತೀರಿ. ಸಾಮಾಜಿಕ ಕಾರ್ಯಗಳಲ್ಲಿ ನೀವು ಭಾಗಿಯಾಗುವಿರಿ. ಆರೋಗ್ಯದಲ್ಲಿ ಏರುಪೇರು ಇದ್ದರೂ ಕೆಲಸ ಕಾರ್ಯಗಳಲ್ಲಿ ಅಡ್ಡಿಯಾಗುವುದಿಲ್ಲ.
ಕರ್ಕ ರಾಶಿ
ಇಂದು ಕರ್ಕ ರಾಶಿಯ ಜನರಿಗೆ ಉತ್ತಮ ದಿನ. ಗೃಹಿಣಿಯರ ಆರೋಗ್ಯದಲ್ಲಿ ಏರುಪೇರು ಸಂಭವಿಸಬಹುದು. ವ್ಯವಹಾರದಲ್ಲಿ ಉತ್ತಮ ದಿನವಾಗಿರಲಿದೆ. ನಿರುದ್ಯೋಗಿಗಳಿಗೆ ಉತ್ತಮ ಸುದ್ದಿ ಕೇಳಿಬರಲಿದೆ. ಅನೇಕರಿಗೆ ಇದು ಶುಭ ಸುದ್ದಿ ಕೇಳಿಬರಬಹುದು. ನಿಮ್ಮ ಕುಟುಂಬದಲ್ಲಿ ಶುಭ ಸಮಾರಂಭ ಸಂಬಂಧವಾಗಿ ಮಾತುಕತೆ ಇರಬಹುದು.
ಸಿಂಹ ರಾಶಿ
ಇಂದು ನಿಮಗೆ ಆರ್ಥಿಕವಾಗಿ ಉತ್ತಮ ದಿನವಾಗಿರುತ್ತದೆ. ಸ್ನೇಹಿತರು ನಿಮಗೆ ಆರ್ಥಿಕ ಸಹಾಯ ಮಾಡಬಹುದು, ನಿಮ್ಮ ಹಲವು ಕೆಲಸಗಳು ನಿಮಗೆ ನೆಮ್ಮದಿ ತರಲಿದೆ. ಯಾರಿಗಾದರು ಆರೋಗ್ಯ ಸಮಸ್ಯೆ ಇದ್ದರೆ ಇಂದು ಆಸ್ಪತ್ರೆಗೆ ತೆರಳಬಹುದು.
ಕನ್ಯಾ ರಾಶಿ
ಇಂದು ನಿಮಗೆ ಮಿಶ್ರಫಲದ ದಿನ. ಕೌಟುಂಬಿಕ ಸಮಸ್ಯೆಗಳಿಗೆ ಇಂದು ಪೂರ್ಣ ಪ್ರಮಾಣದ ಪರಿಹಾರ ಪಡೆಯಬಹುದು. ಹೋಲ್ ಸೆಲ್ ವ್ಯಾಪಾರಿಗಳಲ್ಲಿ ಇಂದು ಉತ್ತಮ ದಿನವಾಗಿರಲಿದೆ. ನಿಮ್ಮ ಮಕ್ಕಳಿಂದ ನೀವು ಒಳ್ಳೆಯ ಸುದ್ದಿಯನ್ನು ಕೇಳಬಹುದು.
ತುಲಾ ರಾಶಿ
ನಿಮ್ಮ ಖರ್ಚುಗಳು ಇಂದು ನಿಮಗೆ ತಲೆನೋವನ್ನುಂಟುಮಾಡಬಹುದು. ಅನೇಕರಲ್ಲಿ ಇಂದು ದೊಡ್ಡ ಮಟ್ಟದ ಅನಾರೋಗ್ಯ ಕಾಡಬಹುದು. ಗೃಹಿಣಿಯರು ಪ್ರಯಾಣ ಮಾಡಬೇಕಾಗಿ ಬರಬಹುದು. ಮಾರಾಟ ಮತ್ತು ಮಾರ್ಕೆಟಿಂಗ್‌ನಲ್ಲಿ ತೊಡಗಿರುವವರು ಪ್ರಮುಖ ಒಪ್ಪಂದವನ್ನು ಅಂತಿಮಗೊಳಿಸಬಹುದು.
