Dina Bhavishya: ಸೆಪ್ಟೆಂಬರ್ 16ರಂದು ಮಂಗಳಕರ ದಿನ ಯಾರಿಗೆ?

ವೈದಿಕ ಶಾಸ್ತ್ರದ ಪ್ರಕಾರ ಸೆಪ್ಟೆಂಬರ್ 16ರಂದು ನಿಮ್ಮ ರಾಶಿಫಲ ನೋಡೋಣ:

ಮೇಷ ರಾಶಿ

ಮೇಷ ರಾಶಿಯವರು ಈ ದಿನ ಓಡಾಟದಲ್ಲಿ ತೊಡಗಬಹುದು. ನಿಮ್ಮ ಹಲವು ಇಷ್ಟದ ಕೆಲಸಗಳನ್ನು ಮಾಡಲು ನೀವು ದೂರ ಪ್ರಯಾಣ ಮಾಡಬಹುದು. ಆಪ್ತರೊಬ್ಬರ ಬಳಿ ನಿಮ್ಮ ಸಮಸ್ಯೆಗಳ ಹೇಳಿಕೊಳ್ಳುವುದು ನಿಮ್ಮಲ್ಲಿ ನೆಮ್ಮದಿ ತರಬಹುದು.

ವೃಷಭ ರಾಶಿ

ವೃಷಭ ರಾಶಿಯ ಜನರು ಇಂದು ಸಮಸ್ಯೆಗಳ ನೋಡಬಹುದು. ಅದ್ರಲ್ಲೂ ಗೃಹಿಣಿಯರಲ್ಲಿ ಅನಾರೋಗ್ಯ ಸಮಸ್ಯೆ ಕಾಡಬಹುದು. ಕೆಲಸದ ಸ್ಥಳದಲ್ಲಿ ದೊಡ್ಡ ಮಟ್ಟದ ಒತ್ತಡ ಎದುರಾಗಲಿದೆ. ಶ್ರಮದಾಯಕ ಕೆಲಸ ಮಾಡಬೇಕಾಗಬಹುದು.

September-16-2025-daily-horoscope-

ಮಿಥುನ ರಾಶಿ

ಮಿಥುನ ರಾಶಿಯ ಜನರಿಗೆ ಮಿಶ್ರ ಫಲದ ದಿನ. ನಿಮ್ಮ ದೊಡ್ಡ ಕೆಲಸಗಳಲ್ಲಿ ಸಫಲತೆ ಇರಲಿದೆ ಆದ್ರೆ ಫಲಿತಾಂಶಗಳಿಂದ ನಿಮಗೆ ತೃಪ್ತಿ ಆಗದೆ ಇರಬಹುದು. ಪ್ರಯಾಣ ಮಾಡುವಿರಿ. ಹಣಕಾಸಿನ ವೊಚಾರದಲ್ಲಿ ನಿಮಗೆ ಸಮಸ್ಯೆಗಳಿರಬಹುದು.

ಕರ್ಕ ರಾಶಿ

ಕರ್ಕ ರಾಶಿಯ ಜನರಲ್ಲಿ ಇಂದು ದೊಡ್ಡ ನಿರ್ಧಾರ ತೆಗೆದುಕೊಳ್ಳಬಹುದು. ಹಲ್ಲು, ಮೂಳೆ ಸಂಬಂಧಿತ ಸಮಸ್ಯೆಗಳಿದ್ದರೆ ಎಚ್ಚರಿಕೆ ವಹಿಸಿ. ಮಕ್ಕಳ ಕುರಿತಾದ ಚಿಂತೆ ದೊಡ್ಡದಾಗಬಹುದು. ವಾಹನ ಸಂಬಂಧ ಎಚ್ಚರಿಕೆಯಿಂದಿರಿ.

ಸಿಂಹ ರಾಶಿ

ಸಿಂಹ ರಾಶಿಯವರಿಗೆ ಮಿಶ್ರ ಫಲದ ದಿನ. ನಿಮ್ಮ ಹಣಕಾಸಿನ ವಿಚಾರದಲ್ಲಿ ಕಷ್ಟದ ದಿನ. ನಿಮ್ಮ ಕೈ ಸೇರಬೇಕಿದ್ದ ಹಣ ಮತ್ತಷ್ಟು ವಿಳಂಬವಾಗಬಹುದು. ವಿವಾಹಿತರಲ್ಲಿ ಅನಗತ್ಯ ದುಂದು ವೆಚ್ಚವಿದೆ. ಆಪ್ತರೊಬ್ಬರ ಜೊತೆ ಪ್ರಯಾಣ ಮಾಡಬಹುದು.

ಕನ್ಯಾ ರಾಶಿ

ಕನ್ಯಾ ರಾಶಿಯ ಜನರಲ್ಲಿ ಇಂದು ಉತ್ತಮ ದಿನ. ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ದೊಡ್ಡ ಲಾಭ ನೋಡಬಹುದು. ವೈವಾಹಿಕ ಜೀವನದಲ್ಲಿ ಸಂತೋಷ ಇರಲಿದೆ. ಮನೆಯಲ್ಲಿನ ಹಣಕಾಸು ಒತ್ತಡವೊಂದು ನಿವಾರಣೆಯಾಗಲಿದೆ.

