Dina Bhavishya: ಸೆಪ್ಟೆಂಬರ್ 17ರಂದು ಬುಧವಾರ ಯಾರಿಗೆ ಶುಭ?

ವೈದಿಕ ಶಾಸ್ತ್ರದ ಪ್ರಕಾರ ಸೆಪ್ಟೆಂಬರ್ 17ರಂದು ನಿಮ್ಮ ರಾಶಿಫಲ ನೋಡೋಣ:

ಮೇಷ ರಾಶಿ

ಮೇಷ ರಾಶಿಯ ಜನರಿಗೆ ಇಂದು ಮಿಶ್ರಫಲದ ದಿನ. ನಿಮ್ಮ ಹಲವು ಕೆಲಸಗಳಲ್ಲಿ ಶುಭಕರ ವಾತಾವರಣ ಇದೆ. ಸಹೋದರರಿಂದ ಅಥವಾ ಆಪ್ತರಿಂದ ಹಣ ಸಂಬಂಧವಾಗಿ ಮನವಿ ಬರಬಹುದು. ಅನೇಕರಿಗೆ ಈ ದಿನ ಉದ್ಯೋಗವಕಾಶದಲ್ಲಿ ಬದಲಾವಣೆಗಳ ತರಬಹುದು.

ವೃಷಭ ರಾಶಿ

ವೃಷಭ ರಾಶಿಯ ಜನರು ಇಂದು ಓಡಾಟದಲ್ಲಿ ಕಳೆಯುವರು. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು. ಸರ್ಕಾರಿ ಕೆಲಸದಲ್ಲಿ ನಿರತರಾದವರು ಹೆಚ್ಚು ಶ್ರಮ ಹಾಕಬೇಕಾಗುತ್ತದೆ. ಆಪ್ತರೊಬ್ಬರ ವಿಚಾರವಾಗಿ ನೀವು ಪ್ರಯಾಣ ಮಾಡಬಹುದು.

September-17-2025-daily-horoscope-prediction-for-12-zodiac-signs-in-kannada

ಮಿಥುನ ರಾಶಿ

ಮಿಥುನ ರಾಶಿಯ ಜನರಲ್ಲಿ ಉತ್ತಮ ದಿನ. ನಿಮ್ಮ ಹಲವು ಗೊಂದಲಗಳನ್ನು ಇಂದು ನಿವಾರಣೆ ಮಾಡಿಕೊಳ್ಳಬಹುದು. ಆದಾಯದ ಮೂಲಗಳು ಮತ್ತೆ ನಿಮ್ಮ ಕೆಲಸಗಳ ಮುಂದೂಡಬಹುದು. ಗೃಹಿಣಿಯರು ಪ್ರಯಾಣ ಮಾಡಬಹುದು.

ಕರ್ಕ ರಾಶಿ

ಕರ್ಕ ರಾಶಿಯವರಿಗೆ ಮಿಶ್ರ ಫಲದ ದಿನ. ವಾಹನ ಸವಾರರು ಇಂದು ಎಚ್ಚರಿಕೆಯಿಂದ ಇರಬೇಕಿದೆ. ಆಪ್ತರೊಬ್ಬರ ಸಂಬಂಧ ಕಹಿ ಸುದ್ದಿ ಕೇಳಬಹುದು. ಪ್ರೀತಿ, ಪ್ರೇಮದ ವಿಚಾರದಲ್ಲಿ ನಿಮಗೆ ಶುಭಕರ ದಿನ. ಆಧ್ಯಾತ್ಮಿಕ ವಿಚಾರದಲ್ಲಿ ಶುಭಕರ ದಿನವಾಗಲಿದೆ.

ಸಿಂಹ ರಾಶಿ

ಸಿಂಹ ರಾಶಿಯ ಜನರಲ್ಲಿ ಇಂದು ಉತ್ತಮ ದಿನ. ನಿಮ್ಮ ಅನೇಕ ಕೆಲಸಗಳು ಅಂದುಕೊಂಡಂತೆ ನೆರವೇರಲಿವೆ. ಹಲವರಿಗೆ ಈ ಸಮಯವು ಉತ್ತಮ ಲಾಭ ತರಲಿದೆ. ವ್ಯಾಪಾರಿಗಳಿಗೆ ಶುಭಕರ ದಿನ. ಆದ್ರೆ ಆದಾಯವನ್ನು ಉತ್ತಮ ಕಡೆಗಳಲ್ಲಿ ಹೂಡಿಕೆ ಮಾಡಬಹುದು.

ಕನ್ಯಾ ರಾಶಿ

ಕನ್ಯಾ ರಾಶಿಯ ಜನರು ಇಂದು ಓಡಾಟ ಮಾಡಲಿದ್ದಾರೆ. ವಾಹನ ಸಂಬಂಧಿತ ವಿಚಾರದಲ್ಲಿ ಸಮಸ್ಯೆಗಳು ಬರಬಹುದು. ಗೃಹಿಣಿಯರ ಉಳಿತಾಯವು ಬೇರೆ ಕೆಲಸದ ಕಾರಣಕ್ಕೆ ಬಳಕೆಯಾಗಬಹುದು. ಅನೇಕರಿಗೆ ಇಂದು ಪ್ರಯಾಸದಾಯಕ ಕೆಲಸಗಳಲ್ಲಿ ಭಾಗಿಯಾಗುವ ದಿನವಾಗಬಹುದು.