ವೃಶ್ಚಿಕ ರಾಶಿ
ನೀವು ಇಂದು ಪ್ರೀತಿ ಮತ್ತು ಸಹಕಾರದ ದೃಷ್ಟಿಕೋನದಿಂದ ಎಲ್ಲವನ್ನು ನೋಡಬೇಕಿದೆ. ವ್ಯಾಪಾರಿಗಳು ಈ ದಿನ ಪ್ರಗತಿಯನ್ನು ನೋಡಬಹುದು. ಬೀದಿ ಬದಿ ವ್ಯಾಪಾರಿಗಳು ಲಾಭ ನೋಡಬಹುದು. ನೀವಿಂದು ದಾನ ಮಾಡುವ ದಿನವಾಗಬಹುದು. ನೀವು ಸರ್ಕಾರಿ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ನೀವು ಉತ್ತಮ ಲಾಭವನ್ನು ನೋಡಬಹುದು.
ಧನು ರಾಶಿ
ಇಂದು ನಿಮಗೆ ಸವಾಲಿನ ದಿನವಾಗಿರುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ನೀವು ಹೆಚ್ಚು ಗಮನ ಹರಿಸಬೇಕಾಗುತ್ತದೆ. ಗೃಹಿಣಿರಲ್ಲಿ ಖರ್ಚು ಹೆಚ್ಚಾಗಲಿದೆ. ಯಾರಿಗಾದರು ಹಣ ನೀಡುವುದು ಬಾಕಿ ಉಳಿಸಿಕೊಂಡಿದ್ದರೆ ಅವರಿಂದ ಒತ್ತಡ ಇರಬಹುದು. ಆದಾಯದ ಬೆಳವಣಿಗೆಯ ಮೂಲಗಳಿಗೆ ನೀವು ಹೆಚ್ಚು ಗಮನ ಹರಿಸುತ್ತೀರಿ.
ಮಕರ ರಾಶಿ
ಇಂದು ನಿಮಗೆ ಒಳ್ಳೆಯ ದಿನವಾಗಲಿದೆ. ಕೌಟುಂಬಿಕ ಸಮಸ್ಯೆಯನ್ನು ಬುದ್ದಿವಂತಿಕೆಯಿಂದ ಬಗೆಹರಿಸಿಕೊಳ್ಳಿ. ದಾಂಪತ್ಯದಲ್ಲಿನ ಸಮಸ್ಯೆಗೆ ಪರಿಹಾರ ಪಡೆಯಲು ಮುಂದಾಗಿ. ಹೂಡಿಕೆಯ ಕುರಿತು ಆಸಕ್ತಿ ಹೆಚ್ಚಾಗಬಹುದು. ಪ್ರಯಾಣ ಮಾಡಬೇಕಾಗಿ ಬರಬಹುದು. ಯಾರೊಂದಿಗೂ ಯಾವುದೇ ಗೌಪ್ತ ವಿಚಾರಗಳ ಹಂಚಿಕೊಳ್ಳಲು ಮುಂದಾಗಬೇಡಿ.
ಕುಂಭ ರಾಶಿ
ಇಂದು ನೀವು ಶ್ರಮದಾಯಕ ಕೆಲಸದಲ್ಲಿ ಭಾಗಿಯಾಗಬೇಕಾಗಿ ಬರಬಹುದು. ಮನೆಯಿಂದ ಹೆಚ್ಚು ಹೊತ್ತು ಹೊರಗುಳಿಯಬಹುದು, ಅವಿವಾಹಿತರಲ್ಲಿ ಹಣಕಾಸು ಸಂಬಂಧವಾಗಿ ಒತ್ತಡ ಇರಲಿದೆ. ಪಂಚೇಂದ್ರಿಯ ಸಂಬಂಧಿ ಸಮಸ್ಯೆಯೊಂದು ಕಾಡಬಹುದು. ಪ್ರೀತಿಯಲ್ಲಿ ಉತ್ತಮ ದಿನ.
ಮೀನ ರಾಶಿ
ಇಂದು ನಿಮಗೆ ತೊಡಕುಗಳಿಂದ ತುಂಬಿದ ದಿನವಾಗಿರುತ್ತದೆ. ನಿಮ್ಮ ವ್ಯಾಪಾರ ವ್ಯವಗಾರದಲ್ಲಿ ಮೂರನೇ ವ್ಯಕ್ತಿಯಿಂದ ತೊಡಕುಗಳು ಬರಬಹುದು. ಪೋಷಕರ ಆರೋಗ್ಯದಲ್ಲಿ ದಿಢೀರ್ ಏರಿಳಿತ ಉಂಟಾಗಬಹುದು. ಇದು ನಿಮ್ಮಲ್ಲಿ ಒತ್ತಡಕ್ಕೆ ಕಾರಣವಾಗಬಹುದು.



Click it and Unblock the Notifications