ತುಲಾ ರಾಶಿ

ತುಲಾ ರಾಶಿಯ ಜನರಿಗೆ ಇಂದು ಅದ್ಭುತ ದಿನ. ನಿಮ್ಮ ಹಲವು ಆದಾಯ ಮೂಲಗಳಲ್ಲಿ ಸಮಸ್ಯೆಗಳಿರಬಹುದು. ದೇವಾಲಯ ಭೇಟಿಯ ಸಾಧ್ಯತೆ ಇದೆ. ಮಕ್ಕಳ ವ್ಯವಹಾರ ಸಂಬಂಧವಾಗಿ ನಿಮಗೆ ಸಂತೋಷ ಇರಲಿದೆ. ಮುಂಬರುವ ದಿನಗಳಲ್ಲಿ ಪ್ರಯಾಣ ಮಾಡಲು ತಯಾರಿ ನಡೆಸಬಹುದು.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಸಮಸ್ಯೆಯ ದಿನ. ನಿಮ್ಮ ದೈನಂದಿನ ಕೆಲಸಗಳು ಒತ್ತಡ ತರಬಹುದು. ತರಾತುರಿಯಲ್ಲಿ ಯಾವುದೇ ಕೆಲಸಗಳ ಮಾಡಬೇಡಿ. ಬ್ಯಾಂಕಿಂಗ್ ವ್ಯವಹಾರಗಳಲ್ಲಿ ಅಡೆತಡೆ ಇದೆ. ಸರ್ಕಾರಿ ಕೆಲಸದಕ್ಕಾಗಿ ತಯಾರಿ ನಡೆಸುವವರು ಈ ದಿನ ಹೆಚ್ಚು ಶ್ರಮ ಹಾಕಬೇಕಿದೆ.

ಧನು ರಾಶಿ

ಧನು ರಾಶಿಯ ಜನರಿಗೆ ಇಂದು ಉತ್ತಮ ಸಮಯ. ನಿಮ್ಮ ಹಲವು ಕೆಲಸಗಳನ್ನು ನಿಗದಿತ ಸಮಯದೊಳಗೆ ಮುಗಿಸಬಹುದು. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುವ ದಿನವಿದು. ಪೋಷಕರ ಆರೋಗ್ಯದಲ್ಲಿ ಏರುಪೇರು ಸಂಭವಿಸಬಹುದು.

ಮಕರ ರಾಶಿ

ಮಕರ ರಾಶಿಯ ಜನರಲ್ಲಿ ಇಂದು ಮಿಶ್ರ ಫಲದ ದಿನ. ಗೃಹಿಣಿಯರು ಈ ದಿನ ಹೆಚ್ಚು ಪ್ರಯಾಣಿಸಬಹುದು. ನಿಮ್ಮ ಪೂರ್ವ ನಿಯೋಜಿತ ಕೆಲಸದಲ್ಲಿ ತೊಡಗಬಹುದು. ಅನೇಕರು ಶುಭ ಕಾರ್ಯಕ್ರಮದಲ್ಲಿ ಭಾಗಿಯಾಗಬಹುದು.

ಕುಂಭ ರಾಶಿ

ಕುಂಭ ರಾಶಿಯ ಜನರಿಗೆ ಇಂದು ಮಿಶ್ರಫಲ. ನೀವು ನಿರುದ್ಯೋಗಿಗಳಾಗಿದ್ದರೆ ಈ ದಿನ ಉತ್ತಮ ಅವಕಾಶ ಪಡೆಯಬಹುದು. ಹಣಕಾಸು ಸಮಸ್ಯೆಗಳು ಪರಿಹಾರ ಆಗುವ ಅವಕಾಶಗಳಿವೆ. ಯಾರೊಂದಿಗೂ ಅನಗತ್ಯ ಚರ್ಚೆಯಲ್ಲಿ ತೊಡಗಬೇಡಿ.

ಮೀನ ರಾಶಿ

ಮೀನ ರಾಶಿಯ ಜನರಿಗೆ ಅನುಕೂಲಕರ ದಿನ. ನಿಮ್ಮ ವ್ಯಾಪಾರದಲ್ಲಿ ಲಾಭವಿದೆ. ವೃತ್ತಿ ಪರತೆಯಲ್ಲಿ ಪ್ರಗತಿ ಇದೆ. ಪಂಚೇಂದ್ರಿಯ ಸಂಬಂಧಿತ ಸಮಸ್ಯೆಗಳಿಗೆ ನೀವು ತುತ್ತಾಗಬಹುದು. ಪ್ರಯಾಣ ಮಾಡುವಿರಿ. ತಂದೆಯ ವ್ಯವಹಾರಗಳಿಗೆ ನೀವು ಬೆಂಬಲ ನೀಡಬಹುದು. ಮನೆಗಾಗಿ ನೀವು ವಸ್ತುಗಳ ಖರೀದಿಸಬಹುದು.

English summary

September-16-2025-daily-horoscope-prediction-for-12-zodiac-signs-in-kannada

Here is September 16 daily horoscope prediction for 12 zodiac signs read on...
Story first published: Tuesday, September 16, 2025, 5:00 [IST]
X
Desktop Bottom Promotion