ತುಲಾ ರಾಶಿ

ತುಲಾ ರಾಶಿಯ ಜನರಿಗೆ ಇಂದು ಉತ್ತಮ ದಿನ. ನಿಮ್ಮ ಕೆಲಸದಲ್ಲಿ ಯಶಸ್ವಿ ದಿನ. ಕುಟುಂಬದಲ್ಲಿನ ದೊಡ್ಡ ಹಣಕಾಸಿನ ಸಮಸ್ಯೆಗೆ ಪರಿಹಾರ ಪಡೆಯಬಹುದು. ವಿದ್ಯಾರ್ಥಿಗಳಿಗೆ ಈ ದಿನ ಉತ್ತಮವಾಗಲಿದೆ. ಹಣಕಾಸು ಸಂಬಂಧ ಆಪ್ತರಿಂದ ನಿಮಗೆ ಸಮಸ್ಯೆಗಳು ಬರಬಹುದು. ರಾತ್ರಿ ಪ್ರಯಾಣಗಳ ಮುಂದೂಡುವುದು ಉತ್ತಮ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯ ಜನರು ಇಂದು ಸಭೆ ಹಾಗೂ ಸಮಾರಂಭಗಳಲ್ಲಿ ಭೇಟಿಯಾಗುವ ದಿನ. ಮನೆಯಲ್ಲಿ ಶಾಂತಿಯ ವಾತಾವರಣ ಇರಲಿದೆ. ವಾಹನ ಖರೀದಿಯ ಆಲೋಚನೆಯಲ್ಲಿದ್ದವರಿಗೆ ಮುನ್ನುಡಿ ಬರೆಯಬಹುದು. ಹೂಡಿಕೆ ಉಳಿತಾಯದ ಕಡೆ ಆಸಕ್ತಿ ಹೆಚ್ಚಾಗಲಿದೆ.

ಧನು ರಾಶಿ

ಧನು ರಾಶಿಯವರಿಗೆ ಸಮಸ್ಯೆಗಳು ಬರುವ ದಿನ. ಇಂದು ಹಣಕಾಸು ವಿಚಾರದಲ್ಲಿ ಎಚ್ಚರಿಕೆಯಿಂದ ಇರುವುದು ಉತ್ತಮ. ಅನೇಕರಲ್ಲಿ ಇಂದು ಆರೋಗ್ಯ ವಿಚಾರದಲ್ಲಿ ಏರುಪೇರು ಸಂಭವಿಸಬಹುದು. ಪ್ರೀತಿ ಪಾತ್ರರಿಂದ ನೋವು ಉಂಟಾಗಬಹುದು.

ಮಕರ ರಾಶಿ

ಮಕರ ರಾಶಿಯವರಿಗೆ ಇಂದು ಮಿಶ್ರ ಫಲದ ದಿನ. ನಿರುದ್ಯೋಗಿಗಳಿಗೆ ಹಣಕಾಸು ಸಂಬಂಧಿತ ವಿಚಾರದಲ್ಲಿ ಕೆಟ್ಟ ದಿನವಾಗಬಹುದು. ಅನೇಕರಲ್ಲಿ ಇಂದು ಪ್ರಯಾಣ ಮಾಡಬೇಕಾಗಿ ಬಂದರೂ ಅದನ್ನು ಮುಂದೂಡಬಹುದು. ಗೃಹಿಣಿಯರಲ್ಲಿ ಖರ್ಚು ಹೆಚ್ಚು.

ಕುಂಭ ರಾಶಿ

ಕುಂಭ ರಾಶಿಯ ಜನರಿಗೆ ಮಿಶ್ರಫಲದ ದಿನ. ದೇವಾಲಯ ಭೇಟಿಯ ನಿಮ್ಮ ಆಲೋಚನೆಗೆ ಧನಾತ್ಮಕ ವಿಚಾರಗಳಿವೆ. ತಿಂಡಿ ಊಟದ ವಿಚಾರವಾಗಿ ಖರ್ಚು. ಪ್ರೇಮಿಗಳು, ದಾಂಪತ್ಯದ ವಿಚಾರವಾಗಿ ಬಹಳ ಉತ್ತಮ ದಿನ.

ಮೀನ ರಾಶಿ

ನೀವಿಂದು ವ್ಯಾಪಾರ ಸಂಬಂಧವಾಗಿ ಪ್ರಯಾಣ ಮಾಡಬಹುದು. ನಿಮ್ಮ ಹಲವು ಕೆಲಸಗಳಲ್ಲಿ ಆಪ್ತರ ಸಹಕಾರ ನೋಡುವಿರಿ. ಪೂರ್ವ ನಿಗದಿತ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಮನೆಗಾಗಿ ಖರ್ಚು ಮಾಡಬಹುದು.

English summary

September-17-2025-daily-horoscope-prediction-for-12-zodiac-signs-in-kannada

Here is September 17 daily horoscope prediction for 12 zodiac signs read on...
Story first published: Wednesday, September 17, 2025, 5:00 [IST]
X
Desktop Bottom Promotion